ನೀವು ಯಾವತ್ತಾದರೂ ಈ ವಿಚಿತ್ರ ಸಮೋಸಾ ತಿಂದಿದ್ದೀರಾ... ವೈರಲ್ ಆಯ್ತು ಸಮೋಸಾ ವಿಡಿಯೋ
- ರಸ್ತೆ ಬದಿ ಗುಲಾಬ್ ಜಾಮೂನ್ ಸಮೋಸಾ ತಿಂದ ಬ್ಲಾಗರ್
- ಫುಡ್ ಬ್ಲಾಗರ್‌ನ ಭಯಂಕರ ರಿಯಾಕ್ಷನ್
- ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಯ್ತು ವಿಡಿಯೋ
ನವದೆಹಲಿ(ಡಿ. 28): ನೀವು ಯಾವತ್ತಾದರೂ ಜಾಮೂನ್ ಇರುವ ಸಮೋಸಾ ನೋಡಿದ್ದೀರಾ ಅಥವಾ ತಿಂದಿದ್ದೀರಾ? ಇಲ್ಲ ಎಂದಾದರೆ ನಾವಿಲ್ಲಿ ನಿಮಗೆ ಒಳಗಡೆ ಜಾಮೂನು ತುಂಬಿರುವ ಸಮೋಸಾ ತೋರಿಸುತ್ತಿದ್ದೇವೆ. ರಸ್ತೆಬದಿಯ ಫುಡ್‌ಸ್ಟಾಲ್‌ನಲ್ಲಿ ಇದನ್ನು ತಯಾರಿಸಲಾಗಿದ್ದು, ಈ ಜಾಮೂನ್ ಸಮೋಸಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫುಡ್ ಬ್ಲಾಗರ್ ಒಬ್ಬರು ಈ ಜಾಮೂನ್ ಹೊಂದಿರುವ ಸಮೋಸಾದ ರುಚಿ ನೋಡಿದ್ದು ಸಮೋಸಾ ತಿಂದ ಬಳಿಕ ಅವರ ಪ್ರತಿಕ್ರಿಯೆಯ ವಿಡಿಯೋ ಈಗ ನೆಟ್ಟಿಗರನ್ನು ಸೆಳೆಯುತ್ತಿದೆ. ರಸ್ತೆ ಬದಿ ಫುಡ್ ಸ್ಟಾಲ್‌ನಲ್ಲಿ ಜಾಮೂನ್ ಸಮೋಸಾ ತಿಂದ ಅವರು ಚೆನ್ನಾಗಿಲ್ಲ ಎಂಬಂತೆ ಮುಖವನ್ನು ಕಿವುಚುವ ದೃಶ್ಯ ವಿಡಿಯೋದಲ್ಲಿದೆ.
ಇತ್ತೀಚಿನ ದಿನಗಳಲ್ಲಿ, ಗ್ರಾಹಕರನ್ನು ತಮ್ಮತ್ತ ಸೆಳೆಯಲು ಆಹಾರ ತಯಾರಕರು, ಫುಡ್ ಸ್ಟಾಲ್ ಇಟ್ಟ ಜನ ಹಲವಾರು ಟ್ರಿಕ್ಸ್‌ಗಳನ್ನು ಬಳಸುತ್ತಾರೆ. ನೀವು ಆಹಾರ ಪ್ರಿಯರಾಗಿದ್ದಲ್ಲಿ ಹಾಗೂ ಇಂಟರ್‌ನೆಟ್‌ನಲ್ಲಿ ಹೊಸ ಹೊಸ ಆಹಾರದ ಬಗ್ಗೆ ತಿಳಿಯುವವರಾಗಿದ್ದಲ್ಲಿ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ರೆಸ್ಟೋರೆಂಟ್‌ಗಳು ಮತ್ತು ರಸ್ತೆ ಬದಿಯ ವಿಧ ವಿಧ ತಿನಿಸುಗಳ ವಿಡಿಯೋಗಳನ್ನು ತಯಾರಿಸುವ ಹಾಗೂ ಗ್ರಾಹಕರು ತಿನ್ನುತ್ತಿರುವ ವಿಡಿಯೋಗಳು ಅಲ್ಲಿ ಬರುವುದನ್ನು ನೋಡಿರುತ್ತೀರಿ. ಇವುಗಳಲ್ಲಿ ಕೆಲವು ಆಹಾರಗಳು ಗ್ರಾಹಕರಿಗೂ ಪ್ರಿಯವಾಗಿ ಸೂಪರ್ ಹಿಟ್ ಆಗಿದ್ದರೆ ಮತ್ತೂ ಕೆಲವು ಆಹಾರಗಳು ನೋಡಲು ಮಾತ್ರ ಸುಂದರವಾಗಿದ್ದು, ಕೇವಲ ವಿಡಿಯೋಗೆ ಸೀಮಿತವಾಗಿದೆ.
ದೆಹಲಿ( delhi)ಯ ರಸ್ತೆ ಬದಿಯ ಉಪಾಹಾರ ಗೃಹವು ಈ ವಿಚಿತ್ರ ಗುಲಾಬ್ ಜಾಮೂನ್ ಸಮೋಸಾವನ್ನು ಮಾರಾಟ ಮಾಡುತ್ತಿದೆ ಮತ್ತು ಈ ನವೀನ ಖಾದ್ಯದ ರುಚಿ ನೋಡಲು ಫುಡ್ ಬ್ಲಾಗರ್ ಒಬ್ಬರು ಅಲ್ಲಿಗೆ ತೆರಳಿದ್ದರು. ಈ ಫುಡ್ ಬ್ಲಾಗರ್ ಅನ್ನುಅಭಿಷೇಕ್( Abhishek) ಎಂದು ಗುರುತಿಸಲಾಗಿದೆ. ಅಲ್ಲಿ ಅವರು ಮೊದಲ ಬಾರಿಗೆ ಗುಲಾಬ್ ಜಾಮೂನ್ ಸಮೋಸಾ ತಿಂದಿದ್ದಾರೆ. ಆದರೆ ಅದರ ರುಚಿ ಅವರಿಗೆ ಹಿಡಿಸಿಲ್ಲ ಎಂಬುದು ವಿಡಿಯೋ ನೋಡಿದವರಿಗೆ ಮನವರಿಕೆ ಆಗುತ್ತದೆ.
Eatable Tea Cups: ಚಹಾ ಕುಡಿದು ಕಪ್ ತಿನ್ನಿ..! ಗಮನ ಸೆಳೆಯುತ್ತಿದೆ ಟೀ ಸ್ಟಾಲ್
ಕಳೆದ ವಾರ ಅಪ್‌ಲೋಡ್ ಮಾಡಿದ ಈ ವೀಡಿಯೊವನ್ನು 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನೀವು ಎಂದಾದರೂ ಗುಲಾಬ್ ಜಾಮೂನ್ ಸಮೋಸವನ್ನು ಪ್ರಯತ್ನಿಸಿದ್ದೀರಾ? ಎಂದು ಈ ವೀಡಿಯೊಗೆ ಶೀರ್ಷಿಕೆ ಕೊಡಲಾಗಿದೆ. ಈ ವಿಡಿಯೋ ನೋಡಿದ ವೀಕ್ಷಕರೊಬ್ಬರು ಎಂದಿಗೂ ಇದನ್ನು ತಿನ್ನಲು ಬಯಸುವುದಿಲ್ಲ. ಸಮೋಸಾ ತಿಂದ ವ್ಯಕ್ತಿಯ ಮುಖ ನೋಡಿದರೆಯೇ ತಿಳಿಯುತ್ತದೆ ಸಮೋಸಾ ಹೇಗಿದೆ ಎಂದು, ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.
Chopsticks: ಹೇಗೆ ಬಳಸುವುದು ಎಂದು ಹೆಂಡತಿಗೆ ಹೇಳಿಕೊಟ್ಟ ಗಂಡ
ಇತ್ತೀಚೆಗೆ ಟೀ ಕುಡಿದು ಟೀ ಕೊಟ್ಟ ಕಪ್ ಅನ್ನು ತಿನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಶ್ಚರ್ಯವಾದ್ರೂ ಇದು ಸತ್ಯ. ಮಧ್ಯಪ್ರದೇಶದ (Madhya Pradesh )ಶಾಹದೋಲ್ ಜಿಲ್ಲೆಯಲ್ಲಿ ಇಂತಹದೊಂದು ಅಂಗಡಿ(Store) ಇದೆ. ಜನರು ಇಲ್ಲಿ ಟೀ ಸವಿಯುವುದಲ್ಲದೆ ಕಪ್ ತಿನ್ನುತ್ತಾರೆ. ಶಾಹದೋಲ್ ಜಿಲ್ಲಾಸ್ಪತ್ರೆಯ ಬಳಿ ಇಬ್ಬರು ಯುವಕರು ಟೀ ಸ್ಟಾಲ್ (Tea Stall )ನಡೆಸುತ್ತಿದ್ದಾರೆ. ಈ ಅಂಗಡಿಯ ಹೆಸರು 'ಚಾಯ್ ಪಿಯೋ, ಕಪ್ ಖಾ ಜಾವೋ'. ರಿಂಕು ಅರೋರಾ (Rinku Arora) ಮತ್ತು ಪಿಯೂಶ್ ಕುಶ್ವಾಹ (Piyush Kushwaha )ಈ ಟೀ ಅಂಗಡಿ ನಡೆಸುತ್ತಿದ್ದಾರೆ. ಹೊಸ ಪರಿಕಲ್ಪನೆಯಿಂದ ಶುರುವಾದ ಸ್ಟಾರ್ಟ್ಅಪ್ (Startup )ಈಗ ಗ್ರಾಹಕ (Customer )ರ ಗಮನ ಸೆಳೆಯುತ್ತಿದೆ.