Goli Idli Recipe: ಪ್ರತಿದಿನ ಅದೇ ಇಡ್ಲಿ, ದೋಸೆ ತಿಂದು ಬೇಸತ್ತಿದ್ದೀರಾ,, ಬೇರೆ ಏನಾದರೂ ಹೊಸ ತಿಂಡಿ ಮಾಡಲು ಬಯಸಿದ್ರೆ ಈ ಗೋಲಿ ಇಡ್ಲಿ ಮಾಡಿ ಸವಿಯಿರಿ. ಇಲ್ಲಿದೆ ರೆಸಿಪಿ.

ಇಡ್ಲಿ ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ ಮತ್ತು ಎಲ್ಲಾ ವಯಸ್ಸಿನ ಜನರಿಗೆ ಸೂಕ್ತವಾಗಿದೆ. ಅದರಲ್ಲೂ ಬೇರೆಲ್ಲೂ ಕಾಣದ, ನಮ್ಮ ಕರ್ನಾಟಕದಲ್ಲಿ ಮಾತ್ರ ತಯಾರಿಸುವ ಈ ಗೋಲಿ ಇಡ್ಲಿಯ ರುಚಿ ಬಹುತೇಕರಿಗೆ ತಿಳಿದಿಲ್ಲ ಎಂಬುದು ಆಶ್ಚರ್ಯ. ಇದು ಕನ್ನಡ ಪಾಕಪದ್ಧತಿಯಲ್ಲಿ ಆರೋಗ್ಯಕರ ಮತ್ತು ಸುಲಭವಾಗಿ ಜೀರ್ಣವಾಗುವ ಉಪಹಾರ ಭಕ್ಷ್ಯವಾಗಿದೆ. ಸಾಂಪ್ರದಾಯಿಕ ಇಡ್ಲಿಗೆ ಪರ್ಯಾಯವಾಗಿ, ಈ ಇಡ್ಲಿ ಸಣ್ಣ ತುಂಡುಗಳ ರೂಪದಲ್ಲಿ ಇರುತ್ತದೆ. ಇದು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಪ್ರಿಯವಾಗಿದೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು :

ಇಡ್ಲಿ ಹಿಟ್ಟಿಗೆ:

ಕಂದು ಅಕ್ಕಿ - 2 ಕಪ್ 
ಉದ್ದಿನ ಬೇಳೆ - 1 ಕಪ್
ಮೆಂತ್ಯ - 1/2 ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು 
ನೀರು - ಎಷ್ಟು ಬೇಕೋ ಅಷ್ಟು

ರುಚಿ ಜಾಸ್ತಿ ಮಾಡೋಕೆ:

ಕರಿಬೇವಿನ ಸೊಪ್ಪಿನ ಪುಡಿ - 1 ಟೀಸ್ಪೂನ್ (ಬೇಕಿಲ್ಲ, ಆದ್ರೆ ಒಳ್ಳೆ ರುಚಿ ಕೊಡುತ್ತೆ)
ಜೀರಿಗೆ - 1/2 ಟೀಸ್ಪೂನ್
ಮೆಣಸಿನ ಪುಡಿ - 1/2 ಟೀಸ್ಪೂನ್ 
ಕತ್ತರಿಸಿದ ಕೊತ್ತಂಬರಿ ಸೊಪ್ಪು - 1/2 ಕಪ್ 
ಎಣ್ಣೆ - 1 ಟೀಸ್ಪೂನ್ (ಬೇಕಿಲ್ಲ, ಆದ್ರೆ ಇಡ್ಲಿ ಸಾಫ್ಟ್ ಆಗುತ್ತೆ)

ತಯಾರಿ ವಿಧಾನ: 

- ಕಂದು ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಪ್ರತ್ಯೇಕವಾಗಿ 4-5 ಗಂಟೆಗಳ ಕಾಲ ನೆನೆಸಿಡಿ.
- ಮೊದಲು ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ, ನಂತರ ಅಕ್ಕಿಯೊಂದಿಗೆ ಬೆರೆಸಿ, ನೀರು ಸೇರಿಸಿ ಇಡ್ಲಿ ಹಿಟ್ಟಿನಂತೆ ರುಬ್ಬಿಕೊಳ್ಳಿ.
- ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಕನಿಷ್ಠ 8 ಗಂಟೆಗಳ ಕಾಲ ಚೆನ್ನಾಗಿ ಹುದುಗಲು ಬಿಡಿ.
- ಇಡ್ಲಿ ಹಿಟ್ಟಿಗೆ ಜೀರಿಗೆ, ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಸಣ್ಣ ಉಂಡೆಗಳನ್ನಾಗಿ ಸುತ್ತಿಕೊಳ್ಳಿ ಮತ್ತು ತುಪ್ಪ ಸವರಿದ ಪನಿಯಾರಂ ಪ್ಯಾನ್‌ನಲ್ಲಿ ಇರಿಸಿ ಸ್ವಲ್ಪ ಎಣ್ಣೆಯಿಂದ ಹುರಿಯಿರಿ.
- ಇಡ್ಲಿ ಉಂಡೆ ಬಂದ ಮೇಲೆ, ಅದನ್ನು ನಿಧಾನವಾಗಿ ತಿರುಗಿಸಿ ಇನ್ನೊಂದು ಬದಿಯನ್ನು ಬೇಯಿಸಿ.

ಇದನ್ನೂ ಓದಿ: ದಿನಾ ಅದೇ ಚಪಾತಿ ಬೇಸರವೇ? ಇಂದು ಈ ಟಿಪ್ಸ್ ಬಳಸಿ ಚಪಾತಿಯ ಹೊಸ ರುಚಿ ಸವಿಯಿರಿ, ರೆಸಿಪಿ ಇಲ್ಲಿದೆ!

ಬಡಿಸುವ ವಿಧಾನಗಳು : 

- ಬಿಸಿಯಾದ ಗೋಲಿ ಇಡ್ಲಿಗೆ ಸ್ವಲ್ಪ ಎಳ್ಳೆಣ್ಣೆ ಸವರಿ, ಮೆಣಸಿನ ಪುಡಿ ಉದುರಿಸಿದರೆ ಸೂಪರ್ ಟೇಸ್ಟ್ ಸಿಗುತ್ತೆ.
- ಸ್ವಲ್ಪ ಮೊಸರಿನಲ್ಲಿ ಪುದೀನಾ ಪೇಸ್ಟ್ ಬೆರೆಸಿ, ಅದರೊಂದಿಗೆ ಬಡಿಸಿದರೆ ಹೊಸ ರುಚಿ ಸಿಗುತ್ತೆ.
- ಕರಿಬೇವಿನ ಚಟ್ನಿ ಅಥವಾ ಖಾರವಾದ ಟೊಮೆಟೊ ಚಟ್ನಿಯೊಂದಿಗೆ ಸೇರಿಸಿ ಸವಿಯಬಹುದು.

ಆರೋಗ್ಯಕರ ಪ್ರಯೋಜನಗಳು :

- ಇದು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುವುದರಿಂದ ಇದು ಉತ್ತಮ ಶಕ್ತಿ ನೀಡುವ ಉಪಹಾರವಾಗಿದೆ.
- ಕಡಿಮೆ ಎಣ್ಣೆ ಬಳಕೆಯಿಂದಾಗಿ ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಇದು ಚಿಕ್ಕದಾಗಿದ್ದು ಮತ್ತು ದುಂಡಗಿನ ಆಕಾರದಲ್ಲಿರುವುದರಿಂದ ಮಕ್ಕಳಿಗೆ ಇದು ನೆಚ್ಚಿನ ತಿಂಡಿ.