ಕೊಳಚೆ ನೀರಲ್ಲೂ ತಯಾರಾಗ್ತಿದೆ ಬಿಯರ್‌, ಜನ ಮುಗಿಬಿದ್ದು ಕುಡೀತಾರೆ !

ಕೊಳಚೆ ನೀರು (Drinage water) ಹಾಗೂ ಟಾಯ್ಲೆಟ್‌ (Toilet) ನೀರಿನಿಂದ ತಯಾರಿಸಿದ ಬಿಯರ್ (Beer) ಸಿಂಗಾಪುರದಲ್ಲಿ ಭಾರೀ ಫೇಮಸ್ ಆಗಿದೆ. NEWBrew ಹೆಸರಿನ ಬಿಯರ್ ಎಪ್ರಿಲ್‌ನಲ್ಲಿ ಸೂಪರ್ ರ್ಮಾರ್ಕೆಟ್‌ಗಳಲ್ಲಿ ಮತ್ತು ಬ್ರೂವರ್ಕ್ಜ್ ಔಟ್‌ಲೆಟ್‌ಗಳಲ್ಲಿ ಅತಿ ಹೆಚ್ಚು ಮಾರಾಟವಾಗಿದೆಯಂತೆ.

Beer Made From Recycled Toilet Water Wins Admirers In Singapore Vin

ಕೆಲವು ತಿಂಗಳ ಹಿಂದೆ ಸಿಂಗಾಪುರ (Singapore), ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ದೊಡ್ಡ ಬದಲಾವಣೆಗೆ ನಾಂದಿ ಹಾಡಿತ್ತು. ಶುದ್ಧೀಕರಿಸಿದ ಕೊಳಚೆ ನೀರು (Drinage water) ಮತ್ತು ಮೂತ್ರ ಮಿಶ್ರಿತ ನೀರಿನಿಂದಲೇ ಬಿಯರ್ ಉತ್ಪಾದಿಸುತ್ತಿರುವುದಾಗಿ ಸ್ವತಃ ಉತ್ಪಾದನಾ ಸಂಸ್ಥೆಯೇ ಹೇಳಿಕೊಂಡಿತ್ತು. ಈ ಹೊಸ ಬಿಯರ್ ಅನ್ನು ಸಿಂಗಾಪುರದಲ್ಲಿ ನ್ಯೂಬ್ರೂ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನ್ಯೂಬ್ರೂ ಸಾಮಾನ್ಯ ಬಿಯರ್ ಅಲ್ಲ. ಹೊಸ ಸಿಂಗಾಪುರದ ಹೊಂಬಣ್ಣದ ಏಲ್ ಬಿಯರ್ ಅನ್ನು ಮರುಬಳಕೆಯ ಒಳಚರಂಡಿ ನೀರಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಟಾಯ್ಲೆಟ್ ನೀರನ್ನು ಸಹ ಸೇರಿಸಲಾಗುತ್ತದೆ. 

ಅಲ್ಕೊಹಾಲ್‌ಯುಕ್ತ ಪಾನೀಯವು ದೇಶದ ರಾಷ್ಟ್ರೀಯ ಜಲ ಸಂಸ್ಥೆ, PUB ಮತ್ತು ಸ್ಥಳೀಯ ಕ್ರಾಫ್ಟ್ ಬ್ರೂವರಿ ಬ್ರೂವರ್ಕ್ಜ್ ನಡುವಿನ ಸಹಯೋಗದ ಪ್ರಾಡಕ್ಟ್​. 2018ರಲ್ಲಿ ನೀರಿನ ಸಮ್ಮೇಳನದಲ್ಲಿ ಇದನ್ನು ಮೊದಲು ಅನಾವರಣಗೊಳಿಸಲಾಯಿತು, NEWBrew ಹೆಸರಿನ ಬಿಯರ್ ಎಪ್ರಿಲ್‌ನಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಮತ್ತು ಬ್ರೂವರ್ಕ್ಜ್ ಔಟ್‌ಲೆಟ್‌ಗಳಲ್ಲಿ ಅತಿ ಹೆಚ್ಚು ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಅಲ್ಕೋಹಾಲ್‌ ಸೇವನೆಯಿಂದ ಬೊಜ್ಜು ಬರುತ್ತಾ ? ಹೊಸ ಅಧ್ಯಯನದಲ್ಲೇನಿದೆ

NEWBrew ಸಿಂಗಾಪುರದ ಕೊಳಚೆ ನೀರಿನಿಂದ ಮರುಬಳಕೆಯ ಕುಡಿಯುವ ನೀರಿನ ಬ್ರ್ಯಾಂಡ್ ಈಗ ಫೇಮಸ್. ಇದು ದ್ವೀಪ ರಾಷ್ಟ್ರದ ನೀರಿನ ಭದ್ರತೆ ಸುಧಾರಿಸಲು 2003ರಲ್ಲಿ ಸಂಸ್ಕರಣಾ ಘಟಕಗಳಿಂದ ಮೊದಲು ತಯಾರಿಸಲಾಯಿತು. ಸುಸ್ಥಿರ ನೀರಿನ ಬಳಕೆ ಮತ್ತು ಮರುಬಳಕೆಯ ಪ್ರಾಮುಖ್ಯತೆಯ ಕುರಿತು ಸಿಂಗಾಪುರದವರಿಗೆ ಶಿಕ್ಷಣ ನೀಡುವ ಪ್ರಯತ್ನದ ಭಾಗವಾಗಿ ಆರಂಭವಾದ ಬಿಯರ್‌ ಅತಿ ಹೆಚ್ಚು ಮಾರಾಟವಾಗಿ ಮತ್ತೊಮ್ಮೆ ಹಸರು ಪಡೆದುಕೊಂಡಿದೆ. 

ಬಿಯರ್‌ ತುಂಬಾ ಟೇಸ್ಟೀಯಾಗಿದೆ. ಇದು ಟಾಯ್ಲೆಟ್ ನೀರಿನಿಂದ ಮಾಡಿರುವುದು ಎಂಬುದನ್ನು ನಂಬಲು ಕಷ್ಟ ಎಂದು ಇದನ್ನು ಕುಡಿದ 58 ವರ್ಷದ ಚೆವ್ ವೀ ಲಿಯಾನ್ ಹೇಳಿದರು. ಹೊಸ ಬ್ರ್ಯಾಂಡ್ ಬಗ್ಗೆ ತಿಳಿದ ನಂತರ ನಾನು ಈ ಟಾಯ್ಲೆಟ್ ನೀರಿನಿಂದ ತಯಾರಿಸಿದ ಈ ಬಿಯರ್‌ನ್ನು ಪ್ರಯತ್ನಿಸಲು ಸೂಪರ್ ಮಾರ್ಕೆಟ್‌ನಿಂದ ಬಿಯರ್ ಖರೀದಿಸಿದೆ. ಇದು ಎಲ್ಲಾ ಬಿಯರ್‌ಗಿಂತ ಅತ್ಯುತ್ತಮ ರುಚಿಯನ್ನು ಹೊಂದಿದೆ ಎಂದು ಚೆವ್ ಹೇಳಿದ್ದಾರೆ.

ಸೀಮಿತ ಶುದ್ಧ ನೀರಿನ ಸಂಪನ್ಮೂಲಗಳನ್ನು ಹೊಂದಿರುವ ಇಸ್ರೇಲ್ ಮತ್ತು ಸಿಂಗಾಪುರದಂತಹ ಮುಂದುವರಿದ ರಾಷ್ಟ್ರಗಳು ಈಗಾಗಲೇ ತಂತ್ರಜ್ಞಾನವನ್ನು ತಮ್ಮ ಸರಬರಾಜುಗಳಲ್ಲಿ ಅಳವಡಿಸಿಕೊಂಡಿವೆ. ಲಾಸ್ ಏಂಜಲೀಸ್ ಮತ್ತು ಲಂಡನ್‌ನಂತಹ ನಗರಗಳು ಇದನ್ನು ಅನುಸರಿಸುವ ಯೋಜನೆಗಳನ್ನು ಪರಿಶೀಲಿಸುತ್ತಿವೆ.

