ತಿಂಡಿಯನ್ನು ರಾಜವೈಭೋಗ ಎನಿಸುವಂತೆ ಮಾಡಬಲ್ಲ ಸ್ವೀಟ್ ಕಾರ್ನ್ ಪರೋಟ!

ಪಾಟ್ ಲಕ್, ಬಫೆ, ಗೆಟ್‌ಟುಗೆದರ್‌ನಲ್ಲಿ ಅತಿಥಿಗಳನ್ನು ನಿಮ್ಮ ಅಡುಗದೆ ಕೌಶಲ್ಯದಿಂದ ಖುಷಿ ಪಡಿಸಬೇಕೆಂದರೆ ಈ ಬಾರಿ ಸ್ವೀಟ್ ಕಾರ್ನ್ ಪರೋಟಾ ಮಾಡಿಕೊಡಿ. ಮಕ್ಕಳ ಬೆಳಗಿನ ತಿಂಡಿ ಹಾಗೂ ಬಾಕ್ಸ್‌ಗೆ ಕೂಡಾ ಇದು ಬೆಸ್ಟ್. 
 

easy and simple Sweet Corn Paratha Recipe

ಪರೋಟ ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾದ ತಿಂಡಿ. ಇದನ್ನು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿ ತಯಾರಿಸಲಾಗುತ್ತದೆ. ಅಲ್ಲದೆ ಆಲೂ ಪರೋಟ, ಗೋಬಿ ಪರೋಟ, ಮೇತಿ ಪರೋಟ ಎಂದು ಪರೋಟದಲ್ಲಿ ಕೂಡಾ ಹಲವು ಬಗೆಗಳಿವೆ.

ಕೊರೆವ ಚಳಿಗೆ ಮಾಡಿ ಮ್ಯಾನ್ ಚೋ ಸೂಪ್,ಕ್ಯಾರೆಟ್ ಸೂಪ್,ಪಾಲಕ್ ಸೂಪ್!

ಇವೆಲ್ಲವನ್ನೂ ನೀವು ಈಗಾಗಲೇ ಟ್ರೈ ಮಾಡಿರಬಹುದು. ಆದರೆ, ಸ್ವೀಟ್ ಕಾರ್ನ್ ಪರೋಟ ಇನ್ನೂ ಹೊಸತಾಗಿದೆ. ಅಷ್ಟೇ ರುಚಿಯಾಗಿರುತ್ತದೆ ಕೂಡಾ. ಅದರಲ್ಲೂ ಚಳಿಗಾಲದಲ್ಲಿ ಫ್ರೆಸ್ ಆದ ಸ್ವೀಟ್ ಕಾರ್ನ್ ಹಾಗೂ ಕ್ಯಾರೆಟ್ ಮಾರುಕಟ್ಟೆಯಲ್ಲಿ ಸಿಗುವ ಸಂದರ್ಭದಲ್ಲಿ ಬಿಸಿ ಬಿಸಿ ಪರೋಟಾ ತಿನ್ನುವ ಅನುಭವ ತಿಂಡಿಪ್ರಿಯರಿಗೆ ಸ್ವರ್ಗ ಸಮಾನ. ಈ ತಿಂಡಿ ರುಚಿಯಷ್ಟೇ ಅಲ್ಲ, ಊಟದಷ್ಟೇ ಹೊಟ್ಟೆ ತುಂಬುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದೇ. ಇದು ಉತ್ತಮ ಎನರ್ಜಿ ನೀಡುವ ಜೊತೆಗೆ, ನ್ಯಾಚುರಲ್ ಆಗಿ ತೂಕ ಹೆಚ್ಚಿಸಿಕೊಳ್ಳಬೇಕೆನ್ನುವವರಿಗೆ ಸಹಕಾರಿ.
ಹಾಗಿದ್ದರೆ, ಇಂಥ ರುಚಿಕರ ಸ್ವೀಟ್‌ಕಾರ್ನ್ ಪರೋಟಾ ಮಾಡುವುದು ಹೇಗೆ ನೋಡೋಣ. 

