Asianet Suvarna News Asianet Suvarna News

Bengaluru : ಫ್ರೀ ಐಸ್‌ ಕ್ರೀಮ್‌ಗಾಗಿ ಭರ್ಜರಿ ಡ್ಯಾನ್ಸ್‌, ನೀವು ಫಿದಾ ಆಗೋದು ಗ್ಯಾರಂಟಿ

ಬೆಂಗಳೂರಿನಲ್ಲಿ ರಾಷ್ಟ್ರೀಯ ಐಸ್‌ಕ್ರೀಮ್‌ ದಿನಾಚರಣೆ ವೇಳೆ ಉಚಿತ ಐಸ್‌ಕ್ರೀಮ್‌ ತಿನ್ನಲು ಗ್ರಾಹಕರು ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ನೃತ್ಯವನ್ನು ನೋಡಿದರೆ ನೀವು ಫಿದಾ ಆಗೋದು ಗ್ಯಾರಂಟಿ.

Bengaluru Customers danced for free ice cream you are guaranteed to like sat
Author
First Published Jul 25, 2023, 1:06 PM IST

ಬೆಂಗಳೂರು (ಜು.25): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಭಾನುವಾರ ಆಚರಣೆ ಮಾಡಲಾದ ರಾಷ್ಟ್ರೀಯ ಐಸ್‌ಕ್ರೀಮ್‌ ದಿನಾಚರಣೆ ವೇಳೆ ಉಚಿತ ಐಸ್‌ಕ್ರೀಮ್‌ ತಿನ್ನಲು ಗ್ರಾಹಕರು ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ನೃತ್ಯವನ್ನು ನೋಡಿದರೆ ನೀವು ಫಿದಾ ಆಗೋದು ಗ್ಯಾರಂಟಿಯಾಗಿದೆ. 

ಇನ್ನು ಬೇಸಿಗೆ ಬಂತೆಂದರೆ ಅಥವಾ ಮಳೆಗಾಲದಲ್ಲಿಯೂ ವಾತಾವರಣ ಬಿಸಿಯಾಗಿದ್ದರೆ ಐಸ್‌ಕ್ರೀಮ್‌ ತಿನ್ನಬೇಕು ಎನ್ನುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇನ್ನು ಮಳೆ, ಚಳಿ, ಬೇಸಿಗೆ ಯಾವುದೇ ಇರಲಿ ನಾವು ಎಲ್ಲಾ ಕಾಲದಲ್ಲೂ ಐಸ್‌ಕ್ರೀಮ್‌ ತೊನ್ನುತ್ತೇವೆ ಎನ್ನುವವರೂ ಸಾಕಷ್ಟಿದ್ದಾರೆ. ಆದರೆ, ರಾಷ್ಟ್ರೀಯ ಐಸ್‌ಕ್ರೀಮ್‌ ದಿನಾಚರಣೆಯಂದು ಡ್ಯಾನ್ಸ್‌ ಮಾಡಿಕೊಂಡು ಬಂದವರಿಗೆ ಉಚಿತ ಐಸ್‌ಕ್ರೀಂ (Free ice cream for dance) ಕೊಡುವುದಾಗಿ ಘೋಷಣೆ ಮಾಡಿದ ಮಳಿಗೆಗೆ ಭರ್ಜರಿ ಡ್ಯಾನ್ಸ್‌ ಮಾಡುತ್ತಾ ಗ್ರಾಹಕರು ಬಂದು ಐಸ್‌ಕ್ರೀಮ್‌ ತಿಂದಿದ್ದನ್ನು ನೋಡಿದರೆ ನಿಮಗೂ ನಾಲ್ಕು ಸ್ಟೆಪ್ಸ್‌ ಹಾಕಿ ಐಸ್‌ ತಿನ್ನಬೇಕು ಎನಿಸುತ್ತದೆ. 

ಅಪಾರ್ಟ್‌ಮೆಂಟ್‌ ಐದನೇ ಮಹಡಿ ಬಾಲ್ಕನಿಯಲ್ಲಿ 7 ಹಸುಗಳನ್ನು ಸಾಕಿದ ವ್ಯಕ್ತಿ: ಮುಂದಾಗಿದ್ದು ಅವಾಂತರ

ಮನಸ್ಸಿಗೆ ಮುದ ನೀಡುವ ಸಂತೋಷಕರ ಡ್ಯಾನ್ಸ್: ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಯಾವುದಾದರೂ ತಣ್ಣಗಿರುವ ವಸ್ತುಗಳನ್ನು ತಿನ್ನೋಣ ಎನ್ನಿಸುತ್ತದೆ. ನಮ್ಮ ದೇಹ ತಂಪಾದ ಜಾಗವನ್ನು ಹುಡುಕಿದರೆ, ನಾಲಿಗೆ ತಂಪು ಮತ್ತು ಸಿಹಿಯಾದ ಐಸ್‌ಕ್ರೀಮ್‌ ರುಚಿ ನೋಡಲು ಹವಣಿಸುತ್ತದೆ. ಹೀಗಾಗಿ, ಐಸ್‌ಕ್ರೀಮ್‌ ಮೊರೆ ಹೋಗುವವರ ಸಂಖ್ಯೆಗೂ ಬಹಳಷ್ಟಿದೆ. ಆದರೆ, ಭಾರತದಲ್ಲಿ ಜುಲೈ ಮೂರನೇ ಭಾನುವಾರವನ್ನು ರಾಷ್ಟ್ರೀಯ ಐಸ್‌ಕ್ರೀಮ್‌ ದಿನಾಚರಣೆಯನ್ನಾಗಿ (National Ice cream day July third week Sunday) ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್‌ ನೀಡಿದ್ದ ಕಾರ್ನರ್‌ ಹೌಸ್‌ ಐಸ್‌ಕ್ರೀಮ್‌ ಮಳಿಗೆಯು ಐಸ್‌ಕ್ರೀಮ್‌ ದಿನಾಚರಣೆ ದಿನ ಡ್ಯಾನ್ಸ್‌ ಮಾಡುತ್ತಾ ಆಗಮಿಸುವ ಗ್ರಾಹಕರಿಗೆ ಉಚಿತ ಐಸ್‌ ಕ್ರೀಮ್‌ ನೀಡುವ ಘೋಷಣೆಯನ್ನು ಮಾಡಿತ್ತು. ಅಂದು ಬೆಂಗಳೂರಿನ ಜನರು ಡ್ಯಾನ್ಸ್‌ ಮಾಡಿದ ರೀತಿ ನೋಡಿದರೆ ಮನಸ್ಸಿಗೆ ಸಂತೋಷ ಆಗುವುದು ಪಕ್ಕಾ..

ಕ್ಯಾಮರಾ ಕಂಡೊಡನೆ ಡ್ಯಾನ್ಸ್‌ ಆರಂಭ: ಈ ವರ್ಷ ಜು.16ರಂದು ಮೂರನೇ ಭಾನುವಾರ ಬಂದಿದ್ದರಿಂದ ಕಾರ್ನರ್‌ ಹೌಸ್‌ ಐಸ್‌ಕ್ರೀಮ್‌ (corner house ice cream) ಮಳಿಗೆಯಿಂದ ಡ್ಯಾನ್ಸ್‌ ಮಾಡಿಕೊಂಡು ಬಂದ ಗ್ರಾಹಕರಿಗೆ ಸ್ಕೂಪ್‌ ಐಸ್‌ಕ್ರೀಮ್‌ ಉಚಿತವೆಂದು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಭಾನುವಾರ ಗ್ರಾಹಕರು ಐಸ್‌ಕ್ರೀಮ್‌ ಮಳಿಗೆ ಮುಂದಿನ ಕ್ಯಾಮರಾ ಕಾಣುತ್ತಿದ್ದಂತೆ ದಿಢೀರನೆ ಡ್ಯಾನ್ಸ್‌ ಮಾಡಲು ಆರಂಭಿಸುತ್ತಾರೆ. ಮಕ್ಕಳು, ವಯಸ್ಕರು, ಯುವಕ- ಯವತಿಯರು ಹಾಗೂ ವೃದ್ಧರು ಸೇರಿದಂತೆ ಎಲ್ಲ ವರ್ಗದ ಜನರೂ ಇಲ್ಲಿ ನೃತ್ಯ ಮಾಡಿದ್ದಾರೆ. ಅದರಲ್ಲಿ, ಕೆಲವರು ಭರ್ಜರಿಯಾಗಿ ಸ್ಟೆಪ್ಸ್‌ ಹಾಕಿದ್ದು, ಸಖತ್‌ ಮನರಂಜನೆಯನ್ನೂ ಉಂಟುಮಾಡುತ್ತದೆ.

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

ಡ್ಯಾನ್ಸ್‌ ವೀಡಿಯೋಗಳು ವೈರಲ್‌: ಇನ್ನು ಐಸ್‌ಕ್ರೀಮ್‌ ದಿನಾಚರಣೆಯಂದು ಬೆಂಗಳೂರಿನ ಜನರು ಡ್ಯಾನ್ಸ್‌ ಮಾಡಿದ ವೀಡಿಯೊವು ಆನ್‌ಲೈನ್‌ನಲ್ಲಿ ವೈರಲ್‌ ಆಗುತ್ತಿದೆ. ಗ್ರಾಹಕರು ಸಿಸಿಟಿವಿ ಕ್ಯಾಮೆರಾಗಳ ಮುಂದೆ ಐಸ್ ಕ್ರೀಮ್‌ಗಾಗಿ ನೃತ್ಯ ಮಾಡಿದ್ದು, ವೀಕ್ಷಿಸಿ ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಐಸ್ ಕ್ರೀಂ ಪ್ರಿಯರು ಇದನ್ನು ಉತ್ಸಾಹದಿಂದ ಮಾಡಿದ್ದು, ಅದ್ಬುತ ವಿಡಿಯೋವಾಗಿ ಹೊರಹೊಮ್ಮಿದೆ. ಐಸ್ ಕ್ರೀಮ್ ಅಂಗಡಿಯು ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

 

Follow Us:
Download App:
  • android
  • ios