Healthy Food: ಊಟ ಮಾಡಿದ ತಕ್ಷಣ ಹೊಟ್ಟೆ ಉಬ್ಬಿ ಕೊಳ್ಳುತ್ತಾ? ಹಾಗಿದ್ರೆ ಈ ಆಹಾರ ಬಿಟ್ಹಾಕಿ
ಊಟ ಮಾಡಿದ ತಕ್ಷಣ ಹೊಟ್ಟೆ ಊದಿಕೊಳ್ಳುತ್ತೆ. ಏನು ತಿನ್ನಬೇಕು ಗೊತ್ತಾಗೋದಿಲ್ಲ. ಹೀಗಂತ ಅನೇಕರು ಹೇಳ್ತಿರುತ್ತಾರೆ. ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ಕೆಲವೊಂದು ಆಹಾರದಿಂದ ದೂರವಿರಿ. ನಿಮ್ಮ ಆಹಾರದಲ್ಲಿಯೇ ಈ ಸಮಸ್ಯೆ ನಿಯಂತ್ರಿಸಬಹುದು.
ಬೆಳಿಗ್ಗೆ (Morning) ಎದ್ದಾಗ ಹೊಟ್ಟೆ (Stomach) ಸಾಮಾನ್ಯವಾಗಿಯೇ ಇರುತ್ತದೆ. ಆದ್ರೆ ಆಹಾರ ಸೇವನೆ ನಂತ್ರ,ರಾತ್ರಿಯಾಗ್ತಿದ್ದಂತೆ ಹೊಟ್ಟೆ ಊದಿ (bloating )ಕೊಳ್ಳುತ್ತದೆ. ಹೊಟ್ಟೆ ಉಬ್ಬರ ಸಾಮಾನ್ಯವಾಗಿ ಆಹಾರ (Food) ಸೇವನೆ ನಂತ್ರ ಕಾಣಿಸುತ್ತದೆ. ಇದು ಸಾಮಾನ್ಯವಾಗಿ ಗ್ಯಾಸ್ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳಿಂದ ಉಂಟಾಗುತ್ತದೆ. ಹೊಟ್ಟೆ ಉಬ್ಬರ ತುಂಬಾ ಸಾಮಾನ್ಯವಾಗಿದೆ. ಸುಮಾರು ಶೇಕಡಾ 16-30 ಜನರು ನಿಯಮಿತವಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಹೊಟ್ಟೆ ಉಬ್ಬಲು ಕಾರಣ ಯಾವುದೇ ಕಾಯಿಲೆಯಲ್ಲ. ಆದರೆ ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ಅತಿಯಾಗಿ ಆಹಾರ ಸೇವನೆ, ಮುಟ್ಟು, ಮಲಬದ್ಧತೆ ಇತ್ಯಾದಿಗಳಿಂದಲೂ ಉಂಟಾಗುತ್ತದೆ. ಇಂದಿನ ಜೀವನಶೈಲಿ, ಆಹಾರ ಪದ್ಧತಿ, ದೀರ್ಘ ಕಾಲ ಕುಳಿತುಕೊಳ್ಳುವುದು, ಹೊಟ್ಟೆಯಲ್ಲಿ ಅನಿಲ ರಚನೆ, ಜೀರ್ಣಾಂಗ ವ್ಯವಸ್ಥೆಯ ಅಸಮರ್ಪಕ ಕಾರ್ಯಗಳಿಂದಾಗಿ ಹೊಟ್ಟೆ ಊದುವ ಸಮಸ್ಯೆಯೂ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆ ನೋವು, ಚಡಪಡಿಕೆ, ಗ್ಯಾಸ್ ಸೇರಿದಂತೆ ಕೆಲ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಕೆಲವು ಆಹಾರಗಳ ಸೇವನೆಯೇ ಹೊಟ್ಟೆ ಉಬ್ಬಲು ಕಾರಣವಾಗುತ್ತದೆ. ಆ ಆಹಾರದಿಂದ ದೂರವಿದ್ದರೆ ನೀವು ಆರಾಮವಾಗಿ ಈ ಸಮಸ್ಯೆಯಿಂದ ಹೊರ ಬರಬಹುದು. ಹೊಟ್ಟೆ ಊದಿಕೊಳ್ಳಲು ಕಾರಣವಾಗುವ ಆಹಾರ ಯಾವುದು ಎಂಬ ವಿವರ ಇಲ್ಲಿದೆ.
ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಹೆಚ್ಚಿಸುವ ಆಹಾರಗಳು :
ಬೀನ್ಸ್ : ಬೀನ್ಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್ ಇದೆ. ಬೀನ್ಸ್ ನಲ್ಲಿ ಫೈಬರ್ ಸಮೃದ್ಧವಾಗಿದೆ. ಜೊತೆಗೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳು ಇದ್ರಲ್ಲಿವೆ. ಆದಾಗ್ಯೂ, ಹೆಚ್ಚಿನ ಬೀನ್ಸ್ ಗಳು ಆಲ್ಫಾ-ಗ್ಯಾಲಕ್ಟೊಸೈಡ್‌ಗಳೆಂದು ಕರೆಯಲ್ಪಡುವ ಸಕ್ಕರೆಗಳನ್ನು ಹೊಂದಿರುತ್ತವೆ. ಇವು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೆಂದ್ರೆ ಬೀನ್ಸ್ ನೀರಿನಲ್ಲಿ ನೆನೆಹಾಕಿ ಮೊಳಕೆಯೊಡೆದ ನಂತ್ರ ಅದನ್ನು ಬೇಯಿಸಿ ಸೇವನೆ ಮಾಡ್ಬೇಕು.
ಹೂಸುವುದರ ಬಗ್ಗೆ ಗೊತ್ತಿಲ್ಲದ ವಿಷಯಗಳು
ಕೋಸುಗಡ್ಡೆ-ಹೂಕೋಸು : ಹೊಟ್ಟೆ ಉಬ್ಬರ ಸಮಸ್ಯೆಯಿರುವವರು ಬೀನ್ಸ್ ಜೊತೆ ಕೋಸುಗಡ್ಡೆ, ಹೂಕೋಸು ಸೇವನೆಯನ್ನು ಕಡಿಮೆ ಮಾಡಿ. ಹೊಟ್ಟೆ ಉಬ್ಬಲು ಇದೂ ಕಾರಣವಾಗುತ್ತದೆ. ಈ ತರಕಾರಿಗಳು ಬೇಗ ಜೀರ್ಣವಾಗುವುದಿಲ್ಲ. ದುರ್ಬಲ ಜೀರ್ಣ ಶಕ್ತಿ ಹೊಂದಿರುವ ಜನರು, ಈ ತರಕಾರಿಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದರಿಂದಾಗಿ ಹೊಟ್ಟೆ ಊದಿಕೊಳ್ಳುತ್ತದೆ.
ಎಣ್ಣೆಯುಕ್ತ ಆಹಾರ : ಹೆಚ್ಚು ಕರಿದ ಪದಾರ್ಥಗಳು, ಜಂಕ್ ಫುಡ್‌ಗಳು, ಪ್ಯಾಕ್ ಮಾಡಿದ ಆಹಾರಗಳು ಅಥವಾ ಹೊರಗಿನ ಆಹಾರ, ಸೋಡಾ, ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಿದರೆ ಹೊಟ್ಟೆ ಊದಿಕೊಳ್ಳುವ ಸಮಸ್ಯೆಯಾಗುತ್ತದೆ. ಇವುಗಳ ಸೇವನೆ ಹೊಟ್ಟೆ ಉಬ್ಬರಕ್ಕೆ ಕಾರಣವಾಗುವುದಲ್ಲದೆ ಹೊಟ್ಟೆಯಲ್ಲಿ ಉರಿಯುಂಟು ಮಾಡುತ್ತದೆ.
ಸೇಬು ಹಣ್ಣು : ಈಗಾಗಲೇ ಹೊಟ್ಟೆ ಊದಿಕೊಳ್ಳುವ ಸಮಸ್ಯೆ ನಿಮಗಿದ್ದರೆ ಸೇಬು ಹಣ್ಣನ್ನು ಅತಿಯಾಗಿ ಸೇವನೆ ಮಾಡಬೇಡಿ. ಸೇಬು ಆರೋಗ್ಯಕ್ಕೆ ಒಳ್ಳೆಯದು ನಿಜ. ಇದರಲ್ಲಿರುವ ಫ್ರಕ್ಟೋಸ್, ಫೈಬರ್ ಇದ್ದು,ಅದು ಗ್ಯಾಸ್ ಹೆಚ್ಚಿಸುತ್ತದೆ.
ಬೆಳ್ಳುಳ್ಳಿ : ಬೆಳ್ಳುಳ್ಳಿ ಆರೋಗ್ಯಕರವೆಂದು ಆಯುರ್ವೇದದಲ್ಲೂ ಹೇಳಲಾಗಿದೆ. ಸಾಮಾನ್ಯವಾಗಿ ಜನರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತಾರೆ. ಆದರೆ ಗ್ಯಾಸ್ ಸಮಸ್ಯೆಯಿದ್ರೆ ಬೆಳ್ಳುಳ್ಳಿ ತಿನ್ನಬೇಡಿ.
ದ್ವಿದಳ ಧಾನ್ಯ : ದ್ವಿದಳ ಧಾನ್ಯಗಳ ಅತಿಯಾದ ಸೇವನೆಯು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಅವು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದು ಹೊಟ್ಟೆ ಊದಿಕೊಳ್ಳಲು ಕಾರಣವಾಗುತ್ತದೆ. ದ್ವಿದಳ ಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಸೇವಿಸುವ ವಿಧಾನ ಬದಲಿಸಿ. ಒಂದೇ ಬಾರಿ ಅನೇಕ ದ್ವಿದಳ ಧಾನ್ಯವನ್ನು ಸೇವನೆ ಮಾಡಬೇಡಿ.
ಗ್ಯಾಸ್: ಮುಜಗರವಾಗುತ್ತಿದ್ದರೆ ನಿಮ್ಮ ಆಹಾರ ಹೀಗಿರಲಿ
ಬಾರ್ಲಿ : ಬಾರ್ಲಿಯು ಏಕದಳ ಧಾನ್ಯವಾಗಿದೆ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಮ್ಯಾಂಗನೀಸ್ ಮತ್ತು ಸೆಲೆನಿಯಂತಹ ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಆದ್ರೆ ಫೈಬರ್ ಹೆಚ್ಚಿರುವ ಕಾರಣ ಹೊಟ್ಟೆ ಊದುವ ಸಮಸ್ಯೆ ಕಾಡುತ್ತದೆ.