Asianet Suvarna News Asianet Suvarna News

ಮೊದಲ ಭೇಟಿಯಲಿ 'ವಿಶೇಷ ಸೆಳೆತ' : ಇವರೇ ನಿಮ್ಮ ಆತ್ಮ ಸಂಗಾತಿ...

Marriages are made in heaven ಅಂತಾರೆ. Someone is made for us somewhere ಎನ್ನೋದು ಸತ್ಯ ಅನ್ಸುತ್ತೆ. ಎಲ್ಲಿಯೋ ಹುಟ್ಟಿ, ಮತ್ತೆಲ್ಲೋ ಬೆಳೆದು ಒಂದಾಗುವ ಜೋಡಿಗಳು ಜೀವನ ಪೂರ್ತಿ ಜೊತೆಯಾಗಿ ಬಾಳೋದು ಅಂದ್ರೆ ಸುಲಭವಲ್ಲ. ಅಷ್ಟಕ್ಕೂ ಈ ಆತ್ಮ ಸಾಂಗತ್ಯವೆಂದರೇನು? ಆತ್ಮ ಸಂಗಾತಿಯನ್ನು ಮೀಟ್ ಆದಾಗ ಹೇಗೆ ಫೀಲ್ ಆಗುತ್ತೆ?
 

What Happens When You Meet Your Soulmate suh
Author
First Published Jun 1, 2023, 12:46 PM IST


ಸಂಗಾತಿ ಎಂದರೆ ಜೀವನ ಪರ್ಯಂತ ನಮ್ಮೊಂದಿಗೆ ಇರುವವರು ಎಂದರ್ಥವನ್ನು ನೀಡುತ್ತದೆ.  ಜೀವನದ ಎಲ್ಲಾ ಸುಖ-ದುಃಖಗಳಿಗೆ ಪಾಲುದಾರರಾಗಿ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಾರೆ. ಅಲ್ಲದೆ ಜೀವನದಲ್ಲಿ ಉತ್ತಮ ಭರವಸೆಗಳೊಂದಿಗೆ ಕೆಲಸ ನಿರ್ವಹಿಸಲು ಹಾಗೂ ಜವಾಬ್ದಾರಿ ಕೆಲಸಗಳನ್ನು ಕೈಗೊಳ್ಳಲು ಸಹ ಸಹಾಯವಾಗುವುದು. ಇನ್ನು ನಿಮ್ಮ ಆತ್ಮ ಸಂಗಾತಿಯನ್ನು ಹುಡುಕುವಾಗ ಬಹಳ ಗೊಂದಲ ನಿಮ್ಮನ್ನು ಕಾಡಬಹುದು. ಅವನು/ಅವಳ ನ್ನ ಭೇಟಿಯಾದಾಗ ಕೆಲವು ಅನುಭವಗಳು ನಮಗೆ ಗೊತ್ತಿಲ್ಲದಂತೆ ಆಗುತ್ತವೆ. ಹಾಗೂ ಕೆಲ ಗುಣಗಳು ಸಂಗಾತಿ ಆಯ್ಕೆಯ ದಾರಿಯನ್ನು ಸುಲಭ ಮಾಡುತ್ತವೆ. ಅವುಗಳ ಮಾಹಿತಿ ಇಲ್ಲಿದೆ.

1. ಭಾವನಾತ್ಮಕತೆ ಬಂಧವನ್ನು ಹೆಚ್ಚಿಸುತ್ತದೆ

ಯಾವುದೇ ಸಂಬಂಧವಾಗಲಿ ದೈಹಿಕ ಆಕರ್ಷಣೆ (Physical attractiveness)ಯ ಮೇಲೆ ಜಾಸ್ತಿ ಉಳಿಯಲು ಸಾಧ್ಯವಿಲ್ಲ.  ನಂತರದಲ್ಲಿ ವ್ಯಾಮೋಹವು ಕಡಿಮೆ ಆಗುತ್ತದೆ. ಸಂಗಾತಿಯೊಂದಿಗಿನ ಭಾವನಾತ್ಮಕ ಸಂಪರ್ಕ (Emotional connection)ವು ನಿಮ್ಮ ಬಂಧವನ್ನು ಗಟ್ಟಿಗೊಳಿಸುತ್ತದೆ. ಇದು ದೈಹಿಕ ಸೌಂದರ್ಯ ಮತ್ತು ಲೈಂಗಿಕ ಆಕರ್ಷಣೆ(Sexual attraction)ಯನ್ನು ಮೀರಿದೆ.

2. ಮೊದಲ ಭೇಟಿಯಲಿ ಪರಿಚಯದ ಭಾವ

ನೀವು ಮೊದಲ ಬಾರಿಗೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಪರಿಚಿತತೆ (familiarity)ಯ ಭಾವನೆ ಮೂಡುತ್ತದೆ. ಹೀಗಾದಾಗ ಆ ವ್ಯಕ್ತಿ ಬಹುಶಃ ನಿಮ್ಮ ಆತ್ಮ ಸಂಗಾತಿ(Soulmate)ಯಾಗುವ ಸಾಧ್ಯತೆ ಇರುತ್ತದೆ. ನೀವಿಬ್ಬರೂ ಬಲವಾದ ಸಂಪರ್ಕ ಹೊಂದಿರುತ್ತೀರಿ ಎಂಬ ಅಂತಃಪ್ರಜ್ಞೆಯನ್ನು ಮೂಡುತ್ತದೆ.

3. ಇಬ್ಬರ ನಡುವೆ ಒಂದೇ ರೀತಿಯ ಆಲೋಚನೆ

ನೀವು ಒಬ್ಬರಿಗೊಬ್ಬರು ಒಂದು  ವಿಷಯಗಳನ್ನು ಯೋಚಿಸುತ್ತೀರಿ. ಇಬ್ಬರಿಗೆ ಒಂದೇ ರೀತಿಯ ಆಲೋಚನೆ (thought)ಗಳು ಬರುತ್ತವೆ. ನಿಮ್ಮ ಈ ಬಂಧ(bond)ವನ್ನು ಪರೀಕ್ಷಿಸಲು ನೀವು ಹೆಚ್ಚು ಪ್ರಯತ್ನಿಸಬೇಕಾಗಿಲ್ಲ. ಇದು ಪರಸ್ಪರ ಭೇಟಿಯಾದಾಗ ಅನುಭವಕ್ಕೆ ಬರಲಿದೆ.

ರಾಶಿಚಕ್ರದ ಆಹಾರ ಪದ್ಧತಿ: ಏನು ತಿನ್ನಬೇಕು? ಏನನ್ನು ಬಿಡಬೇಕು?

 

4. 'ವಿರುದ್ಧ'ಗುಣಗಳು ಪರಸ್ಪರ ಆಕರ್ಷಿಸುತ್ತವೆ

ಸಾಮಾನ್ಯವಾಗಿ 'ವಿರುದ್ಧ'ಗುಣಗಳು (opposite qualities)ಪರಸ್ಪರ ವ್ಯಕ್ತಿಗಳನ್ನು ಆಕರ್ಷಿಸುತ್ತವೆ. ಇದು ವಾಸ್ತವವಾಗಿ ಜನರನ್ನು ಅಟ್ರ್ಯಾಕ್ಟ್ ಮಾಡುತ್ತದೆ. ಇಬ್ಬರ ನಡುವಿನ ವ್ಯತ್ಯಾಸಗಳು ಅರ್ಥಪೂರ್ಣ ಸಂಬಂಧಕ್ಕೆ ನಾಂದಿಯಾಗುತ್ತವೆ. ಇಬ್ಬರ ನಡುವೆ ಅಸಮಾನತೆಗಳ ಹೊರತಾಗಿಯೂ ಆಸಕ್ತಿಗಳು ಮೂಡುತ್ತವೆ.

