Viral News: ಮಹಿಳೆಗೆ ಸಿಕ್ತು 100 ವರ್ಷ ಹಿಂದಿನ ಡೈರಿ ಮಿಲ್ಕ್ ರಾಪರ್!
ಡೈರಿ ಮಿಲ್ಕ್ ಚಾಕೋಲೇಟ್ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಚಾಕೋಲೇಟ್ ಈಗಿನದಲ್ಲ. ಸುಮಾರು 200 ವರ್ಷಗಳ ಹಿಂದೆಯೇ ಡೈರಿಮಿಲ್ಕ್ ಚಾಕೋಲೇಟ್ ಜನರಿಗೆ ಸಿಕ್ತಿತ್ತು. ಈಗ ಅದಕ್ಕೆ ಸಾಕ್ಷ್ಯ ಸಿಕ್ಕಿದೆ.
ನಮ್ಮ ಹಳೆ ವಸ್ತುಗಳು ಸಿಕ್ಕಿದ್ರೆ ಅದೇನೋ ಖುಷಿ. ಚಿಕ್ಕವರಿರುವಾಗ ಬಳಸಿದ, ಈಗ ಅಟ್ಟ ಸೇರಿದ ಆಟಿಕೆ ಸಿಕ್ಕಿದ್ರೆ ಅದನ್ನು ಹಿಡಿದು ನೋಡಿ, ಫೋಟೋ ಕ್ಲಿಕ್ಕಿಸ್ತೇವೆ. ಇನ್ನು 100 ವರ್ಷ ಹಳೆಯ ವಸ್ತು ಸಿಕ್ಕಿದ್ರೆ ಅದೆಷ್ಟು ಖುಷಿಯಾಗ್ಬೇಡ ಹೇಳಿ. ನಾವೆಲ್ಲ ಚಾಕೋಲೇಟ್ ಪ್ರೇಮಿಗಳು. ಮಾರುಕಟ್ಟೆಗೆ ಹೊಸ ಹೊಸ ಬ್ರ್ಯಾಂಡ್ ಚಾಕೋಲೇಟ್ ಲಗ್ಗೆಯಿಟ್ಟಿದೆ. ಆದ್ರೆ ಡೈರಿ ಮಿಲ್ಕ್ ಈಗ್ಲೂ ಎಲ್ಲರ ಫೆವರೆಟ್. ಡೈರಿ ಮಿಲ್ಕ್ (Dairy Milk) ಈಗಿನದಲ್ಲ. ಜೂನ್ 1905ರಲ್ಲಿಯೇ ಡೈರಿ ಮಿಲ್ಕ್ ಉತ್ಪಾದನೆ ಶುರುವಾಗಿತ್ತು. ಈಗ ಹಳೆಯ ಡೈರಿ ಮಿಲ್ಕ್ ಚಾಕೋಲೇಟ್ (Chocolate) ರಾಪರ್ ಒಂದು ಸಿಕ್ಕಿದೆ. ಅದು ಎಲ್ಲಿ ಸಿಕ್ಕಿದೆ ಹಾಗೆ ಅದು ಅಷ್ಟು ಹಿಂದಿನದ್ದು ಅಂತಾ ಪತ್ತೆಯಾಗಿದ್ದು ಹೇಗೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
ಎಲ್ಲಿ ಸಿಕ್ತು ಡೈರಿ ಮಿಲ್ಕ್ ಚಾಕೋಲೇಟ್ ರಾಪರ್ (Rapper)? : ಯುನೈಟೆಡ್ ಕಿಂಗ್‌ಡಂನಲ್ಲಿ ಮಹಿಳೆಯೊಬ್ಬರ ಕೈಗೆ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೋಲೇಟ್‌ನ 100 ವರ್ಷ ಹಳೆಯ ರಾಪರ್ ಸಿಕ್ಕಿದೆ. 51 ವರ್ಷದ ಎಮ್ಮಾ ಯಂಗ್ ಈ ರಾಪರ್ ಫೋಟೋ ಪೋಸ್ಟ್ ಮಾಡಿದ್ದಾರೆ. ಎಮ್ಮಾ ತನ್ನ ಮನೆಯ ನವೀಕರಣ ಕಾರ್ಯ ಮಾಡುತ್ತಿದ್ದರು. ಈ ಸಮಯದಲ್ಲಿ ಅವರಿಗೆ ಈ ರಾಪರ್ ಕಾಣಿಸಿದೆ. ರಾಪರ್ ಸಿಕ್ಕ ನಂತ್ರ ಎಮ್ಮಾ ಸಮೀಪದ ಸ್ವೀಟ್ ಅಂಗಡಿಗೆ ತೆರಳಿದ್ದಾರೆ. ಈ ರಾಪರ್ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
SUMMER SEASON ಇದು, ಇವನ್ನು ಕುಡಿದು ಆರೋಗ್ಯ ಚೆನ್ನಾಗಿರುವಂತೆ ನೋಡ್ಕಳ್ಳಿ
ಪ್ಯಾಕೆಟ್ ಸಿಕ್ಕಿದ್ದು ಎಲ್ಲಿ ? : ಬ್ರಿಟನ್‌ನ ಸುದ್ದಿ ಸಂಸ್ಥೆ ಮೆಟ್ರೋ ವರದಿಯ ಪ್ರಕಾರ, ಇಂಗ್ಲೆಂಡ್‌ನ ಪ್ಲೈಮೌತ್‌ನಲ್ಲಿ ವಾಸಿಸುವ ಎಮ್ಮಾ ತನ್ನ ಮನೆಯ ನವೀಕರಣದ ಸಮಯದಲ್ಲಿ ಸ್ನಾನಗೃಹವನ್ನು ಸ್ವಚ್ಛಗೊಳಿಸುತ್ತಿದ್ದರು. ಸ್ನಾನ ಗೃಹದ ನೆಲವನ್ನು ಅವರು ಅಗೆದಿದ್ದಾರೆ. ಆಗ ಅವರ ಕಣ್ಣಿಗೆ ನೇರಳೆ ಬಣ್ಣದ ಕಾಗದ ಕಾಣಿಸಿದೆ. ಆ ನೇರಳೆ ಬಣ್ಣದ ಕಾಗದ ನೆಲ ಮತ್ತು ಪೈಪಿನ ನಡುವೆ ಅಂಟಿಕೊಂಡಿತ್ತು ಎಂದು ಎಮ್ಮಾ ಹೇಳಿದ್ದಾರೆ. ಎಮ್ಮಾ ಕೈಗೆ ಈ ರಾಪರ್ ಜನವರಿ 27ರಂದು ಸಿಕ್ಕಿದೆಯಂತೆ.
ರಾಪರ್ ಧೂಳಿನಿಂದ ಆವೃತವಾಗಿತ್ತು. ಧೂಳನ್ನು ಸ್ವಚ್ಛಗೊಳಿಸಿದಾಗ ಅದರ ಮೇಲೆ ಕ್ಯಾಡ್ಬರಿ ಡೈರಿ ಮಿಲ್ಕ್ ಎಂದು ದೊಡ್ಡದಾಗಿ ಬರೆದಿರುವುದು ಕಂಡಿತು. ಇದರಿಂದ ಅದು ಡೈರಿ ಮಿಲ್ಕ್ ಚಾಕೊಲೇಟ್ ಎಂದು ತಿಳಿದು ಬಂದಿದೆ. ಅದರ ಕೆಳಗೆ ಚಾಕೊಲೇಟ್ ನಿಯಾಪೊಲಿಟನ್ ಎಂದು ಬರೆಯಲಾಗಿತ್ತು. ರಾಪರ್ ಬಗ್ಗೆ ಸ್ವೀಟ್ ಅಂಗಡಿಯವನನ್ನು ಕೇಳಿದಾಗ ಆತ ಇದು 1930-1934 ವರ್ಷಗಳ ನಡುವೆ ತಯಾರಿಸಿದ್ದು ಎಂದಿದ್ದಾನೆ. ಇದನ್ನು ಕಿಂಗ್ ಜಾರ್ಜ್ V ರ ಆಳ್ವಿಕೆಯಲ್ಲಿ ತಯಾರಿಸಲಾಗಿದೆ ಎಂದಿದ್ದಾನೆ. ಆ ಸಮಯದಲ್ಲಿ ಈ ಚಾಕೊಲೇಟ್ 6 ಪೈಸೆಗೆ ಲಭ್ಯವಿತ್ತು.
Healthy Food : ತರಕಾರಿ ಸಿಪ್ಪೆ ತೆಗೆದು ಸುಸ್ತ್ ಮಾಡ್ಕೊಳ್ಬೇಡಿ.. ಇದ್ರಲ್ಲಿದೆ ಸಿಕ್ಕಾಪಟ್ಟೆ ಪೋಷಕಾಂಶ
ಎಮ್ಮಾ ಏನು ಹೇಳ್ತಾರೆ ? : ಈ ರಾಪರ್ ಇಷ್ಟು ವರ್ಷದ ನಂತ್ರವೂ ಉತ್ತಮ ಸ್ಥಿತಿಯಲ್ಲಿದ್ದಿದ್ದನ್ನು ಕಂಡು ಆಶ್ಚರ್ಯವಾಯಿತು ಎಂದು ಎಮ್ಮಾ ಹೇಳಿದ್ದಾರೆ. ಒಂದು ಭಾಗವನ್ನು ಇಲಿ ಕಚ್ಚಿದ್ದು, ಅದನ್ನು ಶೋಕೇಸ್ ನಲ್ಲಿ ಇಡಬಹುದು ಎಂದು ಎಮ್ಮಾ ಹೇಳಿದ್ದಾರೆ. ಈ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಅನ್ನು ಇಂಗ್ಲೆಂಡ್‌ನ ಬೌರ್ನ್‌ವಿಲ್ಲೆ ಗ್ರಾಮದ ಗಾರ್ಡನ್ ವಿಲೇಜ್‌ನಲ್ಲಿ ತಯಾರಿಸಿರಬೇಕು ಎಂದು ಎಮ್ಮಾ ಹೇಳಿದ್ದಾರೆ. ಈ ಮನೆಯನ್ನು ಸುಮಾರು 1932 ರಲ್ಲಿ ನಿರ್ಮಿಸಲಾಗಿದೆ ಎಂದು ಎಮ್ಮಾ ಹೇಳಿದ್ದಾರೆ. ಆ ವೇಳೆ ಮನೆ ಕಟ್ಟುತ್ತಿದ್ದ ಬಿಲ್ಡರ್ ಈ ಚಾಕಲೇಟ್ ತಿಂದು ರಾಪರ್ ಇಲ್ಲಿ ಬಿಟ್ಟಿರಬೇಕೆಂದು ಅವರು ಅಂದಾಜಿಸಿದ್ದಾರೆ.
ಈ ಬಗ್ಗೆ ಕಂಪನಿ ಹೇಳೋದೇನು? : ಇದು ಕ್ಯಾಡ್ಬರಿ ಇತಿಹಾಸದ ಭಾಗವಾಗಿ ಬಂದಿರುವುದು ನಮಗೆ ಸಂತೋಷ ತಂದಿದೆ ಎಂದು ವಕ್ತಾರರು ಹೇಳಿದ್ದಾರೆ. 1930 ರ ದಶಕದಲ್ಲೂ ಡೈರಿ ಮಿಲ್ಕ್ ಚಾಕೋಲೇಟ್ ಜನರ ಜೀವನದಲ್ಲಿ ಸಂತೋಷ ಹರಡುತ್ತಿತ್ತು ಎಂಬುದು ಖುಷಿ ಸಂಗತಿ ಎಂದು ಅವರು ಹೇಳಿದ್ದಾರೆ.