G20 India: ವಿಶ್ವ ನಾಯಕರಿಗೆ ಬಡಿಸೋ ಊಟದಲ್ಲಿ ಏನೇನು ಇರುತ್ತೆ?

ಭಾರತ ಸಸ್ಯಾಹಾರಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಬಾಯಿ ಚಪ್ಪರಿಸುವಂತಹ ಖಾದ್ಯಗಳು ಸಿದ್ಧವಾಗುತ್ತವೆ. ಒಂದೊಂದು ರಾಜ್ಯವೂ ಒಂದೊಂದು ವಿಶೇಷತೆಯನ್ನು ಹೊಂದಿದ್ದು, ಅದ್ರ ಸಣ್ಣ ಝಲಕ್ ವಿಶ್ವನಾಯಕರಿಗೆ ಸಿಕ್ಕಿದೆ.
 

G20 Summit From Paneer Lababdar To Kuttu Malpua What Leaders Are Having For Friday Night roo

ಇಂದಿನಿಂದ ಜಿ20 ಶೃಂಗಸಭೆ ಆರಂಭಗೊಳ್ಳಲಿದೆ. ಇದಕ್ಕೆ ಹಲವು ವಿಶ್ವ ನಾಯಕರು ಶುಕ್ರವಾರವೇ ನವದೆಹಲಿಗೆ ಆಗಮಿಸಿದ್ದರು. ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಈ ಪಟ್ಟಿಯಲ್ಲಿ ಸೇರಿದ್ದಾರೆ.  ಇಂದಿನಿಂದ ಶೃಂಗಸಭೆ  ಔಪಚಾರಿಕವಾಗಿ ಆರಂಭವಾಗುವ ಮೊದಲೇ, ಪ್ರಧಾನಿ ನರೇಂದ್ರ ಮೋದಿ,  ಬಾಂಗ್ಲಾದೇಶ ಮತ್ತು ಮಾರಿಷಸ್‌ ನಾಯಕರು ಸೇರಿದಂತೆ ಕೆಲ ನಾಯಕರ ಜೊತೆ ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ. 

ಈ ಬಾರಿಯ ಜಿ 20 ಶೃಂಗಸಭೆ ವಸುಧೈವ ಕುಟುಂಬಕಂ (Vasudhaiva Kutumbakam) ಎಂಬ ಸಂಸ್ಕೃತ ನುಡಿಗಟ್ಟುಗಳಿಂದ ಸ್ಫೂರ್ತಿ ಪಡೆದಿದೆ. ಇದು  ಜಗತ್ತು ಒಂದು ಕುಟುಂಬ (Family) ಎಂದು ಸೂಚಿಸುತ್ತದೆ. ಶುಕ್ರವಾರ ರಾತ್ರಿ  ನವದೆಹಲಿಯಲ್ಲಿ ವಿಶ್ವ (World ) ನಾಯಕರಿಗೆ ಭೋಜನವನ್ನು ಏರ್ಪಡಿಸಲಾಗಿತ್ತು. ಈ ಭೋಜನದ ವಿಶೇಷವೆಂದ್ರೆ ಸಸ್ಯಾಹಾರ. ಜಿ 20 (G20) ನಾಯಕರಿಗೆ ದೇಶದಾದ್ಯಂತದ ಪ್ರಸಿದ್ಧಿ ಪಡೆದಿರುವ ಭಕ್ಷ್ಯದ ಜೊತೆ ಭಾರತೀಯ ಸಸ್ಯಾಹಾರಿ ಆಹಾರವನ್ನು ಉಣಬಡಿಸಲಾಯ್ತು.  

ಸಸ್ಯಾಹಾರಿಗಳಿಗೆ ಶಾಕಿಂಗ್ ನ್ಯೂಸ್‌: ಆಹಾರ ವೇಸ್ಟ್‌ ಮಾಡ್ಬೇಡಿ ಅನ್ನೋದು ಇದೇ ಕಾರಣಕ್ಕೆ!

ವಿಶ್ವ ನಾಯಕರಿಗೆ ಉಣಬಡಿಸಿದ ಆಹಾರದ ಪಟ್ಟಿ ಹೀಗಿದೆ : 

ಸಲಾಡ್ (Salad): ವಿಶ್ವ ನಾಯಕರಿಗೆ ಮೂರು ರೀತಿಯ ಸಲಾಡ್ ಸರ್ವ್ ಮಾಡಲಾಗಿತ್ತು. ಅದ್ರಲ್ಲಿ ಟೋಸ್ಟ್ ಇಂಡಿಯನ್ ಗ್ರೀನ್ ಸಲಾಡ್, ಪಾಸ್ತಾ ಮತ್ತು ಗ್ರಿಲ್ಡ್ ಮಾಡಿದ ತರಕಾರಿ ಸಲಾಡ್ ನೀಡಲಾಗಿತ್ತು. ಇದ್ರ ಜೊತೆ ಕಡಲೆ ಉಸ್ಲಿಯನ್ನು ಬಡಿಸಲಾಯ್ತು. 

ಸೂಪ್ (Soup) : ರೋಸ್ಟೆಡ್ ಅಲ್ಮಂಡ್ ಹಾಗೂ ತರಕಾರಿ ಬೆರೆಸಿದ ಸೂಪ್ ಅನ್ನು ವಿಶ್ವ ನಾಯಕರಿಗಾಗಿ ಸಿದ್ಧಪಡಿಸಲಾಗಿತ್ತು.

ಮೇನ್ ಕೋರ್ಸ್ ನಲ್ಲಿ ಇದ್ದಿದ್ದೇನು? : ಉತ್ತರ ಪ್ರದೇಶದ ಪ್ರಸಿದ್ಧ ಗ್ರೇವಿ ಪನೀರ್ ಲಾಬಬ್ದಾರ್ ಮೇನ್ ಕೋರ್ಸ್ ನಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಪನೀರ್ ಲಾಬಬ್ದಾರ್ ಗ್ರೇವಿಯನ್ನು ಮಸಾಲೆಯುಕ್ತ ಟೊಮೆಟೊ ಮತ್ತು ಗೋಡಂಬಿ ಪೇಸ್ಟ್ ನಿಂದ ತಯಾರಿಸಲಾಗುತ್ತದೆ. ನಂತರ ಅದನ್ನು ಈರುಳ್ಳಿ, ಹೆಚ್ಚು ಮಸಾಲೆಗಳು ಮತ್ತು ಗಿಡಮೂಲಿಕೆಗಳೊಂದಿಗೆ ಹುರಿಯಲಾಗುತ್ತದೆ. ಇದಕ್ಕೆ ಸಕ್ಕರೆ ಹಾಗೂ ಕ್ರೀಮ್ ಕೂಡ ಸೇರಿಸೋದ್ರಿಂದ ರುಚಿ ಸಿಹಿ ಮಿಶ್ರಿತಗೊಳ್ಳುತ್ತದೆ. 

ಆಲೂಗಡ್ಡೆ ಲಿಯೋನೇಸ್ : ಇನ್ನೊಂದು ಖಾದ್ಯ ಆಲೂಗಡ್ಡೆ ಲಿಯೋನೇಸ್, ತರಕಾರಿ ಕುರ್ಮಾ. ಇದು ಆಂಧ್ರದ ಪ್ರಸಿದ್ಧ  ಭಕ್ಷ್ಯಗಳಲ್ಲಿ ಒಂದಾಗಿದೆ.  ಇವುಗಳ ಜೊತೆಗೆ ಮೇನ್ ಕೋರ್ಸ್ ನಲ್ಲಿ ಕಾಜು ಮಟರ್ ಮಖಾನಾ, ಅರ್ಬಿಯಾಟ್ ಸಾಸ್ ನಲ್ಲಿ ಪೆನ್ನಿ ಸರ್ವ್ ಮಾಡಲಾಗಿದೆ. ಪೆನ್ನೆ ಪಾಸ್ತಾದೊಂದಿಗೆ ಅರೇಬಿಯಾಟಾ ಸಾಸ್ ಒಂದು ರಸಭರಿತವಾದ, ರುಚಿಕರವಾದ ಪಾಸ್ತಾ ಆಗಿದ್ದು ಅರೇಬಿಯಾಟಾ ಸಾಸ್ನಲ್ಲಿ ಪೆನ್ನೆ ಪ್ರಕಾರದ ಪಾಸ್ತಾವನ್ನು ಬೇಯಿಸಿ ಮಸಾಲೆ ಹಾಕಲಾಗುತ್ತದೆ. 

ಮಿಕ್ಕಿರೋ ಇಡ್ಲಿಯಿಂದ ನಟಿ ಅದಿತಿ ಮಾಡಿದ್ರು ಯಮ್ಮಿ ಬ್ರೇಕ್​ಫಾಸ್ಟ್​, ಸುಲಭದ ಟೊಮ್ಯಾಟೊ ಚಟ್ನಿ!

ಇದಲ್ಲದೆ ಉತ್ತರ ಪ್ರದೇಶದ ಜೋವರ್ ದಾಲ್ ತಡ್ಕಾ, ಪಂಜಾಬಿನ ಭಕ್ಷ್ಯ ಪ್ಯಾಜ್ ಜೀರಾ ಪುಲಾವ್ ( ಈರುಳ್ಳಿ ಜೀರಿಗೆ ಪಲಾವ್ ) ತಯಾರಿಸಲಾಗಿತ್ತು. ಇನ್ನು ರೊಟ್ಟಿ ವಿಭಾಗಕ್ಕೆ ಬಂದ್ರೆ ವಿಶ್ವ ನಾಯಕರಿಗೆ ತಂದೂರಿ ರೊಟಿ, ಬಟರ್ ನಾನ್, ಕುಲ್ಚಾ ಸರ್ವ್ ಮಾಡಲಾಗಿದೆ. ಈ ಖಾದ್ಯಗಳ ಜೊತೆ ಸೈಡ್ ಡಿಶ್ ಆಗಿ, ಹುಣಸೆಹಣ್ಣು ಮತ್ತು ಖರ್ಜೂರದ ಚಟ್ನಿ, ಸೌತೆಕಾಯಿ ರಾಯ್ತಾ, ಮಿಕ್ಸ್ ಉಪ್ಪಿನಕಾಯಿ, ಮೊಸರನ್ನು ನೀಡಲಾಗಿತ್ತು. 

ಸಿಹಿ ತಿಂಡಿ (Desserts) : ವಿಶ್ವ ನಾಯಕರಿಗೆ ಸಾಕಷ್ಟು ಸಿಹಿ ತಿಂಡಿಯನ್ನು ಉಣಬಡಿಸಲಾಗಿದೆ. ಉತ್ತರ ಪ್ರದೇಶದ ಕುಟ್ಟು ಮಲ್ಪುವಾ, ಒಡಿಶಾದ ಸ್ಪೇಷಲ್ ಕೇಸರ್ – ಪಿಸ್ತಾ ರಸಮಲೈ, ಬಿಸಿಯಾದ ವಾಲ್ನಟ್ ಮತ್ತು ಶುಂಠಿ ಪುಡಿ, ಸ್ಟ್ರಾಬೆರಿ ಐಸ್ ಕ್ರೀಂ, ಬ್ಲಾಕ್ ಕರೆಂಟ್ ಐಸ್ ಕ್ರೀಂ ಅನ್ನು ದಿಗ್ಗಜರಿಗೆ ನೀಡಲಾಗಿತ್ತು. 
 

Latest Videos
Follow Us:
Download App:
  • android
  • ios