Asianet Suvarna News Asianet Suvarna News

ಕರ್ನಾಟಕ ಪ್ರವಾಸದ ಫೋಟೋ, ರೀಲ್ಸ್‌ ಹಂಚಿಕೊಳ್ಳಿ 2 ದಿನ ಉಚಿತ ಪ್ರವಾಸದ ಗಿಪ್ಟ್‌ ಪಡೆಯಿರಿ

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಫೋಟೋ ಹಾಗೂ ವಿಡಿಯೋ ರೀಲ್ಸ್‌ ಸ್ಪರ್ಧೆ ಏರ್ಪಡಿಸಿದ್ದು, ಅತಿಹೆಚ್ಚು ಲೈಕ್ಸ್‌ ಪಡೆದವರಿಗೆ 2 ದಿನ ಉಚಿತ ಪ್ರವಾಸದ ಗಿಫ್ಟ್‌ ಕೊಡಲಿದೆ.

Karnataka Tourism Department Offer Share Your Photo and Reels Get 2 Days Free Travel Gift sat
Author
First Published Sep 21, 2023, 5:57 PM IST

ಬೆಂಗಳೂರು (ಸೆ.21): ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಆರೋಗ್ಯಕರ ಸ್ಪರ್ಧೆಯೊಂದನ್ನು ಆಯೋಜನೆ ಮಾಡಿದೆ. ಕರ್ನಾಟಕದಲ್ಲಿ ಈ ಹಿಂದೆ ಪ್ರವಾಸ ಮಾಡಿದ ಉತ್ತಮ ಫೋಟೋಗಳನ್ನು ಪ್ರವಾಸೋದ್ಯಮ ಇಲಾಖೆಯ ಸಾಮಾಜಿಕ ಜಾಲತಾಣ @Karnatakaworld ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದರೆ ನೀವು 1 ರಾತ್ರಿ/2 ಹಗಲು ಸೇರಿದಂತೆ 2 ದಿನದ ಉಚಿತ ಪ್ರವಾಸದ ಭಾಗ್ಯವನ್ನು ಪಡೆದುಕೊಳ್ಳಬಹುದು.

ರಾಜ್ಯದ ಪ್ರವಾಸೋದ್ಯಮ ಇಲಾಖೆಯಿಂದ ಈ ಬಾರಿಯ #WorldTourismDay23 ಅಂಗವಾಗಿ ನೀವು ನಿಮ್ಮ ಕುಟುಂಬ/ಗೆಳೆಯರ ಗುಂಪಿನೊಂದಿಗೆ ಕರ್ನಾಟಕದಲ್ಲಿ ಪ್ರವಾಸ ಮಾಡಿ ಬಹುಮಾನ ಗೆಲ್ಲಬಹುದು. ಪ್ರವಾಸದ ಅತ್ಯುತ್ತಮ ಫೋಟೊಗಳನ್ನು ಈ #WTDkarnatakaCompetition ಹ್ಯಾಷ್ ಟ್ಯಾಗ್ ನೊಂದಿಗೆ ನಿಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ @Karnatakaworld ಟ್ಯಾಗ್‌ ಮಾಡಿ ಸೆಪ್ಟೆಂಬರ್‌ 25 ರೊಳಗೆ ಶೇರ್‌ ಮಾಡಿ. ಇದರಿಂದ ಉಚಿತ ಪ್ರವಾಸದ ಗಿಫ್ಟ್‌ಗಳನ್ನು ಗೆಲ್ಲಬಹುದು.

ಇನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರವಾಸ ಪ್ರಿಯರು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ: https://www.kstdc.co/terms-and-conditions/

ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅಡವಿಟ್ಟು ಸೋತ ಕರ್ನಾಟಕ! ವಕೀಲರ ವಾದ ಇಲ್ಲಿದೆ ನೋಡಿ...

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವೀಡಿಯೋ ಚಾಲೆಂಜ್‌! ಎಲ್ಲಾ ಕಂಟೆಂಟ್‌ ಕ್ರಿಯೇಟರ್ಸ್‌, ಪ್ರವಾಸಿ ಉತ್ಸಾಹಿಗಳಿಗೆ ಅವಕಾಶ. ಟೂರಿಸಂ & ಗ್ರೀನ್‌ ಇನ್ವೆಸ್ಟ್ರೆಂಟ್ಸ್‌ ಮತ್ತು ಇತರೆ ವಿಷಯಗಳ ಮೇಲೆ ರೀಲ್ಸ್‌, ವಿಡಿಯೋ ಅಥವಾ #vlogs ರಚಿಸಬಹುದು. ಸೆ. 25 ರೊಳಗೆ #WTDKarnatakareel ಹ್ಯಾಷ್ ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಿ ಉಚತ ಪ್ರವಾಸದ ಕೊಡುಗೆಯನ್ನು ಪಡೆಯಬಹುದು.

ಚೈತ್ರಾ ಕುಂದಾಪುರ ನಮ್ಮವಳಲ್ಲ ಎಂದು ಕೈಬಿಟ್ಟ ವಿಶ್ವ ಹಿಂದೂ ಪರಿಷತ್

ವಿಜೇತರನ್ನು ಆಯ್ಕೆ ಮಾಡುವ ವಿಧಾನ: ಇನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಫೊಟೋ ಹಾಗೂ ರೀಲ್ಸ್‌ ವಿಡಿಯೋ ಶೇರ್‌ ಮಾಡಿಕೊಂಡ ನಂತರ ಹೆಚ್ಚು ನಮೂದುಗಳನ್ನು ಪಡೆದವರಿಗೆ ಆದ್ಯತೆ ನೀಡಲಾಗುವುದು. ಅಂದರೆ, ಶೇರ್‌ ಮಾಡಿಕೊಂಡ ಫೋಟೋ ಅಥವಾ ವಿಡಿಯೋಗೆ ಅತಿ ಹೆಚ್ಚು ಲೈಕ್ಸ್‌ ಮತ್ತು ಕಮೆಂಟ್ಸ್‌ ಪಡೆದ ಮೊದಲ 3 ಪೋಸ್ಟ್‌ಗಳನ್ನು ಆಯ್ಕೆ ಮಾಡಿಕೊಂಡು ವಿಜೇತರನ್ನಾಗಿ ಘೋಷಣೆ ಮಾಡಲಾಗುವುದು. ವಿಜೇತರಿಗೆ ಜೆಆರ್‌ಎಲ್‌, ಕೆಎಸ್‌ಟಿಡಿಸಿ ಹಾಗೂ ಇತರೆ ಖಾಸಗಿ ಹೋಟೆಲ್‌ಗಳಲ್ಲಿ 1ರಾತ್ರಿ/2 ಹಗಲು ಉಚಿತವಾಗಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಸ್ಪರ್ಧೆಯ ಅವಧಿ ಸೆ.20 ರಿಂದ ಸೆ.25ರವರೆಗೆ ಮಾತ್ರ.

 

Karnataka Tourism Department Offer Share Your Photo and Reels Get 2 Days Free Travel Gift sat

Follow Us:
Download App:
  • android
  • ios