ಚಟ್ಟಂಬಡೆ, ದೋಸೆ, ಇಡ್ಲಿ ಸಾಂಬಾರ್, ChatGPT ಮೀರಿಸಿದ ಉಡುಪಿ ಹೊಟೆಲ್ ಮಾಣಿಗೆ ಮನಸೋತ ಮಹೀಂದ್ರ!
ಚಟ್ಟಂಬಡೆ, ಬಿಸ್ಕೂಟ್ ಅಂಬಡೆ, ಬನ್ಸ್, ಕಡ್ಲೆ ಅವಲಕ್ಕಿ, ಬಟಾಣಿ ಅವಲಕ್ಕಿ, ದೋಸೆ, ಇಡ್ಲಿ ಸಾಂಬಾರ್-ಚಟ್ನಿ...ಅಬ್ಬಬ್ಬಾ ಒಂದರ ಹಿಂದೆ ಮತ್ತೊಂದು ತಿನಿಸುಗಳ ಹೆಸರು, ಒಂದೇ ಉಸಿರಿನಲ್ಲಿ ಐವತ್ತಕ್ಕೂ ಹೆಚ್ಚು ತನಿಸುಗಳ ಮೆನು ಹೇಳಿದ ಉಡುಪಿಯ ಶ್ರೀ ವಿಠಲ್ ಟೀ ಕಾಫಿ ಹೌಸ್ ಮಾಣಿಯ ಸಾಮರ್ಥ್ಯಕ್ಕೆ ಉದ್ಯಮಿ ಆನಂದ್ ಮಹೀಂದ್ರ ಮನಸೋತಿದ್ದಾರೆ. ಈ ಅದ್ಭುತ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಉಡುಪಿ(ನ.11) ಚಾಟ್‌ಜಿಪಿಟಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಜನರೇಟ್ ಮಾಡಿರುವ ಮೆನು ಈ ಮಾಣಿಯ ಮುಂದೆ ಸೋತು ಸುಣ್ಣವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ರಚಿತ ಮೆನು ಉಡುಪಿಯ ಶ್ರೀ ವಿಠಲ್ ಟೀ ಕಾಫಿ ಹೌಸ್ ಮಾಣಿಯ ಮುಂದೆ ಶೂನ್ಯ. ಒಂದೇ ಉಸಿರಿನಲ್ಲಿ, ಹೊಟೆಲ್‌ನಲ್ಲಿನ ಎಲ್ಲಾ ತಿಂಡಿಗಳ ಮೆನು ಹೇಳಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ. ಇಲ್ಲಿ ಒಂದೇ ಉಸಿರಿನಲ್ಲಿ ಐವತಕ್ಕೂ ಹೆಚ್ಚು ತಿನಿಸುಗಳ ಹೆಸರು ಹೇಳಿ ಎಲ್ಲರನ್ನು ಚಕಿತಗೊಳಿಸಿದ್ದಾರೆ. ಈ ಹೊಟೆಲ್ ಮಾಣಿಯ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡು, ಚಾಟ್‌ಜಿಪಿಟಿ, ಆರ್ಟಿಫೀಶಿಯಲ್ ಇಂಟಿಲೆಜೆನ್ಸ್ ಮೀರಿಸಿದ ವ್ಯಕ್ತಿ ಎಂದು ಪ್ರಶಂಸಿಸಿದ್ದಾರೆ.
ಉಡುಪಿಯ ಶ್ರೀ ವಿಠಲ್ ಟೀ ಕಾಫಿ ಹೌಸ್ ಹೊಟೆಲ್‌ನ ದೃಶ್ಯವಿದೆ. ಹೊಟೆಲ್‌ಗೆ ಆಗಮಿಸಿದ ವ್ಯಕ್ತಿಯೊಬ್ಬರು ಯಾವೆಲ್ಲಾ ಬಗೆಯ ತಿಂಡಿಗಳಿವೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೀಡಿದ ಉತ್ತರ ಎಲ್ಲರನ್ನು ಚಕಿತಗೊಳಿಸಿದೆ. ಕಾರಣ ಒಂದೊಂದು ತಿನಿಸಿನಲ್ಲಿರುವ ವೈರೈಟಿ ಆಹಾರದ ಹೆಸರು ಹೇಳಿದ್ದಾರೆ. ಚಟ್ಟಂಬಡೆ, ಬಿಸ್ಕೂಟ್ ಅಂಬಡೆ, ಬನ್ಸ್, ಕಡ್ಲೆ ಅವಲಕ್ಕಿ, ಬಟಾಣಿ ಅವಲಕ್ಕಿ, ದೋಸೆ, ಇಡ್ಲಿ ಸಾಂಬಾರ್-ಚಟ್ನಿ, ವಡೆ ಚಟ್ನಿ, ಸಾದಾ ದೋಸೆ, ತೆಳು ದೋಸೆ, ತುಪ್ಪ ದೋಸೆ, ನೀರುಲ್ಳಿ ದೋಸೆ, ಖಾರ ದೋಸೆ, ನೀರುಳ್ಳಿ ಮಸಾಲೆ, ಕಾರ್ಗಿಸ್ ಮಸಾಲೆ, ಫ್ಯಾಮಿಲಿ ಪ್ಯಾಕ್ ಮಸಾಲೆ, ಲೋಕಲ್ ಮಸಾಲೆ, ಬನಾನ ಮಂಚೂರಿ, ಕಾಫಿ ಟೀ, ಮಾಲ್ಟ್, ಜ್ಯೂಸ್, ಚಾಟ್ಸ್ ಸೇರಿದಂತೆ ಐವತಕ್ಕೂ ಹೆಚ್ಚುು ತಿನಿಸುಗಳ ಹೆಸರನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದಾರೆ. ಇದರಲ್ಲಿ ನಿಮಗೆ ಯಾವುದು ಬೇಕು ಎಂದು ಮರು ಪ್ರಶ್ನೆ ಹಾಕಿದ್ದಾರೆ.
ವಿಶ್ವದ ಮೊದಲ ಫೋಲ್ಡೇಬಲ್ ಇ ಬೈಕ್ ಮೇಲೆ ಆನಂದ್ ಮಹೀಂದ್ರ ಸವಾರಿ, ಬೆಲೆ 44,999 ರೂ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರ, ಇವರ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. ಚಾಟ್‌ಜಿಪಿಟಿ ರಚಿತ ಉಹಾರ ಮೆನು ಉಡುಪಿಯ ಶ್ರೀ ವಿಠಲ್ ಟಿ ಕಾಫ್ ಹೌಸ್ ಮಾಣಿಯ ಸರ್ಚ್ ಸಾಮರ್ಥ್ಯದ ಮುಂದೆ ಶೂನ್ಯ. ಇದು ನನ್ನ ಮುಂದಿನ ಪ್ರಯಾಣದ ಪಟ್ಟಿಯಲ್ಲಿನ ಸ್ಥಳ. ಇನ್‌ಕ್ರೆಡಿಬಲ್ ಉಡುಪಿ ಎಂದು ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಭಾರಿ ಮೆಚ್ಚುಗೆ ಪಡೆದಿದೆ. ಜೊತೆಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಹಲವು ಸ್ಥಳೀಯರು, ಕನ್ನಡಿಗರು ಉಡುಪಿಯ ಸೌಂದರ್ಯ ಹಾಗೂ ಉಡುಪಿಯ ಪ್ರಾದೇಶಿಕ ಸೊಗಸನ್ನು ಹಾಡಿಹೊಗಳಿದ್ದಾರೆ. ಕರ್ನಾಟಕದ ಪ್ರವಾಸೋದ್ಯಮಗಳಲ್ಲಿ ಉಡುಪಿ ಅತೀ ಹೆಚ್ಚಿನ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರದೇಶ. ಇದೀಗ ಉಡುಪಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆನಂದ್ ಮಹೀಂದ್ರ ಹಂಚಿಕೊಂಡ ಈ ವಿಡಿಯೋದಿಂದ ಉಡುಪಿಯ ಶ್ರೀ ವಿಠಲ್ ಕಾಫಿ ಹೌಸ ಮಾತ್ರವಲ್ಲ, ಉಡುಪಿಯಲ್ಲೂ ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗಲಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ದೃಷ್ಟಿಹೀನ ಉದ್ಯಮಿ ಸಾಧನೆಗೆ ಮನಸೋತ ಆನಂದ್ ಮಹೀಂದ್ರಾ; ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿ ಶ್ಲಾಘನೆ