Asianet Suvarna News Asianet Suvarna News

ರಾತ್ರೋ ರಾತ್ರಿ ವೈರಲ್ ಆದ ಬಾಬಾ ಕಾ ಧಾಬಾ ಈಗ ಝೊಮ್ಯಾಟೋದಲ್ಲೂ ಲಭ್ಯ

ರಾತ್ರೋ ರಾತ್ರಿ ವೈರಲ್ ಆದ ಬಾಬಾ ಕಾ ಧಾಬಾ ಈಗ ಝೋಮೇಟೋದಲ್ಲೂ ಲಭ್ಯ | ವೈರಲ್ ವಿಡಿಯೋ | ವೃದ್ಧ ದಂಪತಿಗೆ ಸಿಕ್ಕರು ಕಸ್ಟಮರ್ಸ್

Baba ka Dhaba in Delhis Malviya Nagar is now on Zomato dpl
Author
Bangalore, First Published Oct 9, 2020, 3:37 PM IST
  • Facebook
  • Twitter
  • Whatsapp

ಸೋಷಿಯಲ್ ಮೀಡಿಯಾಗೆ ಜನರ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಘನಾತ್ಮಕವಾಗಿ ಮತ್ತು ಕೆಲವೊಮ್ಮೆ ಖಣಾತ್ಮಕವಾಗಿಯೂ. ಒಂದು, ವಿಡಿಯೋ, ಒಂದು ಫೋಟೋ, ಒಂದು ಬರಹ ಸೋಷಿಯಲ್ ಮೀಡಿಯಾ ಮೂಲಕ ದೊಡ್ಡ ಬದಲಾವಣೆ ತರುತ್ತದೆ.

ದೆಹಲಿಯ ಬಾಬಾ ಕಾ ಧಾಬಾ ವಿಡಿಯೋ ವೈರಲ್ ಆಗಿದ್ದೇ ತಡ ಅವರಿಗೆ ನೆರವಿನ ಮಹಾಪೂರ ಸಿಕ್ಕಿದೆ. ಬಹಳಷ್ಟು ಜನ ಗ್ರಾಹಕರು ಸಿಕ್ಕಿದ್ದಾರೆ. ಇತ್ತೀಚಿನ ಬೆಳವಣಿಗೆಯಂತೆ ಈ ಡಾಬಾ ಝೊಮೆಟೋದಲ್ಲಿಯೂ ಲಭ್ಯವಾಗಿದೆ.

ನೀತಾ ಅಂಬಾನಿಯ ಬ್ಯೂಟಿಫುಲ್ ಸ್ಕಿನ್ ಸೀಕ್ರೇಟ್ ಇದು, ಇಲ್ಲಿದೆ ರೆಸಿಪಿ

ಬಾಬಾ ಕಾ ಧಾಬಾದ ಹಿರಿಯ ವೃದ್ಧ ದಂಪತಿ ಕೊರೋನಾದಿಂದಾಗಿ ಗ್ರಾಹಕರಿಲ್ಲದೆ, ಜೀವನ ಸಾಗಿಸಲಾಗದೆ ಅಳುತ್ತಾ ಕಣ್ಣೀರಿಡೋ ವಿಡಿಯೋ ವೈರಲ್ ಆಗಿತ್ತು. ದಕ್ಷಿಣ ದೆಹಲಿಯ ಮಾಲ್ವಿಯ ನಗರದಲ್ಲಿರುವ ಢಾಬಾದ ಸರಳವಾದ ರುಚಿಯಾದ ಮನೆರುಚಿಯ ಅಡುಗೆ ಈಗ ವೈರಲ್ ಅಗಿದೆ.

ಝೊಮೆಟೋದಲ್ಲಿ ಈಗ ಬಾಬಾ ಕಿ ಡಾಬಾವನ್ನು ಲಿಸ್ಟ್ ಮಾಡಲಾಗಿದೆ. ಆಹಾರ ಡೆಲಿವರಿಗೆ ಝೊಮೆಟೋ ತಂಡ ವೃದ್ಧ ದಂಪತಿ ಜೊತೆ ಕೆಲಸ ಮಾಡಲಿದೆ. ಈ ವಿಚಾರವನ್ನು ನಮ್ಮ ಗಮನಕ್ಕೆ ತಂದ ಇಂಟರ್‌ನೆಟ್‌ನ ಒಳ್ಳೆಯ ಜನರಿಗೆ ಥ್ಯಾಂಕ್ಸ್ ಎಂದು ಝೊಮೆಟೋ ಟ್ವೀಟ್ ಮಾಡಿದೆ.

ತ್ವಚೆ ಸೌಂದರ್ಯ: ಖಾಲಿ ಹೊಟ್ಟೆಗೆ ಸಮಂತಾ ಕುಡಿಯೋ ಸೀಕ್ರೆಟ್ ಡ್ರಿಂಕ್ ಇದು

ಇಂತಹ ಬೇರೆ ಡಾಭಾಗಳು ನಿಮಗೆ ತಿಳಿದಿದ್ದರೆ ನಮಗೆ ತಿಳಿಸಿದೆ. ನಾವು ಅವರಿಗೆ ನೆರವಾಗುವ ಪ್ರಯತ್ನ ಮಾಡುತ್ತೇವೆ ಎಂದಿದೆ ಝೊಮೆಟೋ. ಝೊಮೆಟೋ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios