ಹೋಟೆಲ್​ ರೀತಿಯಲ್ಲೇ ಉದ್ದಿನ ವಡೆ ಗರಿಗರಿಯಾಗಲು ಏನು ಮಾಡ್ಬೇಕು? ವಾಸುದೇವ ಅಡಿಗರ ಟಿಪ್ಸ್​ ಇಲ್ಲಿದೆ...

ಹೋಟೆಲ್​ ಶೈಲಿಯಲ್ಲಿ ಉದ್ದಿನ ವಡೆ ಗರಿಗರಿಯಾಗಲು ಏನು ಮಾಡ್ಬೇಕು?  ವಾಸುದೇವ ಅಡಿಗರ ಟಿಪ್ಸ್​ ಇಲ್ಲಿದೆ...
 

hotel style  crispy Uddina Vada tips by Vasudeva Adiga in rapid rashmi show suc

ಮನೆಯಲ್ಲಿ ಏನೇ ತಿನಿಸು ಮಾಡಿದರೂ ಹೋಟೆಲ್​ನಷ್ಟು ಚೆನ್ನಾಗಿ ಬರುವುದಿಲ್ಲ ಎನ್ನುವುದು ನಿಜವೇ. ಹೋಟೆಲ್​ನಲ್ಲಿ ಹಾಕುವ ಪದಾರ್ಥಗಳನ್ನೇ ಹಾಕಿದರೂ, ಅದೇ ಶೈಲಿಯಲ್ಲಿ ಮಾಡಿದರೂ ಹಲವು ಬಾರಿ ಹೋಟೆಲ್​ ರುಚಿಯೇ ಹೆಚ್ಚು ಮೆಚ್ಚುವುದು ಉಂಟು. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಏನೇ ಇದ್ದರೂ ಮನೆಯ ಅಡುಗೆಯ, ಅಮ್ಮನ ಕೈರುಚಿಯೇ ಹೆಚ್ಚು ಚೆಂದ ಎಂದರೂ ಹೋಟೆಲ್​ನ ರುಚಿ ಕಂಡವರಿಗೆ ಅದೇ ಇಷ್ಟ ಆಗುವುದೂ ಉಂಟು. ಹೋಟೆಲ್​ಗಳಲ್ಲಿ ಮಾಡುವ ಅಡುಗೆಗಳಲ್ಲಿ ಎಕ್ಸ್​ಪರ್ಟ್​ಗಳು ಇರುತ್ತಾರೆ. ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿ ಒಂದೊಂದು ತಿನಿಸಿಗೂ ಪ್ರತ್ಯೇಕ ಶೆಫ್​ಗಳು ಇರುತ್ತಾರೆ. ಅವರ ಬಳಿ ರುಚಿಯಾದ ತಿನಿಸು ಮಾಡುವ ಏನೋ ಒಂದು ಟಿಪ್ಸ್​ ಇರುತ್ತದೆ. ಇದೀಗ ಗರಿಗರಿ ವಡೆಯನ್ನು ಹೇಗೆ ಮಾಡುವುದು ಎನ್ನುವ ಟಿಪ್ಸ್​ ಹೇಳಿಕೊಟ್ಟಿದ್ದಾರೆ ಹೋಟೆಲ್​ ಉದ್ಯಮಿ ವಾಸುದೇವ ಅಡಿಗ. 

ವಾಸುದೇವ ಅಡಿಗರು ಕ್ರಿಸ್ಪಿ ಉದ್ದಿನ ವಡೆ ಮಾಡುವುದು ಹೇಗೆ ಎನ್ನುವ ಟಿಪ್ಸ್​ ಇಲ್ಲಿ ಹೇಳಿದ್ದಾರೆ ನೋಡಿ. ರ್ಯಾಪಿಡ್​​ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.  ಕ್ರಿಸ್ಪಿಯಾಗಿ ಬರುವುದು ರುಬ್ಬುವುದರಲ್ಲಿದೆ. ಕೆಲವರು ಅರ್ಜೆಂಟ್​ನಲ್ಲಿ ರುಬ್ಬುವ ಮಷಿನ್​ಗೆ ನೆನೆಸಿದ ಬೇಳೆ ಹಾಕಿಬಿಡುತ್ತಾರೆ. ಆ ಕಡೆ ಗಮನವನ್ನೇ ಕೊಡುವುದಿಲ್ಲ. ಅದು ತಿರುಗುತ್ತಾ ಇರುವಾಗ ಸೆಂಟ್ರಲ್​ನಲ್ಲಿ ಸರಿಯಾಗಿ ಗ್ರೈಂಡ್​ ಆಗಬೇಕು. ಕೆಲವರು ಹಾಗೆಯೇ ಬಿಡುತ್ತಾರೆ. ಅದರಲ್ಲಿ ಬೇಳೆ ಬೇಳೆ ಹಾಗೆ ಇರುತ್ತದೆ. ಕೆಲವು ಕಡೆ ಮಾತ್ರ ನೈಸ್​ ಆಗುತ್ತದೆ. 

