ದಿಂಡಿಗಲ್ ತಲಪ್ಪಾಕಟ್ಟಿ ಸಂಸ್ಥೆಯು ಬೆಂಗಳೂರಿನಲ್ಲಿ 'ನಾಟಿ ರಾಜ' ಎಂಬ ಹೊಸ ದೊನ್ನೆ ಬಿರಿಯಾನಿ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿದೆ. ಸೀರಗ ಸಾಂಬಾ ಅಕ್ಕಿ ಮತ್ತು ಕೈಯಿಂದ ಪುಡಿಮಾಡಿದ ಮಸಾಲೆಗಳನ್ನು ಬಳಸಿ, ಸಾಂಪ್ರದಾಯಿಕ ನಾಟಿ ಶೈಲಿಯಲ್ಲಿ ಈ ಬಿರಿಯಾನಿಯನ್ನು ತಯಾರಿಸಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.
ಬೆಂಗಳೂರು (ಜ.22): ದಿಂಡಿಗಲ್ ತಲಪ್ಪಾಕಟ್ಟಿ ವತಿಯಿಂದ ಮಂಗಳವಾರ 'ನಾಟಿ ರಾಜ,' ದೊನ್ನೆ ಬಿರಿಯಾನಿ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಶೆಟ್ಟನ್ ಗ್ರಾಂಡ್ ಹೋಟೆಲ್ ನಲ್ಲಿ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ದಿಂಡಿಗಲ್ ತಲಪ್ಪಾಕಟ್ಟಿಯ ವ್ಯವಸ್ಥಾಪಕ ನಿರ್ದೇಶಕರಾದ ನಾಗಸಾಮಿ ದನಬಾಲನ್ ಅವರು, ವಿಶ್ವದಾದ್ಯಂತ ದಿಂಡಿಗಲ್ ದೊನ್ನೆ ಬಿರಿಯಾನಿಯನ್ನು ಪಸರಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.
ದಿಂಡಿಗಲ್ ಬಿರಿಯಾನಿ ಸೀರಗ ಸಾಂಬಾ ಅಕ್ಕಿ ಮತ್ತು ಕೈಯಿಂದ ಪುಡಿಮಾಡಿದ ಮಸಾಲೆಗಳ ಬಳಕೆಯಿಂದ ಪ್ರಸಿದ್ದವಾಗಿದೆ. ಈ ಬ್ರಾಂಡ್ ತಮಿಳುನಾಡು, ಕೇರಳ ಮಾತ್ರವಲ್ಲದೇ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ ಆಗಿ ಬೆಳೆಯುತ್ತಿದೆ. 100ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು. 'ನಾಟಿ ರಾಜ' ದೊನ್ನೆ ಬಿರಿಯಾನಿಯನ್ನು ಸಾಂಪ್ರದಾಯಿಕ ವಾಗಿ ಒಣಗಿದ ಬಾಳೆ ಎಲೆಗಳಲ್ಲಿ ನಾಟಿಶೈಲಿಯ ಪ್ರಾಚೀನ ಅಡುಗೆ ವಿಧಾನವನ್ನು ಜನರಿಗೆ ನಿಡುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಕರ್ನಾಟಕದಾದ್ಯಂತ ದಿಂಡಿಗಲ್ ತಲಪಾಕಟ್ಟಿ ದೊನ್ನೆ ಬಿರಿಯಾನಿಯನ್ನು ಪಸರಿಸಲು ಶ್ರಮಿಸಲಾಗುವುದು. ನಮ್ಮ ಗುಣಮಟ್ಟ ಮತ್ತು ಅಭಿರುಚಿಯಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದು ಹೇಳಿದರು.
ದಿಂಟಿಗಲ್ ತಲಪ್ಪಾಕಟ್ಟಿ ಯ ಮುಖ್ಯವ್ಯವಹಾರ ಅಧಿಕಾರಿ ಸೆಂಥಿಲ್ ಕುಮಾರ್ ಮಾತನಾಡಿ, ಖಾದ್ಯ ತಯಾರಿಕೆ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ. ತಲಪ್ಪಾಕಟ್ಟಿ ಸಿಗ್ನೇಚರ್ ಬಿರಿಯಾನಿಯನ್ನು ಕೈಯಿಂದ ಅರೆದ ಮಸಾಲೆಗಳು, ಅತ್ಯುತ್ತಮ ಮಾಂಸದ ತುಂಡುಗಳನ್ನು ಮಿಶ್ರಣಮಾಡಿ ಮಾಡಲಾಗುವುದು. ಪ್ರತಿಯೊಂದು ಪದಾರ್ಥಗಳೂ ಮಾಸ್ಟರ್ ಶೆಫ್ ಗಳ ಕೈಚಳಕದಿಂದ ಮಾಡಲಾಗುವುದು ಎಂದು ಹೇಳಿದರು. ನಾಟಿ ರಾಜಾ ಮೆನುವಿನಲ್ಲಿ ಚಿಕನ್ ಮಟನ್ ಮತ್ತು ವಿವಿಧ ಬಗೆಯ ಖಾದ್ಯಗಳು ಇರಲಿವೆ. ಅದರಲ್ಲಿ ಪ್ರಾದೇಶಿಕವಾದ ಸಿಹಿತಿಂಡಿಗಳು ಮತ್ತು ಪಾನಿಯಗಳು ಇದರಲ್ಲಿ ಇರಲಿವೆ ಎಂದರು.
