Asianet Suvarna News Asianet Suvarna News

ಪ್ರವಾಸದಲ್ಲಿ ಚಿಗುರುವ ಸ್ನೇಹ: ಈ ರಾಶಿಯವರಿಗೆ ಸ್ಕೂಬಾ ಡೈವಿಂಗ್'ನಲ್ಲಿ ಆಗುತ್ತೆ ಲವ್...

ಬಹುತೇಕರು ರಜೆಗಳಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಈ ವೇಳೆ ಅನೇಕ ಸ್ನೇಹಿತರ ಪರಿಚಯ ಆಗುತ್ತದೆ. ಸ್ನೇಹ ಪ್ರೀತಿಯಾಗಿ ಬದಲಾಗುವ ಸಾಧ್ಯತೆ ಕೂಡ ಇರುತ್ತದೆ. ಇದಕ್ಕೆ ರಾಶಿಚಕ್ರದ ಪ್ರಭಾವ ಕೂಡ ಕಾರಣವಾಗಿದೆ. ಯಾವ ರಾಶಿಯವರಿಗೆ ಈ ರೀತಿ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇಲ್ಲಿದೆ.
 

Zodiac Signs Who Are Likely to Find Love on a Vacation suh
Author
First Published Jun 1, 2023, 2:12 PM IST | Last Updated Jun 1, 2023, 2:28 PM IST

ಪ್ರೀತಿ’(Love) ಎಂಬುದು ಚಿಕ್ಕ ಪದವಾಗಿರಬಹುದು,  ಈ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರ (Important Role) ವಹಿಸುತ್ತದೆ. ಯಾರಿಗೆ ‘ಪ್ರೀತಿ’ ಬೇಡ ಹೇಳಿ? ಮನೆಗಳಲ್ಲಿ ಸಾಕುವ ಪ್ರಾಣಿಗಳಿಂದ ಹಿಡಿದು ಮನೆಯಲ್ಲಿರುವ ವಯಸ್ಸಾದ ನಮ್ಮ ಅಜ್ಜ ಅಜ್ಜಿಯವರೆಗೂ ತಮ್ಮನ್ನು ಎಲ್ಲರೂ ಪ್ರೀತಿಯಿಂದ ಕಾಣಬೇಕು ಎಂದೆನಿಸುವುದು ಸಹಜವಾದ ವಿಷಯ. ಎರಡು ಮನಸ್ಸನ್ನು ಒಂದು ಮಾಡುವುದೇ ಈ ಪ್ರೀತಿ ಎಂದು ಹೇಳಬಹುದು.ನಿಜವಾದ ಪ್ರೀತಿ ಅನ್ನೋದು ಪರಿಪೂರ್ಣ ಪ್ರಣಯವದು. ಆದರೆ ಅದನ್ನು ಗುರುತಿಸಿಕೊಳ್ಳುವುದು ಸುಲಭವಲ್ಲ. ನಿಜವಾದ ಪ್ರೀತಿಯನ್ನು ಹೃದಯ ಬಡಿತ (heartbeat)ದಿಂದ ಅನುಭವಿಸುವುದಕ್ಕೆ ಸಾಧ್ಯ ಇಲ್ಲ. ಲವ್ ಅಟ್ ಫಸ್ಟ್ ಸೈಟ್’ ಅನ್ನೋದು ವ್ಯಾಮೋಹ (infatuation) ಹೊರತು ಬೇರೆ ಅಲ್ಲ. ಆದರೆ ಅಲ್ಲಿಂದಲೇ ಪ್ರೀತಿ ಶುರುವಾಗಬಹುದು. ಪ್ರೀತಿ ಹುಟ್ಟಲು ಸಮಯ, ಸಂದರ್ಭ ಬೇಕಾಗಿಲ್ಲ ಯಾವಾಗ ಬೇಕಾದರು ಹುಟ್ಟಬಹುದು. ಹಾಗೇ ರಾಶಿಚಕ್ರದ ಪ್ರಭಾವವು ಪ್ರೀತಿ ಎಂಬ ಎರಡಕ್ಷರದ ಮೇಲೆ ಬೀಳುತ್ತದೆ. ಜ್ಯೋತಿಷ್ಯ (Astrologyದಲ್ಲಿ ರಾಶಿಚಕ್ರದ ಮೇಲೆ ಪ್ರೀತಿ ನಿರ್ಧಾರವಾಗುತ್ತದೆ ಎಂದು ಹೇಳಲಾಗುತ್ತದೆ. 

1. ವೃಶ್ಚಿಕ ರಾಶಿ (Scorpio): ಇವರು ತುಂಬಾ ಆರಾಮದಾಯಕ ವ್ಯಕ್ತಿಗಳಾಗಿದ್ದು, ತಮ್ಮ ಸ್ನೇಹಿತ (friend)ರೊಂದಿಗೆ ಅನೇಕ ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಫಾರ್ಮ್‌ಹೌಸ್‌'ಗಳಲ್ಲಿ ವೀಕೆಂಡ್ ಮೋಜು ಮಾಡುತ್ತಾರೆ. ಏಕಾಂಗಿ (lonely)ಯಾಗಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಾರೆ. ಪ್ರತಿ ದಿನವು ಟ್ರೆಕ್ಕಿಂಗ್'ನಂತಹ ಅತ್ಯಾಕರ್ಷಕ ಸಾಹಸ ಚಟುವಟಿಕೆಗಳನ್ನು ಮಾಡಲು ಉತ್ಸಾಹ ಹೊಂದಿರುತ್ತಾರೆ. ಈ ರಾಶಿಯವರು ರಜೆಯಲ್ಲಿರುವಾಗ ಅತ್ಯಂತ ಸ್ನೇಹಪರವಾಗಿ ಇರುತ್ತಾರೆ. ಅವರು ಪ್ರಯಾಣಿಸುವಾಗ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಪ್ರೀತಿ(Love) ಪಾತ್ರರು ಸಿಗಲಿದ್ದಾರೆ.

2. ಮಕರ (Capricorn): ಇವರ ಜೊತೆಗಿನ ಪ್ರವಾಸ (trip)ವು ತುಂಬಾ ಖುಷಿಯಿಂದ ಕೂಡಿರುತ್ತದೆ. ಅವರು ಮಧ್ಯದಲ್ಲಿ ತಮ್ಮ ಪ್ರವಾಸವನ್ನು ಬದಲಾಯಿಸಬಹುದು. ಇವರ ಪ್ರೀತಿಯ ಜೀವನವು ಸಂಪೂರ್ಣ ರಹಸ್ಯ (secret)ವಾಗಿ ಇರಲಿದೆ. ಇನ್ಮುಂದೆ ಇವರು ಪ್ರವಾಸಕ್ಕೆ ಹೊರಟಾಗ ಅದೃಷ್ಟದ ಸಂಗಾತಿಯನ್ನು ಹುಡುಕಲು ಪ್ರಯತ್ನ ಮಾಡುತ್ತಾರೆ. ಹೊಸ ಉತ್ಸಾಹದ ಜೊತೆಗೆ ರಜೆಯಿಂದ ಹಿಂತಿರುಗುತ್ತಾರೆ.

ಮೊದಲ ಭೇಟಿಯಲಿ 'ವಿಶೇಷ ಸೆಳೆತ' : ಇವರೇ ನಿಮ್ಮ ಆತ್ಮ ಸಂಗಾತಿ...

 

3. ಮೇಷ (Aries): ಇವರು ನಿಜವಾದ ಸಹಾನುಭೂತಿ ಹೊಂದಿರುವ ವ್ಯಕ್ತಿಗಳು. ಇವರು ತಮ್ಮ ನಿಜವಾದ ಪ್ರೇಮಿ (lover)ಗಳೊಂದಿಗೆ ಇರಲು ಜೀವಮಾನವಿಡೀ ಕಾಯುತ್ತಿರುತ್ತಾರೆ. ಮತ್ತು ಅವರು ರಜೆಯ ಮೇಲೆ ಹೊರಟಾಗ ಅವರ ಕಾಯುವಿಕೆಯು ಕೊನೆಗೊಳ್ಳುವ ಸಾಧ್ಯತೆ ಇದೆ. ಅವರು ಪ್ರವಾಸದಲ್ಲಿ ಇರುವಾಗ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಸ್ಕೂಬಾ ಡೈವಿಂಗ್ ೯Scuba diving), ಸ್ಕೈಡೈವಿಂಗ್ ಅಥವಾ ನೌಕಾಯಾನ ಮಾಡುವಾಗ ಪ್ರೀತಿ ಆಗುವ ಸಾಧ್ಯತೆ ಇದೆ.

4. ಕಟಕ (Cancer): ಈ ರಾಶಿಯವರು ಪ್ರೀತಿಯನ್ನು ಹುಡುಕುವ ಪ್ರಯತ್ನದಲ್ಲಿ ಇರುತ್ತಾರೆ. ಏಕೆಂದರೆ ಇವರು ತಮ್ಮ ಆತ್ಮ ಸಂಗಾತಿ (Soulmate)ಯ ಜೊತೆಗೆ ಜೀವನವು ಶಾಂತಿ ಮತ್ತು ಸಂತೋಷದಿಂದ ತುಂಬಿರುತ್ತದೆ ಎಂದು ಭಾವಿಸುತ್ತಾರೆ. ಅತ್ಯುತ್ತಮ ಪಾರ್ಟಿ ಸ್ಥಳಗಳಿಗೆ ಜಾಸ್ತಿ ಹೋಗುತ್ತಾರೆ. ಇವರಿಗೆ ನೈಟ್ ರೈಡಿಂಗ್ (Night riding) ಸೂಕ್ತವಾಗಿದೆ. ಪ್ರಯಾಣ ಮಾಡುವಾಗ ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಇವರ ಜೊತೆಗಿನ ಒಡನಾಟದಲ್ಲಿ ಸಂತಸ ತರಲಿದೆ. 

ನಿಮ್ಮ ಪ್ರಯಾಣದಲ್ಲಿ ಉತ್ತಮ ಸಂಗಾತಿಯನ್ನು ಹುಡುಕುವುದು ಸರಳವಲ್ಲ. ಆದರೆ ರಾಶಿಚಕ್ರ ಚಿಹ್ನೆಗಳು ನಿಮ್ಮ ಸಂಗಾತಿ ಆಯ್ಕೆಯ ಮುನ್ಸೂಚನೆ ನೀಡಲಿವೆ.


 

Latest Videos
Follow Us:
Download App:
  • android
  • ios