ಶೃಂಗೇರಿ ದೇವಸ್ಥಾನದಲ್ಲಿ ತಟ್ಟೆಗಳನ್ನು ಜೋಡಿಸಿರುವ ಆಕರ್ಷಕ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಜಾಲತಾಣದಲ್ಲಿ (Social media) ಆಗಾಗ ಆಸಕ್ತಿದಾಯಕ ವಿಚಾರಗಳನ್ನು, ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಟ್ವಿಟರ್ ಖಾತೆಯನ್ನು ಇದಕ್ಕೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಸದ್ಯ ಆನಂದ್ ಮಹೀಂದ್ರಾ ಅವರು ಶೃಂಗೇರಿ ದೇವಸ್ಥಾನದಲ್ಲಿ ತಟ್ಟೆಯನ್ನು ಆಕರ್ಷಕ ರೀತಿಯಲ್ಲಿ ಜೋಡಿಸಿಟ್ಟಿರುವ ಸುಂದರವಾದ ಚಿತ್ರವನ್ನು ಪೋಸ್ಟ್ ಮಾಡಿದ್ದು, ವೈರಲ್  (Viral) ಆಗಿದೆ. 

Anand Mahindra Shares Pic Of Steel Plates Stacked Up At Sringeri Temple In Karnataka Vin

ಆನಂದ್ ಮಹೀಂದ್ರಾ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ (social media) ಬಳಕೆದಾರರಾಗಿದ್ದಾರೆ ಮತ್ತು ಅವರ ಟ್ವಿಟರ್ ಖಾತೆಯು ಅದಕ್ಕೆ ಪುರಾವೆಯಾಗಿದೆ. ಕೈಗಾರಿಕೋದ್ಯಮಿಗಳು ಸಾಮಾನ್ಯವಾಗಿ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂಥಾ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ಜನ ಮೆಚ್ಚುಗೆ ಪಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತವೆ. ಸದ್ಯ ಈ ಬಿಲಿಯನೇರ್ ಶೃಂಗೇರಿ ದೇವಸ್ಥಾನದಲ್ಲಿ ತಟ್ಟೆಯನ್ನು ಜೋಡಿಸಿಟ್ಟಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

ಕರ್ನಾಟಕ ರಾಜ್ಯದಲ್ಲಿ ಹಲವಾರು ಸುಂದರ ದೇವಸ್ಥಾನಗಳಿವೆ. ಅತ್ಯಾಕರ್ಷಕ ಕೆತ್ತನೆ, ಮಂಟಪ, ವಿಗ್ರಹಗಳಿಂದ ಜನಮನ ಸೆಳೆಯುತ್ತವೆ. ರಾಜ್ಯದ ದೇಗುಲಗಳ ಇನ್ನೊಂದು ವಿಶೇಷತೆಯೆಂದರೆ ಇಲ್ಲಿಗೆ ಬರುವ ಭಕ್ತರು ಹಸಿವಿನಿಂದ ಹಿಂತಿರುಗಬೇಕಿಲ್ಲ. ಪ್ರಸಾದ ರೂಪದಲ್ಲಿ ಭಕ್ತರಿಗೆ ಪುಳಿಯೋಗರೆ, ಪಾಯಸ, ಕೋಸಂಬರಿ ಹೀಗೆ ಏನನ್ನಾದರೂ ನೀಡಲಾಗುತ್ತದೆ. ಹಲವು ಜಿಲ್ಲೆಗಳಲ್ಲಿ ದೇವಸ್ಥಾನನಕ್ಕೆ ಆಗಮಿಸುವ ಭಕ್ತರು ಹಸಿವಿನಿಂದ ಹಿಂತಿರುಗಬಾರದು ಎಂಬ ಕಾರಣಕ್ಕೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಇರುತ್ತದೆ.

ಬೆಂಗಳೂರು-ಉಡುಪಿ ರಸ್ತೆಯ ಜಂಗಲ್‌ ಡ್ರೈವ್‌ನ ಸುಂದರ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಅಂಥಾ ದೇಗುಲಗಳಲ್ಲೊಂದು ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಶೃಂಗೇರಿ ದೇವಸ್ಥಾನ. ಇಲ್ಲಿ ಪ್ರತಿದಿನ ಅನ್ನಸಂತರ್ಪಣೆ ನಡೆಯುತ್ತದೆ. ಸಾವಿರಾರು ಭಕ್ತಾಧಿಗಳು ದೇವರ ದರ್ಶನ ಪಡೆದು, ಹೊಟ್ಟೆ ತುಂಬಾ ಉಂಡು ಸಂತೃಪ್ತರಾಗಿ ಮನೆಗೆ ಮರಳುತ್ತಾರೆ. ಸದ್ಯ ಇಲ್ಲಿನ ದೇವಸ್ಥಾನದಲ್ಲಿ ಊಟದ ತಟ್ಟೆಗಳನ್ನು ಜೋಡಿಸಿಟ್ಟಿರುವ ಫೋಟೋ ಎಲ್ಲೆಡೆ ವೈರಲ್ ಆಗ್ತಿದೆ.

ದೇವಸ್ಥಾನದ ಆವರಣದಲ್ಲಿ ಅಂದವಾಗಿ ಜೋಡಿಸಲಾದ ಸ್ಟೀಲ್ ಪ್ಲೇಟ್‌ಗಳ ಚಿತ್ರವು ಆನಂದ್ ಮಹೀಂದ್ರಾ ಅವರನ್ನು ಸಂಪೂರ್ಣವಾಗಿ ಬೆರಗುಗೊಳಿಸಿದೆ. ಉದ್ಯಮಿ ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ತಟ್ಟೆಗಳನ್ನು ಜೋಡಿಸಿಟ್ಟಿರುವ ರೀತಿ ತುಂಬಾ ಕಲಾತ್ಮಕವಾಗಿದೆ ಮತ್ತು ಅದ್ಭುತವಾಗಿದೆ' ಎಂದು ಉದ್ಯಮಿ ಆನಂದ್ ಮಹೀಂದ್ರಾ (Anand Mahindra)  ಟ್ವಿಟರ್ ಖಾತೆಯಲ್ಲಿ (Twitetr account) ಫೋಟೋದ ಪೋಸ್ಟ್‌ನ ಜೊತೆಗೆ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಹಲವಾರು ತಟ್ಟೆಗಳನ್ನು ತುಂಬಾ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವುದನ್ನು ನೋಡಬಹುದು. 

ದೇವರ ನಾಡಲ್ಲಿ ಕಣ್ಮನ ಸೆಳೆಯುತ್ತಿದೆ ಪಿಂಕ್ ನದಿ, ನಿಸರ್ಗ ರಮಣೀಯತೆಗೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ

ಚಿತ್ರವನ್ನು ಆರಂಭದಲ್ಲಿ ಆಶಾ ಖರ್ಗಾ ಎಂಬವರು ಹಂಚಿಕೊಂಡಿದ್ದಾರೆ ಮತ್ತು ನಂತರ ಆನಂದ್ ಮಹೀಂದ್ರಾ ಅವರ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಚಿತ್ರಿಸಲಾದ ಸಮತೋಲನ ಮತ್ತು ಸಾಮರಸ್ಯದ ನಡುವಿನ ಸಂಬಂಧವನ್ನು ಸಹ ಆಶಾ ಖರ್ಗಾ ಎಂಬವರು ಒತ್ತಿ ಹೇಳಿದರು. ಜೀವನದ ರಹಸ್ಯವೆಂದರೆ ನೀವು ಕರ್ನಾಟಕದ @ ಶೃಂಗೇರಿ ದೇವಸ್ಥಾನದಲ್ಲಿ ಮಾಡುವ ಪ್ರತಿಯೊಂದರಲ್ಲೂ ಸರಿಯಾದ ಸಮತೋಲನವನ್ನು ಕಂಡುಹಿಡಿಯುವುದು, ಉಕ್ಕಿನ ಫಲಕಗಳು ಸಮತೋಲನವು ಹೇಗೆ ಸಾಮರಸ್ಯವನ್ನು ತರುತ್ತದೆ ಎಂಬುದನ್ನು ತೋರಿಸುತ್ತದೆ. ಸರಳವಾದ ದೇವಾಲಯದಲ್ಲಿ ಆಧುನಿಕ ಸ್ಥಾಪನೆಯಂತೆ,' ಎಂದು ಆಶಾ ಖರ್ಗಾ ಬರೆದುಕೊಂಡಿದ್ದಾರೆ. 

ನೆಟಿಜನ್‌ಗಳು ಕೂಡ ಪ್ಲೇಟ್‌ಗಳ ಜೋಡಣೆಗೆ ಬೆರಗಾಗಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ನೆಟ್ಟಿಗರು ಅದ್ಭುತವಾಗಿ ಪ್ರತಿಕ್ರಿಯಿಸಿದ್ದಾರೆ. 'ನೀವು ತಟ್ಟೆಗಳನ್ನು ಹೇಗೆ ಜೋಡಿಸಲಾಗಿದೆ ಎಂಬುದನ್ನು ಶೇರ್ ಮಾಡಿದ್ದೀರಿ. ಆದರೆ ಇದನ್ನು ಹೇಗೆ ವಾಪಾಸ್ ತೆಗೆಯಲಾಗುತ್ತದೆ ಎಂಬುದು ನಮ್ಮಲ್ಲಿ ಕುತೂಹಲ ಮೂಡಿಸುತ್ತಿದೆ' ಎಂದು ಹಲವರು ಕಮೆಂಟಿಸಿದ್ದಾರೆ. ಇನ್ನು ಕೆಲವರು 'ತಟ್ಟೆಯನ್ನು ಈ ರೀತಿ ಜೋಡಿಸುವುದು ನಿಜಕ್ಕೂ ಒಂದು ಕಲೆಯಾಗಿದೆ. ಒಂದೇ ಬಾರಿಗೆ 10-15 ಪ್ಲೇಟ್‌ಗನ್ನು ಸಂಗ್ರಹಿಸುತ್ತಾರೆ. ನಾನು ಅದನ್ನು ವೈಯಕ್ತಿಕವಾಗಿ ನೋಡಿದ್ದೇನೆ. ಇದು ನಿಜವಾಗಿಯೂ ಅಚ್ಚರಿಪಡುವ ವಿಷಯ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

Latest Videos
Follow Us:
Download App:
  • android
  • ios