ಕೆಫೆಯೊಳಗೆ ಈ ಯುವಕರು ಪ್ರತಿ ಮಂಗಳವಾರ ಏನ್ ಮಾಡ್ತಾರೆ ಅಂತ ತಿಳಿದ್ರೆ ಖಂಡಿತಾ ಅಚ್ಚರಿ ಪಡ್ತೀರಿ!
ಒಂದಷ್ಟು ಹುಡುಗರು ಒಂದೆಡೆ ಸೇರಿದಾರೆ, ಅದೂ ಸಂಜೆ ಹೊತ್ತಿನಲ್ಲಿ ಅಂದ್ರೆ ಅವರಿಂದ ಏನನ್ನು ನಿರೀಕ್ಷಿಸಬಹುದು? ನಿಮ್ಮ ನಿರೀಕ್ಷೆಗಳನ್ನೆಲ್ಲ ಹುಸಿ ಮಾಡಿ ಮೆಚ್ಚುಗೆಯ ಚಪ್ಪಾಳೆ ಪಡೀತಾರೆ ಈ ಹುಡುಗರು..
ಒಂದಷ್ಟು ಹುಡುಗರು ಒಂದೆಡೆ ಸೇರಿದಾರೆ, ಅದೂ ಸಂಜೆ ಹೊತ್ತಿನಲ್ಲಿ ಅಂದ್ರೆ ಅವರಿಂದ ಏನನ್ನು ನಿರೀಕ್ಷಿಸಬಹುದು? ಕುಡಿದು ಪಾರ್ಟಿ ಮಾಡ್ಬಹುದು ಅಥ್ವಾ ಪೋಲಿ ಮಾತಾಡ್ಕೊಂಡೋ, ಕ್ರಿಕೆಟ್ ಬಗ್ಗೆ ಕತೆ ಹೊಡ್ಕೊಂಡೋ ಕೂರ್ಬಹುದು ಅಂತ ಅಲ್ವಾ?
ಆದ್ರೆ ನಿಮ್ಮೆಲ್ಲ ನಿರೀಕ್ಷೆ, ಗೆಸ್‌ಗಳನ್ನು ಸುಳ್ಳು ಮಾಡುವಂತೆ ಹರಿಯಾಣದ ಗುರುಗ್ರಾಮದ ಈ ಯುವಕರು ಸಂಜೆ ಹೊತ್ತು ಕೆಫೆಯೊಂದರಲ್ಲಿ ಕುಳಿತು ಹನುಮಾನ್ ಚಾಲೀಸಾ ಪಠಿಸುತ್ತಿದ್ದಾರೆ. ಇದೇನು ಒಂದು ದಿನದ ಕತೆಯಲ್ಲ, ಪ್ರತಿ ಮಂಗಳವಾರ ಇಲ್ಲಿ ಹೀಗೆ 10-15 ಯುವಕರು ಸೇರಿಕೊಂಡು ಹನುಮಾನ್ ಚಾಲೀಸಾ ಪಠಿಸುತ್ತಾರೆ. ಈ ವಿಡಿಯೋಗೆ ನೆಟ್ಟಿಗರೆಲ್ಲ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದು ಕ್ಷಣ ಯೋಚಿಸಿ, ಭಾರತದ ಎಲ್ಲೆಡೆಯ ಹುಡುಗರು ಸಂಜೆ ಹೊತ್ತಿನಲ್ಲಿ ಇಂಥ ಸತ್ಸಂಗ ನಡೆಸಿದರೆ ಅದೆಷ್ಟು ಚೆಂದವಿರುತ್ತದಲ್ಲವೇ? ಇಷ್ಟಕ್ಕೂ ಹನುಮಾನ್ ಚಾಲೀಸಾ ಪಠಣದ ಲಾಭಗಳೇನು ನೋಡೋಣ.
ಹನುಮಾನ್ ಚಾಲೀಸಾ
ಹಿಂದೂ ಧರ್ಮದಲ್ಲಿ ಹನುಮಂತನ ಆರಾಧನೆಗೆ ವಿಶೇಷ ಮಹತ್ವವಿದೆ. ಹನುಮಾನ್ ಚಾಲೀಸಾದ ನಿಯಮಿತ ಪಠಣವು ಎಲ್ಲಾ ರೀತಿಯ ದುಃಖಗಳನ್ನು ತೊಡೆದುಹಾಕಲು, ಭಯವನ್ನು ತೊಡೆದುಹಾಕಲು ಮತ್ತು ನಮ್ಮ ಆರಾಧ್ಯದೈವ ಆಂಜನೇಯನನ್ನು ಮೆಚ್ಚಿಸಲು ಸಹಾಯ ಮಾಡುತ್ತದೆ. ಗೋಸ್ವಾಮಿ ತುಳಸಿದಾಸ್ ಅವರು ರಚಿಸಿದ ಹನುಮಾನ್ ಚಾಲೀಸಾದಲ್ಲಿ ಪವಾಡದ ಶಕ್ತಿಗಳನ್ನು ವಿವರಿಸಲಾಗಿದೆ. ಪಠಿಸುವ ಮೂಲಕ ಹನುಮಂತನ ಕೃಪೆ ಖಂಡಿತವಾಗಿಯೂ ಸಿಗುತ್ತದೆ.
ಈ ಎರಡೇ ಮಂತ್ರ ಸಾಕು ನಿಮಗೆ ನೀವು ರಾಜಯೋಗ ಸೃಷ್ಟಿ ಮಾಡ್ಕೊಳೋಕೆ, ಪ್ರತಿ ದಿನ ಹೇಳೋದು ಮರೀಬೇಡಿ!
ಹನುಮಾನ್ ಚಾಲೀಸಾ ಭಜರಂಗಬಲಿಯ ಆರಾಧನೆಯಲ್ಲಿ ಮಾಡಿದ ಅತ್ಯಂತ ಸುಲಭ ಮತ್ತು ಸರಳವಾದ 40 ಪದ್ಯಗಳ ಕಾವ್ಯ ಸಂಯೋಜನೆಯಾಗಿದೆ. ತುಳಸಿದಾಸರು ಬಾಲ್ಯದಿಂದಲೂ ಶ್ರೀರಾಮ ಮತ್ತು ಹನುಮಂತನ ಭಕ್ತರಾಗಿದ್ದರು, ಆದ್ದರಿಂದ ಅವರ ಅನುಗ್ರಹದಿಂದ ಅವರು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಆರೋಗ್ಯವು ನೆಲೆಸುತ್ತದೆ. ಕೆಲವು ಕಾರಣಗಳಿಂದ ಮನಸ್ಸು ಚಂಚಲವಾಗಿದ್ದರೆ ಹನುಮಾನ್ ಚಾಲೀಸಾ ಪಠಣದಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇದರ ಪಠಣದಿಂದ ಎಲ್ಲ ರೀತಿಯ ಭಯವೂ ನಾಶವಾಗುತ್ತದೆ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
ಧನಪ್ರಾಪ್ತಿ
ತಾಯಿ ಸೀತೆಯ ಆಶೀರ್ವಾದದಿಂದ, ಆಂಜನೇಯನು ಅಷ್ಟಸಿದ್ಧಿ ನವನಿಧಿಯನ್ನು ಕೊಡುತ್ತಾನೆ, ಇದನ್ನು ಹನುಮಾನ್ ಚಾಲೀಸಾದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಣ ಮಾಡುವುದರಿಂದ ಹಣದ ಸಮಸ್ಯೆ ಇರುವುದಿಲ್ಲ. ಇದರೊಂದಿಗೆ ಆರೋಗ್ಯವೂ ಚೆನ್ನಾಗಿರುತ್ತದೆ. ಹನುಮಾನ್ ಚಾಲೀಸಾವನ್ನು ಪ್ರತಿನಿತ್ಯ ಪಠಿಸುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಯಾಗುತ್ತದೆ.\
ಭೂತೋಚ್ಚಾಟನೆ
ನಿಮ್ಮ ಮನಸ್ಸಿನಲ್ಲಿ ಅಜ್ಞಾತ ಭಯವಿದ್ದರೆ, ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ನಿಮ್ಮ ಭಯವು ಸಂಪೂರ್ಣವಾಗಿ ದೂರವಾಗುತ್ತದೆ. ಚಾಲೀಸಾವನ್ನು ಪಠಿಸುವುದರಿಂದ ನೀವು ಎಲ್ಲಾ ದುಷ್ಟ ಶಕ್ತಿಗಳು, ಪ್ರೇತಗಳು ಇತ್ಯಾದಿಗಳ ಭಯವನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ.
ಅಸ್ಪೃಶ್ಯರು ಯಾರು? ತನ್ನ ಶಿಷ್ಯನೊಬ್ಬನನ್ನು ಅಸ್ಪೃರ್ಶ್ಯ ಎಂದು ಬುದ್ಧ ಹೇಳಿದ್ದೇಕೆ?
ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಹನುಮಾನ್ ಚಾಲೀಸಾದಲ್ಲಿ ಹನುಮಂತನು ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನವನ್ನು ನೀಡುವವನು ಎಂದು ಹೇಳಲಾಗಿದೆ. ಆಂಜನೇಯನು ತಾಯಿ ಸೀತೆ ಮತ್ತು ಶ್ರೀರಾಮರಿಂದ ಈ ಆಶೀರ್ವಾದವನ್ನು ಪಡೆದಿದ್ದಾನೆ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ನೆನಪಿನ ಶಕ್ತಿ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ.
ದಾಂಪತ್ಯದಲ್ಲಿನ ಅಡೆತಡೆಗಳಿಂದ ಮುಕ್ತಿ
ಮದುವೆ ವಿಳಂಬವಾದರೆ ಖಂಡಿತಾ ಈ ಪರಿಹಾರವನ್ನು ಮಾಡಿ. ಆಂಜನೇಯನ ಮುಂದೆ ಶುಭ್ರವಾದ ಕೆಂಪು ಆಸನದ ಮೇಲೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಿದ ನಂತರ, ಆಂಜನೇಯನ ತಲೆಯಿಂದ ಸಿಂಧೂರವನ್ನು ತೆಗೆದುಕೊಂಡು ಇಟ್ಟುಕೊಳ್ಳಿ.