Asianet Suvarna News Asianet Suvarna News

ಬೇಸಿಗೆಯಲ್ಲಿ ಆರೋಗ್ಯ ಹಾಳು ಮಾಡುತ್ತೆ Food Poison

ಬೆಳಗ್ಗೆ ಏಳ್ತಿದ್ದಂತೆ ಕಾಡುವ ಸೆಕೆ ಉರಿ ಬ್ಯಾಕ್ಟೀರಿಯಾಕ್ಕೆ ಬೆಸ್ಟ್. ಬ್ಯಾಕ್ಟೀರಿಯಾ ಬೆಳವಣಿಗೆಗೆ ಇದು ಒಳ್ಳೆಯ ಸಮಯ. ಆಹಾರ ಹಾಳಾಗಲ್ಲ ಅಂತ ಹಾಗೆ ಇಟ್ರೆ ಅಲ್ಲೇ ಸಂತಾನೋತ್ಪತ್ತಿ ಮಾಡುವ ಬ್ಯಾಕ್ಟೀರಿಯಾ ನಮ್ಮ ಆರೋಗ್ಯ ಹಾಳು ಮಾಡುತ್ತೆ. 
 

Increasing Heat Can Increase The Risk Of Food Contamination roo
Author
First Published Jun 6, 2023, 12:39 PM IST

ಫುಡ್ ಕಂಟಾಮಿನೇಷನ್ ಅಂದ್ರೆ ಆಹಾರ ಮಾಲಿನ್ಯವಾಗುವುದು. ಹೊರಗಿನ ವಸ್ತುಗಳು ಆಹಾರ ಕಲುಷಿತಗೊಳಿಸಿದಾಗ ಆಹಾರ ಮಾಲಿನ್ಯಕ್ಕೆ ಒಳಗಾಗುತ್ತದೆ. ನಾವು ಅದನ್ನು ಸೇವನೆ ಮಾಡೋದ್ರಿಂದ ನಮ್ಮ ಆರೋಗ್ಯ ಹದಗೆಡುತ್ತದೆ. ಬೇಸಿಗೆಯಲ್ಲಿ ಆಹಾರದ ಮೇಲೆ ಬ್ಯಾಕ್ಟೀರಿಯಾ ದಾಳಿ ನಡೆಸೋದು ಹೆಚ್ಚು. ನೀವು ಸೇವನೆ ಮಾಡ್ತಿರುವ ಆಹಾರ, ಮಾಲಿನ್ಯಗೊಂಡಿದೆ ಎಂಬುದನ್ನು ಪತ್ತೆ ಮಾಡೋದು ಸಾಧ್ಯವಿಲ್ಲ. ಯಾಕೆಂದ್ರೆ ಆಹಾರದಲ್ಲಿ ಅಂತ ದೊಡ್ಡ ಬದಲಾವಣೆ ಏನೂ ಕಾಣಿಸೋದಿಲ್ಲ. ಹಾಗಾಗಿ ನಾವು ತಿಳಿಯದೆ ಮಾಲಿನ್ಯಗೊಂಡ ಆಹಾರವನ್ನು ಸೇವನೆ ಮಾಡ್ತೇವೆ. ಇದ್ರಿಂದ ಆರೋಗ್ಯ ಹದಗೆಡುತ್ತದೆ. ನಾವಿಂದು ಆಹಾರ ಮಾಲಿನ್ಯದಲ್ಲಿ ಎಷ್ಟು ವಿಧ ಹಾಗೆ ಅದ್ರಿಂದ ರಕ್ಷಣೆ ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.

ಆಹಾರ (Food) ದ ಮಾಲಿನ್ಯ (Pollution)ದಲ್ಲಿದೆ ಇಷ್ಟೊಂದು ವಿಧಾನ :

ರಾಸಾಯನಿಕ ಮಾಲಿನ್ಯ (Chemical Pollution) : ಆಹಾರ ಕೆಲವು ರಾಸಾಯನಿಕಗಳಿಂದ ಕಲುಷಿತಗೊಂಡಾಗ ರಾಸಾಯನಿಕ ಮಾಲಿನ್ಯ ಉಂಟಾಗುತ್ತದೆ. ಇದನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟ. ಹಾಗೆಯೇ ಈ ಆಹಾರ ಸೇವನೆ ಮಾಡಿದ ನಮಗೆ ದೀರ್ಘಕಾಲದವರೆಗೆ ಕಾಯಿಲೆ ಕಾಡುವ ಸಾಧ್ಯತೆಯಿರುತ್ತದೆ. ಇದ್ರಲ್ಲಿ ಗ್ಯಾಸ್ಟ್ರೋಎಂಟರೈಟಿಸ್ ಸೌಮ್ಯ ಲಕ್ಷಣ ಕಾಣಿಸಿಕೊಳ್ಳುತ್ತದೆಯಾದ್ರೂ ಅದರ ಪತ್ತೆ ಕಷ್ಟ.

Health Tips: ಬರೀ ಸ್ವೀಟ್ ತಿನ್ಬೇಕು ಅನ್ನಿಸುತ್ತಾ? ಈ ಹಣ್ಣು ತಿನ್ನಿ

ಸೂಕ್ಷ್ಮಜೀವಿಯ ಮಾಲಿನ್ಯ : ಆಹಾರದಲ್ಲಿ ಬ್ಯಾಕ್ಟೀರಿಯಾ (Bacteria), ವೈರಸ್‌ ಉತ್ಪತ್ತಿಯಾದಾಗ ಸೂಕ್ಷ್ಮಜೀವಿಯ ಮಾಲಿನ್ಯ ಉಂಟಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುತ್ತದೆ. ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಜೀವಾಣುಗಳಂತಹ ಅನೇಕ ರೀತಿಯ ರೋಗಕಾರಕ ಇದ್ರಲ್ಲಿ ಉತ್ಪತ್ತಿಯಾಗುತ್ತದೆ. ಇದು ನೊರೊವೈರಸ್, ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಸೇರಿದಂತೆ ಅನೇಕ ಖಾಯಿಲೆಗೆ ಕಾರಣವಾಗುತ್ತದೆ.

ಭೌತಿಕ ಮಾಲಿನ್ಯ (Physical Pollution) : ಪರಿಸರದಿಂದ ಈ ಮಾಲಿನ್ಯ ಉಂಟಾಗುತ್ತದೆ. ಅಂದ್ರೆ ನೀವು ಸೇವನೆ ಮಾಡುವ ಆಹಾರಕ್ಕೆ ಗಾಜು, ಕೂದಲು, ಲೋಹ, ಕೊಳಕು ಸೇರಿದಾಗ ಭೌತಿಕ ಆಹಾರ ಮಾಲಿನ್ಯ ಉಂಟಾಗುತ್ತದೆ. ಇದ್ರಿಂದ ಅನಾರೋಗ್ಯ ನಮ್ಮನ್ನು ಕಾಡುತ್ತದೆ.

ರಾತ್ರಿ ನೆನಸಿಟ್ಟ ಸಾಸಿವೆ ನೀರು ಆರೋಗ್ಯದ ಮೇಲೆ ಬೀರೋ ಪರಿಣಾಮ ಒಂದೆರಡಲ್ಲ!

ಬೇಸಿಗೆಯಲ್ಲಿ ಆಹಾರ ಮಾಲಿನ್ಯ ಹೆಚ್ಚಾಗಿ ಕಾಡಲು ಕಾರಣವೇನು? : 

ತಾಪಮಾನದಲ್ಲಿ ಏರಿಕೆ (Climate Change) : ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುವ ಕಾರಣ ಬ್ಯಾಕ್ಟೀರಿಯಾಗಳು ಸುಲಭವಾಗಿ ಬೆಳೆಯುತ್ತವೆ. ಬೆಚ್ಚನೆಯ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ನೀವು ಆಹಾರವನ್ನು ಸರಿಯಾಗಿ ಬೇಯಿಸದೆ ಹೋದಲ್ಲಿ, ಶೇಖರಿಸಿಡದೆ ಹೋದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ. 

ಕಳಪೆ ನೈರ್ಮಲ್ಯ (Low Hygiene) : ಬೇಸಿಗೆಯಲ್ಲಿ ದೇಹ ಹೆಚ್ಚಾಗಿ ಬೆವರುತ್ತದೆ. ಕೈಗಳು ಕೂಡ ಬೆವರುತ್ತವೆ. ಆದ್ರೆ ಜನರು ಆಗಾಗ ಕೈ ಕ್ಲೀನ್ ಮಾಡೋದಿಲ್ಲ. ಕೈ ಕ್ಲೀನ್ ಮಾಡದೆ ಆಹಾರವನ್ನು ಸ್ಪರ್ಶಿಸಿದಾಗ ಆಹಾರಕ್ಕೆ ಕೊಳಕು ಸೇರಿ ಅದು ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಹೊರಾಂಗಣ ಚಟುವಟಿಕೆ (Outdoor Activities) : ಬೇಸಿಗೆಯಲ್ಲಿ ಜನರು ಹೆಚ್ಚಿನ ಸಮಯವನ್ನು ಹೊರಗೆ ಕಳೆಯುತ್ತಾರೆ. ಪಿಕ್ನಿಕ್ ಅದು ಇದು ಅಂತಾ ಹೊರಗಿನ ಆಹಾರ ಸೇವನೆ ಮಾಡ್ತಾರೆ. ಸಾಮಾನ್ಯವಾಗಿ ತೆರೆದ ವಾತಾವಣದಲ್ಲಿ ತಯಾರಿಸಿದ ಆಹಾರ ಮಾಲಿನ್ಯಕ್ಕೊಳಗಾಗೋದು ಹೆಚ್ಚು. ರಸ್ತೆ ಬದಿಯಲ್ಲಿ ತಯಾರಿಸಿದ ಆಹಾರಕ್ಕೆ ಬಳಸುವ ನೀರು, ಅಡುಗೆ ವಸ್ತುಗಳು ಮಾಲಿನ್ಯಗೊಂಡಿರುವ ಸಾಧ್ಯತೆಯಿರುತ್ತದೆ. ರಸ್ತೆ ಧೂಳು ಸೇರಿದಂತೆ ಕೊಳಕು ಆಹಾರದ ಮೇಲೆ ಸುಲಭವಾಗಿ ಕುಳಿತುಕೊಳ್ಳುವ ಕಾರಣ ಹೊಟ್ಟೆ ಬೇಗ ಹಾಳಾಗುತ್ತದೆ. 

ಆಹಾರ ಮಾಲಿನ್ಯದಿಂದ ರಕ್ಷಣೆ ಬೇಕೆಂದ್ರೆ ಏನು ಮಾಡ್ಬೇಕು? : 
• ಆಹಾರ ಮಾಲಿನ್ಯದಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಾರದು ಎಂದಾದ್ರೆ ಆಹಾರ ಸೇವನೆ ಮೊದಲು ಸ್ವಚ್ಛವಾಗಿ ಕೈ ತೊಳೆಯುವುದನ್ನು ಮರೆಯಬೇಡಿ.
• ಬೇಗ ಹಾಳಾಗುವ ಆಹಾರವನ್ನು ನೀವು ಫ್ರಿಜ್ ನಲ್ಲಿ ಇಡುವುದು ಒಳ್ಳೆಯದು.    
• ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವನೆ ಮಾಡಿ. ಹಾಗೆಯೇ ಬೇಯಿಸಿದ ಹಾಗೂ ಬೇಯಿಸದ ಆಹಾರವನ್ನು ಒಟ್ಟಿಗೆ ಇಡಬೇಡಿ. 
 

Follow Us:
Download App:
  • android
  • ios