Asianet Suvarna News Asianet Suvarna News

ಮೋದಿ ಜನ್ಮದಿನಕ್ಕೆ 56 ಖಾದ್ಯದ ವಿಶೇಷ ಥಾಲಿ, ತಿಂದು ಮುಗಿಸುವವರಿಗೆ 8.5 ಲಕ್ಷ ರೂ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದ್ದು, ಈ ದಿನ ಅವರ ಹೆಸರಿನಲ್ಲಿ ಥಾಲಿ’ಯನ್ನು ದೆಹಲಿ ಮೂಲದ ರೆಸ್ಟೋರೆಂಟ್ ಬಿಡುಗಡೆ ಮಾಡಿದೆ.  ಥಾಲಿಯನ್ನು 40 ನಿಮಿಷಗಳಲ್ಲಿ ತಿಂದು ಮುಗಿಸುವವರಿಗೆ 8.5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Delhi Restaurant Offers Rs 8.5 Lakhs To Finish 56 Inch Thali For PMs birthday Vin
Author
First Published Sep 17, 2022, 11:04 AM IST

ನವದೆಹಲಿ: ಸೆಪ್ಟೆಂಬರ್ 17 ರಂದು ಪ್ರಧಾನಿಯವರ ಜನ್ಮದಿನದ ನೆನಪಿಗಾಗಿ ದೆಹಲಿ ಮೂಲದ ರೆಸ್ಟೋರೆಂಟ್ ಮುಂದಿನ 10 ದಿನಗಳವರೆಗೆ 56 ಇಂಚಿನ ಥಾಲಿಯನ್ನು ನೀಡಲಿದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.0 ರೆಸ್ಟೋರೆಂಟ್, 56 ವಿವಿಧ ಖಾದ್ಯಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ಗ್ರಾಹಕರಿಗೆ ಪ್ರಸ್ತುತಪಡಿಸಲಿದೆ. ಈ ಥಾಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳ ಆಯ್ಕೆಯನ್ನು ಹೊಂದಿರುತ್ತದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.0 ರೆಸ್ಟೋರೆಂಟ್ ಈ ವಿಶಿಷ್ಟ ಆಲೋಚನೆಯೊಂದಿಗೆ ವೈರಲ್ ಆಗಿದೆ.

56 ವಿವಿಧ ಖಾದ್ಯಗಳನ್ನು ಹೊಂದಿರುವ ಸ್ಪೆಷಲ್‌ ಥಾಲಿ
ಥಾಲಿಯನ್ನು 40 ನಿಮಿಷಗಳಲ್ಲಿ ತಿಂದು ಮುಗಿಸುವವರಿಗೆ 8.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ. 56 ಇಂಚಿನ ಥಾಲಿಯು 56 ಭಕ್ಷ್ಯಗಳ ಸಂಯೋಜನೆಯಾಗಿದೆ. ಪ್ರಧಾನಿ ಮೋದಿಯವರ ಜನ್ಮದಿನದ (Happy Birthday) ಸ್ಮರಣಾರ್ಥ ಮತ್ತು ಅವರು ದೇಶಕ್ಕೆ ಮಾಡಿದ ಸೇವೆಯನ್ನು ಗೌರವಿಸಲು ಇದನ್ನು ಮಾಡಲಾಗಿದೆ. ರೆಸ್ಟೊರೆಂಟ್‌ನ ಮಾಲೀಕ ಸುಮಿತ್ ಕಲಾರ ಮಾತನಾಡಿ, "ನಾನು ಪ್ರಧಾನಿ ಮೋದಿ ಜಿ ಅವರನ್ನು ತುಂಬಾ ಗೌರವಿಸುತ್ತೇನೆ (Respect). ಅವರು ನಮ್ಮ ರಾಷ್ಟ್ರದ ಹೆಮ್ಮೆ ಮತ್ತು ಅವರ ಜನ್ಮದಿನದಂದು ನಾವು ವಿಶಿಷ್ಟವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಆದ್ದರಿಂದ ನಾವು ಈ ಭವ್ಯವಾದ ಥಾಲಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಇದನ್ನು ನಾವು '56 ವಿವಿಧ ಖಾದ್ಯಗಳನ್ನು (Food) ಹೊಂದಿರುವ ಮೋದಿ ಜೀ ಥಾಲಿ' ಎಂದು ಹೆಸರಿಸಿದ್ದೇವೆ' ಎಂದಿದ್ದಾರೆ.

PM Modi Birthday: 72ರ ಹರೆಯದಲ್ಲೂ ಮೋದಿ ಫಿಟ್‌ ಆಗಿರೋ ಸೀಕ್ರೇಟ್ ಏನು ?

ಮೋದಿ ಅಭಿಮಾನಿಗಳು ಥಾಲಿಯನ್ನು ಸವಿಯಬಹುದು
'ನಾವು ಪ್ರಧಾನಿ ಮೋದಿ ಅವರಿಗೆ ಈ ಥಾಲಿಯನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಅವರು ಇಲ್ಲಿಗೆ ಬಂದು ಸ್ಪೆಷಲ್ ಥಾಲಿಯನ್ನು ಸವಿಯಬೇಕೆಂದು ಬಯಸುತ್ತೇವೆ. ಆದರೆ, ಭದ್ರತಾ ಕಾರಣಗಳಿಂದ ಅದನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದು ಅವರನ್ನು ತುಂಬಾ ಪ್ರೀತಿಸುವ ಅವರ ಎಲ್ಲಾ ಅಭಿಮಾನಿಗಳು ದಯವಿಟ್ಟು ಬಂದು ಈ ಥಾಲಿಯನ್ನು ಆನಂದಿಸಿ" ಎಂದು ಮೋದಿ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಅದೃಷ್ಟಶಾಲಿ ವಿಜೇತರಿಗೆ ಕೇದಾರನಾಥಕ್ಕೆ ಉಚಿತ ಪ್ರಯಾಣದ ಅವಕಾಶ
ಮಾತ್ರವಲ್ಲದೆ ಈ ವಿಶೇಷ ಥಾಲಿಯು ಗ್ರಾಹಕರಿಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ. ಈ ಥಾಲಿಯೊಂದಿಗೆ ಕೆಲವು ಬಹುಮಾನಗಳನ್ನು ಇಡಲು ನಿರ್ಧರಿಸಿದ್ದೇವೆ. ದಂಪತಿಗಳಲ್ಲಿ ಯಾರಾದರೂ ಈ ಥಾಲಿಯನ್ನು 40 ನಿಮಿಷಗಳಲ್ಲಿ ಮುಗಿಸಿದರೆ ನಾವು ಅವರಿಗೆ 8.5 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ.

PM Narendra Modi Birthday : ಮೋದಿ ಜನ್ಮದಿನಕ್ಕೆ ಬಿಜೆಪಿಯಿಂದ ಸೇವಾ ಪಾಕ್ಷಿಕ

ಅಲ್ಲದೆ, ಸೆಪ್ಟೆಂಬರ್ 17-26 ರ ನಡುವೆ ನಮ್ಮನ್ನು ಭೇಟಿ ಮಾಡುವ ಮತ್ತು ಈ ಥಾಲಿಯನ್ನು ತಿನ್ನುವವರಲ್ಲಿ, ಅದೃಷ್ಟಶಾಲಿ ವಿಜೇತರು ಅಥವಾ ದಂಪತಿಗಳು ಕೇದಾರನಾಥಕ್ಕೆ ಉಚಿತವಾಗಿ ಪ್ರಯಾಣಿಸುತ್ತಾರೆ. ಏಕೆಂದರೆ ಇದು ಪ್ರಧಾನಿ ಮೋದಿ ಜಿ ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ' ಎಂದು ಸುಮಿತ್ ಕಲಾರ ತಿಳಿಸಿದ್ದಾರೆ. ಥಾಲಿಯು 20 ವಿವಿಧ ರೀತಿಯ ತರಕಾರಿ ಭಕ್ಷ್ಯಗಳು, ವಿವಿಧ ರೀತಿಯ ಬ್ರೆಡ್, ದಾಲ್ ಮತ್ತು ಭಾರತೀಯ ಸಿಹಿತಿಂಡಿಗಳನ್ನು ಹೊಂದಿರುತ್ತದೆ.

Follow Us:
Download App:
  • android
  • ios