ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ! ಅಪಾಯ ತಪ್ಪೋದಿಲ್ಲ..
ನೀವೂ ಸಹ ವಾರದ ಯಾವುದೇ ದಿನ ಉಗುರು ಕತ್ತರಿಸುತ್ತೀರಾ? ಹಾಗಾದರೆ ಇನ್ಮುಂದೆ ಹೀಗೆ ಮಾಡಬೇಡಿ. ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಉಗುರುಗಳನ್ನು ಯಾವಾಗ ಮತ್ತು ಯಾವ ದಿನ ಕತ್ತರಿಸಬೇಕು ಎಂಬುದನ್ನು ಇಂದು ತಿಳಿಯೋಣ.
ಇಂದಿನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ, ವಾರದ ನಿರ್ದಿಷ್ಟ ದಿನದಂದು ಉಗುರುಗಳನ್ನು ಕತ್ತರಿಸಲು ಸಮಯ ಸಿಗುವುದಿಲ್ಲ. ಹೆಚ್ಚಿನವರಿಗೆ ಭಾನುವಾರ ರಜೆ ಇರುವುದರಿಂದ ಅಂದು ಉಗುರು ಕತ್ತರಿಸುತ್ತಾರೆ.
ಆದರೆ, ಜ್ಯೋತಿಷ್ಯದ ಪ್ರಕಾರ, ಭಾನುವಾರ ಉಗುರು ಕತ್ತರಿಸಬಹುದೇ?
ಹೆಚ್ಚಿನ ವಿಷಯಗಳಂತೆ, ಧಾರ್ಮಿಕ ಗ್ರಂಥಗಳು ಉಗುರುಗಳನ್ನು ಕತ್ತರಿಸುವ ನಿಯಮಗಳನ್ನು ಉಲ್ಲೇಖಿಸುತ್ತವೆ. ಈ ನಿಯಮಗಳನ್ನು ಅನುಸರಿಸುವುದು ನಿಮಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ ಮತ್ತು ಆದ್ದರಿಂದ ನೀವು ಅವುಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ವಾರದ ಏಳೂ ದಿನಗಳನ್ನು ಒಂದೊಂದು ಗ್ರಹಕ್ಕೆ ಮತ್ತು ಒಂದೊಂದು ದೇವರಿಗೆ ಮೀಸಲಿರಿಸಲಾಗಿದೆ. ಉದಾ. ರವಿ ಗ್ರಹವು ಭಾನುವಾರದೊಂದಿಗೆ ಸಂಬಂಧಿಸಿದೆ. ಚಂದ್ರನು ಸೋಮವಾರ, ಕುಜನು ಮಂಗಳವಾರ ಹೀಗೆ.. ಉಗುರುಗಳನ್ನು ಬೆಳೆಸುವುದರಿಂದ ದೇಹದಲ್ಲಿ ತಮ ಅಂಶ ಹೆಚ್ಚುತ್ತದೆ. ಹೀಗಾಗಿ, ಡೆಡ್ ಸೆಲ್ಸ್‌ಲಿಂದಲೇ ಉಂಟಾಗುವ ಉಗುರುಗಳನ್ನು ಕತ್ತರಿಸುವುದು ಸಮಂಜಸವಾಗಿದೆ. ಆದರೆ. ವಾರದ ಯಾವ ದಿನ, ಯಾವ ಸಮಯದಲ್ಲಿ ಕತ್ತರಿಸಬೇಕೆಂಬುದಕ್ಕೆ ಜ್ಯೋತಿಷ್ಯದಲ್ಲಿ ನಿಯಮಗಳಿವೆ..
ಉಗುರು ಕತ್ತರಿಸಲು ಶುಭ ದಿನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಗುರುಗಳು ಶನಿ ದೇವನಿಗೆ ಸಂಬಂಧಿಸಿವೆ. ಅದಕ್ಕಾಗಿಯೇ ಅದರ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಶನಿಯು ಕೋಪಗೊಳ್ಳುತ್ತಾನೆ. ಅದರ ನಿರ್ವಹಣೆಗೆ ಸಂಬಂಧಿಸಿದಂತೆ ನೀವು ಸರಿಯಾದ ನಿಯಮಗಳನ್ನು ಅನುಸರಿಸದಿದ್ದರೆ, ಅದರಿಂದ ಬಡತನ ಬರುವ ಅಪಾಯವಿದೆ.
5 ರಾಶಿಗಳಿಗೆ ಅದೃಷ್ಟ ತರುವ ಹಳದಿ ನೀಲಮಣಿ; ನೀವು ಧರಿಸಬಹುದೇ?
ಮಂಗಳವಾರ ಮತ್ತು ಶನಿವಾರ
ಮಂಗಳವಾರ, ಶನಿವಾರ ಮತ್ತು ಗುರುವಾರ ಉಗುರುಗಳನ್ನು ಕತ್ತರಿಸಬಾರದು. ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಿದರೆ, ಅದರ ಕೆಟ್ಟ ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಹಣ ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಮಂಗಳವಾರ ಕತ್ತರಿ, ನೇಲ್ ಕಟರ್‌ನಂಥ ಚೂಪು ವಸ್ತುಗಳ ಬಳಕೆಗೇ ಶಾಸ್ತ್ರದಲ್ಲಿ ನಿಷೇಧವಿದೆ. ಈ ದಿನ ಯುದ್ಧಕಾರಕ ಮಂಗಳನು ಇವುಗಳ ಬಳಕೆಗೆ ತೊಡಗಿದರೆ ಹೆಚ್ಚಿನ ದೈಹಿಕ ಹಾನಿಗೆ ಕಾರಣನಾಗುತ್ತಾನೆ. ಇದಲ್ಲದೇ ಅಮವಾಸ್ಯೆ ಮತ್ತು ಚತುರ್ದಶಿ ತಿಥಿಯಂದು ಕೂಡ ಉಗುರುಗಳನ್ನು ಕತ್ತರಿಸಬೇಡಿ.
ಸೂರ್ಯಾಸ್ತದ ನಂತರ
ಸೂರ್ಯಾಸ್ತದ ನಂತರವೂ ಉಗುರುಗಳನ್ನು ಕತ್ತರಿಸಬಾರದು. ಮನೆಯವರನ್ನು ಆಶೀರ್ವದಿಸಲು ಲಕ್ಷ್ಮಿ ದೇವಿಯು ಸಂಜೆ ಹೊತ್ತಿನಲ್ಲಿ ಮನೆಗೆ ಭೇಟಿ ನೀಡುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿ ಸಂಜೆ ಉಗುರುಗಳನ್ನು ಕತ್ತರಿಸುವುದು ದೇವಿಗೆ ಅಗೌರವವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ದುಃಖ ಮತ್ತು ಬಡತನ ಮನೆ ಮಾಡುತ್ತದೆ.
Vastu plant: ಮನೆಯಲ್ಲಿದ್ದರೆ ಅದೃಷ್ಟದ ಬಿದಿರು, ಏರುವಿರಿ ಪ್ರಗತಿಯ ತೇರು
ಯಾವ ದಿನ ಕತ್ತರಿಸಬಹುದು?
ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರಗಳನ್ನು ಜ್ಯೋತಿಷ್ಯದಲ್ಲಿ ಉಗುರುಗಳನ್ನು ಕತ್ತರಿಸಲು ಉತ್ತಮ ದಿನಗಳು ಎನ್ನಲಾಗುತ್ತದೆ. ಇದರಿಂದ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ. ಇದು ಜೀವನದಲ್ಲಿ ಸಕಾರಾತ್ಮಕತೆಯನ್ನು ಕಾಪಾಡುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.