Butter Candle : ಬೆಳಕು ಕೊಡುವ ಜೊತೆಗೆ ಹಸಿವು ನೀಗಿಸುತ್ತೆ ಈ ಮೇಣದಬತ್ತಿ !
ಮನೆಯಲ್ಲಿ ಕರೆಂಟ್ ಹೋದ್ರೆ, ದೀಪಾವಳಿ, ಕ್ರಿಸ್ಮಸ್ ಸಂದರ್ಭದಲ್ಲಿ ಮೇಣದ ಬತ್ತಿ ಉರಿಸ್ತೇವೆ. ಆದ್ರೆ ಈ ಮೇಣದ ಬತ್ತಿ ಉರಿಯೋದು ಮಾತ್ರವಲ್ಲ ತಿನ್ನೋಕು ಬರುತ್ತೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ಈ ಮೇಣದಬತ್ತಿ ವಿಶೇಷ ಏನು ಗೊತ್ತಾ?
ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಮೇಣದಬತ್ತಿ ಹಸಿವನ್ನೂ ನೀಗಿಸುತ್ತೆ ಎಂದರೆ ನೀವು ನಂಬ್ತೀರಾ? ಆಶ್ವರ್ಯ ಎನಿಸಿದರೂ ಇದು ನಿಜ. ನಾವು ತಿನ್ನಬಹುದಾದ ಮೇಣದ ಬತ್ತಿಯ ಕುರಿತು ಹೇಳ್ತಾ ಇದೀವಿ. ಮದುವೆ, ಎನಿವರ್ಸರಿ, ಬರ್ತ್ ಡೇ, ದೀಪಾವಳಿ ಹೀಗೆ ಹಲವಾರು ಸಂದರ್ಭಗಳಲ್ಲಿ ಉರಿದು ಆರಿಹೋಗುವ ಮೇಣದ ಬತ್ತಿಯನ್ನು ಇನ್ನು ಮುಂದೆ ತಿನ್ನಬಹುದು.
ಇದು ಬೆಣ್ಣೆ (Butter) ಮೇಣದ ಬತ್ತಿ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೆಣ್ಣೆಯಿಂದ ಮಾಡಿದ ಈ ಮೇಣದಬತ್ತಿ (Candle) ಸಾಕಷ್ಟು ಸುದ್ದಿ ಮಾಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಬರುವ ತರಹೇವಾರಿ ಫುಡ್ (Food) ಎಕ್ಸಪರಿಮೆಂಟ್ ಗಳು ನಮ್ಮನ್ನು ಆಕರ್ಷಿಸುತ್ತವೆ. ಎಷ್ಟೋ ಬಾರಿ ನಮಗೆ ಅದನ್ನು ಟೇಸ್ಟ್ (Taste) ಮಾಡಿಬಿಡೋಣ ಅನ್ನಿಸೋದು ಸುಳ್ಳಲ್ಲ. ಈ ಬೆಣ್ಣೆಯ ಕ್ಯಾಂಡಲ್ ಕೂಡ ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿದೆ. ನೋಡುವವರ ಕಣ್ಣಿಗೆ ಇದು ನಿಜವಾಗಿಯೂ ತಿನ್ನುವ ಮೇಣದಬತ್ತಿ ಹೌದಾ ಎನ್ನುವಷ್ಟರ ಮಟ್ಟಿಗೆ ಇದು ಆರ್ಟಿಫಿಶಿಯಲ್ ಮೇಣದಬತ್ತಿಯನ್ನು ಹೋಲುತ್ತದೆ. ಇಂತಹ ತಿನ್ನುವ ಮೇಣದಬತ್ತಿಯನ್ನು ಹೇಗೆ ತಯಾರಿಸ್ತಾರೆ, ಅದರ ವಿಶೇಷತೆ ಏನು ಎಂಬುದನ್ನು ನಾವು ಹೇಳ್ತೆವೆ.
ಬೆಣ್ಣೆಯಿಂದ ತಯಾರಾಗುತ್ತೆ ಕ್ಯಾಂಡಲ್ : ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಮೇಣದಬತ್ತಿಯನ್ನು ವ್ಯಾಕ್ಸ್ ನಿಂದ ತಯಾರಿಸಿರುತ್ತಾರೆ. ಆ ಮೇಣದಬತ್ತಿಯನ್ನು ನಾವು ತಿನ್ನಲು ಸಾಧ್ಯವಿಲ್ಲ. ಆದರೆ ಬೆಣ್ಣೆಯಿಂದ ತಯಾರಾದ ಈ ಮೇಣದ ಬತ್ತಿಯನ್ನು ಜನರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ನಾವು ತಿನ್ನುವ ವಸ್ತು ನೋಡಲು ಆಕರ್ಷಣೀಯವಾಗಿದ್ದರೆ ಅದನ್ನು ತಿನ್ನುವ ಆಸೆ ಹೆಚ್ಚುತ್ತದೆ. ಇದಕ್ಕಾಗಿಯೇ ಫುಡ್ ಪ್ಲೇಟಿಂಗ್ ಬಹಳ ಮುಖ್ಯವಾಗಿದೆ. ಹಾಗೆಯೇ ಬೆಣ್ಣೆಯ ಮೇಣದಬತ್ತಿ ಕೂಡ ಫುಡ್ ಪ್ಲೇಟಿಂಗ್ ಗೆ ಸಂಬಂಧಪಟ್ಟಿದೆ.
ಭಾರತದ ಈ ರಾಜ್ಯದಲ್ಲಿ ತಂದೂರಿ ರೋಟಿ ಬ್ಯಾನ್, ತಯಾರಿಸಿದ್ರೆ ಬೀಳುತ್ತೆ ಲಕ್ಷಾಂತರ ರೂ. ದಂಡ!
ಬಟರ್ ಕ್ಯಾಂಡಲ್ ಹೇಗೆ ಶುರುವಾಯ್ತು? : ಬಟರ್ ಫುಡ್ ಆರ್ಟ್ ನಿನ್ನೆ ಮೊನ್ನೆಯದಲ್ಲ. ಬಹಳ ವರ್ಷದ ಹಿಂದೆಯೇ ಇದು ಚಾಲ್ತಿಯಲ್ಲಿದೆ. 1536 ರಲ್ಲಿ ರೋಮ್ ನಲ್ಲಿ ನಡೆದ ಒಂದು ಔತಣಕೂಟದಲ್ಲಿ ಖ್ಯಾತ ಅಡುಗೆಕಾರ ಬಾರ್ಟೋಲೊಮಿಯೋ ಸ್ಕೈಪ್ಪಿ ಯವರು ಸಿಂಹ, ಒಂಟೆ, ಆನೆಗಳನ್ನು ಬೆಣ್ಣೆಯಲ್ಲಿ ಮಾಡಿ ಪ್ಲೇಟ್ ನಲ್ಲಿ ಸರ್ವ್ ಮಾಡಿದ್ದರು.
ಜನರ ಪ್ರತಿಕ್ರಿಯೆ ಹೇಗಿದೆ? : ಬಹಳ ವರ್ಷದ ಹಿಂದೆ ವಿನ್ಯಾಸಗೊಳಿಸಿದ ಬೆಣ್ಣೆಯ ಮೇಣದಬತ್ತಿಯನ್ನು ಈಗ ಫುಡ್ ಕ್ರಿಯೇಟಿವ್ ಸೂಯಾ ಅವರು ಕೂಡ ಮಾಡಿದ್ದಾರೆ. ಅವರು ಬೆಣ್ಣೆ ಮೇಣದಬತ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಮೊದಮೊದಲು ಇವರು ಮನೆಗೆ ಅತಿಥಿಗಳು ಬಂದಾಗ ಡೈನಿಂಗ್ ಟೇಬಲ್ ಅನ್ನು ಡೆಕೊರೇಟ್ ಮಾಡಲು ಮತ್ತು ಡೈನಿಂಗ್ ಟೇಬಲ್ ಆಕರ್ಷಣೀಯವಾಗಿ ಕಾಣಲು ಬಟರ್ ಕ್ಯಾಂಡಲ್ ಅನ್ನು ಟೇಬಲ್ ಮೇಲೆ ಇಡಲು ಆರಂಭಿಸಿದರು. ಇವರ ಬಟರ್ ಕ್ಯಾಂಡಲ್ ಮತ್ತು ಅದರ ಬೆಳ್ಳುಳ್ಳಿ, ಒರೆಗಾನೊ ಹೂವು, ಮೆಣಸು, ನಿಂಬೆ ಮುಂತಾದ ಫ್ಲೇವರ್ ಗಳು ಜನರಿಗೆ ಬಹಳ ಇಷ್ಟವಾದವು. ಬೆಣ್ಣೆಯ ಮೇಣದ ಬತ್ತಿಯನ್ನು ಜೇನುತುಪ್ಪ, ದಾಲ್ಚಿನಿ, ಕೋಕೊ ಪೌಡರ್ ಫ್ಲೇವರ್ ಗಳಲ್ಲಿಯೂ ಮಾಡುತ್ತಾರೆ. ಸೂಯಾ ಅವರು ತಮ್ಮ ಸಾಮಾಜಿಕ ಜಾಲತಾಣ ಹ್ಯಾಂಡಲ್ ನಲ್ಲಿ ಬೆಣ್ಣೆಯಿಂದ ಮಾಡಿದ ವಿವಿಧ ಫುಡ್ ಪ್ಲೇಟಿಂಗ್ ಗಳನ್ನು ಶೇರ್ ಮಾಡಿದ್ದಾರೆ.
ನೀವು ಬಳಸೋ ಟೀ ಪುಡಿ ಕಲಬೆರಕೆ ಆಗಿದ್ಯಾ? ಹೀಗ್ ಚೆಕ್ ಮಾಡಿ
ಬಟರ್ ಕ್ಯಾಂಡಲ್ ಮಾಡೋದು ತುಂಬಾನೇ ಈಸಿ : ಈ ಮೇಣದಬತ್ತಿಯನ್ನು ಮಾಡಲು ಮೊದಲು 250 ಗ್ರಾಂ ಬೆಣ್ಣೆಯನ್ನು ಒಂದು ಗಾಜಿನ ಪಾತ್ರೆಗೆ ಹಾಕಿ. ಅದಕ್ಕೆ 4-5 ಜಜ್ಜಿದ ಬೆಳ್ಳುಳ್ಳಿ, ಅರ್ಧ ಚಮಚ ಒರಿಗಾನೋ, ಅರ್ಧ ಚಮಚ ಚಿಲ್ಲಿ ಫ್ಲೇಕ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗಾಜಿನ ಪಾತ್ರೆಯ ಮೇಲೆ ಉದ್ದವಾದ ಕೋಲನ್ನು ಇರಿಸಿ. ಮೇಣದ ಬತ್ತಿಯಲ್ಲಿ ಬಳಸುವ ಬತ್ತಿಯ ಅರ್ಧ ಭಾಗವನ್ನು ಕೋಲಿಗೆ ಹಾಕಿ. ಇನ್ನುಳಿದ ಬತ್ತಿಯ ಭಾಗವನ್ನು ಬೆಣ್ಣೆಗೆ ಹಾಕಿ. ನಂತರ ಅದನ್ನು ಅಲುಗಾಡಿಸದೇ ಡೀಪ್ ಫ್ರೀಜರ್ ನಲ್ಲಿಡಿ. ಬೆಣ್ಣೆ ಪೂರ್ತಿಯಾಗಿ ಗಟ್ಟಿಯಾದ ಮೇಲೆ ಗಾಜಿನ ಪಾತ್ರೆಯಿಂದ ಅದನ್ನು ಬೇರ್ಪಡಿಸಿ ಕೋಲನ್ನು ಕೂಡ ಬೇರ್ಪಡಿಸಿ. ನಂತರ ಬಟರ್ ಕ್ಯಾಂಡಲ್ ರುಚಿ ಸವಿಯಿರಿ.