Biryani Recipe: ಜಸ್ಟ್ ಹತ್ತೇ ನಿಮಿಷದಲ್ಲಿ ರೆಡಿ ಮಾಡಿ

ಬಿರಿಯಾನಿ (Biriyani) ತಿನ್ನೋಕೆನೋ ಇಷ್ಟ. ಮೂರು ಹೊತ್ತು ಕೊಟ್ರೂ ತಿನ್ಬೋದು. ಆದ್ರೆ ಅಡುಗೆ ಮನೆ (Kitchen)ಗೆ ಹೋಗಿ ಬಿರಿಯಾನಿ ರೆಡಿ ಮಾಡೋದೆ ಕಷ್ಟ. ಹೀಗೆ ಹೇಳೋರಲ್ಲಿ ನೀವೂ ಒಬ್ರಾ. ಹಾಗಿದ್ರೆ ಚಿಂತೆ ಬಿಡಿ. ಜಸ್ಟ್ ಹತ್ತೇ ನಿಮಿಷದಲ್ಲಿ ಟೇಸ್ಟೀ ಬಿರಿಯಾನಿ ಮಾಡೋದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

Craving Biryani  In Just Ten Minute

ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಆಹಾರವೆಂದರೆ ಅದು ಬಿರಿಯಾನಿ (Biriyani). ಮನೆಗೆ ಗೆಸ್ಟ್ ಬಂದಾಗ, ಫ್ರೆಂಡ್ಸ್ ಬಂದಾಗ ಬಿರಿಯಾನಿ ರೆಡಿಯಾಗ್ಲೇಬೇಕು. ಬರ್ತ್ ಡೇ, ಮದುವೆ ಪಾರ್ಟಿ ಅಂದಾಗಲ್ಲೆಲ್ಲಾ ಬಿರಿಯಾನಿಗೆ ಮೊದಲ ಸ್ಥಾನ. ವೆಜ್ (Veg), ನಾನ್ ವೆಜ್ (Nonveg) ಎಂದು ನಾನಾ ರೀತಿಯಲ್ಲಿ ಬಿರಿಯಾನಿ ಮಾಡಬಹುದಾದ ಕಾರಣ ಸಸ್ಯಾಹಾರಿಗಳು, ಮಾಂಸಾಹಾರಿಗಳು ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ವೆಜ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಎಗ್ ಬಿರಿಯಾನಿ, ಚಿಕನ್ ಬಿರಿಯಾನಿ, ಫಿಶ್ ಬಿರಿಯಾನಿ ಹೀಗೆ ಹಲವು ಬಿರಿಯಾನಿಗಳು ಫೇಮಸ್ ಆಗಿವೆ. ಆದ್ರೆ ಮಾಡೋ ವಿಧಾನ ತುಂಬಾ ಕಷ್ಟ, ತುಂಬಾ ಹೊತ್ತು ಬೇಕು ಅನ್ನೋ ಕಾರಣಕ್ಕೆ ಬಿರಿಯಾನಿ ಮಾಡೋಕೆ ಹಿಂಜರಿಯುವವರು ಹಲವರು. ಆದ್ರೆ ಈ ಬಿರಿಯಾನಿಯನ್ನು ಫಟಾಫಟ್ ಆಗಿ ಜಸ್ಟ್ ಹತ್ತೇ ನಿಮಿಷದಲ್ಲಿ ತಯಾರಿಸಬಹುದು.

ಪ್ರಸಿದ್ಧ ಶೆಫ್ ಕುನಾಲ್ ಕಪೂರ್ ಈ ಸ್ಪೆಷಲ್ ಬಿರಿಯಾನಿಯ ರೆಸಿಪಿ (Recipe)ಯನ್ನು ಹಂಚಿಕೊಂಡಿದ್ದಾರೆ. ಯಾವುದೇ ತರಕಾರಿ ಅಥವಾ ಮಾಂಸವನ್ನು ಸೇರಿಸದೆ ಸಿಂಪಲ್ ಆಗಿ ಈ ಬಿರಿಯಾನಿಯನ್ನು ತಯಾರಿಸಬಹುದಾಗಿದೆ.

ವಿಶ್ವದ ದುಬಾರಿ ಬಿರಿಯಾನಿ... ಕೊತ್ತಂಬರಿ ಸೊಪ್ಪಲ್ಲ, ಚಿನ್ನದಿಂದ ಅಲಂಕರಿಸುತ್ತಾರೆ

ಬೇಕಾದ ಸಾಮಗ್ರಿಗಳು
ಬಾಸುಮತಿ ಅಕ್ಕಿ-3 ಕಪ್
ನೀರು-2 ಲೀಟರ್
ಕೇಸರಿ-ಒಂದು ಪಿಂಚ್
ಹಾಲು- ¼ ಕಪ್
ಎಣ್ಣೆ - ¼ ಕಪ್
ಬೇ ಎಲೆಗಳು - 2
ದಾಲ್ಚಿನ್ನಿ- 2 ತುಂಡು
ಲವಂಗ - 7-8
ಏಲಕ್ಕಿ - 10-12
ಕರಿಮೆಣಸು-4-5
ಜಾಯಿಕಾಯಿ ಸಿಪ್ಪೆ- 2
ಶಾಹಿ ಜೀರಾ - 2 ಟೇಬಲ್ ಸ್ಪೂನ್
ಕತ್ತರಿಸಿದ ಈರುಳ್ಳಿ - 1½ ಕಪ್ ಗಳು
ಕಿತ್ತಳೆ-½
ಹಸಿರು ಮೆಣಸಿನಕಾಯಿ - 2
ಬೆಳ್ಳುಳ್ಳಿ - 1½ ಟೇಬಲ್ ಸ್ಪೂನ್
ಕತ್ತರಿಸಿದ ಶುಂಠಿ - 1½ ಟೇಬಲ್ ಸ್ಪೂನ್
ಪುದೀನ ಎಲೆಗಳು – ಸ್ಪಲ್ಪ
ರುಚಿಗೆ ತಕ್ಕಷ್ಟು ಉಪ್ಪು
ರೋಸ್ ವಾಟರ್ - 1 ಟೀ ಸ್ಪೂನ್
ತುಪ್ಪ - 2 ಟೇಬಲ್ ಸ್ಪೂನ್ 

ಬಿರಿಯಾನಿ ಮಾಡುವ ವಿಧಾನ
ಮೊದಲಿಗೆ ಒಲೆ ಮೇಲೆ ಪಾತ್ರೆಯನ್ನಿಟ್ಟು, ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಬೇ ಎಲೆ, ದಾಲ್ಚಿನ್ನಿ, ಲವಂಗ, ಕರಿಮೆಣಸು, ಏಲಕ್ಕಿ, ಜಾಯಿಕಾಯಿ ಸಿಪ್ಪೆ ಮತ್ತು ಶಾಹಿ ಜೀರಾವನ್ನು ಸೇರಿಸಿ ಬಾಡಿಸಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ (Onion)ಯನ್ನು ಸೇರಿಸಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ನಸುಕಂದು ಬಣ್ಣವನ್ನು ಪಡೆದ ನಂತರ, ಇದಕ್ಕೆ 2 ಹಸಿರು ಸೀಳಿದ ಮೆಣಸಿನಕಾಯಿ,  ಬೆಳ್ಳುಳ್ಳಿ ಮತ್ತು ಶುಂಠಿಯ ಚೂರುಗಳನ್ನು ಸೇರಿಸಿಕೊಳ್ಳಿ. ಈಗ ಇದಕ್ಕೆ ಅರ್ಧ ಕಿತ್ತಳೆಯ ರಸ ಹಾಗೂ ಕಿತ್ತಳೆಯ ಚೂರನ್ನು ಸೇರಿಸಿಕೊಳ್ಳಿ. ಬಳಿಕ ಪುದೀನ (Pudina) ಎಲೆಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 3 ರಿಂದ 4 ನಿಮಿಷ ಬೇಯಿಸಿ. ನಂತರ ಇದಕ್ಕೆ 2 ಲೀಟರ್‌ನಷ್ಟು ನೀರನ್ನು ಸೇರಿಸಿಕೊಳ್ಳಿ. ಇದನ್ನು ಕುದಿಸಿದ ಬಳಿಕ ಮಸಾಲೆಯ ನೀರನ್ನು ಒಂದು ಪಾತ್ರೆಗೆ ಸೋಸಿಕೊಳ್ಳಿ.

Priyanka chopra Favorite Food: ಬಹುತೇಕ ಭಾರತೀಯರ ನೆಚ್ಚಿನ ಆಹಾರವೇ ಪ್ರಿಯಾಂಕಾಗೂ ಇಷ್ಟ

ಗ್ಯಾಸ್ ಮೇಲೆ ಈಗ ಬೇರೆಯದೇ ಪಾತ್ರೆಯನ್ನಿಟ್ಟು ಇದಕ್ಕೆ ಮಸಾಲೆಯ ಈ ನೀರನ್ನು ಹಾಕಿಕೊಳ್ಳಿ. ಇದಕ್ಕೆ ಅಗತ್ಯವಾದಷ್ಟು ಉಪ್ಪನ್ನು ಸೇರಿಸಿ.ನಂತರ ಇದಕ್ಕೆ ರೋಸ್ ವಾಟರ್, ಏಲಕ್ಕಿ ಪುಡಿ, ¼ ಕಪ್ ಹಾಲು ಸೇರಿಸಿಕೊಳ್ಳಿ.ಇದಕ್ಕೆ ಈಗ ಮೊದಲೇ ನೆನೆಸಿಟ್ಟ ಮೂರು ಕಪ್ ಬಾಸುಮತಿ ಅಕ್ಕಿ (Basmati Rice)ಯನ್ನು ಸೇರಿಸಿ. ಮೊದಲಿಗೆ ಗ್ಯಾಸ್ ಹೈ ಫ್ಲೇಮ್ ನಲ್ಲಿಟ್ಟು ಕುದಿಸಿಕೊಳ್ಳಿ. ಈಗ ಇದಕ್ಕೆ ಕೇಸರಿ, ತುಪ್ಪ ಸೇರಿಸಿ. ಪಾತ್ರೆಯನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ನೀರು ಸಂಪೂರ್ಣ ಆರಿದೆ ಎಂದರೆ ನಿಮ್ಮ ಬಿರಿಯಾನಿ ರೈಸ್ ಸಿದ್ಧವಾಗಿದೆ.

 
 
 
 
 
 
 
 
 
 
 
 
 
 
 

A post shared by Kunal Kapur (@chefkunal)

ಕುನಾಲ್ ಕಪೂರ್ ಅವರಿಂದ ಬಿರಿಯಾನಿಗೆ ಸಂಬಂಧಿಸಿದ ಸಲಹೆಗಳು 
ಶೆಫ್ ಕುನಾಲ್ ಕಪೂರ್ ಬಿರಿಯಾನಿ ಮಾಡುವಾಗ ಅನುಸರಿಸಬೇಕಾದ ಕೆಲವು ವಿಚಾರಗಳನ್ನು ತಿಳಿಸುತ್ತಾರೆ. ಸಾಮಾನ್ಯವಾಗಿ, ಬಾಸುಮತಿ ಅಕ್ಕಿಯಂತಹ ಉದ್ದ ಮತ್ತು ತೆಳ್ಳಗಿನ ಅಕ್ಕಿಯಿಂದ ಮಾತ್ರ ಉತ್ತಮ ಬಿರಿಯಾನಿ ಮಾಡಬಹುದು ಎಂದು ಜನರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ತುಲನಾತ್ಮಕವಾಗಿ ದಪ್ಪ ಮತ್ತು ಚಿಕ್ಕದಾದ ಸೆಲ್ಲಾ ರೈಸ್ ಕೂಡ ಬಿರಿಯಾನಿ ತಯಾರಿಸುವಾಗ ಉತ್ತಮ ರುಚಿಯನ್ನು ನೀಡುತ್ತದೆ.

ಬಿರಿಯಾನಿ ಮಾಡುವಾಗ, ಅಕ್ಕಿಯನ್ನು ಸಂಪೂರ್ಣವಾಗಿ ನೆನೆಸಿಡುವುದು ಬಹಳ ಮುಖ್ಯ. ಈ ಪ್ರಕ್ರಿಯೆಯು ನಿಮ್ಮ ಅಡುಗೆಯ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಅಕ್ಕಿ ಸರಿಯಾಗಿ ಬೇಯುವಂತೆ ಮಾಡಲು ಈ ಪ್ರಕ್ರಿಯೆ ನೆರವಾಗುತ್ತದೆ. ಇಷ್ಟೇ ಅಲ್ಲದೆ, ಬಿರಿಯಾನಿಯನ್ನು ತಯಾರಿಸಲು ಪ್ರಾರಂಭಿಸುವ ಮೊದಲು ನೀರು ಮತ್ತು ಆಯ್ಕೆ ಮಾಡಿದ ಅಕ್ಕಿಯ ಅನುಪಾತವನ್ನು ಮೊದಲು ತಿಳಿದುಕೊಳ್ಳುವುದು ಯಾವಾಗಲೂ ಒಳ್ಳೆಯದು.

ಬಿರಿಯಾನಿ ಅನ್ನವನ್ನು ಸೇರಿಸುವ ನೀರು ಅತಿಯಾಗಿ ಉಪ್ಪಾಗಿರಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಏಕೆಂದರೆ ಅಕ್ಕಿಯು ಉಪ್ಪನ್ನು ನೆನೆಸುತ್ತದೆ ಮತ್ತು ಹೆಚ್ಚುವರಿ ಉಪ್ಪಿನ ಮಟ್ಟವು ಬಿರಿಯಾನಿ ಸಿದ್ಧಗೊಂಡಾಗ ಸಮತೋಲನಗೊಳ್ಳುತ್ತದೆ. ಅಕ್ಕಿ ಬೇಯದಿದ್ದರೆ ಮೇಲಿನಿಂದ ಸ್ವಲ್ಪ ಬಿಸಿ ನೀರನ್ನು ಚಿಮುಕಿಸಿ ಹಬೆಯಲ್ಲಿ ಸ್ವಲ್ಪ ಹೊತ್ತು ಬೇಯಿಸಿ. ಅಕ್ಕಿ ಅತಿಯಾಗಿ ಬೆಂದಿದ್ದರೆ,, ಕೂಡಲೇ ಹೊರತೆಗೆದು ಅಗಲವಾದ ಪಾತ್ರೆಯಲ್ಲಿ ಹರಡಿ. ಇದರಿಂದ ಅನ್ನ ಅಂಟು ಅಂಟಾಗುವುದಿಲ್ಲ ಎಂದು ಶೆಫ್ ಕುನಾಲ್ ಕಪೂರ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios