Asianet Suvarna News Asianet Suvarna News

ಈ ರೀತಿಯ ಅಂಗಸೌಷ್ಠವದ ಹುಡುಗಿ ಪತಿಯ ಪಾಲಿಗೆ ಅದೃಷ್ಟ ದೇವತೆಯಾಗುತ್ತಾಳೆ!

ಹುಡುಗಿಯ ದೈಹಿಕ ರಚನೆಯ ಆಧಾರದ ಮೇಲೆ ಅವಳು ಪತಿಯ ಪಾಲಿಗೆ ಅದೃಷ್ಟ ತರುವಳೇ ಎಂಬುದನ್ನು ಲಕ್ಷಣ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹುಡುಗಿ ಹೇಗಿದ್ದರೆ ಲಕ್ಕಿ?

Women who have this physical feature shine their husbands luck skr
Author
Bangalore, First Published May 8, 2022, 4:01 PM IST

ಹೆಣ್ಣು ಎಂದರೆ ಮನೆಯ ಮಹಾಲಕ್ಷ್ಮೀ ಎಂದು ನಂಬುತ್ತೇವೆ. ಆಕೆ ಹುಟ್ಟಿದ ಮೇಲೆ ತವರು ಅಭಿವೃದ್ಧಿಯಾದರೆ ಅವಳೇ ಅದೃಷ್ಟ ಲಕ್ಷ್ಮೀ ಎಂಬ ಪಟ್ಟ ಪಡೆಯುತ್ತಾಳೆ. ಗಂಡನ ಮನೆ ಸೇರಿದ ಮೇಲೆ ಅಲ್ಲಿ ಅನುಕೂಲಗಳಾದರೆ ಪತಿಯ ಪಾಲಿಗೆ ಆಕೆ ಅದೃಷ್ಟ ದೇವತೆಯಾಗುತ್ತಾಳೆ. ಪ್ರತಿಯೊಬ್ಬರೂ ತಮ್ಮ ಬದುಕಲ್ಲಾಗುವ ಪ್ರತಿ ಬದಲಾವಣೆಗಳಲ್ಲೂ ಅದೃಷ್ಟಕ್ಕಾಗಿ ಹಂಬಲಿಸುತ್ತಾರೆ. ಅಂಥದೊಂದು ದೊಡ್ಡ ಬದಲಾವಣೆ ಎಲ್ಲರ ಬಾಳಿನಲ್ಲಿ ಬರುವುದೆಂದರೆ ವಿವಾಹ. 

ವಿವಾಹವಾಗುವಾಗ ಬಹುತೇಕ ಪುರುಷರಿಗೆ ಪತ್ನಿಯಾಗುವವಳ ಕಾಲ್ಗುಣದಿಂದ ತಮ್ಮ ಮನೆ ಬೆಳಕಾಗುವುದು, ಅಭಿವೃದ್ಧಿಯಾಗುವುದು ಎಂಬ ಕನಸಿರುತ್ತದೆ. ಹೀಗಾಗಿ ಹಿಂದಿನ ಕಾಲದಲ್ಲಿ ಸಾಕಷ್ಟು ವಧು ಪರೀಕ್ಷೆ ಮಾಡುತ್ತಿದ್ದುದುಂಟು. ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಗಲ್ಲ ಮತ್ತಿತರ ಕಡೆ ಅದೃಷ್ಟ ತರುತ್ತದೆಂಬ ನಂಬಿಕೆ ಇರುವಂಥ ಸ್ಥಳಗಳಲ್ಲಿ ಮಚ್ಚೆ ಇರುವ ಹುಡುಗಿ ಸಿಕ್ಕರೆ ಹುಡುಗರಿಗೆ ಸಂತೋಷವಾಗುತ್ತಿತ್ತು. ಇದಲ್ಲದೆ ಹುಡುಗಿಯ ಹೆಸರು, ಜಾತಕ, ನಡೆನುಡಿ ಎಲ್ಲದನ್ನು ನೋಡಿಯೂ ಆಕೆ ಗಂಡನಿಗೆ ಅದೃಷ್ಟ ದೇವತೆಯಾಗುವ ಬಗ್ಗೆ ಹೇಳಲಾಗುತ್ತದೆ. ಇದಕ್ಕೆ ಮತ್ತೊಂದು ಸೇರ್ಪಡೆ ದೇಹಲಕ್ಷಣಗಳನ್ನು ನೋಡಿ ಹೇಳುವುದು. 
ಲಕ್ಷಣ ಶಾಸ್ತ್ರದಲ್ಲಿ ಹೆಣ್ಣುಮಕ್ಕಳ ದೈಹಿಕ ರಚನೆಯನ್ನು ನೋಡಿ ಅವರ ಪತಿಯಾಗುವವನ ಅದೃಷ್ಟದ ಬಗ್ಗೆ ಹೇಳಲಾಗುತ್ತದೆ. ಈ ಕೆಳಗಿನ ದೈಹಿಕ ಲಕ್ಷಣವಿರುವ ಹುಡುಗಿ ಪತ್ನಿಯಾದರೆ ಪತಿಯ ಸಂಪತ್ತು ಅಪರಿಮಿತವಾಗುವುದು ಎನ್ನಲಾಗುತ್ತದೆ. 

ಕೈಗಳು: ಮಹಿಳೆಯರ ಕೈಗಳು ಸುಂದರ ಮತ್ತು ಉದ್ದವಾಗಿದ್ದರೆ, ಅವರನ್ನು ಅದೃಷ್ಟವಂತ ಮಹಿಳೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಆಕೆಯ ಅಂಗೈ ಸೌಮ್ಯ ಮತ್ತು ಗುಲಾಬಿ ಬಣ್ಣದ್ದಾಗಿದ್ದರೆ ಅವಳು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ಲಕ್ಷಣಗಳನ್ನು ಹೊಂದಿರುವ ಮಹಿಳೆಯರಿಗೆ ಮನೆಯಲ್ಲಿ ಎಂದಿಗೂ ಹಣದ ಕೊರತೆಯುಂಟಾಗುವುದಿಲ್ಲ.

ಕಿವಿ(Ear): ಕಿವಿಗಳಲ್ಲಿ ಮೃದುವಾದ ಚರ್ಮವನ್ನು ಹೊಂದಿರುವ ಉದ್ದ ಕಿವಿಗಳ ಮಹಿಳೆಯರು ತಮ್ಮ ಗಂಡನ ಭವಿಷ್ಯ(Husband's future)ವನ್ನು ಬೆಳಗಿಸುತ್ತಾರೆ ಎಂದು ಹೇಳಲಾಗುತ್ತದೆ. ಇವರು ಆತ್ಮವಿಶ್ವಾಸದಿಂದ ಕೂಡಿದ್ದು, ಚೈತನ್ಯದ ಅಲೆಯಾಗಿ ಮನೆಯಲ್ಲಿ ಓಡಾಡಿಕೊಂಡಿರುತ್ತಾರೆ. 

Chandra Grahan 2022: ಈ ವರ್ಷ ಎರಡೆರಡು ಚಂದ್ರಗ್ರಹಣ

ಕೂದಲು(Hair): ಕಿವಿಯ ಹಿಂದೆ ಕೂದಲು ಹೊಂದುವ ಅಭ್ಯಾಸವಿರುವ ಮಹಿಳೆಯರು, ಕಪ್ಪಾದ ಹೊಳಪಿನ ದಟ್ಟ(Black thick shiny hair)  ಹೊಂದಿರುವ ಮಹಿಳೆಯರು ತಮ್ಮ ಪತಿಯ ಮನೆಗೆ ಬಹಳಷ್ಟು ಸಂಪತ್ತನ್ನು ತರುತ್ತಾರೆ. 

ಹಲ್ಲುಗಳು(Teeth): ಒಂದೇ ನೇರದಲ್ಲಿ ಹಲ್ಲುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡನಿಗೆ ಎಲ್ಲಾ ರೀತಿಯ ಸಂತೋಷವನ್ನು ನೀಡಲು ಸಮರ್ಥರಾಗಿರುತ್ತಾರೆ. ಅವರು ನಗುವಿನಲ್ಲೇ ಸಂತೋಷ ಹರಡುವ, ಸಮೃದ್ಧಿ ಆಕರ್ಷಿಸುವ ವರ ಪಡೆದಿರುತ್ತಾರೆ. 

ಕಾಲುಗಳು(legs): ಉದ್ದ ಕಾಲಿನ ಹುಡುಗಿಯರು ಪತಿಯ ಪಾಲಿಗೆ ಲಕ್ಕಿಯಾಗಿದ್ದಾರೆ. ಬಹಳ ತಾಳ್ಮೆ ಹಾಗೂ ಧೈರ್ಯ ಹೊಂದಿರುವ ಇವರು ಪತಿಯ ಹಣೆಬರಹವನ್ನೇ ಬದಲಿಸಬಲ್ಲರು. ಪತ್ನಿಗೆ ಉದ್ದ ಕಾಲ್ಗಳಿದ್ದರೆ ಮನೆಯಲ್ಲಿ ಹಣಕ್ಕೆಂದೂ ಕೊರತೆಯಾಗುವುದಿಲ್ಲ. 

ಮೈ ತುಂಬ ಸಾಲವಿದೆಯಾ? ಪರಿಹಾರಕ್ಕೆ ಈ Vaastu Tips ಅನುಸರಿಸಿ

ಪಾದದ ರೂಪ(Foot form): ಸುಂದರವಾದ ಕಾಲುಗಳು, ಗುಲಾಬಿ ಉಗುರುಗಳು ಮತ್ತು ಸಣ್ಣ ಬೆರಳುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡನ ಬಗ್ಗೆ ತುಂಬಾ ಚಿಂತೆ ಮಾಡುತ್ತಾರೆ. ಅದೇ ಸಮಯದಲ್ಲಿ, ಈ ಮಹಿಳೆಯರ ಗಂಡಂದಿರು ಆಗಾಗ್ಗೆ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. 

ತುಟಿಗಳು(Lips): ತುಟಿಗಳು ದಪ್ಪಗೆ ಕೆಂಪಗೆ ತುಂಬಿಕೊಂಡಿದ್ದರೆ ಅಂಥ ಹುಡುಗಿಯು ಆಸ್ತಿಯನ್ನು ತನ್ನೆಡೆಗೆ ಆಕರ್ಷಿಸುತ್ತಾಳೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios