Food Tips: ಎಕ್ಸ್‌ಪಯರಿ ಡೇಟ್ ಇಲ್ಲದ ಆಹಾರಗಳಿವು

ಅತ್ಯಂತ ವೇಗದಲ್ಲಿ ಎಕ್ಸ್‌ಪಯರಿ ಡೇಟ್ (Expiry Date) ಮುಗಿಯೋ ಕಾಲವಿದು. ಸೋಪ್, ಶಾಂಪೂ, ಎಣ್ಣೆ, ಟೂಲ್ಸ್ ಎಲ್ಲಾನೂ ಬೇಗ್ ಅವಧಿ ಮೀರಿ ಬಿಡುತ್ತೆ. ಸಾಲ್ದು ಅಂತ ಮೊಬೈಲ್. ಟಿವಿ ರೀಚಾರ್ಜ್‌ಗಳು, ಶಾಪಿಂಗ್ ಮಾಲ್, ಆನ್‌ಲೈನ್ ತಾಣಗಳ ಡಿಸ್ಕೌಂಟ್ ಎಲ್ಲವೂ ಹೀಗೆ. ಅವಧಿ ಮೀರಿದ ವಸ್ತುಗಳನ್ನು ಉಪಯೋಗಿಸುವುದಕ್ಕಿಂತ, ಅವಧಿ ಮೀರಿದ ಆಹಾರಗಳನ್ನು ತಿನ್ನೋದು ಆರೋಗ್ಯ (Health)ಕ್ಕೇ ಅಪಾಯ. ಆದ್ರೆ ಕೆಲವೊಂದು ಆಹಾರ (Food)ಗಳಿಗೆ ಎಕ್ಸ್‌ಪಯರಿ ಡೇಟ್ ಇಲ್ಲ ಅನ್ನೋದು ನಿಮ್ಗೆ ಗೊತ್ತಾ ?
 

Do You Know These Foods Never Expire

ಸಾಮಾನ್ಯವಾಗಿ ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಎಕ್ಸ್‌ಪಯರಿ ಡೇಟ್ ನೋಡುವುದು ಹಲವರ ಅಭ್ಯಾಸ. ಯಾಕೆಂದರೆ ಅವಧಿ ಮುಗಿದ ವಸ್ತುಗಳನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಪ್ಯಾಕೆಟ್ ಫುಡ್ ಮತ್ತು ಇತರ ಆಹಾರ ವಸ್ತುಗಳನ್ನು ಖರೀದಿಸುವಾಗಲಂತೂ ಕಡ್ಡಾಯವಾಗಿ ಪ್ಯಾಕ್‌ ಮಾಡಿದ ಡೇಟ್, ಎಕ್ಸ್‌ಪಯರಿ ಡೇಟ್ ಎಲ್ಲವನ್ನೂ ಗಮನಿಸಿಕೊಳ್ಳಲೇಬೇಕು. ಇಲ್ಲದಿದ್ರೆ ಹೊಟ್ಟೆ ಕೆಟ್ಟು ಆಸ್ಪತ್ರೆ ಸೇರೋ ಹಾಗೆ ಆಗೋದು ಗ್ಯಾರಂಟಿ.

ಆದರೆ, ಕೆಲವೊಂದು ಉತ್ಪನ್ನಗಳು ಅವಧಿ ಮುಗಿದ ನಂತರವೂ ಸೇವಿಸಲು ಸುರಕ್ಷಿತವಾಗಿವೆ ಎಂದು ನಿಮಗೆ ತಿಳಿದಿದೆಯಾ ? ಹೌದು, ವರ್ಷಗಳಾದರೂ ಎಕ್ಸ್‌ಪಯರಿ ಆಗದ ಆಹಾರ ಉತ್ಪನ್ನಗಳಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ನಿಜ. ವಾಸ್ತವವಾಗಿ ಕೆಲವು ಆಹಾರಗಳು ಮುಕ್ತಾಯ ದಿನಾಂಕವನ್ನು ಹೊಂದಿರುವುದಿಲ್ಲ. ಎಷ್ಟು ವರ್ಷಗಳ ವರೆಗೂ ಯಾವುದೇ ಭಯವಿಲ್ಲದೆ ಇದನ್ನು ಸೇವಿಸಬಹುದು. ಆ ಆಹಾರಗಳು ಯಾವುವು ?

Food Tips: ಊಟ ಬಿಟ್ರೆ ಸಣ್ಣಗಾಗ್ತೀವಿ ಅನ್ನೋದು ಸುಳ್ಳು. ಹಾಗೆ ಮಾಡ್ಬೇಡಿ

ಉಪ್ಪು
ಉಪ್ಪು (Salt) ನೈಸರ್ಗಿಕ ಉತ್ಪನ್ನವಾಗಿದೆ. ಹೀಗಾಗಿ ಇದನ್ನು ಬಳಸಬಹುದಾದ ಅವಧಿ ಎಂದಿಗೂ ಮುಗಿಯುವುದಿಲ್ಲ. ಉಪ್ಪಿನಕಾಯಿ, ಚಟ್ನಿ, ಒಣ ತಿಂಡಿಗಳಂತಹ ಆಹಾರಗಳನ್ನು ಸಂರಕ್ಷಿಸಲು ಇದನ್ನು ಬಳಸಲಾಗುತ್ತದೆ. ಸಮುದ್ರದ ನೀರಿನಿಂದ ಉಪ್ಪನ್ನು ಹೊರತೆಗೆಯುವುದರಿಂದ, ಅದು ಎಂದಿಗೂ ತನ್ನ ನೈಜ ಪರಿಮಳವನ್ನು ಕಳೆದುಕೊಳ್ಳುವುದಿಲ್ಲ. ಹೀಗಾಗಿ ಇದನ್ನು ಎಷ್ಟು ವರ್ಷ ಬೇಕಾದರೂ ಶೇಖರಿಸಿ ಇಡಬಹುದು. ಆದರೆ, ಅಯೋಡಿನ್ ಅಥವಾ ಇತರ ಸೇರ್ಪಡೆಗಳು ಸರಿಯಾಗಿಲ್ಲದಿದ್ದಾಗ ಮಾತ್ರ ಉಪ್ಪು ತನ್ನ ನೈಸರ್ಗಿಕ ಗುಣಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತದೆ. ಬಳಸಲು ಯೋಗ್ಯವಿಲ್ಲದಂತೆ ಆಗುತ್ತದೆ. ಉಪ್ಪನ್ನು ಬಳಸಬಹುದಾದ ಅವಧಿಯನ್ನು 5-6 ವರ್ಷಗಳ ವರೆಗೆ ಕಡಿಮೆ ಮಾಡುತ್ತದೆ.

ಜೇನು
ಪ್ರಕೃತಿಯಲ್ಲಿ ಜೇನುಹುಳಗಳಿಂದ ತಯಾರಿಸಲ್ಪಡುವ ಒಂದು ಉತ್ಪನ್ನ ಜೇನು (Honey). ಜೇನುತುಪ್ಪವನ್ನು ದ್ರವರೂಪದ ಚಿನ್ನ ಎಂದು ಸಹ ಕರೆಯಲಾಗುತ್ತದೆ. ಯಾಕೆಂದರೆ ಇದು ಬಹಳಷ್ಟು ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಇದರ ಅವಧಿ ಎಂದಿಗೂ ಮೀರುವುದಿಲ್ಲ. ಯಾವುದೇ ಸಮಯದಲ್ಲಿ, ಎಷ್ಟು ವರ್ಷಗಳ ವರೆಗೂ ಆಹಾರದಲ್ಲಿ ಜೇನನ್ನು ಬಳಸಿಕೊಳ್ಳಬಹುದಾಗಿದೆ. ಸಕ್ಕರೆಗೆ ಜೇನು ತುಪ್ಪವೆಂಬ ಪರ್ಯಾಯವು ಶತಮಾನಗಳು ಮತ್ತು ದಶಕಗಳವರೆಗೆ ಇರುತ್ತದೆ ಎಂದು ನಂಬಲಾಗಿದೆ.

Slowest Foods: ತಯಾರಿಸಿ ವರ್ಷದ ನಂತರ ತಿಂದ್ರೇನೆ ಈ ಆಹಾರಗಳಿಗೆ ಹೆಚ್ಚು ರುಚಿ

ಸೂಕ್ಷ್ಮಜೀವಿಯ ಬೆಳವಣಿಗೆಗೆ ಆಹಾರದಲ್ಲಿ ನೀರು ಬೇಕಾಗುತ್ತದೆ. ಜೇನುತುಪ್ಪವು ಕಡಿಮೆ ನೀರಿನ ಅಂಶವನ್ನು ಹೊಂದಿರುತ್ತದೆ. ಹೀಗಾಗಿಯೇ ಹಾಳಾಗುತ್ತದೆ ಎಂದು ಭಯಪಡಬೇಕಿಲ್ಲ. ಆದರೆ ಕೆಲವೊಂದು ತಾಜಾ ಉತ್ಪನ್ನಗಳು ಅಥವಾ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಆಹಾರಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತವೆ. ನೈಸರ್ಗಿಕವಾಗಿ ಸಿಗುವ ಜೇನು ಎಕ್ಸ್‌ಪಯರಿ ಡೇಟ್ ಹೊಂದಿಲ್ಲ ಎಂಬುದು ನಿಜ. ಆದರೆ ಮಾರುಕಟ್ಟೆಗಳಲ್ಲಿ ಬಾಟಲಿಗಳಲ್ಲಿ ಸಿಗುವ ಜೇನನ್ನು ಹೀಗೆ ವರ್ಷಾನುಗಟ್ಟಲೆ ಬಳಸಲು ಸಾಧ್ಯವಿಲ್ಲ. ಜೇನು ರಾಸಾಯನಿಕಗಳೊಂದಿಗೆ ಕಲಬೆರಕೆ ಮಾಡದಿದ್ದಲ್ಲಿ ಅಥವಾ ಸಂಸ್ಕರಿಸದಿದ್ದರೆ ಮಾತ್ರ ಅದೇ ರುಚಿಯನ್ನು ಹೊಂದಿರುತ್ತದೆ. ಇಲ್ಲದಿದ್ದರೆ ಹಾಳಾಗುವ ಸಾಧ್ಯತೆಯಿದೆ. 

ಕಾಫಿ
ಕಾಫಿ (Coffee) ಪ್ರಿಯರಿಗೆ ಇದು ಅತ್ಯಂತ ಖುಷಿ ಕೊಡುವ ವಿಚಾರ. ಕಾಫಿಗೆ ಯಾವುದೇ ಎಕ್ಸ್‌ಪಯರಿ ಡೇಟ್ ಇಲ್ಲ. ಕಾಫಿ ಪುಡಿಯನ್ನು ಅದರ ಮುಕ್ತಾಯ ದಿನಾಂಕದ ನಂತರವೂ ಬಳಸಬಹುದು. ಯಾಕೆಂದರೆ ಕಾಫಿ ಬೀಜಗಳನ್ನು ನೀರಿನಂಶವಿಲ್ಲದೆ ಒಣಗಿಸುವ ಮೂಲಕ ಕಾಫಿ ಪುಡಿಯನ್ನು ತಯಾರಿಸಲಾಗುತ್ತದೆ. ನಂತರ ಈ ಕಾಫಿಯನ್ನು ಬಿಸಿ ಗಾಳಿಯನ್ನು ಬಳಸಿ ಒಣಗಿಸಿ ದ್ರವವನ್ನು ನಯವಾದ ಕಾಫಿ ಪುಡಿಯಾಗಿ ಪರಿವರ್ತಿಸಲಾಗುತ್ತದೆ. ಕಾಫಿ ಪುಡಿಯನ್ನು ಒಣಗಿಸುವ ಪ್ರಕ್ರಿಯೆಯು ತೇವಾಂಶ ಅಥವಾ ನೀರು ಇಲ್ಲದೆ ಮಾಡುವ ಪ್ರಕ್ರಿಯೆಯಾಗಿದೆ. ಹೀಗಾಗಿ ಇದು ಕಾಫಿ ಪುಡಿ ಹಾಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಸೋಯಾ ಸಾಸ್
ಸೋಯಾ ಸಾಸ್ (Soya Sauce) ಬಾಟಲಿಯಲ್ಲೇನೋ ಎಕ್ಸ್‌ಪಯರಿ ಡೇಟ್ ಇರುತ್ತದೆ. ಆದರೆ, ಸೋಯಾ ಸಾಸ್ ಯಾವತ್ತಿಗೂ ಹಾಳಾಗುವುದಿಲ್ಲ ಎಂಬ ವಿಷಯ ನಿಮಗೆ ಗೊತ್ತಿದ್ಯಾ ? ಸೋಯಾ ಸಾಸ್‌ನ್ನು ಗಾಳಿಯಾಡದಂತೆ ಗಟ್ಟಿಯಾದ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಟ್ಟರೆ ವರ್ಷಗಟ್ಟಲೆ ಉಪಯೋಗಿಸಬಹುದಾಗಿದೆ. ಸೋಯಾ ಸಾಸ್‌ನಲ್ಲಿರುವ ಉಪ್ಪಿನಂಶ ಇದು ಹೆಚ್ಚು ಕಾಲ ಬಾಳ್ವಿಕೆ ಬರುವಂತೆ ಮಾಡುತ್ತದೆ.

Latest Videos
Follow Us:
Download App:
  • android
  • ios