ಸ್ಟಾರ್​ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...

ಹೀಗೆ  ಆದರೆ ವಡೆ ಗರಿಗರಿಯಾಗುವುದಿಲ್ಲ. ಇದರ ಜೊತೆಗೆ ಟೆಂಪರೇಚರ್​ ಕೂಡ ತುಂಬಾ ಮಹತ್ವದ್ದು. ಒಂದು ಸಲ ಯೂಸ್​ ಮಾಡಿರುವ ಎಣ್ಣೆ ಮತ್ತೊಮ್ಮೆ ಬಳಸಬಾರದು. ಫ್ರೆಷ್​ ಎಣ್ಣೆಯನ್ನೇ ಬಳಸಬೇಕು. ಅಷ್ಟೇ ಅಲ್ಲದೇ ಟೆಂಪರೇಚರ್​ ದೊಡ್ಡದಾಗಿ ಇಟ್ಟುಕೊಳ್ಳಬಾರದು. ಹೀಗೆ ಇಟ್ಟುಕೊಂಡರೆ ಮೇಲುಗಡೆ ಕಪ್ಪಾಗುತ್ತದೆ, ಒಳಗಡೆ ಬೇಯುವುದೇ ಇಲ್ಲ. ಆದ್ದರಿಂದ ಎರಡು ಸಲ ಬೇಕ್​  ಮಾಡಬೇಕು. ಒಮ್ಮೆ ಬಿಳಿಬಿಳಿ ಇದ್ದಾಗ ಎತ್ತಿಟ್ಟು, ಮತ್ತೊಮ್ಮೆ ಟೆಂಪರೇಚರ್​ ಸ್ವಲ್ಪ ಜಾಸ್ತಿ ಮಾಡಿಕೊಂಡು ಬೇಕ್​ ಮಾಡಿದ್ರೆ ಕ್ರಿಸ್ಪಿನೆಸ್​ ಬರುತ್ತದೆ ಎಂದಿದ್ದಾರೆ. 

 
ಇನ್ನು ಕೆ.ಎನ್. ವಾಸುದೇವ್ ಅಡಿಗ ಅವರ ಕುರಿತು ಹೇಳುವುದಾದರೆ, ಅವರು 1993 ರಲ್ಲಿ ವಿಶಿಷ್ಟವಾದ  ದರ್ಶಿನಿ ಹೋಟೆಲ್‌ನೊಂದಿಗೆ ಕಡಿಮೆ  ಬೆಲೆಯಲ್ಲಿ ರುಚಿಕರವಾದ ಆಹಾರವನ್ನು ನೀಡುವುದರೊಂದಿಗೆ ತಮ್ಮ ಹೋಟೆಲ್​ ವೃತ್ತಿ ಆರಂಭಿಸಿದರು. ಇಂದು  ಬೆಂಗಳೂರು ಒಂದರಲ್ಲಿಯೇ 15ಕ್ಕೂ ಅಧಿಕ ಫಾಸ್ಟ್ ಫುಡ್ ಹಾಗೂ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿಯೂ ಇವರ ರೆಸ್ಟೋರೆಂಮಟ್​ಗಳಿವೆ.  ಯುಎಇಯ ಶಾರ್ಜಾದಲ್ಲಿ ರೆಸ್ಟೋರೆಂಟ್‌ ಸಕತ್​ ಫೇಮಸ್​​ ಆಗಿದೆ. ಇವರ ಹೋಟೆಲ್​ಗಳಲ್ಲಿ 2 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ.  

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...
 

Latest Videos
Follow Us:
Download App:
  • android
  • ios