ಸಬ್ ವೇನಲ್ಲಿ ಲೈಫ್ ಪೂರ್ತಿ ಉಚಿತ ಸ್ಯಾಂಡ್‌ವಿಚ್ ತಿನ್ಬೋದು, ಕಂಡೀಷನ್ಸ್ ಅಪ್ಲೈ
ಉಚಿತವಾಗಿ ಆಹಾರ ಸಿಗುತ್ತೆ ಅಂದ್ರೆ ಕೆಲವೊಬ್ಬರು ಏನ್ ಮಾಡೋಕು ರೆಡಿಯಿರ್ತಾರೆ. ತಿನ್ನೋ ಕಾಂಪಿಟೇಶನ್‌ನಲ್ಲೂ ಭಾಗಿಯಾಗ್ತಾರೆ. ಅಂಥವರಿಗೆ ಇಲ್ಲಿದೆ ಗುಡ್ ನ್ಯೂಸ್. ಸಬ್‌ವೇ ಲೈಫ್ ಪೂರ್ತಿ ಫ್ರೀ ಸ್ಯಾಂಡ್‌ವಿಚ್ ತಿನ್ಬೋದು. ಆದ್ರೆ ಕಂಡೀಷನ್ಸ್ ಅಪ್ಲೈ ಆಗುತ್ತೆ ಅಷ್ಟೆ.
ಸ್ಯಾಂಡ್‌ವಿಚ್ ತಿನ್ನೋಕೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ತರಕಾರಿ, ಪನೀರ್, ಕಾರ್ನ್ ಹೀಗೆ ವಿವಿಧ ಸ್ಟಫ್‌ಗಳನ್ನು ಸೇರಿಸಿ ರುಚಿಕರವಾಗಿ ಸ್ಯಾಂಡ್‌ವಿಚ್ ತಯಾರಿಸಾಗುತ್ತದೆ. ಇದಕ್ಕೆ ಹೆಚ್ಚಿನ ರುಚಿಯನ್ನು ನೀಡಲು ಟೊಮೆಟೋ, ಸೌತೆಕಾಯಿ ಚೀಸ್‌ಗಳನ್ನು ಸಹ ಬಳಸಲಾಗುತ್ತದೆ. ಹೀಗಾಗಿ ಹೆಚ್ಚಿನವರು ಥಟ್ಟನೆ ಹಸಿವಾದಾಗ ಸುಲಭವಾಗಿ ಸ್ಯಾಂಡ್‌ವಿಚ್ ಮಾಡಿ ತಿನ್ನುತ್ತಾರೆ. ಪ್ರಪಂಚದಾದ್ಯಂತದ ಜನರಿಗೆ ಸ್ಯಾಂಡ್‌ವಿಚ್ ಅನ್ನೋದು ತ್ವರಿತ, ಕೈಗೆಟುಕುವ ಮತ್ತು ಟೇಸ್ಟಿ ಆಯ್ಕೆಯಾಗಿದೆ. ಹೀಗಾಗಿಯೇ ಸ್ಟ್ರೀಟ್ ಸ್ಟಾಲ್‌ಗಳಿಂದ ಹಿಡಿದು ಫೇಮಸ್ ರೆಸ್ಟೋರೆಂಟ್‌ಗಳು ಸಹ ತಮ್ಮ ಮೆನು ಲಿಸ್ಟ್‌ನಲ್ಲಿ ಸ್ಯಾಂಡ್‌ವಿಚ್‌ನ್ನು ಸೇರಿಸಿಕೊಳ್ಳುತ್ತವೆ.
ಹಚ್ಚೆ ಹಾಕಿಸಿಕೊಂಡ್ರೆ ಜೀವನಪೂರ್ತಿ ಫ್ರೀ ಸ್ಯಾಂಡ್‌ವಿಚ್
ಜನಪ್ರಿಯ ಸ್ಯಾಂಡ್‌ವಿಚ್ ಚೈನ್ ಸಬ್‌ವೇ ಅಂತಹ ಫಾಸ್ಟ್ ಫುಡ್ ಜಾಯಿಂಟ್ ಆಗಿದ್ದು, ಇದು ಡೈನರ್‌ಗಳಲ್ಲಿ ಹಾಟ್ ಫೇವರಿಟ್ ಆಗಿದೆ. ಸಬ್‌ವೇ ಸ್ಯಾಂಡ್‌ವಿಚ್‌ಗಳ ಜೀವಮಾನದ ಪೂರೈಕೆಯನ್ನು ಉಚಿತವಾಗಿ ಪಡೆಯಲು ಸಾಧ್ಯ ಎಂದು ನಾವು ನಿಮಗೆ ಹೇಳಿದರೆ ನೀವು ನಂಬುತ್ತೀರಾ. ಹೌದು, ಇತ್ತೀಚಿಗೆ, USAನಲ್ಲಿ ಜನರು ಹೆಚ್ಚು ಇಷ್ಟಪಡುವ ಸ್ಯಾಂಡ್‌ವಿಚ್‌ಗಳನ್ನು ಉಚಿತವಾಗಿ (Free) ಪಡೆಯಲು ಸ್ಪರ್ಧೆಯನ್ನು ಪ್ರಾರಂಭಿಸಿತು. ಸಬ್‌ವೇ ತನ್ನ ಹೊಸ ಸಬ್‌ವೇ ಸರಣಿ ಮೆನುವನ್ನು 12 ವಿಭಿನ್ನ ಮತ್ತು ವಿಶಿಷ್ಟವಾದ ಸ್ಯಾಂಡ್‌ವಿಚ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಈ ಸ್ಪರ್ಧೆಯು ಅದರ ವಿಜೇತರಿಗೆ ಹಚ್ಚೆ (Tatoo) ಹಾಕಿಸಿಕೊಳ್ಳುವ ನಿಗದಿತ ಷರತ್ತುಗಳನ್ನು ಪೂರೈಸಿದರೆ ಅವರಿಗೆ ಜೀವಮಾನದ ಪೂರೈಕೆಯನ್ನು ನೀಡುತ್ತದೆ.
Food Cuture: ಆಟಿಯ ತಿನಿಸು ತಿನ್ನಲು ಸೊಗಸು
ಟ್ಯಾಟೂದ ಗಾತ್ರ ಮತ್ತು ಆಯಾಮಗಳು ನಗದು ಬಹುಮಾನದೊಂದಿಗೆ ಅನುಪಾತದಲ್ಲಿರುತ್ತದೆ. ಮೊದಲು ಬಂದವರಿಗೆ ಮೊದಲ ಸೇವೆಯ ಆಧಾರದ ಮೇಲೆ ನೀಡಲಾಗುತ್ತದೆ. ಉದಾಹರಣೆಗೆ, ಮಣಿಕಟ್ಟು, ಬೈಸೆಪ್ ಅಥವಾ ಪಾದದ ಮೇಲೆ 2 ರಿಂದ 2-ಇಂಚಿನ ಹಚ್ಚೆ ನಿಮಗೆ ಒಂದು ತಿಂಗಳ ಕಾಲ ಸಬ್‌ವೇ ಫುಟ್‌ಲಾಂಗ್ ಸ್ಯಾಂಡ್‌ವಿಚ್‌ಗಳನ್ನು ಗೆಲ್ಲುವ ಅವಕಾಶವನ್ನು ನೀಡುತ್ತದೆ. ನಿಮ್ಮ ಭುಜದ ಬ್ಲೇಡ್, ಕರು ಅಥವಾ ತೋಳಿನ ಮೇಲೆ ನೀವು 3 ರಿಂದ 3-ಇಂಚಿನ ಹಚ್ಚೆ ಹಾಕಿಸಿಕೊಂಡರೆ, ಅವರು ನಿಮಗೆ ಒಂದು ವರ್ಷದ ಉಚಿತ ಸ್ಯಾಂಡ್‌ವಿಚ್‌ಗಳ ಪೂರೈಕೆಯನ್ನು ಬಹುಮಾನವಾಗಿ ನೀಡುತ್ತಾರೆ. ಮತ್ತು ದೊಡ್ಡ ಬಹುಮಾನ - ಸ್ಟರ್ನಮ್ ಅಥವಾ ಹಿಂಭಾಗದಲ್ಲಿ 12 ರಿಂದ 12-ಇಂಚಿನ ಹಚ್ಚೆಯಾಗಿದೆ. ವೆಬ್‌ಸೈಟ್‌ನಲ್ಲಿನ ಷರತ್ತುಗಳ ಪ್ರಕಾರ ಮೂರು ಲಕ್ಷ ರೂ. ಮೌಲ್ಯದ ಸಬ್‌ವೇ ಸ್ಯಾಂಡ್‌ವಿಚ್‌ಗಳ ಜೀವಿತಾವಧಿಯ ಪೂರೈಕೆ ಎಂದರ್ಥವಾಗಿದೆ.
ವಿಲಕ್ಷಣ ಮತ್ತು ಕುತೂಹಲ ಕೆರಳಿಸುವ ಸ್ಪರ್ಧೆಯು ಟ್ವಿಟರ್‌ನಲ್ಲಿ ಅನೇಕ ಜನರ ಗಮನ ಸೆಳೆಯಿತು. ಕೆಲವರು ಈ ಕಲ್ಪನೆಯನ್ನು ಆಸಕ್ತಿದಾಯಕವೆಂದು ಕಂಡುಕೊಂಡರೆ ಇತರರು ಇದನ್ನು ವಿಚಿತ್ರ ಆಫರ್ ಎಂದು ಕರೆದಿದ್ದಾರೆ.
ನಾನ್‌ವೆಜ್ ಪ್ರಿಯರ ಬಾಯಲ್ಲೂ ನೀರೂರಿಸೋ ವೆಜ್ ರೆಸಿಪಿಗಳಿವು
ಬಿಟ್ಟಿ ತಿನ್ಬೋದು ಅಂತಾನೇ 16 ಸಾರಿ ಡೇಟಿಂಗ್‌ಗೆ ಹೋದ ಹುಡುಗಿ..!
ಇಲ್ಲೊಬ್ಬಾಕೆ ಫ್ರೀ ಮೀಲ್ (Free Meal) ಸಿಗುತ್ತೆ ಅಂತ ಹೋಗಿದ್ದು ಎಲ್ಲಿಗೆ ಗೊತ್ತಾ.. ಮತ್ತೆಲ್ಲೂ ಅಲ್ಲ ಡೇಟಿಂಗ್‌ಗೆ (Dating). ಹೌದು, ಈ ಮಹಿಳೆ ಕೇವಲ ಉಚಿತ ಆಹಾರಕ್ಕಾಗಿ ಸತತವಾಗಿ 16 ದಿನ ಡೇಟಿಂಗ್‌ಗೆ ಹೋಗಿದ್ದಾಳೆ. ಪುರುಷರು ಬಿಲ್ ಪಾವತಿಸುವುದರಿಂದ ತನಗೆ ಉಚಿತ ಆಹಾರ ಸಿಗುತ್ತದೆ ಎಂದು ಮಹಿಳೆಯೊಬ್ಬರು ಸತತ 16 ದಿನಗಳ ಕಾಲ ಭೋಜನಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಹೊಟೇಲ್, ರೆಸ್ಟೋರೆಂಟ್ (Restaurant)ಗೆ ಹೋಗಿ ಊಟ ಮಾಡುವುದು ತುಂಬಾ ಕಾಸ್ಟ್ಲೀ. ಒಂದೆರಡು ಫುಡ್ ಐಟಂಗಳನ್ನು ಆರ್ಡರ್ ಮಾಡಿದರೂ ಇಷ್ಟುದ್ದ ಬಿಲ್ ಬಂದಿರುತ್ತದೆ. ಹೀಗಾಗಿಯೇ ಹಲವರು ತಾವೊಬ್ಬರೇ ಹೋದಾಗ ಒಂದೆರಡು ಫುಡ್‌ಗಳನ್ನು ಮಾತ್ರ ಆರ್ಡರ್ ಮಾಡ್ತಾರೆ. ಅದೇ ಇನ್ಯಾರೋ ಆಹಾರ ಕೊಡಿಸುತ್ತಾರೆ ಎಂದಾಗ ಬೇಕಾದ್ದನ್ನೆಲ್ಲಾ ಆರ್ಡರ್ ಮಾಡಿ ತಿನ್ನುತ್ತಾರೆ. ಆಹಾರ ಕಾಸ್ಟ್ಲೀ ಎಂಬ ಕಾರಣಕ್ಕೆ ಫ್ರೆಂಡ್ಸ್ ಜತೆ ಹೋಗೋ ಕೆಲವರು ಬಿಲ್ ಶೇರ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ದೊಡ್ಡ ದೊಡ್ಡ ಹೊಟೇಲ್ ರೆಸ್ಟೋರೆಂಟ್‌ಗಳಲ್ಲಿ ತಿನ್ನೋಕೆ ಈಕೆ ಡೇಟಿಂಗ್ ಮಾಡೋ ಐಡಿಯಾ ಮಾಡಿದ್ದಾಳೆ. ಈ ಮೂಲಕ ಡೇಟ್‌ಗೆ ಬಂದ ಹುಡುಗರ ದುಡ್ಡಲ್ಲಿ ಬೇಕಾಬಿಟ್ಟಿ ತಿಂದಿದ್ದಾಳೆ.