ಒಂದೇ ಒಂದು ಸಾರಿ ಬಟರ್ ಚಿಕನ್ ತಿಂದಿದ್ದಕ್ಕೆ ಸತ್ತೇ ಹೋದ! ಅಷ್ಟಕ್ಕೂ ಏನಿತ್ತು ಅದರಲ್ಲಿ?

ಸಾವು ಹೇಗೆ ಬೇಕಾದ್ರೂ ಬರಬಹುದು. ಚಿಕ್ಕ ಅಲರ್ಜಿ ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಅದ್ರಲ್ಲೂ ಆಹಾರದ ಅಲರ್ಜಿಯನ್ನು ನಿರ್ಲಕ್ಷ್ಯ  ಮಾಡ್ಲೇಬಾರದು. ಅರಿವಿಲ್ಲದೆ ನೀವು ತಿನ್ನುವ ಆಹಾರ ನಿಮ್ಮನ್ನು ಬಲಿಪಡೆಯುತ್ತದೆ. 
 

England Man Dies After Consuming Single Bite Of Butter Chicken Curry roo

ಜಗತ್ತಿನಲ್ಲಿ ಬಗೆ ಬಗೆ ಆಹಾರಗಳಿವೆ. ಜನರು ತಮ್ಮಿಷ್ಟದ ಆಹಾರವನ್ನು ಖುಷಿಯಾಗಿ ತಿನ್ನುತ್ತಾರೆ. ಅನೇಕ ಬಾರಿ ಅತಿಯಾದ ಆಹಾರ ಸೇವನೆ ಅಥವಾ ವಿಷಯುಕ್ತ ಆಹಾರ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಕೆಲ ಸಮಯದ ನಂತ್ರ ದೇಹ ಸುಧಾರಿಸಿಕೊಳ್ಳುತ್ತದೆ. ಆದ್ರೆ ಇನ್ನು ಕೆಲ ಆಹಾರ ಎಷ್ಟು ಅಪಾಯಕಾರಿ ಅಂದ್ರೆ ಅದನ್ನು ಸೇವನೆ ಮಾಡೋದು ಸಾವು ತರುವಷ್ಟು ಅಪಾಯಕಾರಿ. 

ಇಂಗ್ಲೆಂಡ್‌ ನಲ್ಲಿ ಈಗ ಅಂಥಹದ್ದೇ ಘಟನೆಯೊಂದು ನಡೆದಿದೆ. ಬಟರ್ ಚಿಕನ್ ಕರಿ ತಿಂದ 27 ವರ್ಷದ ಯುವಕ ಮೃತಪಟ್ಟಿದ್ದಾನೆ. ಆಹಾರ ಸೇವನೆ ಮಾಡಿದ ಕೆಲವೇ ಕ್ಷಣದಲ್ಲಿ ಆತನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಯೇ ನೆಲದ ಮೇಲೆ ಬಿದ್ದು ಆತ ಕುಸಿದು ಬಿದ್ದಿದ್ದಾನೆ. ಇಂಗ್ಲೆಂಡ್‌ (England) ನ ಗ್ರೇಟರ್ ಮ್ಯಾಂಚೆಸ್ಟರ್‌ನ ಬರಿ ನಿವಾಸಿ ಜೋಸೆಫ್ ಹಿಗ್ಗಿನ್ಸನ್ ಸಾವನ್ನಪ್ಪಿದ ವ್ಯಕ್ತಿ. ಜೋಸೆಫ್ (Joseph) ಹಿಗ್ಗಿನ್ಸನ್ ಒಬ್ಬ ಮೆಕ್ಯಾನಿಕ್.  ಆತ ಅನಾಫಿಲ್ಯಾಕ್ಸಿಸ್ ಮತ್ತು ಬಾದಾಮಿ ಅಲರ್ಜಿಯನ್ನು ಹೊಂದಿದ್ದ. ಈ ಅಲರ್ಜಿ (Allergy) ಹೊಂದಿದ ವ್ಯಕ್ತಿ ಯಾವುದೇ ಕಾರಣಕ್ಕೂ ಆ ಆಹಾರ ಸೇವನೆ ಮಾಡಬಾರದು. ಇದು ಬಹಳ ಅಪಾಯಕಾರಿ. ಅನೇಕ ಬಾರಿ ಈ ಅಲರ್ಜಿ ಪ್ರಾಣವನ್ನು ತೆಗೆಯುತ್ತದೆ. ಜೋಸೆಫ್ ಸಾವಿಗೂ ಇದೇ ಕಾರಣವಾಗಿದೆ.

ತೂಕ ಇಳಿಸುವ ಪ್ರಯತ್ನದಲ್ಲಿದ್ದೀರಾ? ಹಾಗಾದ್ರೆ ಮಲಗುವ ಮುನ್ನ ಈ ಕೆಲಸ ಮಾಡಿ!

ಹಿಗ್ಗಿನ್ಸನ್  ಸಾವಿಗೆ ಕೆಲವೇ ತಿಂಗಳುಗಳ ಮೊದಲು ಅಲರ್ಜಿಯನ್ನು ಗುರುತಿಸಲಾಗಿತ್ತು. ಅಲರ್ಜಿಯಿಂದ ತಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಅವರು  ಎಪಿಪೆನ್ ತೆಗೆದುಕೊಳ್ಳುತ್ತಿದ್ದ.   

ಅಲರ್ಜಿ ಸಮಸ್ಯೆ : ಒಬ್ಬೊಬ್ಬೊಬ್ಬರಿಗೆ ಒಂದೊಂದು ರೀತಿಯ ಅಲರ್ಜಿ ಇರುತ್ತದೆ. ಕೆಲವೊಂದು ಅಲರ್ಜಿ ಕಿರಿಕಿರಿ ನೀಡುತ್ತದೆಯೇ ವಿನಃ ಹೆಚ್ಚಿನ ಅಪಾಯಕಾರಿಯಲ್ಲ. ಆದ್ರೆ ಮತ್ತೆ ಕೆಲ ಅಲರ್ಜಿ ಸಾವಿಗೆ ಕಾರಣವಾಗುತ್ತದೆ. ಇದ್ರಲ್ಲಿ ಆಹಾರದ ಅಲರ್ಜಿ ಸೇರಿದೆ. ಕೆಲವರಿಗೆ ಕೆಲವೊಂದು ಆಹಾರ ತೀವ್ರ ಸಮಸ್ಯೆಯನ್ನುಂಟು ಮಾಡುತ್ತದೆ. ಅನಾಫಿಲ್ಯಾಕ್ಸಿಸ್ ಗಂಭೀರವಾದ, ಸಂಭಾವ್ಯ ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯಾಗಿದೆ. ಕಡಲೆಕಾಯಿ ಕೂಡ ಕೆಲವರಿಗೆ ತೀವ್ರ ಸಮಸ್ಯೆಯುಂಟು ಮಾಡುತ್ತದೆ. 

10 ಮಕ್ಕಳಲ್ಲಿ ಒಬ್ಬರಿಗೆ ಆಹಾರ ಅಲರ್ಜಿ ಇರುತ್ತದೆ. ಪ್ರಪಂಚದಾದ್ಯಂತದ 13 ಅಧ್ಯಯನಗಳ ದತ್ತಾಂಶದ ಆಧಾರದ ಮೇಲೆ, ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಸಂಶೋಧಕರು ಆಹಾರ ಅಲರ್ಜಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಒಂದು ವರ್ಷದಲ್ಲಿ ಅನಾಫಿಲ್ಯಾಕ್ಸಿಸ್‌ನಿಂದ ಸಾಯುವ ಸಾಧ್ಯತೆಯು ಮಿಲಿಯನ್‌ನಲ್ಲಿ 1.81 ಎಂದು ಲೆಕ್ಕಹಾಕಿದ್ದಾರೆ.  0-19 ವರ್ಷ ವಯಸ್ಸಿನ ಮಕ್ಕಳು ಮತ್ತು ಯುವಕರಿಗೆ ಈ ಅಪಾಯವು ಮಿಲಿಯನ್‌ನಲ್ಲಿ 3.25 ಆಗಿದೆ.  ಕಳೆದ 20 ವರ್ಷಗಳಲ್ಲಿ ಆಹಾರ ಅಲರ್ಜಿ ಹೊಂದಿರುವ ಮಕ್ಕಳಿಗೆ ಆಸ್ಪತ್ರೆಯ ದಾಖಲಾತಿಗಳು ಐದು ಪಟ್ಟು ಹೆಚ್ಚಾಗಿದೆ, ಆದರೆ ಈ ಪ್ರವೃತ್ತಿಗೆ ಕಾರಣ ಅಸ್ಪಷ್ಟವಾಗಿದೆ.

ಮಹಿಳೆಯ ಕಣ್ಣಿನ ಮೂಲಕವೇ ಈ ಕ್ಯಾನ್ಸರ್ ಮತ್ತೆ ಮಾಡಬಹುದು

ಆಹಾರದ ಅಲರ್ಜಿ ಹೊಂದಿರುವ ವ್ಯಕ್ತಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಆಹಾರ ಸೇವನೆ ಮಾಡುವಾಗ ನಿರ್ಲಕ್ಷ್ಯ ಮಾಡಬಾರದು. ಇದೇ ರೀತಿ ತಮಗೆ ಅಲರ್ಜಿಯಿದೆ ಎನ್ನುವ ಬಗ್ಗೆ ಗಂಭೀರವಾಗಿ ಅವರು ಚಿಂತಿಸಲು ಶುರು ಮಾಡಿದ್ರೆ ಅದು ಅವರ ಜೀವನದ ಗುಣಮಟ್ಟದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆಹಾರ ಸೇವನೆ ಮಾಡಿದ ನಂತ್ರ ನಾವು ಸಾವನ್ನಪ್ಪುತ್ತೇವೆ, ನಮಗೆ ಯಾವಾಗ ಬೇಕಾದ್ರೂ ಸಾವು ಬರಬಹುದು ಎಂದು ಅವರು ಯೋಚಿಸಲು ಶುರು ಮಾಡ್ತಾರೆ. ಆದ್ರೆ ಅದ್ರ ಬದಲು ಆಹಾರ ಅಲರ್ಜಿಗಳು ಮತ್ತು ಅವರ ಆರೈಕೆ ಮಾಡುವವರ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟದ ಬಗ್ಗೆ ಎಚ್ಚರವಹಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios