Taste of India : ಸ್ವೀಡನ್‌ನಲ್ಲಿ ಸಿಕ್ಕ ಛೋಲೆ ಭಟೂರೆ ಸ್ವಾದ ಬಿಚ್ಚಿಟ್ಟ ಯುವಕ

ನಮ್ಮ ದೇಶ, ಊರು, ಜನ ನಮಗೆ ಚಂದ. ಬೇರೆ ಯಾವುದೇ ದೇಶಕ್ಕೆ ಹೋದರೂ ನಮ್ಮ ದೇಶದ ಮಣ್ಣಿನ ಘಮ ನಮಗೆ ಸಿಗಲು ಸಾಧ್ಯವಿಲ್ಲ. ಹಾಗೆಯೇ ಆಹಾರ ಕೂಡ. ದೇಶಿ ಆಹಾರದ ರುಚಿ ವಿದೇಶದಲ್ಲಿ ಕನಸಿನ ಮಾತು. ಸ್ವೀಡನ್‌ನಲ್ಲಿ ದೆಹಲಿ ಪ್ರಸಿದ್ಧ ಆಹಾರ ತಿನ್ನಲು ಹೋದವನು ತವರನ್ನು ಮಿಸ್ ಮಾಡಿಕೊಳ್ತೇನೆ ಎಂದಿದ್ದಾನೆ
 

Chhole Bhature Indian food taste felt by Indian in Sweden

ಛೋಲೆ ಭಟೂರೆ (Chole Bhature). ಉತ್ತರ ಭಾರತ(north India)ದ ಮಂದಿಗೆ ಈ ಹೆಸರು ಕೇಳುತ್ತಿದ್ದಂತೆ ಬಾಯಿಯಲ್ಲಿ ನೀರು ಬರುತ್ತದೆ. ಛೋಲೆ ಭಟೂರೆ ಎಲ್ಲರಿಗೂ ಸರಿಯಾಗಿ ಮಾಡಲು ಬರುವುದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿ (Delhi) ಇದಕ್ಕೆ ಪ್ರಸಿದ್ಧಿ ಪಡೆದಿದೆ. ದೆಹಲಿಗೆ ಹೋಗಿ ಛೋಲೆ ಭಟೂರೆ ತಿಂದಿಲ್ವಾ ಎನ್ನುವ ಮಾತನ್ನು ನೀವು ಕೇಳಿರಬಹುದು. ನಮ್ಮ ದೇಶ ವೈವಿದ್ಯತೆಯಲ್ಲಿ ಏಕತೆ ಹೊಂದಿದೆ. ಆಹಾರ (Food)ದ ವಿಷ್ಯದಲ್ಲೂ ಅಷ್ಟೆ. ಭಾರತೀಯ ಪಾಕ ಪದ್ಧತಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಆಹಾರಗಳನ್ನು ವಿದೇಶಿ(Foreign)ಗರಿಗೆ ತಯಾರಿಸಲು ಬರುವುದಿಲ್ಲ. ವಿದೇಶದಲ್ಲಿರುವ ಭಾರತೀಯರು, ದೇಸಿ ಖಾದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ವಿದೇಶದಲ್ಲಿರುವ ಭಾರತೀಯ ಹೊಟೇಲ್ ಗಳಲ್ಲಿಯೂ ಭಾರತದಲ್ಲಿ ಸಿಗುವ ರುಚಿ-ರುಚಿ ಆಹಾರ ಸಿಗಲು ಸಾಧ್ಯವಿಲ್ಲ.

ರೆಡ್ಡಿಟ್ (Reddit ) ಬಳಕೆದಾರ @ pilsburyboi ಸ್ವೀಡನ್ (Sweden) ನಲ್ಲಿ ಸಿಕ್ಕ ಛೋಲೆ ಭಟೂರೆ ಸ್ವಾದವನ್ನು ಎಲ್ಲರ ಮುಂದಿಟ್ಟಿದ್ದಾನೆ. ಸ್ವೀಡನ್ ನ ಸ್ಟಾಕ್‌ಹೋಮ್‌ (Stockholm)ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗೆ ಆತ ಹೋಗಿದ್ದನಂತೆ. ಬಾಯ ಚಪ್ಪರಿಸುತ್ತ ಛೋಲೆ ಭಟೂರೆ ಆರ್ಡರ್ ಮಾಡಿದ್ದಾನೆ. ಆದರೆ ರೆಸ್ಟೋರೆಂಟ್ (Restaurant) ನೀಡಿದ ಛೋಲೆ,ಭಟೂರೆ ನೋಡಿ ಮುಖ ಸೆಪ್ಪೆಯಾಗಿದೆ. ನಿರಾಶೆಯಿಂದಲೇ ಅದರ ಫೋಟೋ (Photo)ವನ್ನು ಬಳಕೆದಾರ ಪೋಸ್ಟ್ ಮಾಡಿದ್ದಾನೆ. 

ತನ್ನ ಅನುಭವವನ್ನೂ ಆತ ಹಂಚಿಕೊಂಡಿದ್ದಾನೆ. ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ ನನಗೆ ಬಡಿಸಿದ ಛೋಲೆ ಭಟೂರೆ. ನಾನು ಮನೆ (Home)ಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ.
ದಕ್ಷಿಣ ಭಾರತದಲ್ಲೂ ಅನೇಕರು ಛೋಲೆ ಭಟೂರೆ ಮಾಡುತ್ತಾರೆ. ಭಕ್ಷ್ಯವನ್ನು ಬೇರೆ ಬೇರೆಯಾಗಿ ಬಡಿಸಬೇಕು. ಅಂದರೆ ಛೋಲೆ ಬೇರೆ ಭಟೂರೆ ಬೇರೆಯಾಗಿ ಬಡಿಸಬೇಕು. ಆದರೆ ರೆಸ್ಟೋರೆಂಟ್ ನಲ್ಲಿ ಬಡಿಸಿದ ರೀತಿ ನಗು ತರಿಸುತ್ತದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರದಲ್ಲಿ ಭಟೂರೆ ಮೇಲೆ ಛೋಲೆ ಇದೆ. ಅದರ ಜೊತೆ ಸಲಾಡ್(Salad )ನೀಡಲಾಗಿದೆ. 

ಕೆಟ್ಟ ಛೋಲೆ-ಭಟೂರೆ ಬೆಲೆ ಎಷ್ಟು ಗೊತ್ತಾ? (Chole Bhature rate) :
ರೆಸ್ಟೋರೆಂಟ್ ನಲ್ಲಿ ಛೋಲೆ-ಭಟೂರೆ ತಿಂದು ನಿರಾಸೆಯಾಗಿದ್ದು ಮಾತ್ರವಲ್ಲ ಅದರ ಬೆಲೆ ನೋಡಿಯೂ ಆತ ದಂಗಾಗಿದ್ದಾನೆ. ಇದಕ್ಕೆ ಆತ 1,000 ರೂಪಾಯಿ ನೀಡಿದ್ದಾನೆ.  

ಹೀಗಿತ್ತು ಛೋಲೆ-ಭಟೂರೆ ರುಚಿ :
ಚಿತ್ರದಲ್ಲಿ (Photo) ಕೆಟ್ಟದಾಗಿ ಕಾಣುತ್ತಿರುವ ಛೋಲೆ-ಭಟೂರೆ ರುಚಿ ಹೇಗಿತ್ತು ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಅದಕ್ಕೂ ಆತ ಉತ್ತರ ನೀಡಿದ್ದಾನೆ. ಭಟೂರೆ ಸಿಹಿ(Sweet)ಯಾಗಿತ್ತಂತೆ.ತುಂಬಾ ದಪ್ಪವಾಗಿತ್ತಂತೆ. ಬಹುತೇಕ ಒಣಗಿತ್ತಂತೆ. ಇನ್ನು ಛೋಲೆ, ಪಾಲಕ್ ಪನೀರ್‌ (Palak Paneer)ನಂತಿತ್ತಂತೆ. ಕಡಲೆ ಜೊತೆ ದಾಳಿಂಬೆಯನ್ನೂ ಇದಕ್ಕೆ ಸೇರಿಸಿದ್ದರಂತೆ. ಅದು ಇರಲಿ ಅದಕ್ಕೆ ಮಸಾಲೆ ಹಾಕಿರಲಿಲ್ಲ ಎನ್ನುತ್ತಾನೆ ಬಳಕೆದಾರ. ಉಪ್ಪು ಮತ್ತು ಮೆಣಸು ಮಾತ್ರ ಛೋಲೆಯಲ್ಲಿತ್ತಂತೆ. ಭಟೂರೆ ಹಾಗೂ ಛೋಲೆ ಅನುಪಾತವೂ ಸರಿಯಾಗಿರಲಿಲ್ಲವಂತೆ.

ದುಡ್ಡು ಮಾಡುವ ಪ್ಲಾನ್ ನಲ್ಲಿ ರೆಸ್ಟೋರೆಂಟ್  ಭಟೂರೆಯನ್ನು ಕಡಿಮೆ ಪ್ರಮಾಣದಲ್ಲಿ ನೀಡಿದೆಯಂತೆ. ಸುಮಾರು 7 ಸೆಂಟಿಮೀಟರ್ ಇದ್ದು ಎಂದು ಬಳಕೆದಾರ ಹೇಳಿದ್ದಾನೆ. ಆಗ ಛೋಲೆ ಉಳಿಯುತ್ತದೆ. ಗ್ರಾಹಕ, ಛೋಲೆಗಾಗಿ ಭಟೂರೆ,ನಾನ್ ಅಥವಾ ಅನ್ನ ಆರ್ಡರ್ ಮಾಡ್ತಾರೆ ಎಂಬುದು ರೆಸ್ಟೋರೆಂಟ್ ಪ್ಲಾನ್ ಎನ್ನುತ್ತಾನೆ ಬಳಕೆದಾರ. ಇದಕ್ಕಾಗಿ ಬಳಕೆದಾರ 160 ಸ್ವೀಡಿಷ್ ಕ್ರೋನಾ (Swedish Krones) ಅಂದ್ರೆ ಸುಮಾರು ಸಾವಿರ ರೂಪಾಯಿ ಪಾವತಿ ಮಾಡಿ ಹೊರ ಬಂದಿದ್ದಾನೆ. ನಾನು ತವರನ್ನು ತುಂಬಾ ನೆನಪು ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ. 

ಆತನ ಪೋಸ್ಟ್ ಗೆ(Post) ಸಾಕಷ್ಟು ಕಮೆಂಟ್ ಗಳು ಬಂದಿವೆ. ನೀರು ಕುಡಿದು, ತಿಂದುಬಿಡಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios