Alcohol Truth: ಕಾನೂನುಬದ್ಧವಾಗಿ ಮನೇಲಿ ಎಷ್ಟು ಮದ್ಯ ಸಂಗ್ರಹಿಸಬಹುದು ?
ಸದ್ಯದ ಪ್ರಪಂಚದಲ್ಲಿ ಕುಡಿಯೋದೆ ನನ್ನ ವೀಕ್‌ನೆಸ್ಸು ಅನ್ನೋರೆ ಹೆಚ್ಚಿನವರು. ಆದ್ರೆ ಹೆಚ್ಚಿನವರು ಮದ್ಯ (Alcohol) ಕುಡೀತಾರಾದ್ರೂ ಮದ್ಯದ ಬಗ್ಗೆ ಹಲವಾರು ವಿಚಾರಗಳನ್ನು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ಅದನ್ನೇ ಕಣ್ಮುಚ್ಚಿಕೊಂಡು ಅನುಸರಿಸುತ್ತಾರೆ ಕೂಡಾ. ಕಾನೂನುಬದ್ಧ (Legally) ವಾಗಿ ಮನೇಲಿ ಎಷ್ಟು ಮದ್ಯ ಸಂಗ್ರಹಿಸಬಹುದು ಅನ್ನೋದು ನಿಮ್ಗೆ ಗೊತ್ತಾ ?
ಹಲವರು ಮನೆಯಲ್ಲಿ ಬರ್ತ್‌ಡೇ, ಪಾರ್ಟಿ, ಗೆಟ್ ಟುಗೆದರ್, ವೀಕೆಂಡ್ ಹೀಗೆ ನಾನಾ ಕಾರಣಗಳಿಗಾಗಿ ಮದ್ಯ (Alcohol) ತಂದು ಸ್ಟಾಕ್ ಇಟ್ಟುಕೊಂಡಿರ್ತಾರೆ. ಆದ್ರೆ ಕಾನೂನುಬದ್ಧವಾಗಿ ಮನೇಲಿ ಎಷ್ಟು ಮದ್ಯ ಸಂಗ್ರಹಿಸಬಹುದು ಅನ್ನೋದು ನಿಮ್ಗೆ ಗೊತ್ತಾ? ನೀವು ಅಲ್ಕೋಹಾಲ್ ಪ್ರಿಯರಾಗಿದ್ದರೆ ಮತ್ತು ಮನೆಯಲ್ಲಿ ಮದ್ಯದ ಸಂಗ್ರಹ (Stock)ವನ್ನು ಹೊಂದಿದ್ದರೆ, ನೀವು ಈ ಲೇಖನವನ್ನು ಕೊನೆಯವರೆಗೂ ಓದಲೇಬೇಕು.
ಇತ್ತೀಚಿನ ಆದೇಶದಲ್ಲಿ, ಕುಟುಂಬದಲ್ಲಿ 6 ವಯಸ್ಕರಿದ್ದ 132 ಬಾಟಲಿಗಳ ಮದ್ಯ ಅಂದರೆ 107.2 ಲೀಟರ್ ಸಂಗ್ರಹಿಸಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ದೆಹಲಿ ಹೈಕೋರ್ಟ್ (Highcourt) ರದ್ದುಗೊಳಿಸಿತು. ಮನೆಯಲ್ಲಿ ಮದ್ಯ ಸಂಗ್ರಕ್ಕೆ ಅನುಮತಿಸುವ ಮಿತಿ 162 ಲೀಟರ್ ಆಗಿತ್ತು. ದೆಹಲಿ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಕ್ಕಾಗಿ ದಾಖಲಾದ ಎಫ್‌ಐಆರ್ (FIR) ಅನ್ನು ತಳ್ಳಿಹಾಕುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಈ ಹೇಳಿಕೆ ನೀಡಿದರು.
Alcohol Myths: ಮದ್ಯದ ಬಗ್ಗೆ ನೀವು ಅಂದ್ಕೊಂಡಿರೋದೆಲ್ಲ ನಿಜ ಅಲ್ಲಾರೀ..!
ಪ್ರಕರಣವೇನು ?
ದೆಹಲಿಯ ವ್ಯಕ್ತಿಯ ವಿರುದ್ಧ ಮನೆಯಲ್ಲಿ ಮದ್ಯ ಸಂಗ್ರಹಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿತ್ತು. ಆತನ ವಿರುದ್ಧ ದೆಹಲಿ ಅಬಕಾರಿ ಕಾಯ್ದೆ, 2009ರ ಸೆಕ್ಷನ್ 33ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಫ್‌ಐಆರ್ ರದ್ದುಗೊಳಿಸುವಾಗ, ನ್ಯಾಯಾಲಯವು, ‘ಅರ್ಜಿದಾರರ ಮನೆಯಿಂದ 132 ಬಾಟಲಿಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ 51.8 ಲೀಟರ್ ವಿಸ್ಕಿ, ವೋಡ್ಕಾ, ಜಿನ್, ರಮ್ ಮತ್ತು 55.4 ಲೀಟರ್ ಬಿಯರ್, ವೈನ್ ಸೇರಿವೆ’ ಎಂದು ತಿಳಿಸಿದರು.
ಮಾತ್ರವಲ್ಲ ‘ಅರ್ಜಿದಾರರ ಕುಟುಂಬವು 25 ವರ್ಷಕ್ಕಿಂತ ಮೇಲ್ಪಟ್ಟ ಆರು ವಯಸ್ಕರನ್ನು ಒಳಗೊಂಡಿರುತ್ತದೆ, ಅರ್ಜಿದಾರರ ಮನೆಯಲ್ಲಿ ಮದ್ಯವನ್ನು ಹೊಂದಲು ಅನುಮತಿಸುವ ಮಿತಿಯು 54 ಲೀಟರ್ ವಿಸ್ಕಿ, ವೋಡ್ಕಾ, ಜಿನ್ ಮತ್ತು ರಮ್ ಮತ್ತು 108 ಲೀಟರ್ ಬಿಯರ್, ವೈನ್ ಮತ್ತು ಅಲ್ಕೋಪಾಪ್ ಆಗಿರುತ್ತದೆ. ದೆಹಲಿ ಅಬಕಾರಿ ಕಾಯ್ದೆ, 2009 ರ ಅರ್ಜಿದಾರರಿಂದ ಪ್ರಾಥಮಿಕವಾಗಿ ಯಾವುದೇ ಉಲ್ಲಂಘನೆ ಆಗಿಲ್ಲ’ ಎಂದು ಹೇಳಿದರು
ದೆಹಲಿ ಹೈಕೋರ್ಟ್ ಹೇಳಿದ್ದೇನು ?
ನ್ಯಾಯಾಲಯದ ಪ್ರಕಾರ, ದೆಹಲಿ ಅಬಕಾರಿ ಕಾಯಿದೆ, 2009ರ ಸೆಕ್ಷನ್ 33ರ ಅಡಿಯಲ್ಲಿ ಅಪರಾಧವನ್ನು ಪ್ರಕರಣದ ಸತ್ಯ ಮತ್ತು ಸಂದರ್ಭಗಳಿಂದ ಅರ್ಜಿದಾರರ ವಿರುದ್ಧ ಮಾಡಲಾಗಿಲ್ಲ, ಏಕೆಂದರೆ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾದ ಮದ್ಯದ ಪ್ರಮಾಣವು ಗರಿಷ್ಠ ಅನುಮತಿಯೊಳಗೆ ಬರುತ್ತದೆ.
Wine Varieties: ಐಸ್ ವೈನ್ ಟೇಸ್ಟ್ ಮಾಡಿದ್ದೀರಾ ?
ಮದ್ಯ ಸಂಗ್ರಹಿಸಲು ಗರಿಷ್ಠ ಪ್ರಮಾಣಗಳು
ದೆಹಲಿ ನಿವಾಸಿಗಳು ಕಾನೂನುಬದ್ಧವಾಗಿ ಮನೆಯಲ್ಲಿ ಸಂಗ್ರಹಿಸಬಹುದಾದ ಮದ್ಯದ ನಿಖರವಾದ ಪ್ರಮಾಣಗಳು ಇಲ್ಲಿವೆ. ಭಾರತೀಯ ಮದ್ಯ ಮತ್ತು ವಿದೇಶಿ ಮದ್ಯ-ವಿಸ್ಕಿ ರಮ್, ಜಿನ್, ವೋಡ್ಕಾ ಮತ್ತು ಬ್ರಾಂಡಿ (ವೈನ್ ಲಿಕ್ಕರ್, ಬಿಯರ್, ಸೈಡರ್ ಮತ್ತು ಅಲ್ಕೋಪಾಪ್ ಹೊರತುಪಡಿಸಿ) 9 ಲೀಟರ್, ವೈನ್, ಬಿಯರ್, ಲಿಕ್ಕರ್, ಸೈಡರ್ ಮತ್ತು ಅಲ್ಕೋಪಾಪ್ 18 ಲೀಟರ್, ಭಾರತೀಯ ಮದ್ಯ ಅಥವಾ ವಿದೇಶಿ ಮದ್ಯ ಇತರ ರಾಜ್ಯಗಳಿಂದ ದೆಹಲಿ ಪ್ರವೇಶಿಸುವಾಗ 1 ಲೀಟರ್, ವಿದೇಶಿ ಮದ್ಯ ಇತರ ದೇಶಗಳಿಂದ ದೆಹಲಿ ಪ್ರವೇಶಿಸುವಾಗ 2 ಲೀಟರ್ ಸಂಗ್ರಹಿಸಬಹುದಾಗಿದೆ.
ಈ ನಿಯಮದ ಉಲ್ಲಂಘನೆಯು ದೆಹಲಿ ಅಬಕಾರಿ ಕಾಯಿದೆ, 2009ರ ಸೆಕ್ಷನ್ 33ರ ಅಡಿಯಲ್ಲಿ ಅಪರಾಧವನ್ನು ಒಳಗೊಂಡಿರುತ್ತದೆ, ಇದು ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 50,000ಕ್ಕಿಂತ ಕಡಿಮೆಯಿಲ್ಲದ ಆದರೆ ರೂ.1,00,000 ವರೆಗೆ ವಿಸ್ತರಿಸಬಹುದಾದ ದಂಡದೊಂದಿಗೆ ಶಿಕ್ಷೆಗೆ ಗುರಿಯಾಗುತ್ತದೆ.
ಕರ್ನಾಟಕದಲ್ಲಿ ಮದ್ಯ ಸಂಗ್ರಹಿಸಲು ಇರುವ ನಿಯಮವೇನು ?
ಕರ್ನಾಟಕದಲ್ಲಿ ಮದ್ಯವನ್ನು ಸಂಗ್ರಹಿಸಲು ಅನುಮತಿಸುವ ಮಿತಿಗಳೆಂದರೆ 18.2 ಲೀಟರ್ ಕಂಟ್ರಿ ಬಿಯರ್, 9.1 ಲೀಟರ್ ಆಮದು ಮಾಡಿಕೊಂಡ ವಿದೇಶಿ ಮದ್ಯ, 4.5 ಲೀಟರ್ ಫೋರ್ಟಿಫೈಡ್ ವೈನ್, 9 ಲೀಟರ್ ಫ್ರೂಟ್ ವೈನ್, ಕರ್ನಾಟಕದಲ್ಲಿ ತಯಾರಿಸಿದ 2.3 ಲೀಟರ್ ಮದ್ಯ (ಆಮದು ಮಾಡಿಕೊಂಡ ವಿದೇಶಿ ಮದ್ಯವನ್ನು ಹೊರತುಪಡಿಸಿ), ಮತ್ತು 2.5 ಲೀಟರ್ ಟೋಡಿ ಅಥವಾ ಶೇಂದಿ. ರಾಜ್ಯದಲ್ಲಿ ಸಾರ್ವಜನಿಕವಾಗಿ ಟೋಡಿ ಮಾರಾಟವನ್ನು ಅನುಮತಿಸುವ ಪ್ರದೇಶಗಳು ಅಂದರೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳು.