Kitchen Tips: ಅಡುಗೆ ಮನೆಯಲ್ಲಿ ಇವೆಲ್ಲಾ ಇದ್ರೆ ಕುಕ್ಕಿಂಗ್ ಸೂಪರ್ ಈಝಿ
ಕಿಚನ್ (Kitchen)ಗೆ ಹೋಗೋಕೆ ಬೇಜಾರಾ ? ಅಡುಗೆ (Cooking) ಕೆಲ್ಸ ಏನ್ ಕಷ್ಟಾನಪ್ಪ ಅಂತ ಅನಿಸಿದ್ಯಾ. ಚಿಂತೆ ಬಿಟ್ಸಿಡಿ ಕಿಚನ್‌ನಲ್ಲಿ ಕೆಲವೊಂದಿಷ್ಟು ಟೂಲ್ಸ್ (Tools) ತಂದಿಟ್ಕೊಳ್ಳಿ. ಮತ್ತೆ ಅಡುಗೆ ಕೆಲ್ಸ ಸೂಪರ್ ಈಝಿ.
ಲಾಕ್‌ಡೌನ್ (Lockdown) ನಮ್ಮಲ್ಲಿ ಬಹಳಷ್ಟು ಮಂದಿ ಅಡುಗೆಮನೆಯಲ್ಲಿ ಸಮಯ ಕಳೆಯುವಂತೆ ಮಾಡಿದೆ. ಎಂದಿಗೂ ಅಡುಗೆಮನೆ (Kitchen)ಗೆ ಕಾಲಿಡದ ಜನರು ಸಹ, ಯೂಟ್ಯೂಬ್‌ನಲ್ಲಿ ಕಂಡುಬರುವ ವಿಭಿನ್ನ ಪಾಕವಿಧಾನಗಳನ್ನು ಟ್ರೈ ಮಾಡಲು ಅಡುಗೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಅಡುಗೆ ಮಾಡುವುದು ನಿಮಗಿಷ್ಟವಾದ ಕೆಲಸವಾಗಿದ್ದರೆ, ನಿಮ್ಮ ಕಿಚನ್ ಕೆಲ್ಸವನ್ನು ಸುಲಭ ಮಾಡಬಹುದಾದ, ಸರಳವಾಗಿಸಬಹುದಾದ ಕೆಲವೊಂದು ಉಪಕರಣಗಳು ಇಲ್ಲಿವೆ. ಈ ಅಡುಗೆ ಉಪಕರಣಗಳು ಸುಲಭವಾಗಿ ಅಡುಗೆ (Cooking) ಮಾಡಲು ಮತ್ತು ನಿಮ್ಮ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.
ಹೋಲ್ಡರ್ ಸ್ಲೈಸರ್
ಅಡುಗೆಮನೆಯಲ್ಲಿ ಹೋಲ್ಡರ್ ಸ್ಲೈಸರ್ ಹೆಚ್ಚು ಉಪಕಾರಿಯಾಗುವ ಉಪಕರಣವಾಗಿದೆ. ಸಾಮಾನ್ಯವಾಗಿ ತರಕಾರಿ (Vegetable)ಗಳನ್ನು ಕೈಯಲ್ಲಿ ಹಿಡಿದು ಕಟ್ ಮಾಡಿದರೆ ತುಂಬಾ ಹೊತ್ತಿನ ತನಕ ಆ ಸ್ಮೆಲ್ ಕೈಯಲ್ಲಿ ಹಾಗೆಯೇ ಇರುತ್ತದೆ. ಹೀಗಿದ್ದಾಗ ಹೋಲ್ಡರ್ ಸ್ಲೈಸರ್ ಬಳಸಿ ತರಕಾರಿ ಹಿಡಿದಿಟ್ಟುಕೊಂಡು ಕಟ್ ಮಾಡಬಹುದು. ಈ ಹೋಲ್ಡರ್ ವಿಶಿಷ್ಟವಾದ ಸ್ಟೇನ್‌ಲೆಸ್ ಸ್ಟೀಲ್ ಪ್ರಾಂಗ್‌ಗಳನ್ನು ಹೊಂದಿದ್ದು ಅದು ಹೋಳು ಮಾಡಿದ ತರಕಾರಿಗಳನ್ನು ಹ್ಯಾಂಡ್ಸ್-ಫ್ರೀ ಹಿಡಿದಿಡಲು ನಿಮಗೆ ಅನುವು ಮಾಡಿಕೊಡುತ್ತದೆ.
Kitchen Hacks: ಅಡುಗೆ ಮಾಡುವಾಗ ಸೀದು ಹೋಗುತ್ತೆ ಅನ್ನೋ ಭಯಾನ ? ಹೀಗೆ ಮಾಡಿ
ಪೀಲರ್ ಮತ್ತು ತುರಿಯುವ ಮಣೆ
ಪೀಲರ್ ಮತ್ತು ತುರಿಯುವ ಮಣೆ, ವಿವಿಧೋದ್ದೇಶ ಕಿಚನ್ ಉಪಕರಣವಾಗಿದೆ. ಇದು ಅಡುಗೆಮನೆಯ ಕೆಲಸವನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ. ಪೀಲರ್ ಸಹಾಯದಿಂದ ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್, ಮೂಲಂಗಿ ಹೀಗೆ ಹಲವು ತರಕಾರಿಗಳ ಸಿಪ್ಪೆಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ.
ಮಿನ್ಸರ್ ಮತ್ತು ಡಫ್ ಕಟ್ಟರ್
ಈ ಅಡುಗೆ ಉಪಕರಣವು ನಿಮ್ಮ ಸಿಹಿತಿಂಡಿಗಳು, ಕಬಾಬ್‌ಗಳಿಗೆ ಪರಿಪೂರ್ಣ ವಿನ್ಯಾಸವನ್ನು ನೀಡುತ್ತದೆ. ಇದು ಹಣ್ಣುಗಳು (Fruits) ಮತ್ತು ಮೃದುವಾದ ತರಕಾರಿಗಳು ಅಥವಾ ಬೀಜಗಳನ್ನು ತೆಗೆಯಲು ಸಹಾಯ ಮಾಡುತ್ತದೆ, ಮಗುವಿನ ಆಹಾರವನ್ನು ಮ್ಯಾಶ್ ಅಪ್ ಮಾಡಿ, ಮಫಿನ್ ಟಾಪಿಂಗ್ ಮಾಡಲು ಒಳ್ಳೆಯದು.
ಕ್ರಷರ್ ಪ್ರೆಸ್ಸರ್
ಕೆಲವೇ ಸೆಕೆಂಡುಗಳಲ್ಲಿ ಬೆಳ್ಳುಳ್ಳಿ, ಲವಂಗ, ಶುಂಠಿ ಮೊದಲಾದವುಗಳನ್ನು ಕಟ್ ಮಾಡಲು ಈ ಅಡುಗೆ ಸಾಧನವನ್ನು ಬಳಸಬಹುದು. ಈ ಕ್ರಷರ್ ಪ್ರೆಸ್ಸರ್ ಉತ್ತಮ ಗುಣಮಟ್ಟದ, ಆಹಾರ ದರ್ಜೆಯ 304 ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದೆ ಆದ್ದರಿಂದ ನೀವು ತುಕ್ಕು ಹಿಡಿಯುವ ಬಗ್ಗೆ ಚಿಂತಿಸಬೇಕಾಗಿಲ್ಲ.
Kitchen Hacks: ಅಡುಗೆಗೆ ಖಾರ ಜಾಸ್ತಿ ಆಯ್ತಾ ? ಹೀಗೆ ಮಾಡಿ ಸರಿಯಾಗುತ್ತೆ
ತರಕಾರಿ ಚಾಪರ್
ತರಕಾರಿ ಕಟ್ ಮಾಡುವುದು ನಿಮಗೆ ಬೇಜಾರಿನ ಕೆಲಸವಾಗಿದ್ದರೆ ತರಕಾರಿ ಚಾಪರ್ ಟ್ರೈ ಮಾಡಬಹುದು. ಇದು ಕೆಲವು ಸೆಕೆಂಡುಗಳಲ್ಲಿ ತರಕಾರಿಗಳನ್ನು ನೀಟಾಗಿ ಕತ್ತರಿಸಿ ಕೊಡುತ್ತದೆ. ಚಾಪರ್ ಎರಡು ವಿಭಿನ್ನ ಗಾತ್ರದ ಚಾಪರ್ ಬ್ಲೇಡ್‌ಗಳು ಮತ್ತು ಎರಡು ಸ್ಪೈರಲೈಸರ್ ಇನ್‌ಸರ್ಟ್‌ಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ನಿಮಗೆ ಬೇಕಾದ ಗಾತ್ರದಲ್ಲಿ, ರೀತಿಯಲ್ಲಿ ತರಕಾರಿ ಕಟ್ ಮಾಡಬಹುದು. ಇದರಿಂದ ನೀವು ನಿಮ್ಮ ಅಡುಗೆ ಪ್ರಕ್ರಿಯೆಯನ್ನು ಸುಲಭ ಮತ್ತು ವೇಗವಾಗಿ ಮಾಡಬಹುದು.
ಹ್ಯಾಂಡ್ ಬ್ಲೆಂಡರ್
ಈ ಬಹುಪಯೋಗಿ ಹ್ಯಾಂಡ್ ಬ್ಲೆಂಡರ್ ಯಾವುದೇ ಪಾಕವನ್ನು ಮಿಕ್ಸ್ ಮಾಡಲು ಬಳಸಿಕೊಳ್ಳಬಹುದು. ಮೊಟ್ಟೆಯನ್ನು ಒಡೆದು ಮಿಕ್ಸ್ ಮಾಡಿಕೊಳ್ಳಲು ಅಥವಾ ರುಚಿಕರವಾದ ಕಪ್ ಮಿಲ್ಕ್‌ಶೇಕ್ ಮಾಡಲು ಸಹ ಈ ಹ್ಯಾಂಡ್ ಬ್ಲೆಂಡರ್ ಬಳಸಬಹುದು. ಇದನ್ನು ಬಳಸಿ ಮನೆಯಲ್ಲಿಯೇ ಕೆಫೆ ಶೈಲಿಯ ಕಾಫಿ ಮಾಡಬಹುದು.
ಸಿಲಿಕೋನ್ ಕೈಗವಸುಗಳು
ತರಕಾರಿ, ಮಾಂಸವನ್ನು ಕೈಯಲ್ಲಿ ತೊಳೆಯಲು ನೀವು ಇಷ್ಟಪಡುವುದಿಲ್ಲವಾಗಿದ್ದರೆ ಸಿಲಿಕೋನ್ ಕೈಗವಸುಗಳನ್ನು ಬಳಸಿಕೊಳ್ಳಬಹುದು. ಇವುಗಳನ್ನು ಸುಲಭವಾಗಿ ಕೈಗೆ ಹಾಕಬಹುದು. ಮತ್ತು ಇದನ್ನು ಹಾಕುವುದರಿಂದ ಕೈಗೆ ಯಾವುದೇ ರೀತಿಯಲ್ಲಿ ಎಣ್ಣೆ, ಜಿಡ್ಡಿನಂಶ ತಗಲುವುದಿಲ್ಲ. ಇನ್ಯಾಕೆ ತಡ, ನಿಮ್ಮ ಮನೆಯಲ್ಲಿ ಈ ಅಡುಗೆ ಉಪಕರಣಗಳಿಲ್ಲವಾಗಿದ್ದರೆ ತಕ್ಷಣ ಖರೀದಿಸಿ. ಇದ್ರಿಂದ ಅಡುಗೆ ಮನೆ ಕೆಲ್ಸ ಈಝಿಯಾಗೋದ್ರಲ್ಲಿ ಡೌಟೇ ಇಲ್ಲ.