ಸಮೋಸಾ ತಿಂದಿದ್ದೀರಾ ಓಕೆ..ಸಮೋಸಾ ಸಾಂಬಾರ್ ಯಾವತ್ತಾದ್ರೂ ತಿಂದಿದ್ದೀರಾ ?
ಸಮೋಸಾ (Samosa)ವನ್ನು ಸಾಮಾನ್ಯವಾಗಿ ಎಲ್ರೂ ತಿಂದಿರ್ತೀವಿ. ಆದ್ರೆ ಸಮೋಸಾ ಸಾಂಬಾರ್ (Sambar) ಅಥವಾ ಕರಿಯನ್ನು ಟೇಸ್ಟ್ ಮಾಡಿದ್ದೀರಾ. ಏನು ಸಮೋಸಾ ಸಾಂಬಾರಾ ಅಂತ ಬೆಚ್ಚಿಬೀಳ್ಬೇಡಿ. ಬರ್ಮೀಸ್ ಸಮೋಸಾ ಕರಿ ಒಂದು ಪ್ರಸಿದ್ಧ ಬರ್ಮೀಸ್ ಸ್ಟ್ರೀಟ್ ಫುಡ್ ಆಗಿದ್ದು, ಈಗಾಗ್ಲೇ ಎಲ್ಲೆಡೆ ಖ್ಯಾತಿ ಪಡೆದುಕೊಂಡಿದೆ. .
ಸಮೋಸಾ (Samosa) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಸಾಲೆಯುಕ್ತ ಆಲೂಗಡ್ಡೆ (Potato) ಮತ್ತು ಸರಳವಾದ ಹಿಟ್ಟಿನಿಂದ ಮಾಡಿದ ಡೀಪ್ ಫ್ರೈಡ್ ಸ್ನ್ಯಾಕ್ ರೆಸಿಪಿ ಹಲವರ ಫೇವರಿಟ್. ತರಕಾರಿಗಳ ಮಿಶ್ರಣ ಹೊಂದಿರುವ, ಖಾರವಾದ ಈ ಸ್ನ್ಯಾಕ್ (Snacks)ನ್ನು ದಹಿ ಚಟ್ನಿ, ಇಮ್ಲಿ ಚಟ್ನಿ ಮತ್ತು ಹಸಿರು ಚಟ್ನಿಯೊಂದಿಗೆ ಸೇವಿಸಬಹುದಾಗಿದೆ. ಮಧ್ಯಕಾಲೀನ ಕಾಲದಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ಹುಟ್ಟಿಕೊಂಡ ಈ ಪ್ರಸಿದ್ಧ ತಿನಿಸು ಹಳೆಯ ಮೂಲವನ್ನೂ ಹೊಂದಿದೆ. ಸಮೋಸಾಗಳು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಪೂರ್ವ ಆಫ್ರಿಕಾ ಮತ್ತು ಇತರ ಪ್ರದೇಶಗಳ ಸ್ಥಳೀಯ ಪಾಕಪದ್ಧತಿಗಳಲ್ಲಿ ಜನಪ್ರಿಯ ಆಹಾರ. ಹಸಿವಾಗುವಾಗ ತಟ್ಟನೆ ತಿನ್ನುವ ಬೂಸ್ಟರ್ ತಿಂಡಿಗಳಾಗಿವೆ ಸಮೋಸ. ವಲಸೆ ಮತ್ತು ಸಾಂಸ್ಕೃತಿಕ ಪ್ರಸರಣದಿಂದಾಗಿ, ಇಂದು ಸಮೋಸಾಗಳನ್ನು ಪ್ರಪಂಚದ ಇತರ ಭಾಗಗಳಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಸಮೋಸಾವನ್ನು ಸಾಮಾನ್ಯವಾಗಿ ಎಲ್ರೂ ತಿಂದಿರ್ತೀವಿ. ಆದ್ರೆ ಸಮೋಸಾ ಸಾಂಬಾರ್ ಅಥವಾ ಕರಿಯನ್ನು ಟೇಸ್ಟ್ ಮಾಡಿದ್ದೀರಾ. ಏನು ಸಮೋಸಾ ಸಾಂಬಾರಾ ಅಂತ ಬೆಚ್ಚಿಬೀಳ್ಬೇಡಿ. ಬರ್ಮೀಸ್ ಸಮೋಸಾ ಕರಿ ಒಂದು ಪ್ರಸಿದ್ಧ ಬರ್ಮೀಸ್ ಸ್ಟ್ರೀಟ್ ಫುಡ್ (Street Fodo) ಆಗಿದ್ದು, ಈಗಾಗ್ಲೇ ಎಲ್ಲೆಡೆ ಖ್ಯಾತಿ ಪಡೆದುಕೊಂಡಿದೆ. ಬರ್ಮಾದ ಪ್ರಸಿದ್ಧ ಬೀದಿ ಆಹಾರವಾಗಿರುವ ಈ ಸಮೋಸಾ ಕರಿ ರುಚಿಕರವಾದ ಖಾದ್ಯವಾಗಿದ್ದು ಎಂಥವರಿಗೂ ಸುಲಭವಾಗಿ ಇಷ್ಟವಾಗುತ್ತದೆ.
ಕ್ಯಾಂಟೀನ್‌ನಲ್ಲಿ ಸಮೋಸಾ ರೇಟ್ ಜಾಸ್ತಿ ಮಾಡಿದ್ರೂಂತ ಕೆಲ್ಸಾನೇ ಬಿಟ್ಬಿಟ್ಟ..!
ಬರ್ಮೀಸ್ ಸಮೋಸಾ ಕರಿ
ಒಂದೇ ಆಹಾರವನ್ನು ವಿವಿಧ ರೀತಿಯಲ್ಲಿ ಬದಲಾವಣೆ ಮಾಡಿಕೊಂಡು ತಿನ್ನುವ ಅಭ್ಯಾಸ ಭಾರತದಲ್ಲಿ ಈಗಾಗ್ಲೇ ಚಾಲ್ತಿಯಲ್ಲಿದೆ. ಅದೇ ರೀತಿ ಪಾಶ್ಚಿಮಾತ್ಯ ದೇಶಗಳು ಸಹ ಆಹಾರದಲ್ಲಿ ಹೊಸತನ್ನು ತರಲು ಶುರುಮಾಡಿದ್ದಾರೆ. ಮಸಾಲೆಯುಕ್ತ ಮತ್ತು ಸ್ವಾದಿಷ್ಟಭರಿತ ಸಮೋಸಾವನ್ನು ಸಮೋಸಾ ಕರಿಯಾಗಿ ಬದಲಾಯಿಸಿದ್ದಾರೆ. ನಾವು ಮ್ಯಾನ್ಮಾರ್ ಮತ್ತು ಅದರ ಪ್ರಸಿದ್ಧ ಬೀದಿ ಆಹಾರದ ಬಗ್ಗೆ ಮಾತನಾಡುತ್ತಿದ್ದೇವೆ. ಇದನ್ನು ಸಮುಸಾ ಥೌಕ್ ಅಥವಾ ಬರ್ಮೀಸ್ ಸಮೋಸಾ ಕರಿ ಎಂದು ಕರೆಯುತ್ತಾರೆ.
ಭಾರತ, ಬಾಂಗ್ಲಾದೇಶ, ಚೀನಾ, ಲಾವೋಸ್ ಮತ್ತು ಥೈಲ್ಯಾಂಡ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಬರ್ಮಾ, ಈ ಎಲ್ಲಾ ದೇಶಗಳಿಂದ ಪಾಕಶಾಲೆಯ ತುಣುಕುಗಳನ್ನು ಎತ್ತಿಕೊಂಡು ಸಾಂಪ್ರದಾಯಿಕ ಬರ್ಮಾ ಪಾಕಪದ್ಧತಿಯಲ್ಲಿ ಸಮೃದ್ಧವಾಗಿದೆ. ಇದೇ ರೀತಿಯ ಶಾಖ ಸಹಿಷ್ಣುತೆಯ ಮಟ್ಟಗಳು ಮತ್ತು ಮಸಾಲೆಗಳ ಮೇಲಿನ ಪ್ರೀತಿಯನ್ನು ಹೊರತುಪಡಿಸಿ, ಬರ್ಮೀಸ್ ಪಾಕಪದ್ಧತಿಯು ನಮ್ಮೊಂದಿಗೆ ಮತ್ತೊಂದು ಹೋಲಿಕೆಯನ್ನು ಹೊಂದಿದೆ ಮತ್ತು ಅದು ಸಮೋಸಾಗಳ ಮೇಲಿನ ಪ್ರೀತಿಯಾಗಿದೆ. ಸಮೋಸಾ ಮೇಲೋಗರವು ಬರ್ಮಾದಲ್ಲಿ ಕಂಡುಬರುವ ರುಚಿಕರವಾದ ಬೀದಿ ಆಹಾರವಾಗಿದೆ.
ನೀವು ಯಾವತ್ತಾದರೂ ಈ ವಿಚಿತ್ರ ಸಮೋಸಾ ತಿಂದಿದ್ದೀರಾ... ವೈರಲ್ ಆಯ್ತು ಸಮೋಸಾ ವಿಡಿಯೋ
ಗೋಲ್ಡನ್ ಬ್ರೌನ್ ಬಿಸಿ ಸಮೋಸಾವನ್ನು ರುಚಿಕರವಾದ ಹಿಟ್ಟು ಮತ್ತು ಮೊಸರು ಆಧಾರಿತ ಮೇಲೋಗರದೊಂದಿಗೆ ಸಂಯೋಜಿಸಿರಲಾಗಿರುತ್ತದೆ. ನಂತರ ಇದಕ್ಕೆ ಇದನ್ನು ವಿವಿಧ ಕಾಳುಗಳು, ಎಲೆಕೋಸುಗಳು, ಕ್ಯಾರೆಟ್‌ಗಳು ಮತ್ತು ಇತರ ತರಕಾರಿಗಳನ್ನು ಸೇರಿಸಿ ಸಮೋಸಾ ಕರಿಯನ್ನು ಸಿದ್ಧಪಡಿಸಲಾಗುತ್ತದೆ.
ಬರ್ಮೀಸ್ ಸಮೋಸಾ ಕರಿ ಮಾಡುವುದು ಹೇಗೆ ?
ಬರ್ಮೀಸ್ ಸಮೋಸಾ ಕರಿ ರೆಸಿಪಿಯು ಮಧ್ಯಮ ಗಾತ್ರದ ಸಮೋಸಾವನ್ನು ಬಳಸಿ ಮಾಡುವ ಪಾಕ ವಿಧಾನವಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಮೊದಲಿಗೆ ಸಮೋಸಾವನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ನಂತರ ಅವುಗಳನ್ನು ಪಕ್ಕಕ್ಕೆ ಇರಿಸಿ ಮೇಲೋಗರ ತಯಾರಿಸಿಕೊಳ್ಳಬೇಕು. ಮೊಸರು, ಬೇಸನ್, ತೆಂಗಿನ ಹಾಲು ಸೇರಿಸಿಕೊಳ್ಳಬೇಕು.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಪುಡಿ ಮಾಡಿದ ಮಸಾಲೆ ಸೇರಿಸಿ ಮತ್ತು ಸ್ವಲ್ಪ ಸಮಯ ಬೇಯಲು ಬಿಡಿ. ಇನ್ನೊಂದು ಬಟ್ಟಲಿನಲ್ಲಿ ಬೇಸನ್ ಮತ್ತು ಮೊಸರು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಯಾವುದೇ ಉಂಡೆಗಳನ್ನೂ ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಈ ಮಿಶ್ರಣವನ್ನು ಪ್ಯಾನ್‌ಗೆ ಸೇರಿಸಿ ಮತ್ತು ಎಲ್ಲವೂ ನಯವಾದ ಮತ್ತು ಮೇಲೋಗರಕ್ಕೆ ಮಿಶ್ರಣವಾಗುವವರೆಗೆ ಬೆರೆಸಿ. ನೀರು ಮತ್ತು ಉಪ್ಪನ್ನು ಸೇರಿಸಿ ಮತ್ತು ನಿಮ್ಮ ಸೂಪ್‌ಗಳನ್ನು ನೀವು ಇಷ್ಟಪಡುವಷ್ಟು ನೀರಿರುವಂತೆ ಮಾಡಿ. ಇಷ್ಟವಾದ ಬೇಯಿಸಿದ ತರಕಾರಿ, ಕಾಳುಗಳನ್ನು ಇದಕ್ಕೆ ಸೇರಿಸಬಹುದು. ಈ ಬಿಸಿ ಸೂಪ್‌ನ್ನು ಬಟ್ಟಲಿಗೆ ಸುರಿಯಿರಿ, ಸಮೋಸಾ ಸೇರಿಸಿ, ಚೂರುಚೂರು ಕ್ಯಾರೆಟ್, ಎಲೆಕೋಸು ಮತ್ತು ತಾಜಾ ಕೊತ್ತಂಬರಿ ಮತ್ತು ತುಳಸಿ ಎಲೆಗಳಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸರ್ವ್ ಮಾಡಿದರೆ ಚೆನ್ನಾಗಿರುತ್ತದೆ.