Asianet Suvarna News Asianet Suvarna News

ಆನ್‌ಲೈನ್ ಫುಡ್ ಆರ್ಡರ್‌ ಮಾಡಿದ ಗರ್ಭಿಣಿಗೆ ಶಾಕ್‌: ಸ್ಯಾಂಡ್‌ವಿಚ್ ಒಳಗಿದ್ದಿದ್ದು ಏನು?

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಶಾಕ್ ಕಾದಿದೆ. ಆಹಾರದ ಜೊತೆ ಸಣ್ಣದಾದ ಚಾಕೊಂದು ಮನೆ ಸೇರಿದ್ದು ಮಹಿಳೆ ಗಾಬರಿಯಾಗಿದ್ದಾಳೆ.

England woman got knife in take away food akb
Author
Bangalore, First Published Aug 18, 2022, 12:14 PM IST

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಶಾಕ್ ಕಾದಿದೆ. ಆಹಾರದ ಜೊತೆ ಸಣ್ಣದಾದ ಚಾಕೊಂದು ಮನೆ ಸೇರಿದ್ದು ಮಹಿಳೆ ಗಾಬರಿಯಾಗಿದ್ದಾಳೆ. ಆನ್‌ಲೈನ್ ಆಹಾರ ಪೂರೈಕೆ ತುರ್ತಿನ ಸಮಯದದಲ್ಲಿ ಬಹುತೇಕರ ಪಾಲಿಗೆ ಒಂದು ರೀತಿಯ ಆರಾಮದ ಬದುಕನ್ನು ನೀಡುತ್ತದೆ. ಕೆಲಸದ ಒತ್ತಡ ಸಮಯದ ಅಭಾವ ಮುಂತಾದ ಕಾರಣಗಳಿಂದ ಕೆಲವೊಮ್ಮೆ ಆಹಾರ ತಯಾರಿಸಲು ಸಮಯ ಇರುವುದಿಲ್ಲ. ಮತ್ತೆ ಕೆಲವೊಮ್ಮ ಆಹಾರ ತಯಾರಿಸುವ ಮೂಡಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಈ ಆನ್‌ಲೈನ್‌ ಆಹಾರ ವ್ಯವಸ್ಥೆ ಅನೇಕರಿಗೆ ವರದಾನವಾಗಿದೆ. ಜೋರಾಗಿ ಹಸಿವಾಗುತ್ತಿರುವ ಸಮಯದಲ್ಲಿ ಬುಕ್ ಮಾಡಿದ ನಿಮಿಷಗಳಲ್ಲಿ ಮನೆ ಬಳಿ ತಲುಪುವ ಆಹಾರ ಹೊಟ್ಟೆಯನ್ನು ತಣ್ಣಗೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದರೆ ಎಲ್ಲಾ ವ್ಯವಸ್ಥೆಗಳಲ್ಲಿ ಹೇಗೆ ಹಿನ್ನಡೆ ಅಥವಾ ಆಡಚಣೆಗಳಿರುತ್ತವೋ ಅದೇ ರೀತಿ ಈ ಆನ್‌ಲೈನ್ ಫುಡ್ ಡೆಲಿವರಿಯಲ್ಲೂ ಹಲವು ಸಣ್ಣಪುಟ್ಟ ಆಡಚಣೆಗಳಿವೆ. ಕೆಲವೊಮ್ಮೆ ಪಾರ್ಸೆಲ್ ಮನೆ ತಲುಪುವ ವೇಳೆ ತಣ್ಣಗಾಗಿರುತ್ತದೆ. ಕೆಲವೊಮ್ಮೆ ಪ್ರೆಶ್ ಎನಿಸುವುದಿಲ್ಲ. ಮತ್ತೆ ಕೆಲವೊಮ್ಮೆ ಇನೇನೂ ಅನಾಹುತಗಳಾಗಿರುತ್ತವೆ. 

ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ ಏನಾದರೂ ಖರೀದಿಸಿ ತಿನ್ನುವ ಆಸೆಯಾಗಿತ್ತು. ಅದರಂತೆ ಅವರು ಆನ್‌ಲೈನ್‌ನಲ್ಲಿ ಸ್ಯಾಂಡ್‌ವಿಚ್‌ ಆರ್ಡರ್‌ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬಂದ ಸ್ಯಾಂಡ್ವಿಚ್ ಪ್ಯಾಕೆಟ್ ತೆರೆದ ಅವರಿಗೆ ಆಘಾತ ಕಾದಿತ್ತು ಏಕೆಂದರೆ ಸ್ಯಾಂಡ್ವಿಚ್‌ ಒಳಗೆ ತರಕಾರಿ ಜೊತೆಗೆ ಸಣ್ಣದಾದ ಚಾಕೊಂದು ತಣ್ಣಗೆ ಮಲಗಿತ್ತು. ಸ್ಯಾಂಡ್ವಿಚ್ ಒಳಗಿದ್ದ ಚಾಕುವಿನ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪೋಸ್ಟ್ ಮಾಡಿದ್ದು, ಜನರು ಕೂಡ ಗಾಬರಿಯಾಗಿದ್ದಾರೆ. 

ನೆರಿಕ್ ಮೊಯ್ಸಿ ಎಂಬುವವರೇ  ಇಂಗ್ಲೆಂಡ್‌ನ ಸಬ್‌ವೇಯೊಂದರ ಖ್ಯಾತ ಆಹಾರ ಮಳಿಗೆಯಿಂದ ಆಹಾರ ಬುಕ್ ಮಾಡಿದ ಗರ್ಭಿಣಿ ಮಹಿಳೆ. 7 ತಿಂಗಳ ಗರ್ಭಿಣಿಯಾದ ಇವರಿಗೆ ಎಲ್ಲಾ ಗರ್ಭಿಣಿಯರಿಗೆ ತಿನ್ನಲು ಆಸೆಯಾಗುವಂತೆ ಏನಾದೂ ವಿಶೇಷವಾದುದನ್ನು ತಿನ್ನುವ ಆಸೆಯಾಗಿದ್ದು, ಅದರಂತೆ ಮಹಿಳೆ ಮತ್ತು ಅವಳ ಸಂಗಾತಿ ಅದನ್ನು ಸಫೊಲ್ಕ್‌ನ ಲೋವೆಸ್ಟಾಫ್ಟ್‌ನಲ್ಲಿರುವ ಅವಳ ಮನೆಗೆ ಸ್ಯಾಂಡ್ವಿಚ್‌ ಆರ್ಡರ್‌ ಮಾಡಿದ್ದರು. ಇದರ ವಿಡಿಯೋವನ್ನು ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಳದಿ ಬಣ್ಣದ ಹಿಡಿ ಹೊಂದಿರುವ ಚಾಕೊಂದು ಸ್ಯಾಂಡ್ವಿಚ್ ಒಳಗಿರುವುದು ಕಾಣಿಸುತ್ತದೆ. 

ಸಬ್‌ ವೇನಲ್ಲಿ ಲೈಫ್‌ ಪೂರ್ತಿ ಉಚಿತ ಸ್ಯಾಂಡ್‌ವಿಚ್ ತಿನ್ಬೋದು, ಕಂಡೀಷನ್ಸ್ ಅಪ್ಲೈ

ಇದಾದ ಬಳಿಕ ಅವರು ತಾವು ಆಹಾರ ಬುಕ್ ಮಾಡಿದ ಗೋರ್ಲೆಸ್ಟನ್ ಹೈ ಸ್ಟ್ರೀಟ್‌ನಲ್ಲಿರುವ ಸಬ್‌ವೇಗೆ ಕರೆ ಮಾಡಿ, ನೀವು ಹಳದಿ ಚಾಕೊಂದನ್ನು ಕಳೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಆರ್ಡರ್ ನನಗೆ ಬಂದಿದ್ದಕ್ಕೆ ಪರವಾಗಿಲ್ಲ. ಸಣ್ಣ ಮಕ್ಕಳಿಗೆ ಸಿಕ್ಕಿದರೆ ಗತಿ ಏನು ಎಂದು ಪ್ರಶ್ನಿಸಿದ್ದಾರೆ. ನಂತರ ಸಬ್‌ವೇಯವರು ಈಕೆಗೆ ಸಂದೇಶ ಕಳುಹಿಸಿದ್ದು, ತಾವು ಈ ಆಹಾರ ಡೆಲಿವರಿ ಮಾಡಿದ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿದ್ದೇವೆ. ಅಲ್ಲದೇ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದಿದ್ದಾರೆ. 

ಬರೋಬ್ಬರಿ 23 ವರ್ಷದಿಂದ ಸ್ಯಾಂಡ್‌ವಿಚ್ ಬಿಟ್ಟು ಬೇರೇನೂ ತಿಂದೇ ಇಲ್ಲ ಈಕೆ !

ಒಟ್ಟಿನಲ್ಲಿ ಕುಳಿತಲ್ಲಿಗೆ ಬರುವ ಈ ಆನ್‌ಲೈನ್ ಆಹಾರ ಎಷ್ಟು ಸ್ವಚ್ಛ ಹಾಗೂ ಸುರಕ್ಷಿತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ಆರ್ಡರ್‌ ಮಾಡಿದ ಕೆಎಫ್‌ಸಿ ಆಹಾರದಲ್ಲಿ ಕೋಳಿಯ ಇಡೀ ತಲೆ ಇತ್ತು ಎಂದು ದೂರು ನೀಡಿದ್ದಳು. ಅಲ್ಲದೇ ಇದರ ಫೋಟೋವನ್ನು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಕೆಲದಿನಗಳ ಹಿಂದೆ ಡೋಮಿನೋಸ್ ಪಿಜ್ಜಾದ ತಯಾರಿಕಾ ಘಟಕದಲ್ಲಿ ಪಿಜ್ಜಾ ತಯಾರಿಸಲು ಇಟ್ಟ ಹಿಟ್ಟಿನ ಮೇಲೆ ನೆಲ ಸ್ವಚ್ಛಗೊಳಿಸುವ ಉಪಕರಣ ನೇತಾಡುತ್ತಿದ್ದ ಫೋಟೋ ವೈರಲ್ ಆಗಿತ್ತು. ನಂತರ ಡೋಮಿನೋಸ್ ಇದಕ್ಕೆ ಸ್ಪಷ್ಟನೆ ನೀಡಿತ್ತು. 
 

Follow Us:
Download App:
  • android
  • ios