Asianet Suvarna News Asianet Suvarna News

ಮಧುಮೇಹ ನಿಯಂತ್ರಣಕ್ಕೆ ಈ ಆಹಾರ ಪದಾರ್ಥಗಳು ಸಹಕಾರಿ..

ಒಮ್ಮೆ ಮಧುಮೇಹವು ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ.  ಆದರೆ ನಮಗೆ ಸುಲಭವಾಗಿ ಸಿಗುವ ಕೆಲ ಆಹಾರ ಪದಾರ್ಥಗಳು ಮಧುಮೇಹಿಗಳಿಗೆ ಸಹಕಾರಿಯಾಗಲಿವೆ.

Foods for stabilizingi  blood sugar
Author
First Published Sep 28, 2022, 5:53 PM IST

ಇತ್ತೀಚೆಗೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಅನೇಕ ಜನರು ಬಳಲುತ್ತಿದ್ದಾರೆ. ಈ ಕಾಯಿಲೆಯು ದೈಹಿಕ ಚಟುವಟಿಕೆಯ ಕೊರತೆ, ಗಂಟೆಗಟ್ಟಲೆ ಕುಳಿತುಕೊಳ್ಳುವುದು, ಕಳಪೆ ಪೋಷಣೆ, ಕರಿದ ಆಹಾರಗಳು ಮತ್ತು ಕೆಲವು ಔಷಧಿಗಳಿಂದ ಹೆಚ್ಚಾಗುತ್ತದೆ. ಮಧುಮೇಹದಿಂದ ನರಗಳು, ಕಣ್ಣುಗಳು, ಮೂತ್ರಪಿಂಡಗಳು ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ. ಇದು ತುಂಬಾ ಗಂಭೀರವಾದ ಕಾಯಿಲೆಯಾಗಿದ್ದು, ಒಮ್ಮೆ ಬಂದರೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಡೀ ಜೀವನಪರ್ಯಂತ ಕಾಡುತ್ತವೆ. ಮಧುಮೇಹದ ಸ್ಥಿತಿಯಲ್ಲಿ ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಇದರಿಂದಾಗಿ ಹಲವಾರು ಸಮಸ್ಯೆಗಳು ಮನುಷ್ಯನನ್ನು ಕಾಡುತ್ತವೆ. ಆದರೆ ಕೆಲ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಸೇವಿಸಿದರೆ ಮಧುಮೇಹಿಗಳ ಆರೋಗ್ಯಕ್ಕೆ ಸಹಕಾರಿಯಾಗಲಿದೆ.

ಅಣಬೆ:

ಮಧುಮೇಹ ಇರುವವರಿಗೆ ಅಣಬೆಗಳನ್ನು (mushroom)ಹೆಚ್ಚು ಬಳಸಲು ಸಲಹೆ ನೀಡಬಹುದು. ಇದು ದೇಹದಲ್ಲಿ ಮಧುಮೇಹದ ಲಕ್ಷಣಗಳು ಕಂಡಲ್ಲಿ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತದೆ. ಅಣಬೆಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಗ್ಲೈಸೆಮಿಕ್ ಲೋಡ್ ಅಂಶವನ್ನು ಹೊಂದಿರುವುದರಿಂದ ಸೇವಿಸುವುದು ಸುರಕ್ಷಿತವಾಗಿದೆ. ಅಂಶಗಳನ್ನು ಹೊಂದಿರುವುದರಿಂದ ಈ ಅಣಬೆಗಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ . ಬದಲಾಗಿ ಇದರಲ್ಲಿನ  ವಿಟಮಿನ್ ಬಿ (Vitamin B)  ಅಂಶವು ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇನ್ನು ಇದು ಸುಧಾರಿತ ಇನ್ಸುಲಿನ್ ಮಟ್ಟಗಳ ಜತೆ  ಕೊಲೆಸ್ಟ್ರಾಲ್ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಅದಲ್ಲದೆ ಅಣಬೆ ರಕ್ತದಲ್ಲಿನ ಗ್ಲೂಕೋಸ್ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಸಿಹಿ ಆಲೂಗಡ್ಡೆ:

ಸಿಹಿ ಆಲೂಗಡ್ಡೆ (sweet potato) ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ.  ದಿನನಿತ್ಯ  ಅರ್ಧ ಕಪ್ ಸಿಹಿ ಆಲೂಗಡ್ಡೆ ಸೇವನೆ ಮಾಡುವುದು ಮಧುಮೇಹಿಗಳಿಗೆ ಒಳ್ಳೆಯದು. ಅದಲ್ಲದೆ  ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅನ್ನು ಸಹ ಹೊಂದಿದ್ದು,  ಇದು ರೋಗನಿರೋಧಕ ಶಕ್ತಿಯನ್ನು   ಬಲಪಡಿಸುತ್ತದೆ. ಇದಲ್ಲದೆ, ಸಿಹಿ ಆಲೂಗಡ್ಡೆ ಕಬ್ಬಿಣದಲ್ಲಿ (Iron) ಸಮೃದ್ಧವಾಗಿದೆ ಮತ್ತು ಕೆಂಪು ರಕ್ತ ಕಣಗಳು ಆಮ್ಲಜನಕವನ್ನು ಉತ್ಪಾದಿಸಲು ಮತ್ತು ದೇಹದಾದ್ಯಂತ ಪೋಷಕಾಂಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಹಾಗೇ ಫೈಬರ್ರ್ ಸಮೃದ್ಧವಾಗಿರುವುದ್ದು, ಇದು ಗ್ಲೂಕೋಸ್ ನಿಯಂತ್ರಣಕ್ಕೆ ಸಹಾಯಕವಾಗಿದೆ.  ಹಾಗೂ ಸಿಹಿ ಆಲೂಗಡ್ಡೆ ಬೀಟಾ-ಕ್ಯಾರೋಟಿನ್ ಎಂಬ ಕ್ಯಾರೊಟಿನಾಯ್ಡ್  ಅಂಶವನ್ನು  ಹೊಂದಿದ್ದು, ಇದು ವಿಟಮಿನ್ ಎ ನ  ಮೂಲವಾಗಿದೆ. 

ತುಳಸಿ:

ತುಳಸಿಯು (Tulsi) ಹಲವಾರು  ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಮೂಲಿಕೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿರ್ವಹಿಸಲು ಸಹಾಯ ಮಾಡುತ್ತದೆ. ನಿರಂತರವಾಗಿ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವುದು ಮಧುಮೇಹಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ಈ ಅಪಾಯವನ್ನು ತಡೆಗಟ್ಟಲು ತುಳಸಿಯನ್ನು ಬಳಸಬಹುದು. ತುಳಸಿ ಸೇವನೆಯಿಂದ  ಮೇದೋಜ್ಜೀರಕ ಗ್ರಂಥಿಯ ಬೀಟಾ-ಕೋಶದ ಕಾರ್ಯವನ್ನು ಸುಧಾರಿಸಬಹುದು. ಹಾಗೇ ಇದು ಸ್ನಾಯು ಕೋಶಗಳಲ್ಲಿನ ಗ್ಲೂಕೋಸ್ (Glucose) ಹೀರಿಕೊಳ್ಳುವಿಕೆಗೂ ಸಹಾಯಕವಾಗಿದೆ. ಇನ್ನು ತುಳಸಿ ಸೇವನೆಗೆ ಯಾವುದೇ ನಿರ್ದಿಷ್ಟ ಡೋಸೇಜ್ ಇಲ್ಲ, ಆದರೆ ಸುಮಾರು 3 ಗ್ರಾಂ ಒಣಗಿದ ಎಲೆಗಳ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬಳಸಬಹುದು. ಇನ್ನು ಪ್ರತಿದಿನ ತುಳಸಿ ಎಲೆಗಳನ್ನು ಅಗಿಯಬಹುದು ಅಥವಾ ಕುದಿಯುವ ನೀರಿಗೆ ಸೇರಿಸಿ, ಮಿಶ್ರಣವನ್ನು ಸೋಸಿಕೊಂಡು ನೀರನ್ನು ಕುಡಿಯಿರಿ

ಇದನ್ನೂ ಓದಿ: ಇದು ಸಂಬಂಧಕ್ಕೆ ಮದ್ದು, ಮುದ್ದಾಡುವಿಕೆಯ ಅಚ್ಚರಿ ಏನು ಗೊತ್ತಾ?

ಕುಂಬಳಕಾಯಿ:

ಕುಂಬಳಕಾಯಿ (pumpkin)ಬೀಜಗಳು ಫೈಬರ್ನ ಉತ್ತಮ ಮೂಲವಾಗಿದ್ದು ಮಧುಮೇಹಿಗಳಿಗೆ ಒಳ್ಳೆ ಆಹಾರವಾಗಿದೆ. ಇದರಲ್ಲಿನ ಹೆಚ್ಚಿನ ಫೈಬರ್ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಕುಂಬಳಕಾಯಿ ಬೀಜಗಳು ಒಮೆಗಾ -3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಆರೋಗ್ಯಕರ ಕೊಬ್ಬನ್ನು ದೇಹಕ್ಕೆ ಒದಗಿಸುತ್ತದೆ. ಕುಂಬಳಕಾಯಿಯನ್ನು ಮಿತವಾಗಿ ತೆಗೆದುಕೊಂಡಾಗ, ವಾಸ್ತವವಾಗಿ ರಕ್ತದಲ್ಲಿನ ಸಕ್ಕರೆ (Sugar)ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಕುಂಬಳಕಾಯಿ ಬೀಜಗಳು ನಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಮತ್ತು  ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ನಿರ್ವಹಣೆಯಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.

ಇದನ್ನೂ ಓದಿ: ಸಖತ್ತಾಗಿ ಕಾಣಿಸೋ ರಶ್ಮಿಕಾ ಬೆಳಗ್ಗೆದ್ದು ಮೊದ್ಲು ತಿನ್ನೋದು ಇದನ್ನಂತೆ !

ಬೆಳ್ಳುಳ್ಳಿ:

ಬೆಳ್ಳುಳ್ಳಿಯು (Garlic) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ಮಾತ್ರವಲ್ಲದೆ ಮಧುಮೇಹವನ್ನು (Diabetes) ತಡೆಗಟ್ಟುವಲ್ಲಿಯೂ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಬೆಳ್ಳುಳ್ಳಿಯಲ್ಲಿನ ವಿಟಮಿನ್ B6 ಕಾರ್ಬೋಹೈಡ್ರೇಟ್ಗಳ ಚಯಾಪಚಯವನ್ನು ನಿಯಂತ್ರಿಸುತ್ತದ. ಹಾಗೇ  ಬೆಳ್ಳುಳ್ಳಿ B6 ನಲ್ಲಿ ಸಮೃದ್ಧವಾಗಿರುವುದರಿಂದ, ಮಧುಮೇಹಿಗಳು ಬೆಳ್ಳುಳ್ಳಿ ಸೇವನೆ ಮಾಡುವುದು ಉತ್ತಮವಾಗಿದೆ.

Follow Us:
Download App:
  • android
  • ios