ಬೇಕಾಗುವ ಸಮಯ: 20 ನಿಮಿಷ

ತಯಾರಿ ಸಮಯ: 5 ನಿಮಿಷ

ಕ್ಯಾಲೋರಿಗಳು: 235

ಬೇಕಾಗುವ ಸಾಮಗ್ರಿಗಳು
1.5 ಕಪ್ ಫ್ರೋಜನ್ ಸ್ವೀಟ್ ಕಾರ್ನ್
2 ಚಮಚ ಗರಂ ಮಸಾಲೆ
2 ದೊಡ್ಡ ಕ್ಯಾರೆಟ್
1 ಚಮಚ ಆಮ್‌ಚೂರ್
1/2 ಕಪ್ ಕೋಸು
2 ಚಮಚ ಕೆಂಪು ಮೆಣಸಿನ ಪುಡಿ
2 ದೊಡ್ಡ ಆಲೂಗಡ್ಡೆ
4 ಕಪ್ ಗೋಧಿ ಹಿಟ್ಟು
5 ಹಸಿಮೆಣಸು
1/2 ಚಮಚ ತುಪ್ಪ
1 ಕಪ್ ಕೊತ್ತಂಬರಿ ಸೊಪ್ಪು
1 ಚಮಚ ಎಳ್ಳು
1 ಚಮಚ ಸೋಂಪು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಸ್ಟೆಪ್ 1: ಫ್ರೋಜನ್ ಸ್ವೀಟ್ ಕಾರ್ನ್ ಕುದಿಸಿ
ಪಾತ್ರೆಯೊಂದರಲ್ಲಿ ನೀರನ್ನು ಬಿಸಿ ಮಾಡಿ ಅದಕ್ಕೆ ಸ್ವೀಟ್ ಕಾರ್ನ್ ಸೇರಿಸಿ ಕುದಿಯಲು ಬಿಡಿ. ಕಾರ್ನ್ ಮೆತ್ತಗಾದ ಬಳಿಕ ಸ್ಟೌ ಆರಿಸಿ, ನೀರನ್ನು ಸೋಸಿ ತೆಗೆಯಿರಿ. 

ಕಿಚಡಿ ಮಾಡುವುದು ಹೇಗೆಂದು ತಡಕಾಡಬೇಡಿ! ಸಿಂಪಲ್ಲಾಗಿ ಹೀಗ್ಮಾಡಿ!

ಸ್ಟೆಪ್ 2: ಸ್ಟಫಿಂಗ್ ತಯಾರಿ
ಬಾಣಲೆಯನ್ನು ಮೀಡಿಯಂ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಮೆತ್ತಗಾದ ಕಾರ್ನ್ ಸೇರಿಸಿ. 3-5 ನಿಮಿಷಗಳ ಕಾಲ ಡ್ರೈ ರೋಸ್ಟ್ ಮಾಡಿ. ಇದು ಗರಿಗರಿಯಾದ ಬಳಿಕ ಸ್ಟೌ ಆರಿಸಿ, ಕಾರ್ನನ್ನು ಬೇರೆ ಬಟ್ಟಲಿಗೆ ವರ್ಗಾಯಿಸಿ. ಕಾರ್ನ್ ತಣ್ಣಗಾದ ಬಳಿಕ ಇದಕ್ಕೆ ತುರಿದುಕೊಂಡ ಕ್ಯಾರೆಟ್, ಗರಂ ಮಸಾಲೆ, ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸು, ಆಮ್‌ಚೂರ್ ಪೌಡರ್, ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು, ಕೋಸು, ಎಳ್ಳು, ಅಜ್ವಾನ್ ಹಾಗೂ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆಗಳನ್ನು ಸೇರಿಸಿ, ಅಷ್ಟನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಬದಿಗಿಡಿ.

ಸ್ಟೆಪ್ 3: ಹಿಟ್ಟಿನೊಳಗೆ ಮಿಕ್ಸ್‌ಚರ್ ಸೇರಿಸಿ
ಗೋಧಿಹಿಟ್ಟು, ನೀರು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ನಾದಿ ಚಪಾತಿ ಹಿಟ್ಟಿನ ಹದಕ್ಕೆ ತಂದುಕೊಳ್ಳಿ. ಮುಷ್ಠಿಯಷ್ಟು ಹಿಟ್ಟು ತೆಗೆದುಕೊಂಡು ಉಂಡೆ ಮಾಡಿ. ಈ ಉಂಡೆಯನ್ನು ಕೈ ಬೆರಳಿನಂದಲೇ ಮಧ್ಯೆ ಹೊಂಡ ಮಾಡಿ ಅಲ್ಲಿ ಸ್ಟಫಿಂಗ್ ತುಂಬಿ. ನಂತರ ಹಿಟ್ಟನ್ನು ಎಳೆದು ಸೀಲ್ ಮಾಡಿ. ಹೀಗೆಯೇ ಎಲ್ಲ ಉಂಡೆಗಳಿಗೂ ಸ್ಟಫಿಂಗ್ ತುಂಬಿ. 

ಭಾನುವಾರದ ಬಾಯಿರುಚಿಗೆ ಬಸಂತಿ ಪುಲಾವ್, ಬ್ರಿಂಜಿ ರೈಸ್!

ಸ್ಟೆಪ್ 4: ಪರೋಟಾ ರೋಸ್ಟ್ ಮಾಡಿ
ಸ್ಟಫಿಂಗ್ ತುಂಬಿದ ಉಂಡೆಗಳನ್ನು ನಿಧಾನವಾಗಿ ಚಪಾತಿಯಂತೆ ಲಟ್ಟಿಸಿಕೊಳ್ಳಿ. ಇದನ್ನು ಕಾವಲಿಗೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಗೆ ಬೇಯಿಸಿ. ಈ ಸಂದರ್ಭದಲ್ಲಿ ಸ್ವಲ್ಪ ತುಪ್ಪ ಸೇರಿಸಿ. ಈಗ ಸ್ಟೀಟ್ ಕಾರ್ನ್ ಪರೋಟ ಸವಿಯಲು ಸಿದ್ಧ. 

Latest Videos
Follow Us:
Download App:
  • android
  • ios