ಅಪಾರ್ಟ್‌ಮೆಂಟ್ ಐದನೇ ಮಹಡಿ ಬಾಲ್ಕನಿಯಲ್ಲಿ 7 ಹಸುಗಳನ್ನು ಸಾಕಿದ ವ್ಯಕ್ತಿ: ಮುಂದಾಗಿದ್ದು ಅವಾಂತರ
ಅಪಾರ್ಟ್‌ಮೆಂಟ್‌ನಲ್ಲಿ ಬೆಕ್ಕು, ನಾಯಿ ಸಾಕುವುದಕ್ಕೇ ನಿರ್ಬಂಧವಿರುವಾಗ ಇಲ್ಲೊಬ್ಬ ವ್ಯಕ್ತಿ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿ ಏಳು ಹಸುಗಳನ್ನು ಸಾಕಣೆ ಮಾಡಿದ್ದಾನೆ.
ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ಜೀವನವೆಂದರೆ ಐಷಾರಾಮಿ ಜೀವನ ಮಾಡುವುದು ಎಂದು ನಾವು ತಿಳಿದುಕೊಳ್ಳುತ್ತೇವೆ. ಅಲ್ಲಿ ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕುಗಳನ್ನೇ ಸಾಕಲು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಟನೆ ಸದಸ್ಯರು ವಿರೋಧ ಮಾಡುತ್ತಾರೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದೇ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯ ಬಾಲ್ಕನಿಯಲ್ಲಿ 7 ಹಸುಗಳನ್ನು ಸಾಕಣೆ ಮಾಡಿ, ಹಾಲನ್ನೂ ಮಾರಾಟ ಮಾಡಲು ಮುಂದಾಗಿದ್ದಾನೆ.
ಹೌದು, ಅಪಾರ್ಟ್‌ಮೆಂಟ್ ಎಂದಾಕ್ಷಣ ಎಲ್ಲ ಮೂಲ ಸೌಕರ್ಯಗಳನ್ನೂ ಹೊಂದಿದ ಶಿಸ್ತುಬದ್ಧವಾದ ಜೀವನ ನಡೆಸಲು ಇರುವ ವ್ಯವಸ್ಥೆ ಎಂದು ನಾವು ತಿಳಿದುಕೊಮಡಿದ್ದೇವೆ. ಅಲ್ಲಿ, ಗ್ರಾಮೀಣ ಭಾಗದಲ್ಲಿ ಇರುವಂತೆ ಕೋಳಿ, ಕುರಿ, ಹಸು ಹಾಗೂ ಇತರೆ ಸಾಕು ಪ್ರಾಣಿಗಳನ್ನು ಸಾಕಲು ಕೂಡ ಅನುಮತಿ ಇರುವುದಿಲ್ಲ. ಇನ್ನು ಬೆಕ್ಕು, ನಾಯಿಗಳನ್ನು ಸಾಕುವುದಕ್ಕೂ ಸಾಕಷ್ಟು ವಿರೋಧ ಮಾಡಲಾಗುತ್ತದೆ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 7 ಹಸುಗಳನ್ನು ಲಿಪ್ಟ್ ಮೂಲಕ ಐದನೇ ಮಹಡಿಯ ಮನೆಗೆ ತೆಗೆದುಕೊಂಡು ಹೋಗಿ ಬಾಲ್ಕನಿಯಲ್ಲಿ ಸಾಕಲು ಆರಂಭಿಸಿದ್ದಾನೆ.
ಭಾರತೀಯ ತಳಿ ಗೋಮೂತ್ರದಲ್ಲೇ ತಲೆ ತೊಳಿತಾರೆ ಆಫ್ರಿಕನ್ ಆದಿವಾಸಿಗಳು! ಡಾ ಬ್ರೋ ಹೇಳಿದ್ದು ಕೇಳಿ
ಹಸು ಕೂಗುವ ಶಬ್ದ, ಸಗಣಿ ವಾಸನೆ: ಇಷ್ಟಕ್ಕೇ ಸುಮ್ಮನಾಗದ ಈ ವ್ಯಕ್ತಿ ಯಾರಿಗೇನು ತೊಂದರೆ ಆಗುತ್ತದೆ ಎಂಬುದನ್ನು ಗಮನಿಸದೇ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಟನೆಯ ನಿಯಮಗಳನ್ನು ಮೀರಿ ದಿನಂಪ್ರತಿ ಹುಲ್ಲು, ಮೇವುಗಳನ್ನು ತೆಗೆದುಕೊಂಡು ಬಂದು ಅದಕ್ಕೆ ಹಾಕುತ್ತಾ ಸಾಕಣೆ ಆರಂಭಿಸಿದ್ದಾರೆ. ಪ್ರತಿನಿತ್ಯ ಸಗಣೆ ಮತ್ತಿತರ ತ್ಯಾಜ್ಯಗಳನ್ನು ಅಪಾರ್ಟ್‌ಮೆಂಟ್‌ನ ಸಾಮಾನ್ಯ ತ್ಯಾಜ್ಯದ ಪೈಪ್‌ಗಳಲ್ಲಿ ಹರಿಸಿದ್ದಾನೆ. ಜೊತೆಗೆ, ಹಸುಗಳು ಕೂಗುವ ಶಬ್ದ, ಸಗಣಿ ಮತ್ತು ಗಂಜಲದ ವಾಸನೆ ಹಾಗೂ ಸೊಳ್ಳೆಗಳ ಕಾಟ ತಾಳಲಾರದೇ ಈತನ ವಿರುದ್ಧ ಇತರೆ ಫ್ಲ್ಯಾಟ್‌ಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಕ್ಕೆ ಕಾರಣವಾದ ಘಟನೆ: ಚೀನಾದ ಸಿಚುವಾನ್ ಪ್ರಾಂತ್ಯದ ರೈತನೊಬ್ಬ ತನ್ನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯ ಬಾಲ್ಕನಿಯಲ್ಲಿ ಏಳು ಹಸುಗಳನ್ನು ಸಾಕಿದ್ದಾನೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಪಾರ್ಟ್‌ಮೆಂಟ್‌ನ ಸುತ್ತಲಿನ ಫ್ಲಾಟ್‌ಗಳಲ್ಲಿ ವಾಸಿಸುವ ಜನರು ಹಸುವಿನ ಕಿರುಚಾಟ ಮತ್ತು ಸಗಣಿ ವಾಸನೆಯಿಂದ ಸಮಸ್ಯೆಗೆ ಒಳಗಾಘಿದ್ದರು. ಈ ಕಟುವಾದ ವಾಸನೆ ಎಲ್ಲಿಂದ ಬರುತ್ತಿದೆ? ಅವರಿಗೆ ಆಶ್ಚರ್ಯವಾಯಿತು. ದಿನದಿಂದ ದಿನಕ್ಕೆ ವಾಸನೆ ಹೆಚ್ಚಾಗುತ್ತಿದ್ದಂತೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ನಿವಾಸಿಗಳು ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
Breaking: ಕಾಂಗ್ರೆಸ್ ಸರ್ಕಾರ ಬೀಳಿಸಲು ವಿದೇಶದಲ್ಲಿ ಷಡ್ಯಂತ್ರ; ಡಿಸಿಎಂ ಡಿ.ಕೆ. ಶಿವಕುಮಾರ್
ಗ್ರಾಮೀಣರಿಗೆ ಪುನರ್ವಸತಿ ಕಲ್ಪಿಸಿದ್ದಕ್ಕೆ ಈ ಅವಾಂತರ: ಇನ್ನು ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ಬಂದು ಪರಿಶೀಲನೆ ನಡೆಸಿದಾಗ ಅಸಲಿ ವಿಷಯ ಗೊತ್ತಾಗಿದೆ. ಆದರೂ ಸಹ ನಿವಾಸಿಗಳಿಗೆ ತೊಂದರೆಯಾಗದಂತೆ ಹಸುಗಳನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಹೇಳಿದರು. ಇದರಿಂದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಹಳ್ಳಿಗಳಲ್ಲಿ ವಾಸಿಸುತ್ತಿದ್ದೆವು. ಆದರೆ, ನಮ್ಮನ್ನು ಇಲ್ಲಿಗೆ ಕರೆತರಲಾಯಿತು. ನಮ್ಮ ಜಾನುವಾರುಗಳೂ ನಮ್ಮೊಂದಿಗೆ ಇರುತ್ತವೆ ಆಗ್ರಹಿಸಿದ್ದಾರೆ. ಇಲ್ಲಿ ಕೆಲವರು ಕೋಳಿ ಸಾಕುತ್ತಿದ್ದಾರೆ? ದನ ಸಾಕಿದರೆ ತಪ್ಪೇನು..? ಎಂದು ವಾದಿಸಿದರು. ಆದರೆ ಅಪಾರ್ಟ್‌ಮೆಂಟ್‌ಗೆ ಜಾನುವಾರುಗಳನ್ನು ಬಿಡಬಾರದು ಎಂದು ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.