5. ಪರಸ್ಪರ ಕಾಳಜಿ ಉತ್ತಮ ಬಂಧಕ್ಕೆ ಅಡಿಪಾಯ

ಭಾವನಾತ್ಮಕ ಸಂಪರ್ಕ (Emotional connection)ವು ಉತ್ತಮ ಸಂಬಂಧದ ಆಧಾರವಾಗಿದೆ. ಇಬ್ಬರ ನಡುವಿನ ಮನಸ್ಥಿತಿ, ಪ್ರಚೋದನೆಗಳು ಮತ್ತು ಅಭದ್ರತೆ ಅರ್ಥಮಾಡಿಕೊಂಡಾಗ ಕಾಳಜಿಯ ರೀತಿಯಲ್ಲಿ ಸಂಪರ್ಕ ಬೆಳೆಯಲಿದೆ. ಇದು ಇಬ್ಬರ ನಡುವಿನ ಬಾಂಧವ್ಯ (attachment)ಬೆಳೆಸಲು ಸಹಕಾರಿ ಆಗಲಿದೆ.

6. ಭಿನ್ನಾಭಿಪ್ರಾಯಗಳ ಹೊರತಾಗಿ ನಂಬಿಕೆ

ಒಬ್ಬ ವ್ಯಕ್ತಿಯ ಜೊತೆ ಆಧ್ಯಾತ್ಮಿಕ ಮಟ್ಟದಲ್ಲಿ ಸಂಪರ್ಕ ಹೊಂದಿದಾಗ ಅವರಲ್ಲಿ ಹೆಚ್ಚಿನ ನಂಬಿಕೆ(belief) ಬೆಳೆಸಿಕೊಳ್ಳುತ್ತೀರಿ. ಇಬ್ಬರ ನಡುವಿನ ಅಂತರ ಹಾಗೂ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಿಮ್ಮ ಸಂಬಂಧದಲ್ಲಿ ಭರವಸೆ ಮೂಡಲಿದೆ. ಇದರಿಂದ ಸುರಕ್ಷತೆ (security)ಯ ಭಾವನೆ ಉಂಟಾಗುತ್ತದೆ.

Love Horoscope June 2023: ಈ 5 ರಾಶಿಗಳಿಗೆ ಜೂನ್‌ನಲ್ಲಿ ಪ್ರೀತಿಯೇ ತಲೆನೋವು

 

7. ಸಾಧನೆ ಬೆಂಗಾವಲಾಗಿ ನಿಲ್ಲುವ ಭಾವನೆ

ನಿಮ್ಮ ಸಾಧನೆಗೆ, ಗುರಿ(target)ಗಳನ್ನು ತಲುಪಲು ಅವನು/ಅವಳು ಬೆಂಬಲಿಸುತ್ತಾರೆ. ಸಹಾಯ ಮಾಡುತ್ತಾ ಜೊತೆಯಾಗಿ ನಿಲ್ಲುತ್ತಾರೆ. ಸದಾ ಮುಕ್ತ ಮನಸ್ಸಿ(open mind)ನಿಂದ ಇರುತ್ತಾರೆ. ಪ್ರತಿಯೊಂದು ವಿಷಯ(topic)ವನ್ನು ಕೂಡ ನಿಮ್ಮ ಜೊತೆ ಹಂಚಿಕೊಳ್ಳುತ್ತಾರೆ. 

8. ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ

ನಿಮ್ಮ ಆತ್ಮ ಸಂಗಾತಿಯು ನಿಮ್ಮನ್ನು ಹೆಚ್ಚು ಅರ್ಥಮಾಡಿ (understand)ಕೊಳ್ಳುತ್ತಾರೆ. ಒಂದು ವಿಷಯವು ನಿಮಗೆ ಹೇಗೆ ಅನಿಸುತ್ತದೆ ಎಂಬುದನ್ನು ಅವರಿಗೆ ವಿವರಿಸುವ ಅಗತ್ಯವಿಲ್ಲರುವುದಿಲ್ಲ ಅವರಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ.

Follow Us:
Download App:
  • android
  • ios