ಮಾರುಕಟ್ಟೆಯಲ್ಲಿ ಸಿಗುವ ಗರಂ ಮಸಾಲಾ ಪೌಡರ್‌ನಂತೆ ಪರಿಮಳಯುಕ್ತವಾದ ಗರಂ ಮಸಾಲಾವನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಪಾಕವಿಧಾನವು ದೀರ್ಘಕಾಲ ಬಾಳಿಕೆ ಬರುವ ಗರಂ ಮಸಾಲಾವನ್ನು ಕೆಲವೇ ಸರಳ ಹಂತಗಳಲ್ಲಿ ಹೇಗೆ ತಯಾರಿಸುವುದು ಎಂಬುದನ್ನು ನಿಮಗೆ ತಿಳಿಸುತ್ತದೆ.

ಹೆಚ್ಚಾಗಿ ಭಾರತೀಯ ಅಡುಗೆಯಲ್ಲಿ ಗರಂ ಮಸಾಲಾವನ್ನು ಬಳಸದೇ ಇರುವವರು ಕಡಿಮೆ. ಸಸ್ಯಹಾರವೇ ಇರಲಿ ಮಾಂಸಹಾರವೇ ಇರಲಿ ಅಡುಗೆ ಮಾಡಿದ ನಂತರ ಸ್ವಲ್ಪ ಗರಂ ಮಸಾಲಾ ಸಿಂಪಡಿಸಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಆದರೆ ನಾವು ಮಾರುಕಟ್ಟೆಯಿಂದ ತರುವ ಗರಂ ಮಸಾಲಾದ ಪರಿಮಳ ಕೆಲವೇ ದಿನಗಳಲ್ಲಿ ಹೋಗುತ್ತದೆ ಮತ್ತು ಅದರ ರುಚಿ ಮೊದಲಿನಂತೆ ಇರುವುದಿಲ್ಲ. ಹೀಗಾಗಿ ಇಂದು ನಾವು ನಿಮಗೆ ಮನೆಯಲ್ಲಿಯೇ ಮಾರುಕಟ್ಟೆಗಿಂತ ಉತ್ತಮ ಮತ್ತು ದೀರ್ಘಕಾಲ ಬಾಳಿಕೆ ಬರುವ ಗರಂ ಮಸಾಲಾವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಹೇಳುತ್ತೇವೆ.

ಸಾಮಗ್ರಿಗಳು

  • ಧನಿಯಾ ಅಥವಾ ಕೊತ್ತಂಬರಿ ಬೀಜ : 2 ದೊಡ್ಡ ಚಮಚ
  • ಜೀರಿಗೆ : 1 ದೊಡ್ಡ ಚಮಚ
  • ಕಾಳುಮೆಣಸು : 1 ದೊಡ್ಡ ಚಮಚ
  • ದಾಲ್ಚಿನ್ನಿ : 2 ಸಣ್ಣ ಕಡ್ಡಿಗಳು
  • ಲವಂಗ : 1 ಚಮಚ
  • ಹಸಿ ಏಲಕ್ಕಿ : 1 ಚಮಚ
  • ದೊಡ್ಡ ಏಲಕ್ಕಿ : 1
  • ತೇಜಪತ್ರೆ (Cinnamomum) : 2
  • ಸೋಂಪು: 1 ಚಮಚ
  • ಜಾಯಿಕಾಯಿ : 1/4 ತುಂಡು
  • ಜಾವಂತ್ರಿ(javantri) : 1 ಸಣ್ಣ ತುಂಡು

ಈಗ 5 ಹಂತಗಳಲ್ಲಿ ಮನೆಯಲ್ಲಿ ತಯಾರಿಸಿದ ಗರಂ ಮಸಾಲಾ ಪೌಡರ್ ಮಾಡಿ

  • ಒಂದು ಪ್ಯಾನ್ ನಲ್ಲಿ ಧನಿಯಾ ಬೀಜ, ಜೀರಿಗೆ, ಕಾಳುಮೆಣಸು, ದಾಲ್ಚಿನ್ನಿ ಕಡ್ಡಿಗಳು, ಲವಂಗ, ಹಸಿ ಏಲಕ್ಕಿ, ದೊಡ್ಡ ಏಲಕ್ಕಿ, ತೇಜಪತ್ರೆ ಮತ್ತು ಸೋಂಪು ಬೀಜವನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ.
  • ತಳ ಹಿಡಿದು ಕಪ್ಪಾಗುವುದನ್ನು ತಪ್ಪಿಸಲು ನಿರಂತರವಾಗಿ ಸೌಟ್‌ ಹಾಕಿ ತಿರುಗಿಸುತ್ತಿರಿ, ಮಸಾಲೆ ಪರಿಮಳ ಬರುವವರೆಗೆ ಸುಮಾರು 3-4 ನಿಮಿಷಗಳ ಕಾಲ ಹುರಿಯಿರಿ.
  • ಎಲ್ಲಾ ಮಸಾಲೆಗಳು ಹುರಿದ ನಂತರ, ಮಸಾಲೆಗಳನ್ನು ತಟ್ಟೆಯಲ್ಲಿ ತೆಗೆದುಕೊಂಡು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
  • ತಣ್ಣಗಾದ ನಂತರ, ಹುರಿದ ಮಸಾಲೆಗಳನ್ನು ಜಾಯಿಕಾಯಿ ಮತ್ತು ಜಾವಂತ್ರಿ ಜೊತೆಗೆ ಸೇರಿಸಿ ಮಸಾಲೆ ಪುಡಿ ಮಾಡುವ ಯಂತ್ರ ಅಥವಾ ಬ್ಲೆಂಡರ್ ನಲ್ಲಿ ಹಾಕಿ ಪುಡಿ ಮಾಡಿ.
  • ಪುಡಿ ಮಾಡಿದ ಗರಂ ಮಸಾಲಾವನ್ನು ಗಾಳಿಯಾಡದ ಡಬ್ಬದಲ್ಲಿ ತಂಪಾದ, ಒಣ ಸ್ಥಳದಲ್ಲಿ ಇರಿಸಿ. ಉತ್ತಮ ರುಚಿಗಾಗಿ ಇದನ್ನು 6 ತಿಂಗಳವರೆಗೆ ಬಳಸಬಹುದು.

ಈ ಸಲಹೆಗಳನ್ನು ನೆನಪಿನಲ್ಲಿಡಿ

  • ಉತ್ತಮ ರುಚಿಗಾಗಿ ಎಲ್ಲಾ ಮಸಾಲೆಗಳು ತಾಜಾವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
  • ನಿಮ್ಮ ರುಚಿಗೆ ಅನುಗುಣವಾಗಿ ನೀವು ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಪುಡಿಯನ್ನು ಸಹ ಬಳಸಬಹುದು.
  • ಕರಿ, ಸೂಪ್ ಮತ್ತು ಇತರ ಭಾರತೀಯ ಪಾಕಪದ್ಧತಿಗಳ ರುಚಿಯನ್ನು ಹೆಚ್ಚಿಸಲು ಗರಂ ಮಸಾಲಾವನ್ನು ಬಳಸಿ.

ಇನ್ನಷ್ಟು ಓದಿ: ಅಡುಗೆ ಏನ್ ಮಾಡ್ಬೇಕು ಅನ್ನೋ ಟೆನ್ಷನ್ ಬಿಡಿ : ದಿನಕ್ಕೊಂದು ತರಕಾರಿ ಮಜ್ಜಿಗೆ ಹುಳಿ ಮಾಡಿ