ಕುದಿಸಿದಷ್ಟೂ ಟೀ ರುಚಿಯಾಗೋದು ಹೌದು, ಆದರೆ ಎಷ್ಟು ಕುದಿಸಿದರೆ ಓಕೆ?

ರುಚಿ ರುಚಿ ಟೀ ಕುಡಿಯಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಎಲ್ಲರಿಗೂ ರುಚಿ ಚಹಾ ಮಾಡಲು ಬರೋದಿಲ್ಲ. ಹೇಗೆ ತಯಾರಿಸಬೇಕು, ಎಷ್ಟು ಕುದಿಸಬೇಕು, ನೀರು ಎಷ್ಟು ಹಾಕ್ಬೇಕು ಎಂಬ ಕನ್ಫ್ಯೂಜ್ ಇದ್ದೇ ಇರುತ್ತೆ. ಅದಕ್ಕೆ ಇಲ್ಲಿದೆ ಉತ್ತರ.
 

How Long One Should Boil The Tea

ಟೀ ಬೇಡ ಎನ್ನುವವರು ಬಹಳ ಅಪರೂಪ. ದಿನದಲ್ಲಿ ಮೂರ್ನಾಲ್ಕು ಕಪ್ ಟೀ ಕುಡಿಯೋರ ಸಂಖ್ಯೆ ಹೆಚ್ಚು. ವಾತಾವರಣ ಸ್ವಲ್ಪ ತಂಪಾಗಿದ್ದರೆ ಈ ಸಂಖ್ಯೆ ಹೆಚ್ಚಾಗುತ್ತದೆ. ಭಾರತದಲ್ಲಿ ನೀರು ಬಿಟ್ಟರೆ ಅತಿ ಹೆಚ್ಚು ಸೇವನೆ ಮಾಡುವ ದ್ರವ ಪದಾರ್ಥವೆಂದ್ರೆ ಟೀ. ಬೆಳಿಗ್ಗೆ ಎದ್ದಾಗ ಒಂದು ಸ್ಟ್ರಾಂಗ್ ಟೀ ಹೊಟ್ಟೆ ಸೇರಿದ್ರೆ ಇಡೀ ದಿನ ಫ್ರೆಶ್ ಆಗಿ ಇರಬಹುದು. ಟೀ ಮೂಡ್ ಸರಿ ಮಾಡುವ ಜೊತೆಗೆ ದೇಹಕ್ಕೆ ಕೆಲಸ ಮಾಡುವ ಶಕ್ತಿ ನೀಡುತ್ತದೆ.

ಮಾರುಕಟ್ಟೆ (Market) ಯಲ್ಲಿ ಸಾಕಷ್ಟು ವಿಧದ ಟೀ (Tea) ಪುಡಿ ಲಭ್ಯವಿದೆ. ಹಾಗೆಯೇ ಟೀ ಮಾಡುವ ವಿಧಾನಗಳು ಕೂಡ ಬೇರೆ ಬೇರೆಯಾಗಿವೆ. ಪ್ರತಿಯೊಬ್ಬರೂ ತಮ್ಮದೇ ಸ್ಟೈಲ್ ನಲ್ಲಿ ಟೀ ತಯಾರಿಸುತ್ತಾರೆ. ಹಾಗಾಗಿ ಚಹಾ ರುಚಿ ಕೂಡ ಬೇರೆ ಬೇರೆಯಾಗಿರುತ್ತದೆ. ಚಹಾವನ್ನು ಪದೇ ಪದೇ ಸೇವನೆ ಮಾಡುವವರು ಕೆಲಸ ಸುಲಭವಾಗ್ಲಿ ಅಂತಾ ಟೀ ಡಿಕಾಕ್ಷನ್ (Decoction ) ಮಾಡಿಟ್ಟುಕೊಳ್ಳುವವರಿದ್ದಾರೆ. ಇನ್ನು ಕೆಲವರು ಟೀ ಸಿದ್ಧಮಾಡಿ, ಆಗಾಗ ಬಿಸಿ ಮಾಡಿ ಕುಡಿಯುತ್ತಾರೆ. ಆದ್ರೆ ಚಹಾವನ್ನು ಬಿಸಿ ಮಾಡೋದು ಎಷ್ಟು ಸರಿ ಹಾಗೆ ಟೀಯನ್ನು ಎಷ್ಟು ಕುದಿಸಬೇಕು ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತದೆ. ನಾವಿಂದು ಟೀಯನ್ನು ಎಷ್ಟು ಬಾರಿ ಕುದಿಸಿದ್ರೆ ಒಳ್ಳೆಯದು ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.

ಟೀಯನ್ನು ಎಷ್ಟು ಬಾರಿ ಕುದಿಸಬೇಕು ಎಂಬುದು ನೀವು ಯಾವ ಚಹಾವನ್ನು ತಯಾರಿಸುತ್ತಿರುವಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಹಾಲಿನ ಟೀ ಕುಡಿಯುತ್ತಾರೆ. ಕೆಲವರು ಗ್ರೀನ್ ಟೀ ಸೇವನೆ ಮಾಡ್ತಾರೆ. ಮತ್ತೆ ಕೆಲವರಿ ಬರೀ ಟೀ ಡಿಕಾಕ್ಷನ್ ಕುಡಿಯುತ್ತಾರೆ.

