Asianet Suvarna News Asianet Suvarna News

Chandra Grahan 2022: ಈ ವರ್ಷ ಎರಡೆರಡು ಚಂದ್ರಗ್ರಹಣ

ಈ ವರ್ಷದ ಮೊದಲ ಚಂದ್ರಗ್ರಹಣಕ್ಕೆ ಇನ್ನೇನು ವಾರವಷ್ಟೇ ಬಾಕಿಯಿದೆ. ಈ ವರ್ಷದಲ್ಲಿ ಇನ್ನೂ ಎಷ್ಟು ಬಾರಿ ಚಂದ್ರಗ್ರಹಣವಾಗುತ್ತದೆ, ಯಾವಾಗ ಆಗುತ್ತದೆ ನೋಡೋಣ. 

how many lunar eclipses in 2022 skr
Author
Bangalore, First Published May 8, 2022, 2:58 PM IST

ಸೂರ್ಯ ಚಂದ್ರ ಹಾಗೂ ಭೂಮಿ ಸಮಾನ ರೇಖೆಯಲ್ಲಿ ಬಂದಾಗ ಸಂಭವಿಸುವುದೇ ಗ್ರಹಣ. ಸೂರ್ಯ ಹಾಗೂ ಚಂದ್ರರ ನಡುವೆ ಭೂಮಿ ಬಂದಾಗ, ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಉಂಟಾಗುವುದೇ ಚಂದ್ರಗ್ರಹಣ(Lunar Eclipse). ಇಂಥ ಅಪರೂಪದ ಖಗೋಳ ಘಟನೆಯು ಈ ವರ್ಷ ಎಷ್ಟು ಬಾರಿ ಇದೆ, ಯಾವಾಗ ಇರಲಿದೆ, ಭಾರತದಲ್ಲಿ ಗೋಚರಿಸುವುದೇ, ಬರಿಗಣ್ಣಿನಲ್ಲಿ ನೋಡಬಹುದೇ ಎಲ್ಲ ವಿವರಗಳನ್ನೂ ನೋಡೋಣ. 

ಯಾವಾಗ ಗ್ರಹಣ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜೊತೆಗೆ, ಅದನ್ನು ಕೆಟ್ಟದ್ದೆಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಗ್ರಹಣ ಕಾಲದಲ್ಲಿ ಯಾವ ಶುಭ ಕೆಲಸವನ್ನೂ ಮಾಡುವುದಿಲ್ಲ. ಅದೊಂದು ಸೂತಕ ಕಾಲ ಎಂದು ನೋಡಲಾಗುತ್ತದೆ. ಹೀಗಾಗಿ ಯಾವುದೇ ಯೋಜನೆಗಳಿಗೆ, ಶುಭ ಕೆಲಸಗಳಿಗೆ ಮುನ್ನಡಿ ಇಡುವ ಮುನ್ನ ಬೇರೆಲ್ಲ ಮುಹೂರ್ತ ನೋಡುವಂತೆ ಗ್ರಹಣ ಕಾಲವನ್ನೂ ನೋಡಬೇಕಾಗುತ್ತದೆ. ಅದಕ್ಕಾಗಿ ಗ್ರಹಣಗಳ ಬಗ್ಗೆ ತಿಳಿದಿರಬೇಕು. ಏ.30ಕ್ಕೆ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಅದಾಗಿ ಇನ್ನೂ ವಾರ ಕಳೆದಿದ್ದಷ್ಟೇ, ಕಣ್ಣೆದುರಿಗೆ ಚಂದ್ರಗ್ರಹಣ ಬಂದು ನಿಂತಿದೆ. 

ವೃಷಭದಲ್ಲಿ ಬುಧ ವಕ್ರಿ; ನಿಮ್ಮ ರಾಶಿಯ ಮೇಲೇನು ಪರಿಣಾಮವಾಗಲಿದೆ?