ಬಿಯರ್ ಕುಡಿಯೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ?

ಕೊಳಚೆ ನೀರು, ಮೂತ್ರ ಮಿಶ್ರಿತ ಬಿಯರ್ ತಯಾರು ಮಾಡುತ್ತಿರುವುದೇಕೆ ?
ಉತ್ಪಾದನಾ ಸಂಸ್ಥೆ,ಕೊಳಚೆ ನೀರು ಮತ್ತು ಮೂತ್ರ (Urine) ಮಿಶ್ರಿತ ನೀರಿನಿಂದ ಬಿಯರ್ ತಯಾರಿಸೋದರ ಹಿಂದೆ ನಿರ್ಧಿಷ್ಟ ಕಾರಣವೂ ಇದೆ. ಸಿಂಗಾಪುರದಲ್ಲಿ ಮಾದಕ ಪಾನೀಯಗಳ ಉತ್ಪಾದನೆಯನ್ನು ಪರಿಸರ ಸ್ನೇಹಿ ಎಂಬ ಸಂದೇಶವನ್ನು ಸಾರಲು ಮುಂದಾಗಿದೆ. ನ್ಯೂಬ್ರೂ ಬಿಯರ್ ಅನ್ನು ಮೂತ್ರ ಮತ್ತು ಕೊಳಚೆ ನೀರಿನಿಂದ ಉತ್ಪಾದಿಸಲಾಗುತ್ತದೆ. ಸಿಂಗಾಪುರದ ರಾಷ್ಟ್ರೀಯ ಜಲ ಮಂಡಳಿಯೂ ಈ ಕಲ್ಪನೆಯ ಹಿಂದೆ ಇದೆ.  ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಗೆ ವಿವಿಧ ಯೋಜನೆಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.  ಇದರೊಂದಿಗೆ, ಬಿಯರ್ ಅನ್ನು ಮಾಲಿನ್ಯಕಾರಕಗಳು ಮತ್ತು ಮೂತ್ರದಿಂದ ತಯಾರಿಸಲಾಗುತ್ತದೆ. ಸಿಂಗಾಪುರದಲ್ಲಿ ಪ್ರಸ್ತುತ ನ್ಯೂಬ್ರೂ ಅನ್ನು ಹಸಿರು ಬಿಯರ್ ಎಂದು ಪ್ರಚಾರ ಮಾಡಲಾಗಿದೆ. 

ಮೂತ್ರದಿಂದ ಬಿಯರ್ ತಯಾರಿಕೆ ಹೇಗೆ ? 
ನ್ಯೂಬ್ರೂ ಎನ್ನುವುದು ಸಿಂಗಾಪುರ ನೀರು ಸರಬರಾಜ ಮಂಡಳಿಯು ಶುದ್ಧೀಕರಿಸಿ, ಸೋಸಿ, ಪೂರೈಕೆ ಮಾಡಿರುವ ಶುದ್ಧ ನೀರಿನಲ್ಲಿ ಉತ್ಪಾದಿಸಿದ ಬಿಯರ್ ಆಗಿದೆ. ಈ ಬಿಯರ್ ಉತ್ಪಾದನೆಗಾಗಿ ಪೂರೈಕೆ ಆಗುವ ಹೊಸ ನೀರನ್ನು ಕಟ್ಟುನಿಟ್ಟಾದ ಪರೀಕ್ಷಿಸಿ, ಹಲವು ಹಂತಗಳಲ್ಲಿ ಶೋಧಿಸಿ, ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಲಾಗುತ್ತದೆ.

Latest Videos
Follow Us:
Download App:
  • android
  • ios