Date of Birth: ನಿಮಗೆ ಮಾತ್ರ ಆ ಒಂದು ಕಾಯಿಲೆ ಪದೇ ಪದೇ ಕಾಡೋದು ಯಾಕೆ ಎಂದು ನಿಮಗೆ ಅನಿಸಿರಬಹುದು ಅಲ್ವಾ? ಅದಕ್ಕೂ ಕಾರಣ ಇದೆ, ಅದು ನಿಮ್ಮ ಹುಟ್ಟಿದ ದಿನ. ಹೌದು, ಹುಟ್ಟಿದ ದಿನಕ್ಕೂ ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗೂ ಇದೆ ಸಂಬಂಧ, ಏನದು? 

ಜನ್ಮ ದಿನಾಂಕ ಮತ್ತು ಆರೋಗ್ಯ ಸಮಸ್ಯೆ

ಕೆಲವೊಮ್ಮೆ ನಿಮ್ಮ ಆರೋಗ್ಯ ಸಮಸ್ಯೆ ನೋಡಿ ನಿಮಗೆ ಅನಿಸಿರಬಹುದು ಯಾಕೆ ಈ ಆರೋಗ್ಯ ಸಮಸ್ಯೆ ನನಗೆ ಮಾತ್ರ ಕಾಡುತ್ತೆ. ಬೇರೆ ಯಾರಿಗೂ ಯಾಕೆ ಈ ಸಮಸ್ಯೆ ಕಾಡುತ್ತಿಲ್ಲ ಎಂದು. ಆದರೆ ನಿಮಗೆ ಗೊತ್ತಿಲ್ಲದ ಸೀಕ್ರೆಟ್ ಏನು ಗೊತ್ತಾ? ನಾವು ಹುಟ್ಟಿದ ದಿನಕ್ಕೂ ನಮ್ಮ ಆರೋಗ್ಯಕ್ಕೂ ಸಂಬಂಧ ಇದೆ ಅನ್ನೋದು. ಹಾಗಿದ್ರೆ ನೀವು ಹುಟ್ಟಿದ ದಿನದ ಪ್ರಕಾರ ನಿಮಗೆ ಯಾವ ಆರೋಗ್ಯ ಸಮಸ್ಯೆಗಳು ಕಾಡಲಿವೆ ಅನ್ನೋದನ್ನು ನೋಡೋಣ.

ಸಂಖ್ಯೆ 1 (ಸೂರ್ಯ) : ಯಾವುದೇ ತಿಂಗಳ 1, 10, 19, 28, ರಂದು ಜನಿಸಿದವರ ಸಂಖ್ಯೆ 1. ಇವರ ಆಳುವ ಗ್ರಹ ಸೂರ್ಯ ಹೃದಯ, ಬಲಗಣ್ಣು ಮತ್ತು ಮೂಳೆಗಳಿಗೆ ಸಂಬಂಧಿಸಿದೆ. ಹಾಗಾಗಿ ಇವರಿಗೆ ಸಾಮಾನ್ಯವಾಗಿ ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ, ಹೆಚ್ಚಾದ ಹೃದಯ ಬಡಿತ, ಬಲಗಣ್ಣಿನ ಸಮಸ್ಯೆ ಮೈಗ್ರೇನ್ ಅಥವಾ ಮೂಳೆಗಳ ಸಮಸ್ಯೆ ಕಾಡುತ್ತೆ. ಸೂರ್ಯನಿಗೆ ನೀರನ್ನು ಅರ್ಪಿಸಿದ್ರೆ ಸಮಸ್ಯೆ ನಿವಾರಣೆಯಾಗುತ್ತದೆ.

ಸಂಖ್ಯೆ 2 (ಚಂದ್ರ) : 2, 11, 20, 29 ರಂದು ಜನಿಸಿದವರು. ಚಂದ್ರನು ಮನಸ್ಸು ಮತ್ತು ದೇಹದ ಜಲತ್ವವನ್ನು ಪ್ರತಿನಿಧಿಸುತ್ತಾನೆ. ಹಾಗಾಗಿ ಇವರಿಗೆ ಸಾಮಾನ್ಯವಾಗಿ ಹೊಟ್ಟೆಯ ಸಮಸ್ಯೆಗಳು, ಅಜೀರ್ಣ, ಕೆಮ್ಮು ಮತ್ತು ಶೀತ, ಮಾನಸಿಕ ಒತ್ತಡ, ಖಿನ್ನತೆ, ನಿದ್ರಾಹೀನತೆ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆ ನಿವಾರಿಸಲು ಬೆಳ್ಳಿ ಪಾತ್ರೆ ಅಥವಾ ಲೋಟದಲ್ಲಿ ನೀರನ್ನು ಕುಡಿಯುವುದು ಮತ್ತು ಧ್ಯಾನ ಮಾಡುವುದು ಉತ್ತಮ.

ಸಂಖ್ಯೆ 3(ಗುರು) : 3, 12, 21, 30 ರಂದು ಜನಿಸಿದವರು. ಗುರು ಗ್ರಹ ಲಿವರ್, ಕೊಬ್ಬು ಮತ್ತು ಗ್ರಂಥಿಗಳನ್ನು ನಿಯಂತ್ರಿಸುತ್ತದೆ.. ಹಾಗಾಗಿ ಇವರಿಗೆ ಬೊಜ್ಜು, ಲಿವರ್ ಸಮಸ್ಯೆ (ಜಾಂಡೀಸ್/ ಫ್ಯಾಟಿ ಲಿವರ್), ಡಯಾಬಿಟೀಸ್, ಅಪಧಮನಿಯ ಸಮಸ್ಯೆಗಳು ಮತ್ತು ಚರ್ಮದ ಸಮಸ್ಯೆಗಳು ಕಾಡುತ್ತವೆ. ಇದಕ್ಕಾಗಿ ಪ್ರತಿದಿನ ಹಣೆಗೆ ಹರಶಿನದ ತಿಲಕವನ್ನು ಹಚ್ಚಿ. ನಿಮ್ಮ ಆಹಾರದಲ್ಲಿ ಹಳದಿ ಆಹಾರ ಹೆಚ್ಚಾಗಿರಲಿ.

ಸಂಖ್ಯೆ 4 (ರಾಹು) : 4, 13, 22, 31ರಂದು ಜನಿಸಿದವರು. ರಾಹು ದಿಢೀರ್ ಮತ್ತು ಪತ್ತೆ ಹಚ್ಚಲಾಗದ ಸಮಸ್ಯೆಗಳಿಗೆ ಸಂಬಂಧಿಸಿದೆ. ಇವರಿಗೆ ಹೆಚ್ಚಾಗಿ ಗ್ಯಾಸ್ಟ್ರಿಕ್, ಆಸಿಡಿಟಿ, ಅಲರ್ಜಿಗಳು, ಉಸಿರಾಟದ ಸಮಸ್ಯೆಗಳು, ವಿಚಿತ್ರ ಕಾಯಿಲೆಗಳು, ಮೆಂಟಲ್ ಕನ್ಫ್ಯೂಶನ್ ಕಾಡುತ್ತವೆ. ಇವರು ಪ್ರತಿದಿನ ಹಕ್ಕಿಗಳಿಗೆ ಮತ್ತು ನಾಯಿಗಳಿಗೆ ಊಟ ಕೊಡುವುದು ಉತ್ತಮ. ಸಾಧ್ಯವಾದಷ್ಟು ಲೇಟ್ ನೈಟ್ ಆಹಾರ ಅವಾಯ್ಡ್ ಮಾಡಬೇಕು.

ಸಂಖ್ಯೆ 5 (ಬುಧ): 5, 14, 23ರಂದು ಜನಿಸಿದವರು. ಇದು ನರಮಂಡಲ, ಚರ್ಮ ಮತ್ತು ಮಾತುಗಳನ್ನು ನಿಯಂತ್ರಿಸುತ್ತದೆ. ಇವರಿಗೆ ಸಾಮಾನ್ಯವಾಗಿ ನರ್ವಸ್ ಬ್ರೇಕ್ ಡೌನ್, ಆತಂಕ, ಸ್ಕಿನ್ ಅಲರ್ಜಿ, ರಾಶಸ್, ನೆನಪಿನಶಕ್ತಿಯ ಸಮಸ್ಯೆ, ನಿದ್ರಾಹೀನತೆ ಕಾಡುತ್ತೆ. ಸಾಧ್ಯವಾದಷ್ಟು ಹಸಿರು ತರಕಾರಿ ಸೇವಿಸಬೇಕು. ಹಸುಗಳಿಗೆ ಆಹಾರ ತಿನ್ನಿಸಬೇಕು. ಜೊತೆಗೆ ನೀವು ಪ್ರಾಣಾಯಾಮ ಮಾಡೋದು ಉತ್ತಮ.

ಸಂಖ್ಯೆ 6 (ಶುಕ್ರ): 6, 15, 24 ರಂದು ಜನಿಸಿದವರು. ಶುಕ್ರ ಗ್ರಹ ಕಿಡ್ನಿ ಹಾರ್ಮೋನ್ಸ್ ಮತ್ತು ರಿಪ್ರೊಡಕ್ಟಿವ್ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇವರಿಗೆ ಸಾಮಾನ್ಯವಾಗಿ ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್. ಗಂಟಲಿನ ಇನ್ಫೆಕ್ಷನ್, ಸಂತಾನೋತ್ಪತ್ತಿ ಅಥವಾ ಹಾರ್ಮೋನಲ್ ಅಸಮತೋಲನ ಸಮಸ್ಯೆ ಕಾಡುತ್ತೆ. ಸಮಸ್ಯೆ ನಿವಾರಣೆಗೆ ಸ್ವಚ್ಚತೆಯನ್ನು ಕಾಪಾಡಬೇಕು, ಸಕ್ಕರೆ ಅಂಶ ಕಡಿಮೆ ಸೇವಿಸಬೇಕು, ಸಾಧ್ಯವಾದಷ್ಟು ಬಿಳಿ ಬಣ್ಣದ ಬಟ್ಟೆ ಧರಿಸಬೇಕು.

ಸಂಖ್ಯೆ 7 (ಕೇತು): 7, 16, 25 ರಂದು ಜನಿಸಿದ ಜನರು. ಕೇತು ಸುಪ್ತ ಮನಸ್ಸು ಮತ್ತು ಸೋಂಕುಗಳಿಗೆ ಸಂಬಂಧಿಸಿದೆ. ಇವರಿಗೆ ಸಾಮಾನ್ಯವಾಗಿ ಚರ್ಮದ ಸಮಸ್ಯೆಗಳು, ಸೋಂಕು, ಅಜೀರ್ಣ, ಮಾನಸಿಕ ಒತ್ತಡ, ಆತಂಕ ಮತ್ತು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಸಾಧ್ಯವಾದಷ್ಟು ಬೀದಿ ನಾಯಿಗೆ ಆಹಾರ ಕೊಡುವುದು, ಧ್ಯಾನ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಂಖ್ಯೆ 8(ಶನಿ): 8, 17, 26 ರಂದು ಜನಿಸಿದವರು. ಶನಿ ಮೊಣಗಂಟು, ಹಲ್ಲು ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಇವರಿಗೆ ಹೆಚ್ಚಾಗಿ ಆರ್ಥರಿಟೀಸ್, ಗಂಟು ನೋವು, ಪ್ಯಾರಲಿಸೀಸ್, ಮಲಬದ್ಧತೆ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕಾಲಿಗೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದು, ಬಡವರು, ನಿರ್ಗತಿಕರಿಗೆ ಸಹಾಯ ಮಾಡುವುದು ಮತ್ತು ಸೋಮಾರಿತನವನ್ನು ಬಿಡೋದ್ರಿಂದ ಉತ್ತಮ ಆರೋಗ್ಯವನ್ನು ಕಾಪಾಡಬಹುದು.

ಸಂಖ್ಯೆ 9(ಮಂಗಳ): 9, 18, 27ರಂದು ಜನಿಸಿದವರು. ಮಂಗಳ ಸಾಮಾನ್ಯವಾಗಿ ರಕ್ತ, ಮಸಲ್ಸ್ ಮತ್ತು ಸರ್ಜರಿಗೆ ಸಂಬಂಧಿಸಿದೆ. ಇವರಿಗೆ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ, ಜ್ವರ, ಗಾಯಗಳು, ಅಪಘಾತ, ಸರ್ಜರಿ, ಗುಳ್ಳೆಗಳು, ಮೊಡವೆ ಮತ್ತು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಈ ದಿನ ಜನಿಸಿದವರು ಹೆಚ್ಚು ಹೆಚ್ಚು ನೀರು ಕುಡಿಯಬೇಕು, ಪ್ರತಿದಿನ ವ್ಯಾಯಾಮ ಮಾಡಬೇಕು, ಜೊತೆಗೆ ಕೆಂಪು ಬೇಳೆಯನ್ನು ನಿರ್ಗತಿಕರಿಗೆ ದಾನ ಮಾಡಬೇಕು.