ನೀವು ಬಳಸೋ ಟೀ ಪುಡಿ ಕಲಬೆರಕೆ ಆಗಿದ್ಯಾ? ಹೀಗ್ ಚೆಕ್ ಮಾಡಿ
ಇದು ಕಲಬೆರಕೆ ಯುಗ ಸ್ವಾಮಿ. ಇಲ್ಲಿ ಶುದ್ಧ ವಸ್ತು ಸಿಗೋದೇ ಕಷ್ಟ. ಬಾಯಿಗೆ ರುಚಿ, ಹಿತವಾದ ಅನುಭವ ನೀಡುತ್ತೆ ಅಂತಾ ಪ್ರತಿದಿನ ಸೇವನೆ ಮಾಡುವ ಟೀ ಕೂಡ ವಿಷವಾಗ್ಬಹುದು. ಟೀ ಪುಡಿ ಬಳಸುವ ಮೊದಲು ಅದ್ರ ಅಸಲಿಯತ್ತನ್ನು ತಿಳಿದ್ಕೊಳ್ಳಿ.
ಭಾರತದ ಫೈವ್ ಸ್ಟಾರ್ ಹೋಟೆಲ್ ನಿಂದ ಹಿಡಿದು ಬೀದಿ, ಬೀದಿಯಲ್ಲಿ ಟೀ ಮಾರಾಟವಾಗುತ್ತದೆ. ಚಹಾಕ್ಕೆ ಇಲ್ಲಿ ಅಷ್ಟು ಬೇಡಿಕೆಯಿದೆ. ಬೆಳಿಗ್ಗೆ ಎದ್ದ ತಕ್ಷಣ ಶುರುವಾಗುವ ಟೀ ಸೇವನೆ ರಾತ್ರಿ ಮಲಗುವವರೆಗೂ ಚಾಲ್ತಿಯಲ್ಲಿರುತ್ತದೆ. ಮೂಡ್ ಫ್ರೆಶ್ ಆಗೋಕೆ, ಉಪಹಾರದ ಜೊತೆ, ಸ್ನ್ಯಾಕ್ಸ್ ಜೊತೆ, ಸಂಬಂಧಿಕರು, ಸ್ನೇಹಿತರ ಜೊತೆ, ತಲೆ ನೋವು ಎನ್ನುವ ಕಾರಣಕ್ಕೆ ಹೀಗೆ ನಾನಾ ಕಾರಣ ಹೇಳಿ ಜನರು ಟೀ ಸವಿಯುತ್ತಾರೆ.
ಮಾರುಕಟ್ಟೆ (Market) ಯಲ್ಲಿ ನಾನಾ ಕಂಪನಿ (Company) ಯ ಟೀ (Tea ) ಪುಡಿಯನ್ನು ನೀವು ನೋಡಿರಬಹುದು. ನಿಮ್ಮ ಮನೆಯಲ್ಲೂ ಟೀ ಪುಡಿ ಇರಬಹುದು. ಈ ಚಹಾ ಪುಡಿ ಕೂಡ ಕಲಬೆರಿಕೆಯಾಗಿರಬಹುದು? ಹೌದಾ ಅಂತಾ ಪ್ರಶ್ನೆ ಮಾಡ್ಬೇಡಿ. ಎಲ್ಲ ಆಹಾರ ಪದಾರ್ಥಗಳಂತೆ ಟೀ ಪುಡಿ ಕೂಡ ಕಲಬೆರಕೆಯಾಗ್ತಿದೆ. ಈಗಿನ ದಿನಗಳಲ್ಲಿ ಅಕ್ಕಿಯಿಂದ ಹಿಡಿದು ಮೇಕಪ್ ಕಿಟ್ ವರೆಗೆ ಎಲ್ಲ ಉತ್ಪನ್ನಗಳಲ್ಲಿ ಕಲಬೆರಕೆಯನ್ನು ನಾವು ಕಾಣ್ಬಹುದು. ಹೆಚ್ಚಿನ ಹಣಗಳಿಸಲು ಕೆಲವರು ಕಲಬೆರಕೆ ಟೀ ಪುಡಿಯನ್ನು ಮಾರಾಟ ಮಾಡ್ತಿದ್ದಾರೆ. ನಾವಿಂದು ನಿಮ್ಮ ಮನೆಯಲ್ಲಿರುವ ಟೀ ಪುಡಿ ಕಲಬೆರಕೆಯೇ ಇಲ್ವೆ ಎಂಬುದನ್ನು ಹೇಗೆ ಕಂಡು ಹಿಡಿಯೋದು ಅಂತಾ ಹೇಳ್ತೆವೆ.
Health Tips: ಇದರಲ್ಲಿ ಡೈರಿ ಉತ್ಪನ್ನಗಳಿಗಿಂತ ಹೆಚ್ಚು ಕ್ಯಾಲ್ಸಿಯಂ ಇರುತ್ತೆ
ಎಫ್ ಎಸ್ ಎಸ್ ಎಐ ಹೇಳಿದ್ದೇನು? : ಟೀ ಪುಡಿ ಕಲಬೆರಿಕೆಯಾಗಿದೆಯಾ ಎಂಬುದನ್ನು ನೀವು ಮನೆ (Home) ಯಲ್ಲಿಯೇ ಪತ್ತೆ ಮಾಡ್ಬಹುದು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಸಾಮಾಜಿಕ ಜಾಲತಾಣ (Social Network) ದಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಎಫ್ ಎಸ್ ಎಸ್ ಎಐ, ತನ್ನ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಉಪಯುಕ್ತವಾಗುವ ಅನೇಕ ಮಾಹಿತಿಯನ್ನು ನೀಡುತ್ತದೆ. ನಾವು ಬಳಸುವ ಆಹಾರ ವಸ್ತುಗಳ ಶುದ್ಧತೆಯನ್ನು ಹೇಗೆ ಪರೀಕ್ಷೆ ಮಾಡೋದು ಎಂಬ ವಿಧಾನವನ್ನು ಅದು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತದೆ. ಈಗ ಟೀ ಪುಡಿ ಅಸಲಿಯತ್ತನ್ನು ಹೇಗೆ ಪತ್ತೆ ಮಾಡೋದು ಎನ್ನುವ ಬಗ್ಗೆಯೂ ಹೇಳಿದೆ.
ನಕಲಿ (Fake) ಚಹಾವನ್ನು ಹೀಗೆ ಗುರುತಿಸಿ : ಎಫ್ ಎಸ್ ಎಸ್ ಎಐ ಪ್ರಕಾರ, ನೀವು ಬಳಸುತ್ತಿರುವ ಟೀ ಪುಡಿ ಅಸಲಿಯೇ ಎಂಬುದನ್ನು ಸುಲಭವಾಗಿ ಪತ್ತೆ ಮಾಡ್ಬಹುದು. ಮೊದಲು ನೀವು ಒಂದು ಫಿಲ್ಟರ್ ಪೇಪರ್ ತೆಗೆದುಕೊಳ್ಳಬೇಕು. ಅದರ ಮೇಲೆ ಚಹಾ ಎಲೆಗಳನ್ನು ಹಾಕಬೇಕು. ಇದ್ರ ಮೇಲೆ ನೀರಿನ ಕೆಲ ಹನಿಯನ್ನು ಹಾಕಿ ಅದನ್ನು ಒದ್ದೆ ಮಾಡಿ. ನಂತ್ರ ಫಿಲ್ಟರ್ ಪೇಪರನ್ನು ನಲ್ಲಿ ನೀರಿನಲ್ಲಿ ಸ್ವಚ್ಛಗೊಳಿಸಿ. ನಂತ್ರ ಈ ಫಿಲ್ಟರ್ ಪೇಪರ್ ಗೆ ಅಂಟಿಕೊಂಡಿರುವ ಬಣ್ಣವನ್ನು ನೀವು ಪರೀಕ್ಷೆ ಮಾಡಬೇಕು. ಪೇಪರನ್ನು ಬೆಳಕಿಗೆ ಹಿಡಿದು ಪರೀಕ್ಷೆ ಮಾಡಿ. ಫಿಲ್ಟರ್ ಪೇಪರ್ ಮೇಲೆ ನಿಮಗೆ ಯಾವುದೇ ಬಣ್ಣದ ಕಲೆ ಕಂಡಿಲ್ಲವೆಂದ್ರೆ ಅದು ಅಸಲಿ ಟೀ ಪುಡಿಯಾಗಿದೆ. ಅದೇ ಫಿಲ್ಟರ್ ಪೇಪರ್ ಮೇಲೆ ಬಣ್ಣ ಕಂಡು ಬಂದ್ರೆ, ಕಪ್ಪು-ಕಂದು ಕಪ್ಪು ಕಲೆಗಳು ಕಾಣಿಸಿಕೊಂಡ್ರೆ ನಿಮ್ಮ ಬಳಿ ಇರೋದು ಕಲಬೆರಿಕೆ ಟೀ ಪುಡಿ ಎಂದರ್ಥ.
Health Tips: ಪದೇ ಪದೇ ಟೀ ಬಿಸಿ ಮಾಡಿ ಕುಡೀತೀರಾ ? ಮಲಬದ್ಧತೆ ಕಾಡುತ್ತೆ ಹುಷಾರ್!
ಪ್ರತಿ ದಿನ ನೀವು ಟೀ ಕುಡಿಯುತ್ತಿದ್ದರೆ ಮಾರುಕಟ್ಟೆಯಿಂದ ತಂದ ಟೀ ಪುಡಿಯನ್ನು ಮೊದಲು ಪರೀಕ್ಷೆ ಮಾಡಿ. ನೀವು ಬಳಸ್ತಿರುವ ಟೀ ನಕಲಿಯಾಗಿದ್ರೆ ಅದ್ರ ಬಳಕೆ ಮಾಡ್ಬೇಡಿ. ಕಲಬೆರಿಕೆ ಟೀ ಪುಡಿಯಿಂದ ತಯಾರಿಸಿದ ಟೀ ಸೇವನೆ ಮಾಡೋದು ಅಪಾಯಕಾರಿ. ಇದು ಚಹಾ ರುಚಿಯನ್ನು ಮಾತ್ರ ಹಾಳು ಮಾಡೋದಿಲ್ಲ. ಈ ಟೀ ಸೇವನೆ ಮಾಡೋದ್ರಿಂದ ನಮ್ಮ ಆರೋಗ್ಯ ಕೂಡ ಹಾಳಾಗುತ್ತದೆ ಎಂಬುದು ನೆನಪಿರಲಿ.