ಈ 5 ರಾಶಿಯವ್ರು ಪಕ್ಕಾ Marriage Material; ವೈವಾಹಿಕ ಜೀವನಕ್ಕೆ ಬೇಗ ಒಗ್ಗಿಕೊಳ್ತಾರೆ!
ಕೆಲವರು ವೈವಾಹಿಕ ಜೀವನಕ್ಕೆ ಒಗ್ಗಿಕೊಳ್ಳೋಕೆ ವರ್ಷಗಳೇ ಬೇಕಾಗುತ್ತವೆ. ಅವರ ಮದುವೆ ವಿಚಾರವೇ ಬೇರೆ ಇರುತ್ತದೆ. ಆದರೆ, ಕೆಲವರು ಪಕ್ಕಾ ಮ್ಯಾರೇಜ್ ಮೆಟೀರಿಯಲ್. ಅವರಿಗೆ ವೈವಾಹಿಕ ಜೀವನಕ್ಕಾಗಿ ವಿಶೇಷವಾಗಿ ಒಗ್ಗಿಕೊಳ್ಳುವ ಅಗತ್ಯ ಬರೋದಿಲ್ಲ. ಅಂಥವರು ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ.
ಈಗಂತೂ ವಿವಾಹವೆಂಬುದು ವ್ಯವಹಾರವೇ ಆಗಿಬಿಟ್ಟಿದೆ. ಹೆಚ್ಚಿನವರು ತಮ್ಮ ಲಾಭ ಲೆಕ್ಕಾಚಾರ ಮಾಡಿಕೊಂಡೇ ವಿವಾಹ ಜೀವನಕ್ಕೆ ಕಾಲಿಡುತ್ತಾರೆ. ಆದರೆ, ಕೆಲವರು ಮಾತ್ರ ಹೃದಯದಿಂದ ಯೋಚಿಸಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಪ್ರೀತಿ, ಹೊಂದಾಣಿಕೆಯೇ ಸಂಬಂಧದ ಹುರುಳು ಎಂಬುದು ಅವರ ನಿಲುವಾಗಿರುತ್ತದೆ. ಅವರು ತಮ್ಮ ಸಂಗಾತಿಯನ್ನು ಬಹಳ ಪ್ರೀತಿಸುವುದಲ್ಲದೆ, ವಿವಾಹದ ನಂತರದ ಎಲ್ಲ ಕೌಶಲ್ಯಗಳನ್ನು ನಿಭಾಯಿಸುವ ಚಾಕಚಕ್ಯತೆ ಹೊಂದಿರುತ್ತಾರೆ. ಹೊಂದಾಣಿಕೆ ಅವರಿಗೆ ಟಾಸ್ಕ್ ಆಗಿರುವುದಿಲ್ಲ. ಇಂಥವರನ್ನೇ ಮ್ಯಾರೇಜ್ ಮೆಟೀರಿಯಲ್ ಎನ್ನುವುದು.
ಮಿಥುನ (ಮೇ 21 - ಜೂನ್ 21)
ಮಿಥುನ ರಾಶಿಯವರು ಜೀವನದಲ್ಲಿ ಸಣ್ಣ ವಿಷಯಗಳ ಬಗ್ಗೆ ಸಂತೋಷಪಡುತ್ತಾರೆ, ಅವರಿಗೆ ಪ್ರೀತಿಯೇ ಅಗ್ರಸ್ಥಾನವನ್ನು ತೆಗೆದು ಕೊಳ್ಳುತ್ತದೆ. ಅವರು ತಮ್ಮ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಇತರರಿಂದ ಅದೇ ನಿರೀಕ್ಷಿಸುತ್ತಾರೆ. ನೀವು ಅವರಿಗೆ ಅದನ್ನು ನೀಡಲು ಸಾಧ್ಯವಾದರೆ, ಅವರು ಎಂದೆಂದಿಗೂ ನಿಮಗೆ ನಿಷ್ಠರಾಗಿರುತ್ತಾರೆ. ಇವರಂತೂ ಬಹಳ ಸಣ್ಣ ವಯಸ್ಸಿಂದಲೇ ವಿವಾಹದ ಕನಸು ಕಂಡು ತಮ್ಮ ವಿವಾಹ ಹೇಗಾಗಬೇಕು, ಸಂಗಾತಿ ಹೇಗಿರಬೇಕು, ನಂತರದ ಜೀವನ ಹೇಗಿರಬೇಕು ಎಂಬುದನ್ನೆಲ್ಲ ಯೋಜಿಸಿರುತ್ತಾರೆ.
ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ! ಅಪಾಯ ತಪ್ಪೋದಿಲ್ಲ..
ವೃಶ್ಚಿಕ (ಅಕ್ಟೋಬರ್ 23 - ನವೆಂಬರ್ 21)
ಇನ್ನೊಬ್ಬ ವ್ಯಕ್ತಿಯ ಸಲುವಾಗಿ ತಾವು ನಿಜವಾಗಿಯೂ ಬದಲಾಗಬಾರದು ಎಂದು ಹೇಳಲಾಗುತ್ತದೆಯಾದರೂ, ವೃಶ್ಚಿಕ ರಾಶಿಯವರು ಸಂಗಾತಿಯ ವಿಷಯಕ್ಕೆ ಬಂದಾಗ ಬೇರೆಯದೇ ವ್ಯಕ್ತಿಯಾಗುತ್ತಾರೆ. ಬೇರಾರಿಗೂ ಬಗ್ಗದವರು, ಸಂಗಾತಿಗಾಗಿ ತಮ್ಮ ಸ್ವಭಾವವನ್ನೇ ಬದಲಿಸಿಕೊಳ್ಳಬಲ್ಲರು. ಅದೃಷ್ಟವಶಾತ್, ಈ ಬದಲಾವಣೆ ನೈಸರ್ಗಿಕವಾಗಿಯೇ ಆಗುತ್ತದೆ. ಇತರ ವ್ಯಕ್ತಿಯು ಅವರಿಗೆ ನೀಡುತ್ತಿರುವ ಪ್ರೀತಿಯ ಬಗ್ಗೆ ಅವರು ಭರವಸೆ ಹೊಂದಿದಾಗ ಈ ಬದಲಾವಣೆಯು ಸಂಭವಿಸುತ್ತದೆ. ಅವರು ನಿಮ್ಮ ಮೇಲೆ ನಂಬಿಕೆ ಇಡಲು ಪ್ರಾರಂಭಿಸಿದ ನಂತರ, ಅವರು ನಿಮ್ಮ ಸುತ್ತಲೂ ತೆರೆದುಕೊಳ್ಳಲು ಪ್ರಾರಂಭಿಸುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಹೃದಯದಿಂದ ಪ್ರೀತಿಸುತ್ತಾರೆ ಮತ್ತು ಯಾವಾಗಲೂ ನಿಮ್ಮೊಂದಿಗೆ ಸಂತೋಷದಿಂದ ಇರಲು ಬಯಸುತ್ತಾರೆ.
ಕರ್ಕಾಟಕ(ಜೂನ್ 21 - ಜುಲೈ 22)
ಕರ್ಕಾಟಕ ರಾಶಿಯವರು ದಾಂಪತ್ಯದಲ್ಲಿ ವಿಷಯಗಳನ್ನು ಮಹತ್ತರವಾಗಿ ಮಾಡಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮತ್ತು ಈ ನಂಬಿಕೆಯು ಹೆಚ್ಚಿನ ಸಮಯ ನಿಖರವಾಗಿರುತ್ತದೆ. ಕರ್ಕ ರಾಶಿಗೆ ಸೇರಿದ ವ್ಯಕ್ತಿ ತುಂಬಾ ಭಾವನಾತ್ಮಕ ಮತ್ತು ಸೂಕ್ಷ್ಮ ಜೀವಿ. ಅಂತಹ ಜನರು ಮಾನಸಿಕ ಭದ್ರತೆಯನ್ನು ಬಯಸುತ್ತಾರೆ, ಅವರು ಅದನ್ನು ಪಾಲುದಾರರಲ್ಲಿ ಕಂಡುಕೊಂಡರಾದರೆ, ಮತ್ತವರು ಸಂಗಾತಿಗಾಗಿ ಸಂಪೂರ್ಣ ಹೊಂದಿಕೊಳ್ಳಲು ಸಿದ್ಧವಾಗುತ್ತಾರೆ. ಅವರು ನಿಮ್ಮ ಮೌಲ್ಯವನ್ನು ಅರಿತುಕೊಳ್ಳುತ್ತಾರೆ ಮತ್ತು ನಿಮಗೆ ನಿಷ್ಠರಾಗಿ ಉಳಿಯುತ್ತಾರೆ. ಕರ್ಕಾಟಕವು ಮದುವೆಯನ್ನು ಜೀವಿತಾವಧಿಯ ಬದ್ಧತೆ ಎಂದು ಪರಿಗಣಿಸುತ್ತದೆ
ವೃಷಭ ರಾಶಿ (ಏಪ್ರಿಲ್ 20 - ಮೇ 20)
ಗಂಡ/ಹೆಂಡತಿ ವೃಷಭ ರಾಶಿಯವರನ್ನು ಹೊಂದಲು ತುಂಬಾ ಅದೃಷ್ಟವಂತರು. ನಿಖರವಾಗಿ, ವೃಷಭ ರಾಶಿಯ ಜನರು ಬಹಳ ನಿಷ್ಠಾವಂತರು, ತಮಾಷೆಯ ಸ್ವಭಾವದವರು ಮತ್ತು ಅವರು ಇರುವ ಸಂಬಂಧದ ಬಗ್ಗೆ ಶಾಶ್ವತವಾಗಿ ಉತ್ಸುಕರಾಗಿರುತ್ತಾರೆ. ಅವರು ಯಾರಿಗಾದರೂ ಉತ್ತಮ ಪಾಲುದಾರರಾಗುತ್ತಾರೆ. ಅವರು ಸಂಗಾತಿಯಾಗಿ ಮಾಡುವ ಕೆಲಸಗಳ ಬಗ್ಗೆ ಹಗಲುಗನಸು ಕಾಣುತ್ತಾರೆ. ಅವರು ಶಾಶ್ವತವಾದ ರೀತಿಯ ಪ್ರೀತಿಯನ್ನು ಹುಡುಕುತ್ತಾರೆ.
Vastu plant: ಮನೆಯಲ್ಲಿದ್ದರೆ ಅದೃಷ್ಟದ ಬಿದಿರು, ಏರುವಿರಿ ಪ್ರಗತಿಯ ತೇರು
ಮಕರ ರಾಶಿ (ಡಿಸೆಂಬರ್ 22 - ಜನವರಿ 19)
ಮಕರ ರಾಶಿಯ ಜನರು ಕುಟುಂಬ ಜೀವನವನ್ನು ಇಷ್ಟ ಪಡುವವರು. ಅವರು ಜೀವನದಲ್ಲಿ ಅವರನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಹೊಂದಲು ಬಯಸುತ್ತಾರೆ. ಮತ್ತು ಅಂತಹ ವ್ಯಕ್ತಿಯನ್ನು ಹೊಂದಲು ಉತ್ತಮ ಮಾರ್ಗವೆಂದರೆ ವಿವಾಹ ಎಂದು ಭಾವಿಸುತ್ತಾರೆ. ಮಕರ ರಾಶಿಯವರು ಬಹಳ ನಂಬಿಕಸ್ಥರು ಮತ್ತು ಪ್ರಾಮಾಣಿಕರು.