ಗವ್ಜಿ ಗಮ್ಮತ್‌-ಫುಲ್ ಮಸ್ತಿ, ಉಡುಪಿ ಕ್ರೀಡಾಕೂಟದಲ್ಲಿ ವೆರೈಟಿ ಫುಡ್ ಸ್ಟಾಲ್

ಅಲ್ಲಾಗಿದ್ದು ಕ್ರೀಡಾಕೂಟ. ಆದ್ರೆ ಆಟದ ಮೈದಾನದಲ್ಲಿ ಕೆಲವು ವಿದ್ಯಾರ್ಥಿಗಳು (Students) ತಮ್ಮ ಕ್ರೀಡಾ (Sports) ಪ್ರತಿಭೆ ತೋರಿಸುವುದರಲ್ಲಿ ಮಗ್ನರಾಗಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಭಿನ್ನ ವಿಭಿನ್ನ ಆಹಾರ (Food)ಗಳು ಮಾಡುವುದರಲ್ಲಿ ಫುಲ್ ಬ್ಯುಸಿ ಯಾಗಿದ್ದರು. ಆಟ ಪ್ಲಸ್ ಊಟ ಈ ಕ್ರೀಡಾಕೂಟಕ್ಕೆ ಹೊಸ ನೋಟವನ್ನೇ ನೀಡಿತ್ತು. ಇದೆಲ್ಲಾ ನಡ್ದಿದ್ದು ಎಲ್ಲಿ. ಇಲ್ಲಿದೆ ಮಾಹಿತಿ.

Attractive Food Stall At Udupi Gandhi Memorial College Sports Day

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ ಉಡುಪಿ

ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಅಂದರೆ ಸಾಕು ಅಲ್ಲಿ ಆಟೋಟ ಸ್ಪರ್ಧೆಗಳದ್ದೇ ಕಾರುಬಾರು. ವಿದ್ಯಾರ್ಥಿಗಳು (Students) ಕ್ರೀಡಾ ಸ್ಪರ್ಧೆಗಳಲ್ಲೇ ಮುಳುಗಿ ಹೋಗಿರುತ್ತಾರೆ. ಆದರೆ ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾ ಕೂಟವನ್ನು ಕೊಂಚ ವಿಭಿನ್ನವಾಗಿ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಕ್ರೀಡಾ ಮನೋಭಾವಕ್ಕೆ ವಿಭಾಗವಾರು ಆಹಾರ ಮಳಿಗೆ (Food Stall) ಇನ್ನಷ್ಟು ಹುರುಪು ನೀಡಿತು.

food garage

ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಕಾಲೇಜಿನ ಮೈದಾನದಲ್ಲಿ ವಿಭಾಗವಾರು ಫುಡ್ ಸ್ಟಾಲ್ ತೆರೆಯಲಾಗಿತ್ತು. ಪ್ರತಿ ವಿಭಾಗದ ಆಹಾರ ಮಳಿಗೆ ಒಂದೊಂದು ವಿನೂತನ ಪರಿಕಲ್ಪನೆಯಲ್ಲಿ  ಮೂಡಿ ಬಂದಿದೆ. ಕಾಲೇಜಿನ ಬಿಎ, ಬಿಸಿಎ, ಬಿಎಸ್ಸಿ,ಬಿಕಾಂ ವಿದ್ಯಾರ್ಥಿಗಳು ತಾವು ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಮಾರಾಟ ಮಾಡುತ್ತಾ ಕಾಲೇಜಿನ ಸ್ಪೋರ್ಟ್ಸ್ ಡೇ (Sports Day)ಯನ್ನು  ವಿಭಿನ್ನವಾಗಿ ಆಚರಿಸಿದರು.

ವಿಭಿನ್ನ ಕಲ್ಪನೆಯಲ್ಲಿ ಫುಡ್ ಸ್ಟಾಲ್
ಚೆಂದದ ಗ್ಯಾರೇಜ್ ,ಅಲ್ಲೊಂದು ಕಾರಿನ ಮಾದರಿ. ಹಳೆಯ ಕಾಲದ ಸ್ಕೂಟರ್ (Scooter), ಕಲಾತ್ಮಕ ವಸ್ತುಗಳ ಪ್ರದರ್ಶನ, ಫೋಟೋ ಪ್ರಿಯರ ಮನಸ್ಸಿಗೆ ಮುದ ನೀಡುವ ಬಿಎಸ್ಸಿ ವಿದ್ಯಾರ್ಥಿಗಳ ಈ ವಿನೂತನ ಗ್ಯಾರೇಜ್ ಕಲ್ಪನೆ ಕ್ರೀಡಾಕೂಟದ ಹೈಲೈಟ್ ಆಗಿತ್ತು.

ನೀವು ತಿನ್ನೋದು ದೇಹಕ್ಕೆ ಸಾಕಾಗ್ತಿಲ್ಲ ಅನ್ನೋ ಸೂಚನೆ ಇದು, ನೆಗ್ಲೆಕ್ಟ್ ಮಾಡ್ಬೇಡಿ

thanal madal

ತೆಂಗಿನ ಮಡಲಿನಲ್ಲಿ  ಅಲಂಕಾರಗೊಂಡ ಆಹಾರದ ಸ್ಟಾಲ್ ಅಂತೂ ಎಲ್ಲರ ಗಮನ ಸೆಳೆಯಿತು. ತುಳು ಲಿಪಿಯಲ್ಲಿ ಬರೆದ ಬರಹಗಳು ,ಹಳೆಯ ಕಾಲದ ವಸ್ತುಗಳ ಪ್ರದರ್ಶನ ಪಕ್ಕಾ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು, ಬಿ.ಸಿ.ಎ ವಿದ್ಯಾರ್ಥಿಗಳ ಈ ಫುಡ್ ಸ್ಟಾಲ್ ಮುಂದಾಳುತ್ವ ವಹಿಸಿದ್ದರು.

