ಅಚಾನಕ್ಕಾಗಿ ಟೀನಲ್ಲಿ ಸಕ್ಕರೆ ಹೆಚ್ಚಾದ್ರೆ ಗಾಬರಿಪಡುವ ಅಗತ್ಯವಿಲ್ಲ. ಅತಿಯಾದ ಸಿಹಿಯನ್ನು ಸಮತೋಲನಗೊಳಿಸಲು ಅದ್ಭುತ ಮನೆಮದ್ದುಗಳು ನಮ್ಮ ಅಡುಗೆಮನೆಯಲ್ಲೇ ಇವೆ.
food Mar 05 2026
Author: Ashwini HR Image Credits:Our own
Kannada
ಹಾಲು
ಇದು ಅತ್ಯಂತ ಸುಲಭವಾದ ಮಾರ್ಗ. ಟೀಗೆ ಸ್ವಲ್ಪ ಹೆಚ್ಚಿನ ಪ್ರಮಾಣದ ಬಿಸಿ ಹಾಲನ್ನು ಸೇರಿಸುವುದರಿಂದ ಸಕ್ಕರೆಯ ತೀವ್ರತೆ ಕಡಿಮೆಯಾಗುತ್ತದೆ.
Image credits: stockPhoto
Kannada
ಡಿಕಾಕ್ಷನ್
ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ನೀರು ಮತ್ತು ಟೀ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ಇದನ್ನು ಸಕ್ಕರೆ ಹೆಚ್ಚಾದ ಟೀಗೆ ಬೆರೆಸಿದರೆ ಸಿಹಿಯು ಸಮತೋಲನಕ್ಕೆ ಬರುತ್ತದೆ.
Image credits: our own
Kannada
ನೀರು
ನೀವು ಹಾಲಿಲ್ಲದ ಟೀ (Black Tea) ಕುಡಿಯುತ್ತಿದ್ದರೆ ಅದಕ್ಕೆ ಸ್ವಲ್ಪ ಬಿಸಿ ನೀರನ್ನು ಸೇರಿಸಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು.
Image credits: Getty
Kannada
ಮಸಾಲೆ
ಸ್ವಲ್ಪ ಹೆಚ್ಚಿನ ಪ್ರಮಾಣದ ಜಜ್ಜಿದ ಶುಂಠಿ ಸೇರಿಸಿ ಮತ್ತೆ ಕುದಿಸಿ. ಇದರ ಖಾರವು ಅತಿಯಾದ ಸಿಹಿಯನ್ನು ಮರೆಮಾಚುತ್ತದೆ.
Image credits: Getty
Kannada
ನಿಂಬೆ ರಸ
ಬ್ಲಾಕ್ ಟೀ ಆಗಿದ್ದರೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ನಿಂಬೆಯ ಹುಳಿ ಅಂಶವು ಸಿಹಿಯನ್ನು ತಟಸ್ಥಗೊಳಿಸುತ್ತದೆ.