ವಯಸ್ಸಿನ ಆಧಾರದಲ್ಲಿ ಪ್ರತಿ ದಿನ ಸೇವಿಸಬೇಕಾದ ಉಪ್ಪು ಎಷ್ಟು? ಆರೋಗ್ಯ ಇಲಾಖೆ ಪಟ್ಟಿ ಬಿಡುಗಡೆ!
ಮಗು, ಮಕ್ಕಳು, ಯುವ ಸಮೂಹ, 40ರ ಬಳಿಕ, ಹಿರಿಯ ನಾಗರಿಕರು ಹೀಗೆ ಪ್ರತಿಯೊಬ್ಬರು ಅವರ ವಯಸ್ಸಿನ ಆಧಾರದಲ್ಲಿ ಎಷ್ಟು ಉಪ್ಪು ಸೇವಿಸಬೇಕು? ಇದೀಗ ಆರೋಗ್ಯ ಇಲಾಖೆ ಮಹತ್ವದ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿ ನೋಡಿ ಒಂದು ಕ್ಷಣ ನಿಮ್ಮ ಆಹಾರದಲ್ಲಿ ಬಳಸುವ ಉಪ್ಪು ಪರೀಕ್ಷಿಸಿ.
ನವದೆಹಲಿ(ಅ.20) ಮನುಷ್ಯನ ದೇಹಕ್ಕೆ ಉಪ್ಪು ಅತ್ಯಗತ್ಯ ಅಂಶ. ಆದರೆ ಅತಿಯಾದರೂ ಆಪತ್ತೂ, ಕಡಿಮೆಯಾದರೂ ಆಪತ್ತು. ಉಪ್ಪು ಸೇವನೆಯಲ್ಲಿ ಸಮತೋಲನ ಮಾತ್ರವಲ್ಲ ಪ್ರತಿಯೊಬ್ಬರು ಎಷ್ಟು ಉಪ್ಪು ಸೇವಿಸಬೇಕು ಅನ್ನೋದು ಅರಿತಿರಬೇಕು. ಇಂದು ನಾಳೆ(ಅ.21) ವಿಶ್ವ ಆಯೋಡಿನ ಕೊರೆಯಿಂತ ಉದ್ಭವಿಸುವ ಸಮಸ್ಯೆಗಳ ತಡೆಗಟ್ಟುವ ದಿನ. ಇದರ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವಯಸ್ಸಿನ ಆಧಾರದಲ್ಲಿ ಪ್ರತಿಯೊಬ್ಬರು ಪ್ರತಿ ದಿನ ಎಷ್ಟು ಉಪ್ಪು ಸೇವಿಸಬೇಕು ಅನ್ನೋ ಮಾಹಿತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಗುವಿನಿಂದ ಹಿಡಿದು ಹಿರಿಯ ನಾಗರೀಕರವರೆಗೆ ಪ್ರತಿ ದಿನ ಸೇವಿಸಬೇಕಾದ ಉಪ್ಪಿನ ಪ್ರಮಾಣ ಅತ್ಯಂತ ಅವಶ್ಯಕತ. ಈ ಪ್ರಮಾಣದಲ್ಲಿ ಉಪ್ಪು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಕೊಂಚ ಹೆಚ್ಚಾದರೆ ಅಥವಾ ಕಡಿಮೆಯಾದರೆ ಸಮತೋಲನ ಕಾಪಾಡಿಕೊಳ್ಳುವುದನ್ನು ಅರಿತಿರಬೇಕು. ಇದು ಮನುಷ್ಯನ ಉತ್ತಮ ಆರೋಗ್ಯ ಗುಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಕೇಂದ್ರ ಆರೋಗ್ಯ ಇಲಾಖೆ ಇದೀಗ ಈ ಪಟ್ಟಿ ಬಿಡುಗಡೆ ಮಾಡಿದೆ. ಹುಟ್ಟಿದ ಮಗುವಿನಿಂದ 59 ತಿಂಗಳ ವರೆಗೆ ಮಗು ಪ್ರತಿ ದಿನ 90 μg (ಮೈಕ್ರೋಗ್ರಾಂ) ಉಪ್ಪು ಸೇವಿಸಬೇಕು. ಇನ್ನು 6 ರಿಂದ 12 ವರ್ಷದ ವರೆಗಿನ ಮಕ್ಕಳು ಪ್ರತಿ ದಿನ 120 μg(ಮೈಕ್ರೋಗ್ರಾಂ) ಉಪ್ಪು ಸೇವಿಸಬೇಕು. ಇನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ 150μg(ಮೈಕ್ರೋಗ್ರಾಂ) ಉಪ್ಪು ಪ್ರತಿ ದಿನ ಸೇವಿಸಬೇಕು. ಆದರೆ ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆ ಪ್ರತಿ ದಿನ 250μg (ಮೈಕ್ರೋಗ್ರಾಂ) ಉಪ್ಪು ಸೇವಿಸಬೇಕು.
0 - 59 ತಿಂಗಳು : 90 μg
6 ರಿಂದ 12 ವರ್ಷ:120 μg
12 ವರ್ಷಕ್ಕಿಂ ಮೇಲ್ಪಟ್ಟವರು:150μg
ಗರ್ಭಿಣಿ, ಹಾಲುಣಿಸುವ ಮಹಿಳೆಯರು: 50μg
ಪೋಷಕಾಂಶಗಳ ಜೊತೆಗೆ ಉಪ್ಪಿನ ಅಂಶಗಳು ಯಥೇಚ್ಚವಾಗಿ ದೇಹಕ್ಕೆ ಸಿಗುವ ಆಹಾರಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಸಮುದ್ರದಲ್ಲಿ ಬೆಳೆಯುವ ನೈಸರ್ಗಿಕ ಸೊಪ್ಪುಗಳು, ಮೀನು ಸೇರಿದಂತೆ ಸಮುದ್ರದ ಆಹಾರ, ಮೊಟ್ಟೆ, ದನದ ಹಾಲು ಸೇರಿದಂತೆ ಕೆಲ ಉತ್ಪನ್ನಗಳು, ಕ್ಯಾರೆಟ್ ಸೇರಿದಂತೆ ತರಕಾರಿ ಹಾಗೂ ಹಣ್ಣುಗಳು ಉತ್ತಮ ಎಂದು ಪಟ್ಟಿ ನೀಡಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ತಾವು ಸೇವಿಸುವ ಉಪ್ಪಿನ ಪ್ರಮಾಣ ಎಷ್ಟಿದೆ ಅನ್ನೋದು ತಪ್ಪದೇ ತಿಳಿದುಕೊಳ್ಳುವುದು ಉತ್ತಮ.