ದಿನಾ ಅದೇ ಚಪಾತಿ ಬೇಸರವೇ? ಇಂದು ಈ ಟಿಪ್ಸ್ ಬಳಸಿ ಚಪಾತಿಯ ಹೊಸ ರುಚಿ ಸವಿಯಿರಿ, ರೆಸಿಪಿ ಇಲ್ಲಿದೆ!
ರೊಟ್ಟಿ, ಚಪಾತಿಯಂತಹ ಕೆಲವು ಆಹಾರ ತಯಾರಿಸಲು ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ಬಳಸುತ್ತೇವೆ. ಇವುಗಳ ರುಚಿ ಬೇರೆ ಬೇರೆಯಾಗಿರುತ್ತದೆ. ಆದರೆ ಆರೋಗ್ಯದ ವಿಷಯಕ್ಕೆ ಬಂದರೆ ಯಾವುದು ಒಳ್ಳೆಯದು ಎಂಬ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹಾಗಾದರೆ ತಜ್ಞರು ಏನು ಹೇಳುತ್ತಾರೆಂದರೆ..

ಮೈದಾ Vs ಗೋಧಿ
ಮೈದಾದಿಂದ ಮಾಡಿದ ಚಪಾತಿ, ಕಚೋರಿ, ಸಿಂಗಾರ, ಲೂಚಿ, ಪರೋಟ ನೋಡಲು ಆಕರ್ಷಕವಾಗಿರುತ್ತವೆ. ರುಚಿಕರವೂ ಆಗಿರುತ್ತವೆ. ಆದರೆ ವೈದ್ಯರು ಗೋಧಿ ಹಿಟ್ಟಿನಿಂದ ಮಾಡಿದ ರೊಟ್ಟಿ ಅಥವಾ ತಿನ್ನಲು ಸಲಹೆ ನೀಡುತ್ತಾರೆ.
ಮೈದಾ ಏಕೆ ತಿನ್ನಬಾರದು?
ಮೈದಾಗೆ ಹೋಲಿಸಿದರೆ ಗೋಧಿ ಹಿಟ್ಟಿನಲ್ಲಿ ಹೆಚ್ಚು ಫೈಬರ್ ಇರುತ್ತದೆ. ಬೇಗ ಜೀರ್ಣವಾಗುತ್ತದೆ. ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಮೈದಾದಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
ಗೋಧಿಯಲ್ಲಿ ರಂಜಕ, ಮೆಗ್ನೀಸಿಯಮ್, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ ಮತ್ತು ಅನೇಕ ವಿಟಮಿನ್ ಮತ್ತು ಫೈಬರ್ಗಳಿವೆ. ಗೋಧಿ ಹಿಟ್ಟನ್ನು ಸಂಸ್ಕರಿಸಿದರೆ ಮೈದಾ ಆಗುತ್ತದೆ.
ಗೋಧಿ ಹಿಟ್ಟಿನ ರೊಟ್ಟಿ ಅಥವಾ ಚಪಾತಿ ರುಚಿಯಾಗಿರಲು ಹೇಗೆ ತಯಾರಿಸುವುದು ಎಂದು ತಿಳಿಯೋಣ.. ಓಂ ಕಾಳು, ಮೆಂತ್ಯ, ನುಗ್ಗೆ ಸೊಪ್ಪು, ಅರಿಶಿನ, ಅಗಸೆ ಬೀಜಗಳನ್ನು ಬಳಸಿ.
ಮೆಂತ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 1 ಚಮಚ ಮೆಂತ್ಯವನ್ನು ಹುರಿದು ಪುಡಿ ಮಾಡಿ, 1 ಕಪ್ ಹಿಟ್ಟಿನಲ್ಲಿ ಬೆರೆಸಿ ಹಿಟ್ಟನ್ನು ಕಲಸಿ.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ, ಕಬ್ಬಿಣ ಇವೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು, ಉರಿಯೂತ ನಿವಾರಕ ಗುಣಗಳಿವೆ. 1 ಕಪ್ ಹಿಟ್ಟಿನಲ್ಲಿ 1 ಟೀಸ್ಪೂನ್ ಅರಿಶಿನ ಪುಡಿಯನ್ನು ಬೆರೆಸಿ.
ಅಗಸೆ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇವು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತವೆ.