Bowl Method: ಸುಲಭವಾಗಿ ತೂಕ ಇಳಿಸ್ಕೋಳೋಕೆ ಸೂಪರ್ ಐಡಿಯಾ

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight) ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ (Exercise), ಡಯೆಟ್(Diet), ಯೋಗ (Yoga) ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ನಿಮ್ಗೂ ಇದೇ ಸಮಸ್ಯೆನಾ > ಹಾಗಿದ್ರೆ ನೀವ್ಯಾಕೆ ಆಹಾರ ಸೇವಿಸುವಾಗ ಬೌಲ್ ಮೆಥಡ್ (Bowl Method) ಟ್ರೈ ಮಾಡ್ಬಾರ್ದು. 

Bowl Method, Have You Tried This Weight Loss Technique Yet Vin

ಕೆಟ್ಟದಾದ ಜೀವನಶೈಲಿ (Lifestyle), ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ, ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಯೆಂದರೆ ತೂಕ ಹೆಚ್ಚಳ (Weight Gain) ಮತ್ತು ಸ್ಥೂಲಕಾಯ (Obestity). ಹೆಚ್ಚುತ್ತಿರುವ ಬೊಜ್ಜಿನ ಬಗ್ಗೆ ಜನರು ಹೆಚ್ಚು ದೂರುತ್ತಾರೆ. ಅದೇ ಸಮಯದಲ್ಲಿ, ಸ್ಥೂಲಕಾಯದ ಹೆಚ್ಚಳದಿಂದ, ಅನೇಕ ಗಂಭೀರ ರೋಗಗಳು ಕಾಡಬಹುದು. ಜನರು ತಮ್ಮ ಬೆಳೆಯುತ್ತಿರುವ ಹೊಟ್ಟೆ (Belly) ಮತ್ತು ಕೊಬ್ಬನ್ನು ಕಡಿಮೆ ಮಾಡಲು ಏನೇನೋ ಕಸರತ್ತು ಮಾಡ್ತಾರೆ. ವರ್ಕೌಟ್‌, ಯೋಗ, ಡಯೆಟ್‌ ಮೊದಲಾದವುಗಳ ಮೊರೆ ಹೋಗ್ತಾರೆ. ಆದ್ರೆ ಏನು ಮಾಡಿದ್ರೂ ತೂಕ ಮಾತ್ರ ಕಡಿಮೆಯಾಗಲ್ಲ. ಹೀಗಾಗಿ ಹಲವರು ತೂಕ ಇಳಿಸಿಕೊಳ್ಳೋಕೆ ಹೊಸ ಹೊಸ ಟೆಕ್ನಿಕ್ ಹುಡುಕ್ತಾನೇ ಇರ್ತಾರೆ. ನಿಮ್ಗೂ  ಅಧಿಕ ತೂಕದ ಸಮಸ್ಯೆ ಕಾಡ್ತಿದ್ಯಾ ? ಹಾಗಿದ್ರೆ ಈಝಿ ಸೊಲ್ಯೂಷನ್ ನಾವ್ ಹೇಳ್ತಿವಿ. 

ತೂಕ ನಷ್ಟಕ್ಕೆ ಬೌಲ್ ವಿಧಾನವನ್ನು ಬಳಸಿ 
ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಆ ಹೆಚ್ಚುವರಿ ಕಿಲೋಗಳನ್ನು ಕಡಿಮೆ ಮಾಡಲು ಆಹಾರ ಪದ್ಧತಿಯನ್ನು ಸರಿ ಮಾಡಿಕೊಳ್ಳಬಹುದು. ಅದರಲ್ಲೂ ಆಹಾರದ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳುವುದು ಮತ್ತೊಂದು ನಿರ್ಣಾಯಕ ಹಂತವಾಗಿದೆ. ಕೆಲವೊಮ್ಮೆ ಜನರು ನಿರ್ದಿಷ್ಟ ಆಹಾರಕ್ಕಾಗಿ ತೀವ್ರವಾದ, ಅನಿಯಂತ್ರಿತ ಕಡುಬಯಕೆಗಳನ್ನು ಅನುಭವಿಸುತ್ತಾರೆ. ನಿಮಗೂ ಹೀಗಾಗುತ್ತಿದ್ದರೆ ಬೌಲ್ ವಿಧಾನ (Bowl Method)ವನ್ನು ಅನುಸರಿಸಬಹುದು.

ಕಾಫಿ ಜೊತೆ ಈ ಪೇಸ್ಟ್ ಸೇರಿದ್ರೆ ಫಟಾಫಟ್ ಆಗಿ ತೂಕ ಇಳಿಯುತ್ತೆ

ತೂಕ ನಷ್ಟಕ್ಕೆ ಬೌಲ್ ವಿಧಾನ ಅನುಸರಿಸುವುದರಿಂದ, ನೀವು ಆಹಾರದ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಬೌಲ್ ವಿಧಾನ  ಎಂದರೇನು ಮತ್ತು ಅದನ್ನು ಹೇಗೆ ಅಭ್ಯಾಸ ಮಾಡಬೇಕು ಎಂಬುದನ್ನು ಮುಂಬೈನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಡಯೆಟಿಷಿಯನ್ ಡಾ ಜಿನಾಲ್ ಪಟೇಲ್ ವಿವರಿಸಿದ್ದಾರೆ.

ಬೌಲ್ ವಿಧಾನ ಎಂದರೇನು ?
ದೈಹಿಕ ಚಟುವಟಿಕೆಯ ಜೊತೆಗೆ, ಸಮತೋಲಿತ ಆಹಾರವನ್ನು ಸೇವಿಸುವುದರಿಂದ ತೂಕವನ್ನು ಇಳಿಸಿಕೊಂಡು ಆರೋಗ್ಯಕರವಾಗಿ ಇರಬಹುದು. ಇದಕ್ಕಾಗಿ, ನೀವು ಆಹಾರದ ಗುಣಮಟ್ಟ ಮತ್ತು ಪ್ರಮಾಣಕ್ಕೆ ಗಮನ ಕೊಡಬೇಕು. ಮತ್ತು ಬೌಲ್ ವಿಧಾನದಿಂದ ನೀವು ಇದನ್ನು ಸಾಧಿಸಬಹುದು. ಬೌಲ್ ವಿಧಾನ ಎಂದರೆ ನೀವು ಅತಿಯಾಗಿ ತಿನ್ನುವುದನ್ನು ತಡೆಯಲು ಆಹಾರದ ಭಾಗಗಳನ್ನು ಅಳೆಯಲು ಸಣ್ಣ ಬೌಲ್ ಅನ್ನು ಆರಿಸುವುದಾಗಿದೆ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಎಂದು ಡಾ ಪಟೇಲ್ ಹೇಳುತ್ತಾರೆ. 

ಬೌಲ್ ವಿಧಾನವನ್ನು ಅನುಸರಿಸುವುದು ಹೇಗೆ ?

1. ಮಿತವಾಗಿ ಆಹಾರ ಸೇವಿಸಿ: ಬೌಲ್ ವಿಧಾನವನ್ನು ಅನುಸರಿಸಲು, ನೀವು ಪ್ರತಿದಿನ ನಿಮ್ಮ ಆಹಾರಕ್ಕಾಗಿ ಒಂದೇ ಗಾತ್ರದ 3 ಸಣ್ಣ ಬಟ್ಟಲುಗಳನ್ನು ಬಳಸಬೇಕಾಗುತ್ತದೆ. ಈಗ, ಈ ಮೂರು ಬಟ್ಟಲುಗಳನ್ನು ನೀವು ದಿನದಲ್ಲಿ ತಿನ್ನುವ ಆಹಾರಗಳೊಂದಿಗೆ (ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ) ಹಾಕಿಕೊಂಡು ಸೇವಿಸಿ. ಪ್ರತಿ ಬೌಲ್‌ಗೆ ನಿಮ್ಮ ಆದ್ಯತೆಯ ಊಟವನ್ನು ನೀವು ಸೇರಿಸಬಹುದು. ಆದರೆ ಬೌಲ್‌ನಲ್ಲಿ ಹಿಡಿಸುವಷ್ಟು ಆಹಾರವನ್ನು ಮಾತ್ರ ಸೇವಿಸಿ. ಟೇಸ್ಟೀಯಾಗಿದೆ ಅನ್ನೋ ಕಾರಣಕ್ಕೆ ಆಹಾರವನ್ನು ಮತ್ತೊಮ್ಮೆ ತೆಗೆದುಕೊಳ್ಳದಿರಿ.

ಹೆಚ್ಚಿಗೆ ತಿನ್ನೋಲ್ಲ, ಯೋಗ ಬಿಡೋಲ್ಲ, ಆದರೂ ತೂಕ ಹೆಚ್ಚುತ್ತಿದ್ಯಾ?

2. ಬೇರೆ ಏನನ್ನೂ ತಿನ್ನಬೇಡಿ: ತೂಕವನ್ನು ಕಳೆದುಕೊಳ್ಳಲು ನೀವು ಬೌಲ್ ವಿಧಾನವನ್ನು ಅನುಸರಿಸುತ್ತಿದ್ದರೆ ಒಂದು ವಿಷಯವನ್ನು ನೆನಪಿನಲ್ಲಿಡಿ, ಈ ಮೂರು ಬೌಲ್ ಆಹಾರವಲ್ಲದೆ ದಿನದಲ್ಲಿ ಮತ್ತೇನನ್ನೂ ತಿನ್ನದಿರಿ. ಹಾಗೆ ಮಾಡುವುದರಿಂದ ನಿಮ್ಮ ತೂಕವನ್ನು ಕಳೆದುಕೊಳ್ಳುವ ಪ್ರಯತ್ನಗಳಿಗೆ ಅಡ್ಡಿಯಾಗಬಹುದು.

3. ಕ್ಯಾಲೋರಿಗಳು ಅಧಿಕವಾಗಿದ್ದರೆ ಊಟದ ಗಾತ್ರ ಕಡಿಮೆ ಮಾಡಿ: ಆಹಾರದಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಹೆಚ್ಚಿದ್ದರೆ, ಕೇವಲ ಎರಡು ಸಣ್ಣ ಬಟ್ಟಲುಗಳನ್ನು ಮಾತ್ರ ತಿನ್ನಿರಿ. ದಿನನಿತ್ಯದ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಈ ಬೌಲ್ ವಿಧಾನವನ್ನು ಬಳಸಬಹುದು. ನಿಮ್ಮ ತೂಕದಲ್ಲಿ ನೀವು ನಿಸ್ಸಂದೇಹವಾಗಿ ವ್ಯತ್ಯಾಸವನ್ನು ನೋಡುತ್ತೀರಿ. 

Latest Videos
Follow Us:
Download App:
  • android
  • ios