ಬಸ್ಸಿನ ಮಾದರಿಯ ಕಿಟಕಿಯಲ್ಲಿ ವಿವಿಧ ಖಾದ್ಯಗಳ ಮಾರಾಟ, ಪಕ್ಕದಲ್ಲೊಂದು ಸೆಲ್ಫಿ ಸ್ಟ್ಯಾಂಡ್ ಅದಕ್ಕಂಟಿಸಿದ ಟಿಕೆಟ್, ಹಳೆಯ ಕಾಲದ ಬಸ್ ಗಳ ಫೋಟೋ  ನೋಡುಗರ ಗಮನ ಸೆಳೆಯಿತು. ಈ ಡೀಸಲ್ ಸ್ಟಾಲ್ ನ ಹಿಂದೆ ಬಿಎ ವಿದ್ಯಾರ್ಥಿಗಳ 'ಶ್ರಮವಿತ್ತು. ತೆಂಗಿನ ಗರಿಯ ಹಸಿರಿನ ನಡುವೆ ಕಂಗೊಳಿಸುತ್ತಿರುವ ಆಹಾರ ಮಳಿಗೆ .' ಚಿಲ್ ಅಂಡರ್ ಮಡಲ್' ಕಲ್ಪನೆಯಲ್ಲಿ ಮೂಡಿ ಬಂದಿತ್ತು.ಇದು ಬಿ. ಕಾಂ ವಿದ್ಯಾರ್ಥಿಗಳ ಆಹಾರ ಮಳಿಗೆ. 

food bus

ಬಾಯಲ್ಲಿ ನೀರೂರಿಸುವ ರುಚಿ ರುಚಿಯಾದ ಖಾದ್ಯ
ಆಹಾರದ ಮಳಿಗೆ ನೋಡುಗರ ಕಣ್ಣಿಗೆ ಮುದ ನೀಡುತ್ತಿದ್ದರೆ, ಸ್ಟಾಲ್‌ಗಳ ಖಾದ್ಯಗಳು ಆಹಾರ ಪ್ರಿಯರ ಬಾಯಿಯಲ್ಲಿ ನೀರೂರಿಸುವಂತಿತ್ತು. ಸಮೋಸ, ಗೋಬಿ ರೋಲ್, ಮೋಮೊಸ್, ಸ್ಯಾಂಡ್‌ವಿಚ್,ಪನ್ನೀರ್ ಮಸಾಲಾ, ಚಾಟ್ ಮಸಾಲ, ಹೋಂ ಮೇಡ್ ಚಾಕೊಲೇಟ್, ರಾಗಿ ಮುದ್ದೆ,ಬಸ್ಸಾರು ,ಚಣ ಮಸಾಲಾ, ಚುರು ಮುರಿ, ಮೋಹಬತ್ ಕಾ ಶರಬತ್ , ಫ್ರೂಟ್ ಪಂಚ್, ತರಾವರಿ ಜ್ಯೂಸ್,ಚಾಟ್ಸ್, ಹೀಗೆ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಖಾದ್ಯಗಳು ಎಲ್ಲರ ಬಾಯಿಯಲ್ಲಿ ನೀರೂರಿಸಿತು.

ಮಸಾಲೆ ಪದಾರ್ಥ ತಿಂದು ತೂಕ ಇಳಿಸಿಕೊಳ್ಳಬಹುದಾ? ಈ ಐದು ಐಟಂ ವೈಟ್‌ಲಾಸ್‌ಗೆ ಬೆಸ್ಟ್

ಆಹಾರದ ಮಾರಾಟದ ಜೊತೆಗೆ  ಮನೋರಂಜನಾ ಆಟಗಳು ಕ್ರೀಡಾ ಕೂಟಕ್ಕೆ ಇನ್ನಷ್ಟು ಮೆರಗು ನೀಡಿತು.ಕಾಲೇಜಿನ ಕ್ರೀಡಾಕೂಟ ಕೇವಲ ಆಟಕ್ಕೆ ಸೀಮಿತವಾಗದೆ,  ವಿದ್ಯಾರ್ಥಿಗಳ ಪಾಕ ಪ್ರಾವೀಣ್ಯತೆ, ಮಾರಾಟ ಕಲೆ ಹೆಚ್ಚಿಸುವುದಕ್ಕೆ  ಕಾರಣವಾಗಿದೆ. ತಾವೇ ತಯಾರಿಸಿದ ಅಡುಗೆಯನ್ನು ಮಾರಾಟ ಮಾಡಿ ವಿದ್ಯಾರ್ಥಿಗಳು ಸಂತಸ ಪಟ್ಟರೆ ,ವಿದ್ಯಾರ್ಥಿಗಳ ಉತ್ಸಾಹ , ಪಾಲ್ಗೊಳ್ಳುವಿಕೆ ಉಪನ್ಯಾಸಕರಿಗೆ ಖುಷಿ ನೀಡಿದೆ .ಒಟ್ಟಿನಲ್ಲಿ ಕಾಲೇಜಿನ ಸ್ಪೋರ್ಟ್ಸ್ ಡೇ ಹೀಗೂ ಮಾಡಬಹುದು ಎನ್ನುವುದಕ್ಕೆ  ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಒಂದು ಉತ್ತಮ ಉದಾಹರಣೆಯಾಗಿದೆ.

Latest Videos
Follow Us:
Download App:
  • android
  • ios