Asianet Suvarna News Asianet Suvarna News

ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯ ಹನುಮಾನ್ ಗರ್ಹಿ ಲಡ್ಡುಗೆ ಸಿಕ್ತು ಜಿಐ ಟ್ಯಾಗ್

ಅಯೋಧ್ಯೆಯ ಜಗತ್ಪ್ರಸಿದ್ಧ ಹನುಮಾನ್ ಗರ್ಹಿ ಲಡ್ಡುಗೂ ಜಿಐ ಟ್ಯಾಗ್ ಸಿಕ್ಕಿದೆ. ಈ ಲಡ್ಡು ಯುಗಯುಗಾಂತರಗಳಿಂದ ಪ್ರಸಿದ್ಧಿ ಪಡೆದಿದೆ. 

Ayodhyas Hanuman Garhi Besan Ladoo Secures GI Tag Ahead Of Temple Consecration skr
Author
First Published Jan 11, 2024, 3:25 PM IST

ರಾಮಮಂದಿರ ದೇಗುಲದ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನವಿದೆ. ಅಯೋಧ್ಯೆಯಲ್ಲಿ ಇದರ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಅಯೋಧ್ಯೆಯ  ಹನುಮಾನ್ ಗರ್ಹಿ ಬೇಸನ್ ಲಾಡೂಗೆ ಜಿಐ ಟ್ಯಾಗ್ ದೊರೆತಿದೆ. 

ಒಡಿಶಾದ ಚಿಗಳಿ ಚಟ್ನಿಗೆ ಜಿಐ ಟ್ಯಾಗ್ ಸಿಕ್ಕಿದ ಬೆನ್ನಲ್ಲೇ ಅಯೋಧ್ಯೆಯ ಪ್ರಸಿದ್ಧ ಹನುಮಾನ್ ಗರ್ಹಿ ಲಾಡೂ ಕೂಡಾ ಭೌಗೋಳಿಕ ಸೂಚಕ ಮುದ್ರೆ ಒತ್ತಿಸಿಕೊಂಡಿದೆ. ಈ ಗುರುತಿಸುವಿಕೆಯು ಈ ಲಾಡೂಗಳ ವಿಶಿಷ್ಟ ಗುರುತನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಅಯೋಧ್ಯೆ ಈ ಲಾಡುಗಳ ಮೂಲ ಎಂಬುದನ್ನು ಸೂಚಿಸುವ ಜೊತೆಗೆ, ಸ್ಥಳೀಯ ಉತ್ಪಾದಕರ ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಸಹ ಭೌಗೋಳಿಕ ಸೂಚಕ ಟ್ಯಾಗ್ ಬೆಂಬಲಿಸುತ್ತದೆ.

ಸರ್ಕಾರದ ಈ ಕ್ರಮವನ್ನು ಶ್ಲಾಘಿಸುತ್ತಿರುವ ಸ್ಥಳೀಯ ಲಾಡೂ ತಯಾರಕರು, 'ಈ ಬೆಳವಣಿಗೆಯು ಅಯೋಧ್ಯೆಯ ನಿವಾಸಿಗಳು ಮತ್ತು ಮೋದಕ ಸಮಾಜಕ್ಕೆ ಸಂತೋಷವನ್ನು ತರುತ್ತದೆ.ರಾಮಮಂದಿರ ಉದ್ಘಾಟನೆಯ ಈ ಸಮಯದಲ್ಲಿ ಜಿಐ ಟ್ಯಾಗ್ ಸಿಕ್ಕಿರುವುದು ಹೆಚ್ಚು ಮಹತ್ವದ್ದಾಗಿದೆ, ' ಎಂದಿದ್ದಾರೆ.

ಕೆಂಪಿರುವೆ ಚಟ್ನಿಯಷ್ಟೇ ಅಲ್ಲ, ಒಡಿಶಾದ ಇನ್ನೂ 6 ಉತ್ಪನ್ನಗಳಿಗಿದೆ ಜಿಐ ...

ಅಯೋಧ್ಯೆಯಲ್ಲಿ ಶ್ರೀರಾಮನನ್ನು ನೋಡುವ ಮೊದಲು, ಭಕ್ತರು ಅಯೋಧ್ಯೆಯ ರಕ್ಷಕನೆಂದು ಪರಿಗಣಿಸಲ್ಪಟ್ಟ ಭಗವಾನ್ ಹನುಮಂತನಿಂದ ಆಶೀರ್ವಾದವನ್ನು ಪಡೆಯಬೇಕು ಎಂಬ ಸಂಪ್ರದಾಯವಿದೆ. ಇದಕ್ಕಾಗಿ ಜನರು ಪೂಜ್ಯ ಭಬಜರಂಗಬಲಿ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ತೆರಳಬೇಕು. ಈ ದೇವಾಲಯದಲ್ಲಿ ಲಾಡೂ ಪ್ರಸಾದ ಕೊಡಲಾಗುತ್ತದೆ.

ಹನುಮಾನ್ ಗರ್ಹಿ ಲಡ್ಡು ಏಕೆ ಪ್ರಸಿದ್ಧ?
ಹನುಮಾನ್ ಗರ್ಹಿ ಲಡ್ಡು ಯುಗಯುಗಾಂತರಗಳಿಂದ ಪ್ರಸಿದ್ಧಿ ಪಡೆದಿದೆ. ಜನರು ತಮ್ಮೊಂದಿಗೆ ದೂರದ ಸ್ಥಳಗಳಿಗೆ ಈ ಲಡ್ಡುವನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಈ ಲಡ್ಡುಗಳ ವಿಶೇಷತೆಯೆಂದರೆ, ಅವುಗಳನ್ನು ತಯಾರಿಸಲು ವಿಭಿನ್ನ ವಿಧಾನಗಳಿವೆ. ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ.

ಎಫ್​ಐಆರ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊ ...

ಭೌಗೋಳಿಕ ಸೂಚನೆ (GI) ಎಂದರೇನು?
ಭೌಗೋಳಿಕ ಸೂಚನೆಯು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಮತ್ತು ಗುಣಗಳನ್ನು ಹೊಂದಿರುವ ಅಥವಾ ಆ ಮೂಲದ ಕಾರಣದಿಂದಾಗಿ ಖ್ಯಾತಿಯನ್ನು ಹೊಂದಿರುವ ಉತ್ಪನ್ನಗಳ ಮೇಲೆ ಬಳಸಲಾಗುವ ಚಿಹ್ನೆ. 

Latest Videos
Follow Us:
Download App:
  • android
  • ios