ಭಾರತದಲ್ಲಿ ನದಿ ಬರೀ ನದಿಯಲ್ಲ… ಅದಕ್ಕಿದೆ ಅಮ್ಮನ ಸ್ಥಾನ!
ಭಾರತವನ್ನು ನದಿಗಳ ನಾಡು ಎಂದೇ ಕರೆಯಲಾಗುತ್ತದೆ. ಅನೇಕ ನದಿಗಳು ಭಾರತದಲ್ಲಿ ಹುಟ್ಟಿ ಹರಿಯುತ್ತವೆ. ಝುಳು ಝುಳು ನಾದದ ಜೊತೆ ಹರಿಯುವ ನದಿಗಳು ಹಿಂದೂ ಧರ್ಮದಲ್ಲೂ ಉನ್ನತ ಸ್ಥಾನ ಪಡೆದಿವೆ.
ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ಪ್ರತಿ ವರ್ಷ ಪ್ರಪಂಚದಾದ್ಯಂತ ನದಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಂತರರಾಷ್ಟ್ರೀಯ ನದಿ ದಿನವನ್ನು ಸೆಪ್ಟೆಂಬರ್ 24 ರಂದು ಆಚರಿಸಲಾಗುತ್ತಿದೆ. ಈ ವರ್ಷದ ಥೀಮ್ ನದಿಗಳ ಹಕ್ಕು. ಇದು ನದಿಗಳನ್ನು ರಾಷ್ಟ್ರೀಯ ಸ್ವತ್ತುಗಳಾಗಿ ಘೋಷಿಸಲು ಒತ್ತಾಯಿಸುವ ಉದ್ದೇಶವನ್ನು ಹೊಂದಿದೆ.
ನದಿ (River) ದಿನದ ಇತಿಹಾಸ (History) : 2005ರಲ್ಲಿ ಮೊದಲ ಬಾರಿ ವಿಶ್ವ ನದಿ ದಿನವನ್ನು ಆಚರಿಸಲಾಯಿತು. ಪ್ರಪಂಚದಾದ್ಯಂತ ನದಿಗಳನ್ನು ರಕ್ಷಿಸುವ ಉದ್ದೇಶದೊಂದಿಗೆ ಈ ಆಚರಣೆ ಶುರುವಾಯಿತು. ಪ್ರತಿ ವರ್ಷ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಅಂತರರಾಷ್ಟ್ರೀಯ ನದಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಅನೇಕ ನದಿಗಳಿವೆ ಮತ್ತು ಪ್ರತಿಯೊಂದು ನದಿಗೂ ತನ್ನದೇ ಆದ ಅದ್ಭುತ ಕಥೆಯಿದೆ. ದೇಶದಾದ್ಯಂತ ಹರಿಯುವ ನದಿಗಳು ತಮ್ಮ ವೈಭವ ಮತ್ತು ಸೌಂದರ್ಯದ ಕಥೆಯನ್ನು ಹೇಳುತ್ತವೆ.
ಗುರು ಗ್ರಹದ ಅಶುಭ ಪ್ರಭಾವದಿಂದ ಪಾರಾಗಲು ಹೀಗೆ ಮಾಡಿ..!
ಭಾರತದಲ್ಲಿ ನದಿಗಳಿಗಿದೆ ಪ್ರಮುಖ ಸ್ಥಾನ : ಭಾರತವನ್ನು ನದಿಗಳ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿ ದೊಡ್ಡ ಮತ್ತು ಚಿಕ್ಕ ನದಿಗಳು ಸೇರಿದಂತೆ ಸುಮಾರು 200 ಮುಖ್ಯ ನದಿಗಳಿವೆ. ಭಾರತದಲ್ಲಿ ನದಿಗಳಿಗೆ ವಿಶೇಷ ಧಾರ್ಮಿಕ ಮಹತ್ವವಿದೆ. ನದಿಗಳನ್ನು ಪವಿತ್ರ, ಪೂಜ್ಯವೆಂದು ಪರಿಗಣಿಸಲಾಗಿದೆ. ನದಿಗಳಿಗೆ ದೇವತೆ ಸ್ಥಾನ ನೀಡಲಾಗಿದೆ. ಅವುಗಳನ್ನು ತಾಯಿಯೆಂದು ಪೂಜಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಯುಮುನಾ, ಬ್ರಹ್ಮಪುತ್ರ, ಸಿಂಧೂ, ಗೋದಾವರಿ, ನರ್ಮದಾ, ಕೃಷ್ಣಾ, ಮಹಾನದಿ, ತಪತಿ, ವಿವಸ್ತ, ಸರಸ್ವತಿ, ಕುಂಭ, ಕಾವೇರಿ, ಶರಾವತಿ ಮೊದಲಾದ ನದಿಗಳನ್ನೂ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ನದಿಯ ಸ್ನಾನ ಹಾಗೂ ಪೂಜೆಯನ್ನು ಪುಣ್ಯವೆಂದು ಪರಿಗಣಿಸಲಾಗಿದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದ್ರಿಂದ ಮನಸ್ಸು, ದೇಹ ಎರಡೂ ಶುದ್ಧವಾಗುತ್ತದೆ. ಎಲ್ಲ ಪಾಪಗಳಿಂದ ಮುಕ್ತಿಪಡೆಯಬೇಕೆಂದ್ರೆ ನದಿಯಲ್ಲಿ ಸ್ನಾನ ಮಾಡಬೇಕು ಎಂದು ನಂಬಲಾಗಿದೆ. ನದಿಯಲ್ಲಿ ಸ್ನಾನ ಮಾಡುವುದ್ರಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಕೂಡ ಬಲವಾಗಿದೆ. ನದಿ ಇರಲಿ ಇಲ್ಲ ಮನೆಯಲ್ಲಿ ಸ್ನಾನ ಮಾಡ್ತಿರಲಿ, ಆ ಸಮಯದಲ್ಲಿ ಗಂಗಾ, ಯಮುನಾ, ಸಿಂಧು, ಗೋದಾವರಿ, ನರ್ಮದಾ, ಕೃಷ್ಣ ಮತ್ತು ಕಾವೇರಿ ಈ ಏಳು ನದಿಗಳನ್ನು ನೆನೆಯಬೇಕು. ಇವುಗಳ ಹೆಸರು ಹೇಳಿ ಸ್ನಾನ ಮಾಡುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪಾಪ ನಾಶವಾಗುತ್ತದೆ. ಗಂಗಾ ನದಿಗೆ ವಿಶೇಷ ಸ್ಥಾನ ನೀಡಲಾಗಿದ್ದು, ಗಂಗೆ ಪೂಜೆ, ಗಂಗಾ ಸ್ನಾನ ಎಲ್ಲವೂ ಮಂಗಳಕರ ಕೆಲಸವಾಗಿದೆ.
ಕರ್ನಾಟಕ ಪ್ರವಾಸದ ಫೋಟೋ, ರೀಲ್ಸ್ ಹಂಚಿಕೊಳ್ಳಿ 2 ದಿನ ಉಚಿತ ಪ್ರವಾಸದ ಗಿಪ್ಟ್ ಪಡೆಯಿರಿ
ಭಾರತದಲ್ಲಿ ನದಿಗಳ ಇತಿಹಾಸ : ನಮ್ಮ ನಾಗರಿಕತೆ ಪ್ರಾರಂಭವಾಗಿದ್ದು ಹಿಮಾಲಯದ ಬೆಟ್ಟಗಳಲ್ಲಿ ಹರಿಯುವ ಸಿಂಧೂ ನದಿಯಿಂದ. ಭಾರತದ ಐತಿಹಾಸಿಕ ಮೌಲ್ಯಗಳು ಸಿಂಧೂ ನದಿಯೊಂದಿಗೆ ಸಂಬಂಧ ಹೊಂದಿದ್ದರೂ, ಗಂಗೆಯನ್ನು ಭಾರತದ ಅತ್ಯಂತ ಜನಪ್ರಿಯ ಮತ್ತು ಪೌರಾಣಿಕ ನದಿ ಎಂದು ಪರಿಗಣಿಸಲಾಗಿದೆ.
ಗಂಗೆ ಭೂಮಿಗೆ ಬಂದ ಬಗ್ಗೆ ಕಥೆಗಳಿವೆ. ಗಂಗಾ ನದಿ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ನದಿಯಾಗಿದೆ. ಇದನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ಗಂಗಾ ನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟುತ್ತದೆ. ಗಂಗಾನದಿಯಷ್ಟು ಪ್ರಾಮುಖ್ಯತೆ ಮತ್ತು ಶ್ರೇಯವನ್ನು ಪಡೆದ ನದಿ ಇಡೀ ಜಗತ್ತಿನಲ್ಲಿ ಬೇರೆ ಯಾವ ನದಿಯೂ ಇಲ್ಲ.
ಸಿಂಧೂ ಮತ್ತು ಗಂಗಾ ಜೊತೆಗೆ ಗೋದಾವರಿ ನದಿಯೂ ಭಾರತದ ಪ್ರಮುಖ ನದಿಯಾಗಿದೆ. ಇದು ಗಂಗಾ ನದಿಯ ನಂತರ ಎರಡನೇ ದೊಡ್ಡ ನದಿಯಾಗಿದೆ. ಗೋದಾವರಿ ನದಿಯನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜ್ಯ ನದಿ ಎಂದು ಪರಿಗಣಿಸಲಾಗಿದೆ. ಅನೇಕ ಶತಮಾನಗಳಿಂದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡುವ ಬಂದಿರುವ ನದಿ ಗೋದಾವರಿ. ಭಾರತದ ಪ್ರತಿಯೊಂದು ನದಿಯೂ ಲಕ್ಷಾಂತರ ಮಂದಿಯ ಜೀವನೋಪಾಯಕ್ಕೆ ಆಸರೆಯಾಗಿದೆ.