Asianet Suvarna News Asianet Suvarna News

ಹಿತವಾದ ವೈಬ್ರೇಷನ್‌ ಮೂಡಿಸೋ ಜನರ ಒಡನಾಟ ಬೇಕು ಅಂತೀರಾ? ಈ ರಾಶಿಗಳ ಜನರೊಂದಿಗೆ ಇದ್ಬಿಡಿ!

ಧನಾತ್ಮಕ ಧೋರಣೆ, ಆಶಾವಾದಿತನ, ನೈಸರ್ಗಿಕವಾಗಿ ಅಪರಿಮಿತ ಉತ್ಸಾಹ, ಎಲ್ಲರಲ್ಲೂ ಸ್ಫೂರ್ತಿ ತುಂಬಬಲ್ಲ ವರ್ಚಸ್ಸು ಎಲ್ಲರಲ್ಲೂ ಇರುವುದಿಲ್ಲ. ಇವರು ತಾವು ಹೋದಲ್ಲೆಲ್ಲ ಉತ್ತಮ ವೈಬ್ರೇಷನ್‌ ಮೂಡಿಸುವ ಮೂಲಕ ಹಿತವಾದ ಅನುಭೂತಿಗೆ ಕಾರಣರಾಗುತ್ತಾರೆ. ಕೇವಲ ನಾಲ್ಕೇ ರಾಶಿಗಳ ಜನರಲ್ಲಿ ಈ ಗುಣ ದೈವದತ್ತವಾಗಿರುತ್ತದೆ.

These people have good vibes naturally
Author
First Published Nov 1, 2023, 4:33 PM IST

ಕೆಲವರನ್ನು ಭೇಟಿಯಾದಾಗ ಅವರ ಎನರ್ಜಿ ನಮ್ಮನ್ನು ಸೆಳೆಯುತ್ತದೆ. ಅವರ ಧನಾತ್ಮಕತೆ, ಆಶಾವಾದಿತನ, ಉತ್ತಮ ಪ್ರಭೆಗಳು ಹಿತವಾದ ಅನುಭೂತಿ ನೀಡುತ್ತವೆ. ಅವರ ಬಳಿ ಇದ್ದಾಗ ಯಾವುದೇ ಇರಿಸುಮುರಿಸಿನ ನಕಾರಾತ್ಮಕ ಭಾವನೆಗೆ ಎಡೆ ಇರುವುದಿಲ್ಲ. ಅವರ ದೇಹದ ಪ್ರಭಾವಳಿ ಉತ್ತಮ ಕಂಪನಗಳನ್ನು ಸೂಸುತ್ತಿರುತ್ತದೆ. ಇದು ಬೇಕೆಂದೇ ರೂಢಿಸಿಕೊಳ್ಳುವ ಅಭ್ಯಾಸವಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕೇ ರಾಶಿಗಳ ಜನರಲ್ಲಿ ಇಂತಹ ಉತ್ತಮ ವೈಬ್ರೇಷನ್‌ ಕಾಣಬಹುದು. ಇವರು ನಿರಂತರವಾಗಿ ಧನಾತ್ಮಕ ಕಂಪನಗಳನ್ನೇ ಹೊಂದಿರುತ್ತಾರೆ. ಬ್ರಹ್ಮಾಂಡದ ಗುಟ್ಟುಗಳಲ್ಲಿ ಇದೂ ಒಂದು ಎನ್ನಬಹುದು. 

ವೃಷಭ (Taurus): ವೃಷಭ ರಾಶಿಯ ಅಧಿಪತಿ ಶುಕ್ರ (Venus). ಇದು ಪ್ರೀತಿ (Love) ಮತ್ತು ಸೌಂದರ್ಯದ (Beauty) ಪ್ರತಿನಿಧಿ. ಈ ಆಧ್ಯಾತ್ಮಿಕ ಬಂಧನದಿಂದಾಗಿ ವೃಷಭ ರಾಶಿಯ ಜನ ಧನಾತ್ಮಕತೆ (Positive) ಮತ್ತು ಉತ್ತಮ ವೈಬ್ರೇಷನ್‌ (Vibration) ಗೆ ಸ್ಥಿರವಾದ ಮೂಲವಾಗಿರುತ್ತಾರೆ. ಮೊದಲೇ ವೃಷಭ ರಾಶಿಯ ಜನ ಸ್ಥಿರತೆ ಮತ್ತು ತಾಳ್ಮೆಗೆ ಹೆಸರುವಾಸಿ. ಈ ವಿಶಿಷ್ಟ ಗುಣವೂ ಇವರಲ್ಲಿದ್ದು, ಇವರ ಬಳಿ ಇರುವಾಗ ಇತರರಿಗೆ ಸುರಕ್ಷಿತ (Secure) ಭಾವನೆ ಮೂಡುತ್ತದೆ. ಇವರೊಂದಿಗೆ ಸುಲಭವಾಗಿ ಒಡನಾಡಲು ಸಾಧ್ಯವಾಗುತ್ತದೆ. ಜೀವನದ ಉತ್ತಮ ಅಂಶಗಳ ಕುರಿತು ಮೆಚ್ಚುಗೆ ಹೊಂದಿರುವ ವೃಷಭ ರಾಶಿಯ ಜನ ಇತರರನ್ನೂ ಸೌಹಾರ್ದವಾಗಿ ಮೆಚ್ಚಿಕೊಳ್ಳುತ್ತಾರೆ. ಅತ್ಯಂತ ಸಹಜವಾಗಿ ಬೆರೆಯುವ ಗುಣದಿಂದಾಗಿ ಯಾವುದೇ ಪರಿಸ್ಥಿತಿಯಲ್ಲೂ ಇತರರಿಗೆ ಕಂಫರ್ಟ್‌ ಫೀಲ್‌ ಆಗುತ್ತದೆ.

ಈ ರಾಶಿಯವರು ಟಾಪ್ ಮೋಸ್ಟ್ ಹ್ಯಾಪಿಯೆಸ್ಟ್ ಪೀಪಲ್ಸ್

ಸಿಂಹ (Leo): ಸೂರ್ಯ ಅಧಿಪತಿಯಾಗಿರುವ ಸಿಂಹ ರಾಶಿಯ ಜನ ಉತ್ಸಾಹ, ವರ್ಚಸ್ಸಿಗೆ ಮತ್ತೊಂದು ಹೆಸರು. ಯಾವುದೇ ಸ್ಥಳಕ್ಕೆ ಹೋದರೂ ಸಿಂಹ ರಾಶಿಯವರು ತಮ್ಮದೇ ವಿಶಿಷ್ಟ ಸಾಮರ್ಥ್ಯದ ಮೂಲಕ ಆ ವಾತಾವರಣಕ್ಕೆ ಮೆರುಗು ತುಂಬುತ್ತಾರೆ. ಇವರ ಆತ್ಮವಿಶ್ವಾಸ, ಅತ್ಯುತ್ಸಾಹ (Energy), ಇತರರೊಂದಿಗಿನ ಸೌಹಾರ್ದ ಮಾತುಕತೆಗಳು ಸೆಳೆಯುವಂಥವು. ಎಲ್ಲೇ ಹೋದರೂ ಧನಾತ್ಮಕ ವೈಬ್ರೇಷನ್‌ ಮೂಡಿಸುತ್ತಾರೆ. ನೈಸರ್ಗಿಕವಾಗಿ ನಾಯಕತ್ವದ (Leadership) ಗುಣ ಹೊಂದಿರುವ ಸಿಂಹ ರಾಶಿಯವರು ಸ್ನೇಹಪರರು. ತಮ್ಮ ಜತೆಗಿರುವ ಜನರಿಗೆ ಉತ್ಸಾಹ ತುಂಬುತ್ತಾರೆ. ಹೊಳಪಿನ ನಗು, ಸತ್ಯದ ಪರ ನಿಲ್ಲುವ ಛಾತಿ ಇವರದ್ದು. ಎಲ್ಲರಲ್ಲೂ ತಾವು ವಿಶೇಷವೆಂದು ಭಾಸವಾಗುವಂತೆ ಮಾಡುತ್ತಾರೆ. ತಮ್ಮ ಅಪರಿಮಿತ ಉತ್ಸಾಹವೇ ಇವರ ಬಹುದೊಡ್ಡ ಸಾಮರ್ಥ್ಯ.

ತುಲಾ (Libra): ಶುಕ್ರಾಧಿಪತಿಯಾಗಿರುವ ತುಲಾ ರಾಶಿ ಸೌಹಾರ್ದತೆಗೆ (Harmony) ಹೆಸರು. ಇವರು ಶಾಂತಿದೂತರಿದ್ದಂತೆ. ಸಮತೋಲನ, ನ್ಯಾಯಯುತ ವರ್ತನೆಯಿಂದ ಕೂಡಿದ್ದು, ಎಲ್ಲೇ ಹೋದರೂ ಸೌಹಾರ್ದ ವಾತಾವರಣ ಮೂಡಿಸುತ್ತಾರೆ. ಇವರೊಂದಿಗೆ ಒಡನಾಟ ಸುಲಭ. ಅತ್ಯುತ್ತಮ ಸಂವಹನ (Communication) ಚಾತುರ್ಯ ಹೊಂದಿದ್ದು, ಒತ್ತಡದ ವಾತಾವರಣದಲ್ಲೂ ನಿರಾಳತೆ ಸೃಷ್ಟಿಸಬಲ್ಲರು. ಸಮಾಧಾನದಿಂದ ಮಾತುಕತೆ ನಡೆಸುತ್ತಾರೆ. ಬಿಕ್ಕಟ್ಟಿನ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸುವ ನೈಸರ್ಗಿಕ ಚಾಕಚಕ್ಯತೆ ಇವರಲ್ಲಿದೆ. ಈ ಮೂಲಕ, ಸಹಕಾರದ (Cooperation) ವಾತಾವರಣ ಸೃಷ್ಟಿಸುತ್ತಾರೆ. ವರ್ಚಸ್ಸು, ಸಹಾನುಭೂತಿ, ಸೂಕ್ಷ್ಮತೆ ಇವರಲ್ಲಿದ್ದು, ಉತ್ತಮ ವೈಬ್ರೇಷನ್‌ ಮೂಡಿಸುವ ಮೂಲಕ ತಾವಿರುವ ವಾತಾವರಣದಲ್ಲಿ ನಗು ತುಂಬುತ್ತಾರೆ.

2024 ರಲ್ಲಿ ಈ ರಾಶಿಗೆ ಕಷ್ಟವೋ ಕಷ್ಟ..ಆರ್ಥಿಕ ನಷ್ಟ

ಧನು (Sagittarius): ಗುರು ಗ್ರಹಾಧಿಪತಿಯಾಗಿರುವ ಧನು ರಾಶಿ ಸಾಹಸಮಯ ಮತ್ತು ಆಶಾವಾದಿತನಕ್ಕೆ (Optimistic) ಮತ್ತೊಂದು ಹೆಸರು. ಹೀಗಾಗಿ, ಈ ರಾಶಿಯ ಜನ ಜೀವನದ ಕುರಿತು ಅಪರಿಮಿತ ಉತ್ಸಾಹ (Enthusiasm) ಹೊಂದಿರುತ್ತಾರೆ. ಹೊಸ ಅನುಭವಗಳಿಗೆ, ಸವಾಲುಗಳಿಗೆ ಹಿಂದೇಟು ಹಾಕುವುದಿಲ್ಲ. ಅತ್ಯಂತ ಮುಕ್ತ ಮನಸ್ಥಿತಿ (Open Mind) ಹೊಂದಿದ್ದು, ತಾವು ಹೋದ ಕಡೆಯಲ್ಲಿ ತಾಜಾತನವನ್ನು (Freshness) ತುಂಬುತ್ತಾರೆ. ತಮ್ಮ ಸುತ್ತಲಿರುವ ಜನರಲ್ಲಿ ಸ್ಫೂರ್ತಿ ತುಂಬುವ ನೈಸರ್ಗಿಕ ಗುಣ ಇವರಲ್ಲಿರುತ್ತದೆ. ನೇರವಾದ ಮುಕ್ತ ಮಾತುಕತೆ ನಡೆಸುತ್ತಾರೆ. ಇವರ ಪ್ರಾಮಾಣಿಕತೆ (Honesty), ತಾಜಾತನ, ಸದೃಢ ಆಶಾವಾದಿತನಕ್ಕೆ ಸರಿಸಾಟಿಯಿಲ್ಲ. ಈ ಗುಣದಿಂದಾಗಿ ಉತ್ತಮ ವೈಬ್ರೇಷನ್‌ ಹೊಂದಿರುತ್ತಾರೆ.  

Follow Us:
Download App:
  • android
  • ios