ಹೌದು, ಇದೇ ಮೇ 16ರಂದು ಸೋಮವಾರ ವರ್ಷದ ಮೊದಲ ಚಂದ್ರ ಗ್ರಹಣ ಘಟಿಸುತ್ತಿದೆ. ಸೋಮವಾರ ಚಂದ್ರನ ದಿನವೇ ಆಗಿದ್ದು, ಇದೇ ದಿನ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಈ ದಿನ ನಡೆಯುವುದು ಸಂಪೂರ್ಣ ಚಂದ್ರ ಗ್ರಹಣವಾಗಿದ್ದು, ಈ ಗ್ರಹಣವು ಮೇ 15 ರಂದು ರಾತ್ರಿ 10.28  ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ. ಇದು ವೈಶಾಖ ಪೂರ್ಣಿಮೆಯ ದಿನವಾಗಿದ್ದು, ಚಂದ್ರನು ಗ್ರಹಣ ಕಾಲದಲ್ಲಿ ಕೆಂಪಗೆ ಕಾಣಿಸುತ್ತಾನಾದ್ದರಿಂದ ಇದನ್ನು 'ಬ್ಲಡ್ ಮೂನ್' ಎನ್ನಲಾಗುತ್ತದೆ. 
ಇದು  ಆಫ್ರಿಕಾ(Africa), ದಕ್ಷಿಣ ಅಮೆರಿಕ, ಪೆಸಿಫಿಕ್ ಓಶನ್, ಉತ್ತರ ಅಮೆರಿಕ, ಅಂಟಾರ್ಟಿಕಾ ಭಾಗಗಳಲ್ಲಿ ಈ ಚಂದ್ರಗ್ರಹಣ ಗೋಚರವಾಗಲಿದೆ. ಆದರೆ, ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಸೂತಕದ ಅಧಿಯೂ ಇರುವುದಿಲ್ಲ. 

ಇನ್ನು ಈ ವರ್ಷದ ಎರಡನೇ ಮತ್ತು ಕೊನೆಯ ಗ್ರಹಣ ನವೆಂಬರ್‌ನಲ್ಲಿರಲಿದೆ. ನವೆಂಬರ್ 8ರಂದು ಮಂಗಳವಾರ, ಹುಣ್ಣಿಮೆಯ ಸಂಜೆ  5.28ರಿಂದ ರಾತ್ರಿ 7.26ರವರೆಗೆ ಈ ಚಂದ್ರಗ್ರಹಣದ ಅವಧಿ ಇರಲಿದೆ. ಇದು ಕೂಡಾ ಖಗ್ರಾಸ ಚಂದ್ರಗ್ರಹಣವಾಗಿದ್ದು, ಭಾರತದ ಕೆಲ ಭಾಗಗಳು, ಆಸ್ಟ್ರೇಲಿಯಾ(Astralia), ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೂರ್ವ ಯೂರೋಪ್‌ನಲ್ಲಿ ಕಾಣಿಸುತ್ತದೆ. 

ಚಂದ್ರ ಕೆಂಪಗೆ ಕಾಣುವುದೇಕೆ?
ಗ್ರಹಣ ಸಂದರ್ಭದಲ್ಲಿ ಚಂದ್ರನ ಮೇಲ್ಮೈಯನ್ನು ತಲುಪುವ ಏಕೈಕ ಬೆಳಕು ಭೂಮಿಯ ವಾತಾವರಣದಿಂದ ಮಾತ್ರ. ಹೀಗಾಗಿ ಭೂಮಿಯ ವಾತಾವರಣದಲ್ಲಿ ಧೂಳಿನ ಕಣಗಳು ಹೆಚ್ಚಿದ್ದಷ್ಟೂ ಚಂದ್ರನು ಕೆಂಪಾಗಿ ಕಾಣಿಸುತ್ತಾನೆ. 

Lunar Eclipse 2022: ಈ ಎರಡು ರಾಶಿಗಳ ಜನರು ಎಚ್ಚರ, ಕಟ್ಟೆಚ್ಚರ!

ಹುಣ್ಣಿಮೆಯಂದೇ ನಡೆವುದು
ಯಾವಾಗಲೂ ಚಂದ್ರ ಗ್ರಹಣವು ಹುಣ್ಣಿಮೆ(full moon day)ಯ ದಿನವೇ ಸಂಭವಿಸುವುದು. ಏಕೆಂದರೆ ಹುಣ್ಣಿಮೆ(Full moon) ಆಗುವುದೇ ಚಂದ್ರನು ಭೂಮಿಗೆ ವಿರುದ್ಧ ದಿಕ್ಕಿನಲ್ಲಿದ್ದಾಗ. ಆಗ ಸೂರ್ಯನು ಭೂಮಿಯ ದೃಷ್ಟಿಕೋನದಿಂದ ನೋಡಿದಂತೆ ಚಂದ್ರನ ಸಂಪೂರ್ಣ ಮುಖವನ್ನು ಬೆಳಗಿಸುತ್ತಾನೆ.  ಚಂದ್ರನ ಕಕ್ಷೆಯು ಭೂಮಿಯದಕ್ಕಿಂತ ಸುಮಾರು 5 ಡಿಗ್ರಿಯಷ್ಟು ವಾಲಿರುತ್ತದೆ. ಹಾಗಾಗಿಯೇ ಸಾಮಾನ್ಯವಾಗಿ ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದಿಲ್ಲ. ಅದು ಅಪರೂಪಕ್ಕೆ ಬಿದ್ದಾಗ ಚಂದ್ರ ಗ್ರಹಣವೆನಿಸಿಕೊಳ್ಳುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios