ಅರ್ಧ ಗಂಟೇಲಿ 13 ರಾಗಿ ಮುದ್ದೆ ಉಂಡ ಬೆಂಗಳೂರು ಗಂಡು: ಒಂದೇ ಊಟಕ್ಕೆ ಟಗರು ಗೆದ್ದುಕೊಂಡು ಬಂದ
ಸರ್ಜಾಪುರದಲ್ಲಿ ಆಯೋಜಿಸಿದ್ದ ನಾಟಿ ಕೋಳಿ ಸಾರು, ರಾಗಿ ಮುದ್ದೆ ಊಟದ ಸ್ಪರ್ಧೆ ಬೆಂಗಳೂರಿನ ಹರೀಶ್ 13 ರಾಗಿ ಮುದ್ದೆಗಳನ್ನು ತಿಂದು ವಿಜೇತನಾಗಿದ್ದಾನೆ.
ವರದಿ : ಟಿ.ಮಂಜುನಾಥ್ ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಆನೇಕಲ್ (ಜು.09): ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಆಯೋಜಿಸಿದ್ದ ನಾಟಿ ಕೋಳಿ ಸಾರು, ರಾಗಿ ಮುದ್ದೆ ಊಟದ ಸ್ಪರ್ಧೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಹರೀಶ್ ಅರ್ಧ ಗಂಟೆಯಲ್ಲಿ 13 ರಾಗಿ ಮುದ್ದೆಗಳನ್ನು ತಿಂದು, ಒಂದು ಟಗರು ಗೆದ್ದುಕೊಂಡು ಬಂದಿದ್ದಾನೆ.
ಇತ್ತೀಚೆಗೆ ನಮ್ಮಲ್ಲಿ ಪಾಶ್ಚಿಮಾತ್ಯ ಆಹಾರಗಳಾದ ಪಾಸ್ತಾ, ಪೀಜ್ಜಾ, ಬರ್ಗರ್ ಗಳಿಗೆ ಮಾರು ಹೋಗಿ ದೇಶೀಯ ಅಹಾರ ಪದ್ಧತಿ ಮರೆಯಾಗುತ್ತಿದೆ ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಫಾಸ್ಟ್ ಫುಡ್ ಗೆ ಮರೆಹೋಗ್ತಿದ್ದಾರೆ. ಹೀಗಾಗಿ ಒಳ್ಳೆಯ ಆರೋಗ್ಯಕರ ಜೀವನವನ್ನು ಮತ್ತು ಜೀವನ ಶೈಲಿಯನ್ನು ನಡೆಸಲು ನಮ್ಮ ದೇಶಿಯ ಆಹಾರ ಅತ್ಯಮೂಲ್ಯವಾಗಿದೆ. ಈ ಹಿನ್ನಲೆಯಲ್ಲಿ ಹಳ್ಳಿಯ ಸೊಗಡನ್ನು ನೆನಪಿಸುವ ನಿಟ್ಟಿನಲ್ಲಿ ಇಂದು ನಾಟಿ ಕೋಳಿ ಮತ್ತು ಮುದ್ದೆ ಊಟ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಪ್ರವಾಸಿಗರ ಸ್ವರ್ಗವಾದ ಧುಮ್ಮಿಕ್ಕುವ ಸಿರಿಮನೆ ಫಾಲ್ಸ್: ಒನ್‌ಡೇ ಟ್ರಿಪ್‌ಗೆ ಬೆಸ್ಟ್ ಪ್ಲೇಸ್
ಆನೇಕಲ್ ತಾಲೂಕಿನ ಸರ್ಜಾಪುರದ ಮಂಥನ ಹೋಟೆಲ್ ಅವರಣದಲ್ಲಿ ಇಂದು ನಾಟಿ ಕೋಳಿ ಮುದ್ದೆ ಊಟ ಸ್ಪರ್ಧೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಮಹೇಶ್ ಮತ್ತು ಕೆಎನ್ ಪ್ರಿಂಟರ್ಸ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಮಂಡ್ಯ, ಕುಣಿಗಲ್, ಹಾಸನ, ಹೊಸಕೋಟೆ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಸೇಲಂ, ಸೇರಿದಂತೆ 37 ಸ್ಪರ್ಧಿಗಳು ಭಾಗಿಯಾಗಿದ್ದರು. ಒಟ್ಟು 30 ನಿಮಿಷ ಕಾಲಾವಕಾಶದಲ್ಲಿ ನಾಟಿ ಕೋಳಿ ಮತ್ತು ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಇದಾಗಿತ್ತು.
ಬೆಂಗಳೂರು ಮೂಲದ ಮಹಾಲಕ್ಷ್ಮಿ ಲೇಔಟ್ ಹರೀಶ್ ಎಂಬಾತ 13 ರಾಗಿ ಮುದ್ದೆ ತಿಂದು ಮೊದಲ ಸ್ಥಾನ ಪಡೆದರೆ, 2ನೇ ಸ್ಥಾನವನ್ನು ಶ್ರೀನಿವಾಸ್ ಹಾಗೂ ಮೂರನೇ ಸ್ಥಾನವನ್ನು ಆನಂದ್ ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದ ಹರೀಶ್ ಅವರಿಗೆ ಟಗರನ್ನು ಬಹುಮಾನವನ್ನಾಗಿ ವಿತರಿಸಲಾಯಿತು. ಎರಡನೇ ಸ್ಥಾನ ಪಡೆದ ಮಾಲೂರು ತಾಲ್ಲೂಕಿನ ಸಂಪಂಗೆರೆಯ ಶ್ರೀನಿವಾಸಗೆ ಜೋಡಿ ಕೋಳಿಗಳನ್ನು ಹಾಗೂ ಮೂರನೇ ಸ್ಥಾನ ಪಡೆದ ಆನೇಕಲ್ ತಾಲ್ಲೂಕಿನವರೇ ಆದ ಆನಂದ್‌ಗೆ ಒಂದು ನಾಟಿ ಕೋಳಿಯನ್ನು ವಿತರಿಸಲಾಯಿತು. ಇದೇ ವೇಳೆ ಆಯೋಜಕರಾದ ಮಹೇಶ್ ಮಾತನಾಡಿ, ಇತ್ತೀಚಿಗೆ ನಮ್ಮಆಹಾರ ಪದ್ಧತಿ ಬದಲಾವಣೆಯಾಗಿದೆ ಹೀಗಾಗಿ ಹಳ್ಳಿಯ ಸೊಗಡನ್ನ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಹೆಂಡ್ತಿ-ಮಕ್ಕಳ ಸಾವಿನ ಸ್ಮರಣಾರ್ಥ ಬಡವರಿಗೆ ಮನೆ ನಿರ್ಮಾಣ: ಕೊಡಗು (ಜು.09): ನಮ್ಮ ದೇಶದಲ್ಲಿ ಪ್ರೀತಿ ಸಂಕೇತವಾಗಿ ಅತಿದೊಡ್ಡ ಸ್ಮಾರಕವಾದ ತಾಜ್ ಮಹಲ್ ಅನ್ನು ಷಹಜಹಾನ್ ನಿರ್ಮಿಸಿ ಕೊಟ್ಟಿರುವುದು ಜಗತ್ತಿಗೇ ತಿಳಿದಿರುವ ವಿಚಾರವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಭಾರಿ ಗಾಳಿ- ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಜೀವಂತ ಸಮಾಧಿಯಾದ ತನ್ನ ಹೆಂಡತಿ ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾನೆ. ತನ್ನ ಹೆಂಡತಿ ಮಕ್ಕಳ ಮೇಲಿನ ಪ್ರೀತಿಗಾಗಿ ಮನೆ ನಿರ್ಮಿಸಿಕೊಟ್ಟಿರುವ ವ್ಯಕ್ತಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ತೋರಾ ಗ್ರಾಮದ ಪ್ರಭುಕುಮಾರ್ ಎನ್ನುವವರಾಗಿದ್ದಾರೆ.
ಹೆಂಡ್ತಿ, ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ
2019ರ ಭೂ ಕುಸಿತದಲ್ಲಿ ಜೀವಂತ ಸಮಾಧಿ: ಪ್ರೀತಿಯ ಹೆಂಡತಿ, ಮುದ್ದಾದ ಎರಡು ಮಕ್ಕಳೊಂದಿಗೆ ದಿನಸಿ ವ್ಯಾಪಾರ ಮಾಡಿಕೊಂಡು, ಚಿಕ್ಕ ತೋಟದಲ್ಲಿ ಬರುವ ಆದಾಯದಿಂದ ನೆಮ್ಮದಿ ಬದುಕು ಕಟ್ಟಿಕೊಂಡಿತ್ತು ಆ ಪುಟ್ಟ ಕುಟುಂಬ. ಆದರೆ, ವಿಧಿಗೆ ಇವರ ಪ್ರೀತಿಯ ಕಂಡು ಅಸೂಯೆ ಹುಟ್ಟಿತ್ತೋ ಏನೋ ಗೊತ್ತಿಲ್ಲ. 2019 ರಲ್ಲಿ ಭೂಕುಸಿತದ ರೂಪದಲ್ಲಿ ಬಂದ ಜವರಾಯ ಮನೆಯ ಯಜಮಾನ ಪ್ರಭುಕುಮಾರ್ ಅವರನ್ನು ಬಿಟ್ಟು ಅವರ ಹೆಂಡತಿ ಅನಸೂಯ, ಮಕ್ಕಳಾದ ಅಮೃತ, ಅದಿತಿಯನ್ನು ಜೀವಂತ ಸಮಾಧಿ ಮಾಡಿಬಿಟ್ಟಿತ್ತು.