Asianet Suvarna News Asianet Suvarna News

ವಿಜಯಪುರದಲ್ಲಿ ಜಂಬೋ ರೆಡ್‌ ಡ್ರ್ಯಾಗನ್‌ ಫ್ರೂಟ್ ಹವಾ..!

• ವಿಜಯಪುರಕ್ಕೆ ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್ ಎಂಟ್ರಿ..!
• ಹವಾ ಸೃಷ್ಟಿಸಿದೆ ಡ್ರ್ಯಾಗನ್‌ ಪ್ರೂಟ್‌ ನ ಹೊಸ ತಳಿ..!
• ರೈತರ ಹೊಲಗಳಲ್ಲಿ ಜಂಬೋ ರೆಡ್‌ ಡ್ರ್ಯಾಗನ್‌ ಹಣ್ಣಿನದ್ದೆ ಸದ್ದು..!
• "ಆರೋಗ್ಯಕ್ಕೆ ಭಾಗ್ಯ, ರೋಗಗಳಿಗೆ ರಾಮಬಾಣ"..!

Farmers Growing red dragon fruit In Vijayapura rbj
Author
Bengaluru, First Published Jul 7, 2022, 8:37 PM IST

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜುಲೈ 07) :
ವಿಜಯಪುರ ಜಿಲ್ಲೆ ಅಂದ್ರೆ ಬರದನಾಡು ಅನ್ನೋ ಹಣೆಪಟ್ಟಿ ಇದೆ. ಈ ಸಾರಿ ಜುಲೈ ತಿಂಗಳು ಬಂದ್ರು ಮಳೆಯ ಆಗಮನವಾಗ್ತಿಲ್ಲ. ಹೀಗಾಗಿ ಕಡಿಮೆ ನೀರಲ್ಲಿ ಕೃಷಿ ಮಾಡುವ ಟ್ರೆಂಡ್‌ ಮೊದಲಿನಿಂದಲು ಜಿಲ್ಲೆಯಲ್ಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಗ ಡ್ರಾಗನ್‌ ಪ್ರೂಟ್‌ ಹವಾ ಜೋರಾಗಿದೆ. ಅದ್ರಲ್ಲು ಮಾರ್ಕೆಟ್‌ ನಲ್ಲಿ ರ್ಯಾಂಬೋ ರೆಡ್‌ ಡ್ರ್ಯಾಗನ್‌ ಹವಾ ಕೂಡ ಜೋರಾಗಿದೆ..

ಜಂಬೋ ರೆಡ್‌ ಡ್ರ್ಯಾಗನ್ ಫ್ರೂಟ್‌ ಹವಾ..!
ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಡ್ರ್ಯಾಗನ್‌ ಪ್ರೂಟ್‌ ಬೆಳೆಗೆ ಎಲ್ಲಿಲ್ಲದ ಬೆಲೆ ಬಂದಿದೆ. ಕಡಿಮೆ ನೀರು ಬಳಸಿ ಬೆಳೆಯೋ ಈ ಬೆಳೆಗೆ ಸಾಕಷ್ಟು ರೈತರು ಆಕರ್ಷಿತರಾಗ್ತಿದ್ದಾರೆ. ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗೋ ಜಿಲ್ಲೆಯ ಕೆಲ ಭಾಗಗಳಲ್ಲಿ ಈ ಡ್ರ್ಯಾಗನ್‌ ಬೆಳೆ ರೈತರಿಗೆ ಅಚ್ಚುಮೆಚ್ಚಾಗಿದೆ. ಸಧ್ಯದ ಅಪಡೇಟ್‌ ಅಂದ್ರೆ ಡ್ರ್ಯಾಗನ್‌ ಪ್ರೂಟ್‌ ಪ್ರಪಂಚಕ್ಕೆ ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್‌ ಬೆಳೆ ಎಂಟ್ರಿ ಕೊಟ್ಟಿದೆ. ಮಾರ್ಕೆಟ್‌ ನಲ್ಲಿ ಜಂಬೋ ಡ್ರ್ಯಾಗನ್‌ ಗೆ ಬಾರಿ ಬೇಡಿಕೆ ಬಂದಿದ್ದು ರೈತರು ಪುಲ್‌ ಖುಷ್‌ ಆಗಿದ್ದಾರೆ. ಅಂದಹಾಗೇ ತಿಕೋಟ ತಾಲೂಕಿನ ರಾಂಪೂರ ತೋಟದ ನಿವಾಸಿಯಾದ ಯುವ ರೈತ ಪ್ರವೀಣ ತಮ್ಮ ಹೊಲದಲ್ಲಿ ಜಂಬೋ ರೆಡ್‌ ಡ್ರ್ಯಾಗನ್‌ ಬೆಳೆದಿದ್ದು ಮಾರ್ಕೆಟ್‌ ನಿಂದ ಬಾರಿ ಬೇಡಿಕೆ ಸಿಕ್ಕಿದೆ..

ಈ ದುಬಾರಿ ಹಣ್ಣನ್ನು ಬಾಲ್ಕನಿಯಲ್ಲೇ ಬೆಳೆಸಿ ಕೈ ತುಂಬಾ ಹಣ ಎಣಿಸಿ..

ಏನಿದು ಜಂಬೋ ರೆಡ್‌ ಡ್ರ್ಯಾಗನ್‌ ಫ್ರೂಟ್.?!‌
Farmers Growing red dragon fruit In Vijayapura rbj

ಡ್ರ್ಯಾಗನ್‌ ಪ್ರೂಟ್‌ ಗಳಲ್ಲಿ ಈ ವರೆಗೆ ಬಿಳಿ ಹಾಗೂ ಕೆಂಪು ಬಣ್ಣದ ಹಣ್ಣುಗಳು ನೋಡೋದಕ್ಕೆ ಸಿಗ್ತಿದ್ದವು. ಸಾಧಾರಣ ಬಣ್ಣ, ರುಚಿಯನ್ನ ಒಳಗೊಂಡಿದ್ದವು. ಆದ್ರೆ ಈಗ ಇದೆ ಡ್ರ್ಯಾಗನ್‌ ಪ್ರೂಟ್‌ ತಳಿಯಲ್ಲೆ ಹೊಸ ಜಂಬೋ ರೆಡ್‌ ಡ್ರ್ಯಾಗನ್‌ ಲಗ್ಗೆ ಇಟ್ಟಿದೆ. ಕಡುಗೆಂಪು ಬಣ್ಣ ಹೊಂದಿರುವ ಈ ಹೊಸ ತಳಿ ಮಾರ್ಕೆಟ್‌ ಗಳಲ್ಲಿ ಜನರನ್ನ ಆಕರ್ಷಿಸುತ್ತಿದೆ. ಬಿಳಿ-ಸಾಧಾರಣ ಕೆಂಪು ಡ್ರ್ಯಾಗನ್‌ ಹಣ್ಣುಗಳಿಗಿಂತಲು ಇದಕ್ಕೆ ಬೇಡಿಕೆ ಹೆಚ್ಚಿದ್ದು, ಜಂಬೋ ರೆಡ್‌ ಡ್ರ್ಯಾಗನ್‌ ಗಾಗಿ ಜನ ಮುಗಿಬೀಳ್ತಿದ್ದಾರೆ..

ಜಂಬೋ ರೆಡ್‌ ಡ್ರ್ಯಾಗನ್‌ ಫ್ರೂಟ್‌ ವಿಶೇಷತೆ ಏನು?
ಬಿಳಿ-ಸಾಧಾರಣ ಕೆಂಪು ಬಣ್ಣದ ಡ್ರ್ಯಾಗನ್‌ ಪ್ರುಟ್‌ ಗಳ ಗಾತ್ರ ಸಾಧಾರಣವಿರುತ್ತೆ. ಆದ್ರೆ ಈ ಜಂಬೋ ರೆಡ್‌ ಪ್ರೂಟ್ ನೋಡಲು ದಪ್ಪವಾಗಿದ್ದು, ಶೈನಿಂಗ್‌ ಲೇಯಸ್‌ ಹೊಂದಿವೆ. ಒಳಗೆ ಕಡು ಕೆಂಪು ಬಣ್ಣದ ತಿರುಳು ಹೊಂದಿದೆ. ಬಿಳಿ ಡ್ರ್ಯಾಗನ್‌ ಹಾಗೂ ಸಾಧಾರಣ ಕೆಂಪು ಡ್ರ್ಯಾಗನ್‌ ಹಣ್ಣಿಗಿಂತಲು ಈ ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್‌ ಹೆಚ್ಚು ಸಿಹಿ ಹೊಂದಿದೆ. ಬಿಳಿ-ಸಾಧಾರಣ ಕೆಂಪು ಡ್ರ್ಯಾಗನ್‌ ಪ್ರೂಟ್‌ ಗಳಲ್ಲಿ 14 ಹೆಲ್ತಬೆನೆಪಿಟ್ಸ್‌ ಇದ್ರೆ, ಈ ಜಂಬೋ ಹಣ್ಣು 19 ಹೆಲ್ತಬೆನೆಪಿಟ್ಸ್‌ ಹೊಂದಿದೆ ಎನ್ತಾರೆ ಈ ಹಣ್ಣು ಬೆಳೆದ ರೈತರು..

ರೈತರಿ ಜಂಬೋ ಕೊಡ್ತಿದೆ 30% ರಷ್ಟು ಲಾಭ..!
Farmers Growing red dragon fruit In Vijayapura rbj

ಇನ್ನು ಮಾಮೂಲಿ ಡ್ರ್ಯಾಗನ್‌ ಪ್ರೂಟ್‌ ಗಳಿಗಿಂತಲು ಈ ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್‌ ರೈತರಿಗೆ ಶೇಕಡಾ 30 ರಷ್ಟು ಹೆಚ್ಚಿಗೆ ಲಾಭ ನೀಡ್ತಿದೆ. ಮಾಮೂಲಿ ರೆಡ್‌ ಡ್ರ್ಯಾಗನ್‌ ಪ್ರೂಟ್ ಕೇಜಿಗೆ 100 ರಿಂದ 130 ರೂಪಾಯಿ ಕೆ.ಜಿಗೆ ಮಾರಾಟವಾಗ್ತಿದೆ. ವೈಟ್‌ ಡ್ರ್ಯಾಗನ್‌ ಪ್ರೂಟ್ - 80 ರಿಂದ 100‌ ರೂಪಾಯಿಗೆ ಮಾರಾಟವಾಗ್ತಿದೆ. ಆದ್ರೆ ಅದೆ ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್‌ 150 ರಿಂದ 180 ರೂಪಾಯಿ ಪ್ರತಿ ಕೆ.ಜಿ ಗೆ ಮಾರಾಟವಾಗ್ತಿದೆ.

ರೈತರ ಹಣ ಉಳಿಸಿದ ಜಂಬೋ ಡ್ರ್ಯಾಗನ್...!
ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್‌ ಕೇವಲ ನೋಡಲು, ತಿನ್ನಲ್ಲು, ಮಾರ್ಕೆಟ್‌ ನಲ್ಲಿ ಲಾಭಾಂಶ ನೀಡುವಲ್ಲಿ ಅಷ್ಟೆ ಸೈ ಎನಿಸಿಕೊಂಡಿಲ್ಲ, ಜೊತೆ ಜೊತೆಗೆ ಮೆಂಟೆನೆನ್ಸ್‌ನಲ್ಲು ರೈತರನ್ನ ಹಣವನ್ನ ಉಳಿತಾಯ ಆಗುವಂತೆ ಮಾಡಿದೆ. ಮೊದಲು ಡ್ರ್ಯಾಗನ್‌ ಪ್ರೂಟ್‌ ಬೆಳೆಯಬೇಕಾದರೆ ಏಕರೇ 500 ಕಂಬಗಳನ್ನ ಹಾಕಬೇಕಿತು, ಇದಕ್ಕೆ 3.30 ಲಕ್ಷದ ವರೆಗೆ ಖರ್ಚಾಗುತ್ತಿತ್ತು. ಆದ್ರೀಗ ಈ ಜಂಬೋ ರೆಡ್‌ ಡ್ರ್ಯಾಗನ್‌ ಪ್ರೂಟ್‌ ಬೆಳೆ ಬೆಳೆಯಲು ಏಕರೆಗೆ 250  ಕಂಬಗಳಾದ್ರೆ ಸಾಕಂತೆ, ಖರ್ಚು 2.50 ಲಕ್ಷ ಮಾತ್ರ ಎನ್ನುತ್ತಾರೆ ರೈತರು..

ಆರೋಗ್ಯಕ್ಕೆ ಭಾಗ್ಯ, ರೋಗಗಳಿಗೆ ರಾಮಬಾಣ..!
ಈ ಡ್ರಾಗನ್‌ ಪ್ರೂಟ್‌ ಗಳಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಹೇರಳವಾದ ರೋಗ ನಿರೋಧಕ ಶಕ್ತಿ ಒದಗಿಸುವ ಅಂಶಗಳು ಇವೆ. ಬಿಳಿ ರಕ್ತ ಕಣ ಹೆಚ್ಚಿಸುವಲ್ಲಿ ಈ ಹಣ್ಣಿನ ಪಾತ್ರ ಹಿರಿದಾಗಿದೆ. ಡೆಂಗ್ಯೂ, ಜ್ವರಕ್ಕೆ ಹೇಳಿ ಮಾಡಿಸಿದಂತಿವೆ ಈ ಡ್ರ್ಯಾಗನ್‌ ಪ್ರೂಟ್ಸ್.‌  ಅಜೀರ್ಣಕ್ಕೆ ಮದ್ದಾಗಿಯೂ ಈ ಹಣ್ಣು ಕೆಲಸ ಮಾಡುತ್ತೆ. ಶುಗರ್‌ ಕಂಟ್ರೋಲ್‌ ಗು ಡ್ರ್ಯಾಗನ್‌ ಹಣ್ಣು ದಿಬೆಸ್ಟ್‌. ಲಂಗ್ಸ್‌ ಸಮಸ್ಯೆ- ಉಸಿರಾಟ ಸಮಸ್ಯೆಗಳಿಗೆ ಉಪಯೋಗಕಾರಿಯಾಗಿದೆ.  ಮೂಳೆ ಬಲವರ್ದನೆ, ಹಲ್ಲುಗಳನ್ನ ಬಲಿಷ್ಟಗೊಳಿಸಲು, ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ನೀಗಿಸಲು ಸಹಕಾರಿಯಾಗಿದೆ. ರೆಗ್ಯೂಲರ್‌ ಆಗಿ ಡ್ರ್ಯಾಗನ್‌ ಪ್ರೂಟ್‌ ಸೇವಿಸಿದರೆ ಚರ್ಮಕಾಂತಿ ವೃದ್ದಿಯಾಗುತ್ತೆ ಎನ್ನಲಾಗಿದೆ..

Follow Us:
Download App:
  • android
  • ios