ಚಳಿಗಾಲದಲ್ಲಿ ಜೀರ್ಣಕ್ರಿಯೆ ಚೆನ್ನಾಗಿರ್ಬೇಕು ಅಂದ್ರೆ ಸೀತಾಫಲ ತಿನ್ನಿ

ಸಾಮಾನ್ಯವಾಗಿ ಹಾಲು ಹಾಕಿದ ಟೀಯನ್ನು ನೀವು ಮತ್ತೆ ಮತ್ತೆ ಕುದಿಸಿ ಕುಡಿದ್ರೆ ಟೀ ರುಚಿ ಹೋಗುತ್ತದೆ. ನೀವು ಹಾಲು ಹಾಕಿದ ನಂತ್ರ ಬರೀ ಒಂದು ಅಥವಾ ಎರಡು ನಿಮಿಷ ಕುದಿಯಲು ಬಿಡಬೇಕು. ನಂತ್ರ ಗ್ಯಾಸ್ ಬಂದ್ ಮಾಡ್ಬೇಕು.  ಹಾಲು ಈಗಾಗಲೇ ಬಿಸಿಯಾಗಿದ್ದರೆ ನೀವು ಒಂದು ನಿಮಿಷ ಕುದಿಸಿದ್ರೆ ಸಾಲುತ್ತದೆ. ಹಾಲು ಹಾಕಿದ ಟೀಯನ್ನು ತಣ್ಣಗಾಗಲು ಬಿಟ್ಟು ಮತ್ತೆ ಕುದಿಸಿ ಕುಡಿಯೋದು ಒಳ್ಳೆಯದಲ್ಲ. ನೀವು ನೀರಿಗೆ ಟೀ ಪುಡಿಯನ್ನು ಹಾಕಿ ಕುದಿಸಿ ಕುಡಿಯುವವರಾಗಿದ್ದರೆ ನೀರಿನ ಜೊತೆ ಟೀ ಪುಡಿ ಹಾಕಿದ ಮೇಲೆ ಅದು 2 ರಿಂದ 3 ನಿಮಿಷ ಕುದಿಯಲು ಬಿಡಬೇಕು. ಆದ್ರೆ ಗ್ರೀನ್ ಟೀ ವಿಷ್ಯದಲ್ಲಿ ಇದು ತಪ್ಪಾಗುತ್ತದೆ. ನೀವು ಗ್ರೀನ್ ಟೀ ಸೇವನೆ ಮಾಡುವಾಗ ಹೆಚ್ಚು ಕುದಿ ಬಂದ್ರೆ ಗ್ರೀನ್ ಟೀ ರುಚಿ ಹಾಳಾಗುತ್ತದೆ.

ಬಣ್ಣ ಮಾತ್ರವಲ್ಲ ರುಚಿಯಲ್ಲೂ ಭಿನ್ನತೆ ಹೊಂದಿದೆ ಡೊಳ್ಳು ಮೆಣಸು

ಒಳ್ಳೆ ಟೀ ತಯಾರಿಸೋದು ಹೇಗೆ ಗೊತ್ತಾ? : ಪ್ರತಿ ದಿನ ಟೀ ಕುಡಿಯುವವರಿಗೂ ಅನೇಕ ಬಾರಿ ಒಳ್ಳೆ ಟೀ ಮಾಡೋಕೆ ಬರೋದಿಲ್ಲ. ಅಂಥವರು ಬ್ರಿಟಿಷ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಷನ್ ನೀಡಿದ ಟಿಪ್ಸ್ ಅನುಸರಿಸಬಹುದು. ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ನೀರು ಹಾಲಿನ ಪ್ರಮಾಣಕ್ಕೆ ಸಮನಾಗಿರಬೇಕು ಅಥವಾ ಸ್ವಲ್ಪ ಕಡಿಮೆ ಇರಬಹುದು. ನೀರು ಬಿಸಿಯಾದಾಗ  ಅದಕ್ಕೆ ಟೀ ಪುಡಿಯನ್ನು ಸೇರಿಸಿ. ಟೀ ಪುಡಿಗಳ ಪ್ರಮಾಣವು ಸಕ್ಕರೆಯ ಪ್ರಮಾಣಕ್ಕಿಂತ ಕಡಿಮೆಯಿರಬೇಕು. ಚಹಾ ಚೆನ್ನಾಗಿ ಕುದಿಯುವಾಗ  ಅದಕ್ಕೆ ಸಕ್ಕರೆ ಸೇರಿಸಿ. ನೀವು ಮಸಾಲೆ ಹಾಕುವುದಿದ್ರೆ ಸಕ್ಕರೆ ಹಾಕಿದ ನಂತ್ರ ರುಚಿಗೆ ತಕ್ಕಂತೆ ಶುಂಠಿ, ಲವಂಗ ಅಥವಾ ಕರಿಮೆಣಸನ್ನು ಸೇರಿಸಬಹುದು. ಒಂದ್ವೇಳೆ ಇದ್ಯಾವುದೂ ಬೇಡ ಎನ್ನುವವರು ನೀರು ಕುದಿಯುತ್ತಿರುವ ವೇಳೆ ಬಿಸಿಯಾದ ಹಾಲನ್ನು ಇದಕ್ಕೆ ಸೇರಿಸಿ, ಕೇವಲ ಒಂದು ಕುದಿ ಬರುವವರೆಗೆ ಬಿಡಿ. ನಮತ್ರ ಫಿಲ್ಟರ್ ಮಾಡಿ. ನೀರಿಗೆ ತಕ್ಕಂತೆ ನೀವು ಹಾಲು ಸೇರಿಸಬೇಕಾಗುತ್ತದೆ. 

Latest Videos
Follow Us:
Download App:
  • android
  • ios