ಈಕೆ ಮತ್ತೊಬ್ಬ ಬಾಬಾ ವಾಂಗಾನಾ? ನಿಜವಾಗುತ್ತಿರುವ 19 ವರ್ಷದ ಮಹಿಳೆಯ ಭವಿಷ್ಯವಾಣಿಗಳು!
ಪಾಶ್ಚಾತ್ಯ ಜಗತ್ತಿನ ಆಗುಹೋಗುಗಳನ್ನು ಈ ಯುವತಿ ಮುಂಚೆಯೇ ಊಹಿಸುತ್ತಿರುವುದರಿಂದ ಈಕೆಯನ್ನು ಮತ್ತೊಬ್ಬ ಬಾಬಾ ವಾಂಗಾ ಎಂದೇ ಬಿಂಬಿಸಲಾಗುತ್ತಿದೆ. ಈ ಮಹಿಳೆ ಹೇಳಿದ ಸಾಕಷ್ಟು ಭವಿಷ್ಯವಾಣಿಗಳು ನಿಜವಾಗಿವೆ.
ಈ ವರ್ಷದ 10 ಪ್ರಮುಖ ಘಟನೆಗಳನ್ನು ನಿಖರವಾಗಿ ಮಹಿಳೆಯೊಬ್ಬರು ಊಹಿಸಿರುವುದರಿಂದ ಪಾಶ್ಚಾತ್ಯ ಜಗತ್ತು ಮತ್ತೊಬ್ಬ ಬಾಬಾ ವಾಂಗಾ ಈಕೆ ಇರಬಹುದೇ ಎಂಬ ಜಿಜ್ಞಾಸೆಯಲ್ಲಿ ತೊಡಗಿದೆ.
ಅಮೆರಿಕದ 19 ವರ್ಷದ ಯುವತಿ ಹನ್ನಾ ಕ್ಯಾರೋಲ್‌ಳಿಗೆ ಅತೀಂದ್ರಿಯ ಶಕ್ತಿ ಇರಬಹುದೆಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಹನ್ನಾ ಕ್ಯಾರೊಲ್, 2022ಕ್ಕೆ 28 ಭವಿಷ್ಯವಾಣಿಗಳನ್ನು ಬರೆದಿದ್ದರು. ಅವುಗಳಲ್ಲಿ 10 ಈಗಾಗಲೇ ನಿಜವಾಗಿವೆ. ಇವುಗಳಲ್ಲಿ ಬಹುತೇಕ ಎಲ್ಲವೂ ಪಾಶ್ಚಾತ್ಯ ಜಗತ್ತಿನ ಸೆಲೆಬ್ರಿಟಿ ಜೀವನಕ್ಕೆ ಸಂಬಂಧಿಸಿದ ಭವಿಷ್ಯವಾಣಿಗಳಾಗಿವೆ.
ಹನ್ನಾ ಕ್ಯಾರೋಲ್(Hanna Caroll) ಊಹಿಸಿದ ಭವಿಷ್ಯವಾಣಿಗಳಲ್ಲಿ ರಾಣಿ ಎಲಿಜಬೆತ್ ಸಾವು, ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಮಗುವನ್ನು ಸ್ವಾಗತಿಸುವುದು, ಕಿಮಿ ಕದರ್ಶಿಯನ್ ಮತ್ತು ಪೀಟ್ ಡೇವಿಡ್ಸನ್ ಬೇರ್ಪಡುವುದು, ರಿಹಾನ್ನಾ ಗರ್ಭಿಣಿಯಾಗುವುದು ಮುಂತಾದ ಪ್ರಮುಖ ಘಟನೆಗಳು ನಿಜವಾಗಿವೆ. ಇದೀಗ ಹನ್ನಾ ಕ್ಯಾರೋಲ್‌ಳನ್ನು ಮತ್ತೊಬ್ಬ ಬಾಬಾ ವಾಂಗಾ(Baba Vanga) ಎಂದೇ ಬಿಂಬಿಸಲಾಗುತ್ತದೆ. ಬಲ್ಗೇರಿಯಾದಲ್ಲಿ 1911ರಲ್ಲಿ ಜನಿಸಿದ ಬಾಬಾ ವಾಂಗಾ ತಮ್ಮ 12ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡ ಬಳಿಕ ಜಗತ್ತಿನ ಆಗುಹೋಗುಗಳ ಬಗ್ಗೆ ಅತೀಂದ್ರಿಯ ದೃಷ್ಟಿ ಪಡೆದುದಾಗಿ ನಂಬಲಾಗಿದೆ. ಆಕೆ 5079ನೇ ಇಸವಿವರೆಗೂ ಭವಿಷ್ಯ ಹೇಳಿದ್ದಾರೆ. ಅವುಗಳಲ್ಲಿ ಆಯಾ ವರ್ಷ ಪ್ರಕಾರ, ಹಲವಷ್ಟು ಊಹೆಗಳು ನಿಜವಾಗಿವೆ.
ಈ ಭವಿಷ್ಯವಾಣಿಗಳು ನಿಜವಾದ ಬೆನ್ನಲ್ಲೇ ಹನ್ನಾ ಬಳಿ ಭವಿಷ್ಯ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಇನ್ನೂ 19 ವರ್ಷದ ಈಕೆ ಈಗ ತನ್ನ ಭವಿಷ್ಯವಾಣಿಗಳಿಂದಲೇ(predictions) ತಿಂಗಳಿಗೆ ಸುಮಾರು 1.5 ಲಕ್ಷ ರುಪಾಯಿಗಳನ್ನು ಗಳಿಸುತ್ತಿದ್ದಾಳೆ.
ಝಾಂಬಿ ವೈರಸ್ ಬಗ್ಗೆ ಹೇಳಿದ್ದ Baba Vanga! ಹಾಗಿದ್ರೆ 2023ರಲ್ಲಿ ಸೌರ ಸುನಾಮಿ ಸಂಭವಿಸೋದು ನಿಜಾನಾ?
ಯುಎಸ್‍ನ ಮ್ಯಾಸಚಸೆಟ್ಸ್‌ನಲ್ಲಿ ವಾಸಿಸುವ ಹನ್ನಾ, ತನ್ನ ಭವಿಷ್ಯವಾಣಿಗಳಿಂದ 75,000 ಅನುಯಾಯಿಗಳನ್ನು(followers) ಆಕರ್ಷಿಸಿದ್ದಾಳೆ.
ಈ ಬಗ್ಗೆ ಮಾತನಾಡುವ ಹನ್ನಾ ಕ್ಯಾರೊಲ್ , 'ನಾನು ಊಹಿಸಿದ ಏನಾದರೂ ಸಂಭವಿಸಿದಾಗ ಅದು ನಿಜವಾಗಿಯೂ ರೋಮಾಂಚನಕಾರಿ ಎನಿಸುತ್ತದೆ. ಅದು ನಿಜವಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ನಾನು ಯಾವಾಗಲೂ ಪಾಪ್ ಸಂಸ್ಕೃತಿ ಮತ್ತು ಪ್ರಸಿದ್ಧ ವ್ಯಕ್ತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ, ಹಾಗಾಗಿ ನನ್ನ ಬಹಳಷ್ಟು ಭವಿಷ್ಯವಾಣಿಗಳು ಅದರ ಬಗ್ಗೆ ಇದ್ದವು' ಎಂದು ಹೇಳುತ್ತಾರೆ.
'ಇದು ಏನಾದರೂ ಸಂಭವಿಸುತ್ತಿರುವುದನ್ನು ನಾನು ಮೊದಲೇ ಕಾಣುವ ದೃಷ್ಟಿಯಂತಿದೆ. ಜನರು ನನಗೆ ತಮ್ಮ ಫೋಟೋಗಳನ್ನು ಕಳುಹಿಸುತ್ತಾರೆ. ಅದನ್ನು ನೋಡುತ್ತಿದ್ದಂತೆ ಅವರು ಯಾವಾಗ ಮಗುವನ್ನು ಹೊಂದುತ್ತಾರೆ ಅಥವಾ ವೃತ್ತಿಜೀವನವನ್ನು ಬದಲಾಯಿಸುತ್ತಾರೆ ಎಂಬ ಭಾವನೆಯನ್ನು ನಾನು ಪಡೆಯುತ್ತೇನೆ ಮತ್ತು ಹೇಳುತ್ತೇನೆ' ಎಂದು ಹನ್ನಾ ಹೇಳಿದ್ದಾರೆ.
ಆಕೆಗೆ ಜನರು ಯಾವಾಗಲೂ ಕರೆ ಮಾಡಿ ಆಕೆಯ ಭವಿಷ್ಯವಾಣಿ ನಿಜವಾಗಿದೆ ಎಂದು ತಿಳಿಸಿ ಹರ್ಷಿಸುತ್ತಾರಂತೆ. ತನ್ನ ಭವಿಷ್ಯವಾಣಿಗಳು ನಿಜವಾಗುತ್ತಿರುವುದು ಸ್ವತಃ ತನಗೇ ಆಘಾತಕಾರಿಯಾಗಿತ್ತು, ಅಷ್ಟೇ ಉತ್ತೇಜನಕಾರಿಯೂ ಆಗಿದೆ ಎನ್ನುತ್ತಾರೆ ಹನ್ನಾ.
2022ಕ್ಕೆ ಬಾಬಾ ವಾಂಗಾ ಹೇಳಿದ 6ರಲ್ಲಿ 2 ಭವಿಷ್ಯವಾಣಿ ನಿಖರ.. ಉಳಿದ ಭಯಾನಕ ಭವಿಷ್ಯವಾಣಿಗಳಿವು..
ಜನವರಿ 2022ರಲ್ಲಿ, ಹನ್ನಾ ತನ್ನ ಫೋನ್‌ನ ಟಿಪ್ಪಣಿಗಳ ಅಪ್ಲಿಕೇಶನ್‌ನಲ್ಲಿ ಮುಂದಿನ ವರ್ಷದ ಜೀವನದ ದೊಡ್ಡ ಘಟನೆಗಳ ಬಗ್ಗೆ 28 ಭವಿಷ್ಯವಾಣಿಗಳ ಪಟ್ಟಿಯನ್ನು ಬರೆದಳು.
ಅವುಗಳಲ್ಲಿ ಹ್ಯಾರಿ ಸ್ಟೈಲ್ಸ್ ಮತ್ತು ಬೆಯೋನ್ಸ್ ಅವರ ಹೊಸ ಆಲ್ಬಂಗಳು, ರಿಹಾನ್ನಾ ಗರ್ಭಿಣಿಯಾಗುವುದು ಮತ್ತು ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಮಗುವನ್ನು ಸ್ವಾಗತಿಸುವುದು, ರಾಣಿ ಎಲಿಜಬೆತ್ ಸಾಯುವುದು, ಹೈಲಿ ಬೈಬರ್ ಗರ್ಭಿಣಿಯಾಗುವುದು ಸೇರಿದಂತೆ ಹಲವು ನಿಜವಾಗಿವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.